ದಾರಿಗಳಿಗೂ ನೆನಪು ಅಂಟಿಕೊಂಡಿವೆ

ನಿನ್ನುಸಿರು ಬೆರೆತಿದೆ ಈ ಮನೆಯಲ್ಲಿ ಹಾಗಾಗಿ ಎದೆಯಲ್ಲಿ ಸಂತಸವಿದೆ ನೀನುಲಿದ ಶಬ್ದಗಳು ಪ್ರೀತಿಯ ಅಕ್ಷರಗಳ ಬರೆದಿವೆ ಹಾಗಾಗಿ ಹೂಗಳು ನಗುತ್ತಿವೆ ನಿಂಜೊತೆ ಹಾಕಿದ ಹೆಜ್ಜೆಗಳು ಮನೆಯಿಂದ ಕಡಲದಂಡೆತನಕ ಹರಡಿಕೊಂಡಿವೆ ಹಾಗಾಗಿ ದಾರಿಗಳಿಗೂ ನೆನಪು ಅಂಟಿಕೊಂಡಿವೆ...

ಬೆಳಕು ನಡೆದು ಹೋಯಿತು

ಆಕೆ ಸಿಕ್ಕಿದ್ದಳು ಬೆಳಕಿನ ಜೊತೆ ಮಾತನಾಡಿದಂತಾಯಿತು **** ಆಕೆ ನಡೆದುಹೋದಳು ಬೆಳಕು ನಡೆದು ಹೋದಂತಾಯಿತು **** ಮಲ್ಲಿಗೆ ಬಳ್ಳಿಯ ಜೊತೆ ನಿಂತು ಮಾತಾಡಿದೆ ಆಕೆ ಪರಿಮಳವಾಗಿ ನಗುತ್ತಿದ್ದಳು **** ಮಗು ಮಲಗಿತ್ತು ಅದರ ಮುಖಮುದ್ರೆಯಲ್ಲಿ...

ಭೂಮಿಗೆ ಆಕಳಿಕೆ ಸಮಯ

ಸೀರೆ ಸೆರಗ ತಾಗಿದ ಗಾಳಿ ಪ್ರೇಮದ ನವಿರು ಹೊತ್ತುತಂತು ಆಡಿದ ಆಡದೇ ಉಳಿದ ಮಾತು ಮೌನಗಳ ಸಂಕಲನ ಮೋಡಗಳಲ್ಲಿ ಚಿತ್ರ ಬಿಡಿಸಿತು ನೀನಿಡುವ ಪ್ರತಿ ಹೆಜ್ಜೆಯಲಿ ಕನಸು ಇಣುಕುತ್ತಿದೆ ಗೆಳತಿ ಮನಸುಗಳ ಅಗಣಿತ ತರಂಗಗಳು...

ಪಾರಿವಾಳಗಳು ಹಾರಿಹೋದವು

ನನ್ನ ದೇಶದ ಗಾಳಿ ಪಕ್ಕದ ದೇಶಕ್ಕೂ ಬೀಸಿತು ಬೀಸುವಾಗ ಇಲ್ಲಿನ ತಣ್ಣನೆಯ ಪ್ರೇಮದ ಬಿಸಿಯುಸಿರನ್ನು ಹೊತ್ತೊಯಿತು ನನ್ನ ದೇಶದ ಬೆಳಕು ಪಕ್ಕದ ದೇಶಕ್ಕೂ ಪಯಣ ಬೆಳೆಸಿತು ಹೋಗುವಾಗ ಒಂದಿಷ್ಟು ಅರಿವು ನೋವುಗಳನ್ನು ಹೊತ್ತೊಯಿತು ಗಾಳಿ...
ಕಾರಣ ಗೊತ್ತಿಲ್ಲ……..

ಕಾರಣ ಗೊತ್ತಿಲ್ಲ……..

ಆ ರಸ್ತೆಯ ಕೊನೆಯಲ್ಲಿರುವ ಮರ. ಏನಿಲ್ಲಾ ಅಂದ್ರೂ ಒಂದು ತಲೆಮಾರು ದಾಟಿರಬಹುದು. ಅದರ ಕೆಳಗೆ ನಿಂತರೆ ಆಕಾಶ ಕಾಣುತ್ತಿರಲಿಲ್ಲ. ತನ್ನನ್ನು ತಾನೆ ಸಿಂಗರಿಸಿಕೊಂಡಂತಿರುವ ಮರದ ಟೊಂಗೆಗಳಿಗೆ ಆವರಿಸಿರುವ ಎಲೆಗಳು ತನ್ನನ್ನು ಮೀರಿ ಮೇಲಿರುವುದು ಕಾಣದಷ್ಟು...

ಹನಿಗಳು

ಹಗಲು ರಾತ್ರಿಯನ್ನದೇ ಮಳೆ ಸುರಿಯಿತು ನಾನು ನೀನು ಮಾತಾಡಿಕೊಂಡಾಂತೆ ಅತ್ಯಂತ ಉಲ್ಲಾಸಿತಳಾಗಿ ನಕ್ಕಿದ್ದು ಭೂಮಿ ಮಾತಾಡುತ್ತಲೇ ನಾವು ನಕ್ಕು ಅತ್ತಂತೆ ನಡುನಡುವೆ ಮತ್ತೆ ನಕ್ಕು ಉಲ್ಲಾಸಿತ ಗೊಂಡಂತೆ ಮಡಿಲಲ್ಲಿ ನೂರು ನೋವು ತುಂಬಿಕೊಂಡು ನಗುವ...
ಜಾಲ

ಜಾಲ

ಮನದೊಳಗಣ ಭಾವನೆಗಳನ್ನು, ಕತ್ತಲನ್ನು, ಬೆಳಕನ್ನು ಬಗೆಬಗೆದು ಮತ್ತೊಬ್ಬರ ಎದುರು ಬೆತ್ತಲಾಗುವುದು ಸಾಮಾನ್ಯವೇ? ಅಂಥ ವ್ಯಕ್ತಿ ಯೊಬ್ಬ ಸಿಕ್ಕಾಗ ಎದೆಯೊಳಗೆ ಅಡಗಿದ ಜಗತ್ತನ್ನು ಬಿಚ್ಚಿಡಬೇಕು ಎಂದೆನಿಸಿತು ಆಕೆಗೆ. ಕತ್ತಲ ಎದೆಗೆ ಒದ್ದಂತೆ ಹಗಲು ಆಗತಾನೆ ಗೆಲುವಿನ...

ಮುಗಿಯಲಾರದ ದುಃಖಕೆ

ಕಣ್ಣ ಬೆಳಕೇ ಒಲವಿನ ಉಸಿರೇ ಜೀವದ ಜೀವವೇ ನಿನಗಾಗಿ ಬರೆಯುವೆ ಎಂದೆಂದೂ ಮುಗಿಯದ ಪ್ರೇಮ ಪತ್ರವ ಉಸಿರಿಗೆ ಉಸಿರಾದವಳೇ ಬೆಳಕಿಗೆ ಬೆಳಕಾದವಳೇ ಕಣ್ಣ ಮುಂದಿನ ಬೆಳಕೆ ದಾರಿ ಮುಂದಿನ ಕನಸೇ ನಿನಗಾಗಿ ಬರೆಯುವೆ ಎಂದೆಂದೂ...
ಮರಳ ಮೇಲೆ ಮೂಡದ ಹೆಜ್ಜೆ

ಮರಳ ಮೇಲೆ ಮೂಡದ ಹೆಜ್ಜೆ

ಮಳೆ ಸುರಿಯುತ್ತಿದೆ. ಮನೆಯಿಂದ ಹೊರಬೀಳುವುದು ಕಷ್ಟ ಎನ್ನುವಷ್ಟು ಮಳೆ. ನೆಲ ಮುಗಿಲುಗಳ ಸಲ್ಲಾಪ ನಿರಂತರ. ಭೂಮಿತಾಯಿ ಹಸಿರು ಸೆರಗು ಹೊದ್ದು ನಗುತ್ತಿರುವಾಗಲೇ ನೆನಪುಗಳು ಸುಗ್ಗಿ. ಮಳೆ ನೀರಿಗೆ ಸಮುದ್ರ ಸೇರುವ ಆತುರ. ಸುರಿವ ಮಳೆಯಲ್ಲೂ...
ಸಾಸಿವೆಯಷ್ಟು ಸುಖಕ್ಕೆ…..

ಸಾಸಿವೆಯಷ್ಟು ಸುಖಕ್ಕೆ…..

ಇಡೀ ಕೋಣೆ ಸಿಗರೇಟ್ ವಾಸನೆಯಿಂದ ತುಂಬಿತ್ತು. ಕೋಣೆಗಿದ್ದ ಒಂದೇ ಒಂದು ಕಿಟಿಕಿ ಸಹ ಮುಚ್ಚಿತ್ತು. ಫ಼್ಯಾನ್ ತಿರುಗುತ್ತಿತ್ತು. ಕೋಣೆ ಯಿಂದ ಹೊರಹೋಗಲಾದ ಹೊಗೆ, ಫ಼್ಯಾನ್ ಗಾಳಿ, ಬಿಯರ್ ಕುಡಿದ ದೇಹದಿಂದ ಹೊರಟ ಉಸಿರು ಸೇರಿ...