ಪಾರಿವಾಳಗಳು ಹಾರಿಹೋದವು

ನನ್ನ ದೇಶದ ಗಾಳಿ
ಪಕ್ಕದ ದೇಶಕ್ಕೂ ಬೀಸಿತು
ಬೀಸುವಾಗ ಇಲ್ಲಿನ ತಣ್ಣನೆಯ
ಪ್ರೇಮದ ಬಿಸಿಯುಸಿರನ್ನು ಹೊತ್ತೊಯಿತು

ನನ್ನ ದೇಶದ ಬೆಳಕು
ಪಕ್ಕದ ದೇಶಕ್ಕೂ ಪಯಣ ಬೆಳೆಸಿತು
ಹೋಗುವಾಗ ಒಂದಿಷ್ಟು ಅರಿವು
ನೋವುಗಳನ್ನು ಹೊತ್ತೊಯಿತು
ಗಾಳಿ ಬೆಳಕುಂಡ ಜನ
ಅಲ್ಲಿ ಇಲ್ಲಿಯ ಸುದ್ದಿ ಮಾತಾಡಿದರು

ಆದರೆ ಎರಡು ಕಡೆ
ಸೇನೆಯಲ್ಲಿನ ದಂಡನಾಯಕರು
ಕಿಡಿಕಿಡಿಯಾದರು
ಗಾಳಿ ಬೆಳಕುಗಳು ತಂದ
ತರಂಗಗಳ ನಾಡಿ ಹಿಡಿದು
ಬಂದೂಕ ಧೂಳ ಕೊಡವಿದರು
ದೇಶದ ಅಧಿಕಾರಗಳು ಹೂಂಕರಿಸಿದವು
ಪಾರಿವಾಳಗಳು ಎರಡು ದೇಶ
ಬಿಟ್ಟು ಹಾರಿಹೋದವು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಚ್ಚಿಕೊಳ್ಳಬೇಡ
Next post ಚಿಂತಲ್ ಬಸ್ತಿ

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

cheap jordans|wholesale air max|wholesale jordans|wholesale jewelry|wholesale jerseys