ಅವರುಗಳು ಮೂವರೂ ಸ್ನೇಹಿತರು ಒಬ್ಬ ಇಂಗ್ಲಿಷ್ಀನವನಾದರೆ, ಇನ್ನೊಬ್ಬ ಪ್ರೆಂಚ್, ಮತ್ತೊಬ್ಬ ಸ್ಕಾಟ್ಲೆಂಡ್ಀನವನು ಒಂದು ಸಲ ಮೂವರೂ ಒಂದು ಬೆಟ್ ಕಟ್ಟಿದರು. ಯಾರು ಹೆಚ್ಚು ಹೊತ್ತು ಀಸ್ಕಂಕ್ಀ ಎಂಬ ಪ್ರಾಣಿಯೊಂದಿಗೆ ವಾಸ ಮಾಡಿ ಬರುವರು ಎಂಬುದನ್ನು ತಿಳಿಯಬೇಕೆಂಬ ಕುತೂಹಲ ಅವರಿಗಿತ್ತು. ಹೇಳಿಕೇಳೀ ಈ ಸ್ಕಂಕ್ ಎಂಬ ಪ್ರಾಣಿ ಆತೀ ದುರ್ನಾತಕ್ಕೆ ಹೇಳಿಸಿದ್ದು. ಒಂದು ಸ್ಕಂಕ್ ಪ್ರಾಣಿಯನ್ನು ಕೊರಡಿಯಲ್ಲಿ ಕೂಡಿಹಾಕಿದ್ದರು

ಇಂಗ್ಲಿಷ್‌ನವ ಮೊದಲು ಕೊಠಡಿ ಒಳಕ್ಕೆ ನುಗ್ಗಿದ. ಅದರ ವಾಸನೆ ತಡೆಯಲಾರದೆ ಹತ್ತು ನಿಮಿಷಗಳಿದ್ದು ಅಲ್ಲಿಂದ ನಿರ್ಗಮಿಸಿದ. ಫ್ರೆಂಚ್ಀನವ ಒಳಗೆ ಹೋದವನು ಇಂಗ್ಲಿಷ್ಀನವನಿಗಿಂತ ಕೊಂಚ ವಾಸಿ. ೨೦ ನಿಮಿಷವಿದ್ದು ವಾಸನೆ ಇನ್ನು ತಡೆಯಲಾರದೆ ಈಚೆಗೆ ಬಂದ. ಇನ್ನು ಮೂರನೆಯವನಾದ ಸ್ಕಾಟ್ಟೆಂಡ್‌ನವ ಒಳಕ್ಕೆ ನುಗ್ಗಿದ ಅರ್ಧಘಂಟೆಯ ತನಕ ಒಳಗೇ ಇದ್ದ. ಅವನಿಗೇನೂ ಸಮಸ್ಯೆ ಕಾಣಲಿಲ್ಲ, ಆದರೆ ಇದ್ದಕ್ಕಿದ್ದಂತೆಯೇ ಸ್ಕಂಕ್ ಪ್ರಾಣಿ ಅಲ್ಲಿ ಇರಲಾರದೆ
ಬಾಗಿಲನ್ನು ತಳ್ಳಿ ಈಚೆಗೆ ಬಂದು ಬದುಕಿದೆಯಾ ಬಡಜೀವವೇ ಎನ್ನುತ್ತಾ ಓಟಕಿತ್ತಿತು!
***