ನನ್ನವಳು ಬರುವಾಗ

ನನ್ನವಳು ಬರುವಾಗ
ಹಸಿರುಟ್ಟ ಹಾದಿಯಲ್ಲಿ
ಇಬ್ಬನ ಹನಿಗಳು
ಮುತ್ತಿನ ರಾಶಿಯಾಗಿ ಹೊಳೆದಿತ್ತು

ಜಾಣೆ ಅವಳು ಚೈತ್ರದರಸಿ
ಧಾರೆ ಎರೆದಾಳೆ ಮನತಣಿಸಿ
ಹೊನ್ನಗೆಂಪು ಹೂವು ಮೆರವಣೆಗೆಯಲಿ
ಅವಳ ಪ್ರೀತಿ ಸಂದೇಶ ನೀಡಿತ್ತು

ಹೊಲದ ಹಾದಿಯಲ್ಲಿ ನಡೆದು ಬರುವಾಗ
ಗೆಜ್ಜೆ ಕುಲುಕಿ ಮೌನದ ಮಾತಾಡಿ
ಅವಳ ಮನದ ಬಯಕೆಗಳು
ಹಸಿರಾಗಿ ಬಳ್ಳಿ ಬಳುಕಿತು

ಕೊಟ್ಟಾರೆ ಕೊಡುವಳು
ಮುತ್ತು ಮಾಣಿಕ್ಯ ಹೊನ್ನ
ಕಳಶ ಅವಳ ಪ್ರೀತಿಯೆ ಸೌಭಾಗ್ಯ
ಕಟ್ಯಾಳೆ ಅಸೀಮ ದುರ್ಗವನ್ನು

ಮುಂಗಾರು ಹೂ ಮಳೆಯಲ್ಲಿ
ಅವಳ ಕಣ್ಣ ನಕ್ಷತ್ರ ಹೊಳಪಲ್ಲಿ
ನನ್ನನ್ನು ಕಂಡಾಗ ಜನುಮದ
ಗೆಳತಿ ನನ್ನವಳು ಎಂದಿತು
ಅವಳ ಮೊಗವು ನಾಚಿತ್ತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಧನೆಯ ದಾರಿ
Next post ನೀಲಿ ಆಕಾಶ

ಸಣ್ಣ ಕತೆ

 • ಮೇಷ್ಟ್ರು ರಂಗಪ್ಪ

  ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… Read more…

 • ಲೋಕೋಪಕಾರ!

  ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

 • ಕೆಂಪು ಲುಂಗಿ

  ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

 • ಎರಡು ರೆಕ್ಕೆಗಳು

  ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

 • ಕ್ಷಮೆ

  ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…