ತಿಮ್ಮನಿಗೆ ನೆಗಡಿಯಾಗಿತ್ತು. ಡಾಕ್ಟ್ರು ಮಾತ್ರೆ ಕೊಟ್ಟರು. ತಿಮ್ಮ ಮನೆಗೆ ಬಂದು ಮಾತ್ರೆಯ ಲೇಬಲ್‌ನ ಸುತ್ತಲು ಕತ್ತರಿಯಿಂದ ಕತ್ತರಿಸಿ ನಂತರ ಮಾತ್ರ ತೆಗೆದುಕೊಂಡನು. ಆಗ ಅವನ ಹೆಂಡತಿ ಕೇಳಿದ್ಲು.

“ಯಾಕ್ರೀ ಹೀಗೆ ಮಾಡ್ತಿದ್ದೀರಾ?”

ಆಗ ತಿಮ್ಮ ಹೇಳಿದ “ಈ ಮಾತ್ರೆಯಿಂದ ಸೈಡ್ ಎಫೆಕ್ಟ್ ಆಗಬಾರದಲ್ಲ ಅದಕ್ಕೆ.”
*****