ಇದೊಂದು ನೋವು ನಿವಾರಕ ಔಷಧಿ. ನೋವನ್ನು ನಿವಾರಿಸುವ ಈ ಔಷಧಿ ಬಗೆಗೆ ನಂಬಿಕೆ ಇಟ್ಟಿದ್ದ ಜನಕ್ಕೆ ಒಂದು ಶಾಕ್ ಆಗುವ ಸುದ್ಧಿ ಹೊರಬಿದ್ದಿದೆ. ನ್ಯೂಆರ್ಲಿಯನ್ಸನಲ್ಲಿ ವಾಸಿಸುವ ಟೂಲೆನ್ ಯುನಿವರ್ಸಿಟಿಯ ಸ್ಕೂಲ್ ಆಫ್ ಪ್ಲಬಿಕ್‌ಹೆಲ್ಥ್ Tapicol Medician ನ ಡಾ|| ಜಿಯೆಂಗ್ ಹೀ ಮತ್ತು ಅವರ ತಂಡವು ಇದರ ಸೇವನೆಯಿಂದ “ಬ್ರೇನ್ ಹ್ಯಾಮರೇಜ್” ಆಕ್ರಮಣವಾಗುತ್ತದೆಂದು ಪ್ರಯೋಗಗಳಿಂದ ಸ್ಥಿರೀಕರಿಸಿದ್ದಾರೆ. ಜತೆಗೆ ಇಸೆಮಿಕ್ ಕೂಡ ಆಕ್ರಮಿಸುತ್ತದೆಂದು ಹೇಳುತ್ತಾರೆ.
ಇದನ್ನು ಸೇವಿಸುವುದರಿಂದ ದಮನಿಗಳಲ್ಲಿ ಅಡಚಣೆಯುಂಟಾಗಿ ಪರಿಣಾಮವಾಗಿ ಮೆದುಳಿಗೆ ರಕ್ತ ಹಾಗೂ ಪ್ರಾಣವಾಯುವಿನ ಪೂರೈಕೆಯು ಆಗುವುದಿಲ್ಲವೆಂದು ವಿವರಿಸುತ್ತಾರೆ. ವೃದ್ಧರು ವಿಶೇಷವಾಗಿ ಹೈಬ್ಲಡ್ ಪ್ರೆಶರ್ ಇರುವ ರೋಗಿಗಳಿಗೆ ಬ್ರೇನ್ ಹ್ಯಾಮರೇಜಿನ ಅಪಾಯ ಹೆಚ್ಚಾಗಿರುತ್ತದೆ. ವಿಪರೀತ ತಲೆನೋವು, ಒಮ್ಮಲೆ – ಮೂರ್ಚೆ ಹೋಗುವುದು, ಧ್ವನಿಬಾರದಿರುವುದು. ಮುಖ ಹಾಗು ಕೈ ಕಾಲುಗಳಲ್ಲಿ ಲಕ್ವ ಹೊಡೆದಂತಾಗಿ ನಿಶಕ್ತಿ ಆವರಿಸುವುದು ಮುಂತಾದವು ಇದರ ಲಕ್ಷಣಗಳಾಗಿವೆ.
ಹೀ ಮತ್ತು ಇವರ ಅನುಮಾಯಿಗಳು ೧೮ ವಿಭಿನ್ನ ಪರೀಕ್ಷೆಗಳಲ್ಲಿ೫೫,೪೬೨ ರೋಗಿಗಳಿಗೆ ಆಸ್ಟ್ರೀನ್ ಸೇವನೆ ಮಾಡಿಸಿ ನಂತರ ಪರೀಕ್ಷಿಸಿದಾಗ ಇವರಲ್ಲಿ ಶೇ. ೧೫ ರಷ್ಟು ರೋಗಿಗಳಿಗೆ ಬ್ರೇನ್ ಹ್ಯಾಮರೇಜ್ ಆಕ್ರಮಣವಾದುದು ದೃಢಪಟ್ಟಿತು. ಉಳಿದಂತೆ ರೋಗಿಗಳಿಗೆ ಇಸೆಮಿಕ್ ಅಟ್ಯಾಕ್ ಆಗಿತ್ತು. ಆದ್ದರಿಂದ ನೋವು ನಿವಾರಕವೆಂದು ಇದನ್ನು ಸೇವಿಸುವ ರೋಗಿಗಳು ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಿ ಸೇವಿಸುವುದು ಅಗತ್ಯ. ಕೆಲವು ಔಷಧಿಗಳು ತಕ್ಷಣಕ್ಕೆ ಪರಿಹಾರವನ್ನು ಸೂಚಿಸಿದರೂ ನಿಧಾನವಾಗಿ ಸ್ಲೋಪಾಯಿಜನ್ ಆಗುವ ಭೀತಿ ಇರುತ್ತದೆ. ಹಾಗಾದರೆ ಈ ದೇಹ ನೆಟ್ಟಗಿರಬೇಕಾದರೆ ಯಾವುದನ್ನು ಸೇವಿಸಬೇಕು? ಎಲ್ಲವನ್ನು ಒಬ್ಬ ಸಾಮಾನ್ಯ ರೋಗಿ ವೈಜ್ಞಾನಿಕವಾಗಿ ಪರೀಕ್ಷೆಗೆ ಗುರಿ ಮಾಡುತ್ತಾನೆಯೋ? ಎಂಬ ಪ್ರಶ್ನೆ.
*****