ಪ್ರೀತಿ ಎಂಬ ಹೂದೋಟದಲ್ಲಿ
ನನ್ನ ಭಾವನೆಗಳ ಎಳೆಎಳೆಯಲ್ಲಿ
ಬಾನ ರವಿಕಿರಣ ಚೆಲ್ಲಿದ ಬೆಳಕಿನಲ್ಲಿ
ನನ್ನ ಹೂವುಗಳು ಅರಳಿದವು
ಧನ್ಯವಾದ ಅವನಿಗೆ ಅವನು
ನೀಡಿದ ಚೈತನ್ಯಕೆ
ನಮಿಸುವೆನು ಸದಾ ಅವನ ದಿವ್ಯ
ಚರಣಕೆ ಅವನ ಕೃಪೆಯು
ಇರಲಿ ನಮ್ಮ ಬಾಳಿಗೆ
ರವಿಯು ಮರೆಯಾಗಿ ಚಂದಿರ
ಬರಲು ನನ್ನ ಹೂಗಳು ಮಂದಹಾಸ
ಬೀರಲು ತಣಿವುದೆನ್ನ ಮನವು
ಜೋಗುಳ ಹಾಡಿಗೆ ಕಂದ ಕಿಲಕಿಲನೆ ನಗಲು
ಧನ್ಯವಾದ ಅವನಿತೆ ಅವನು ನೀಡಿದ ಅನುಬಂಧಕೆ
ಜೀವ ಜೀವ ಬೆರೆವ ಭಾವಕೆ
ಅವನ ಕೃಪೆಯು ಇರಲಿ ಸದಾ
ನಮ್ಮ ಬದುಕಿಗೆ ನಮಿಸುವೆನು
ಅವನ ದಿವ್ಯ ಚರಣಕೆ
ಜಗವನು ಬೆಳಗುವ ರವಿ
ಚಂದಿರ ತಾರಾ ಬಾನು
ಸೃಷ್ಟಿಸಿದ ಪರಂಜ್ಯೋತಿಗೆ
ನಮಿಸುವೆನು ಸದಾ ಅವನ
ದಿವ್ಯ ಚರಣಕೆ
ಪ್ರಕೃತಿ ಪುರುಷರಿಹರು
ವಿಶ್ವ ಚೈತನ್ಯಕೆ ಜೀವ
ಚಕ್ರವಿಹುದು ಯುಗ ಯುಗಕೆ
*****