ಬೆಳಕು ನಡೆದು ಹೋಯಿತು

ಆಕೆ ಸಿಕ್ಕಿದ್ದಳು
ಬೆಳಕಿನ
ಜೊತೆ
ಮಾತನಾಡಿದಂತಾಯಿತು
****

ಆಕೆ ನಡೆದುಹೋದಳು
ಬೆಳಕು
ನಡೆದು ಹೋದಂತಾಯಿತು
****

ಮಲ್ಲಿಗೆ
ಬಳ್ಳಿಯ ಜೊತೆ
ನಿಂತು
ಮಾತಾಡಿದೆ
ಆಕೆ
ಪರಿಮಳವಾಗಿ
ನಗುತ್ತಿದ್ದಳು
****

ಮಗು ಮಲಗಿತ್ತು
ಅದರ
ಮುಖಮುದ್ರೆಯಲ್ಲಿ
ಬುದ್ಧ ಕಂಡ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೋಡದ ಜಾಗ
Next post ೨.೨ ಸುವರ್ಣ ಪ್ರಮಿತಿ

ಸಣ್ಣ ಕತೆ