ಹೊಗೆ ತುಂಬಿ ವಾಯು ಕಲುಷಿತವಾದರೆ ಕಣ್ಣಿಗೆ ಕಾಣಿಸುತ್ತದೆ. ಹೊಗೆಯ ವಾಸನೆಯೂ ಮೂಗಿಗೆ ಬಡಿಯುತ್ತದೆ. ಕೊಳಚೆ ಬೆರೆತು ನೀರು ಹೊಲಸದರೂ ಕಣ್ಣಿಗೆ ಕಾಣಿಸುತ್ತದೆ. ಆದರೆ ಶಬ್ನಮಾಲಿನ್ಯ ಕಣ್ಣಿಗೆ ಕಾಣಿಸುವುದಿಲ್ಲ. ಅದು ಸದ್ದಿಲ್ಲದೆ ನಮ್ಮ ಕಿವಿಗೆ ಹಾನಿ ಮಾಡುತ್ತದೆ. ಮಾತ್ರವಲ್ಲ, ನಮ್ಮ ಆರೋಗ್ಯವನ್ನೂ ಕೆಡಿಸುತ್ತದೆ. ಸದ್ದಿನಿಂದಾಗಿ ಶ್ರವಣ ಶಕ್ತಿಗೆ ಘಾಸಿಯಾದರೆ ಮೆಲುಮಾತೂ ಕೇಳಿಸುವುದಿಲ್ಲ. ಒಬ್ಬ ವ್ಕಕ್ತಿಗೆ ಯಾವ ತೀವ್ರತೆಯ ಸದ್ದು ಕೇಳಿಸುತ್ತದೆ ಎಂಬುದು ಆ ವ್ಯಕ್ತಿಯ ಪ್ರಾಯ ಮತ್ತು ತನ್ನ ಜೀವನದಲ್ಲಿ ಆತ ಎಂಥ ಸದ್ದುಗಳಿಗೆ ಕಿವಿಯೊಡ್ಡಿದ್ದ ಎಂಬುದನ್ನು ಅವಲಂಬಿಸಿದೆ. ಯಾಕೆಂದರೆ ಪ್ರಾಯ ಹೆಚ್ಚಿದಂತೆ ಶ್ರವಣೇಂದ್ರಿಯದ ಸಂವೇದನೆ ಕಡಿಮೆಯಾಗುತ್ತದೆ. ಅದಲ್ಲದೆ, ತೀವ್ರ ಸದ್ದುಗಳಿಗೆ ಜಾಸ್ತಿ ಕಿವಿಯೊದ್ಧಿದರೆ ಅದರಿಂದಾಗಿ ವ್ಕಕ್ತಿಯ ಶ್ರವಣಶಕ್ತಿ ಕುಂದುತ್ತದೆ. ಈ ರೀತಿಯಲ್ಲಿ, ಸದ್ದಿನಿಂದಾಗಿ ಶ್ರವಣ ಶಕ್ತಿ ಕಳೆದುಕೊಳ್ಳುತ್ತಿರುವ ವ್ಯಕ್ತಿಯ ಅರಿವಿಗೇ ಬಾರದಂತೆ ಅದು ಆತನ ಕಿವುಡುತನಕ್ಕೆ ಕಾರಣವಾಗುತ್ತದೆ.

ಮಹಾನಗರಗಳಲ್ಲಿ ಕ್ಕೆಗಾರಿಕೆ, ಸಾರಿಗೆ ಮತ್ತು ನಗರ ಬದುಕಿನ ಚಟುವಟಿಕೆಗಳೇ ಸದ್ದಿನ ಮೂಲಗಳು. ಉದಾಹರಣೆಗಳು : ವಾಹನಗಳ, ರೈಲು, ವಿಮಾನಗಳ ಸದ್ದು, ಮುದ್ರಣಾಲಯ, ವರ್ಕ್‌ಶಾಪ್, ಗ್ಯಾರೇಜು,  ಕಾರ್ಖಾನೆಗಳ ಯಂತ್ರೋಪಕರಣಗಳ ಸದ್ದು. ನಗರೀಕರಣದೊಂದಿಗೆ ಜಾಗದ ಕೊರತೆ ಹೆಚ್ಚಿದಂತ ಸದ್ದಿನ ಸಮಸ್ಯೆ ತೀಪ್ರವಾಗುತ್ತದೆ. ಕಡಿಮೆ ಸ್ಥಳದಲ್ಲಿ (ಉದಾ :ಫ್ಲಾಟ್ ಸಂಕೀರ್ಣಗಳಲ್ಲಿ) ಹೆಚ್ಚು ಚಟುವಟಿಕೆಗಳು ಇಡುಕಿರಿದು  ನಡೆಯುವಾಗ ಸದ್ದು ಜಾಸ್ತಿಯಾಗುವುದು ಖಂಡಿತ.

ಸದ್ಧಿನ ಅಳತೆ
ಸದ್ದಿನ ಅಳತೆಯ ಘಟಕ ‘ಡೆಸಿಬಲ್’ (ಉದ್ದದ ಅಳತೆಗೆ ಮೀಟರ್, ತೂಕದ ಅಳತೆಗೆ ಕಿಲೋಗ್ರಾಂ ಇದ್ದಂತೆ). ಸದ್ದಿನ ತೀವ್ರತೆ ಅಳೆಯಲು, ಬೇರೆ ಬೇರೆ ಸದ್ದುಗಳ ತೀವ್ರತೆ ಹೋಲಿಸಲು ಮತ್ತು ಮನುಷ್ಯರ ಆರೋಗ್ಕದ ಮೇಲೆ ಸದ್ದಿನ
ಪರಿಣಾಮದ ಮಾನದಂಡವಾಗಿ ಡೆಸಿಬಲನ್ನು ಬಳಸಲಾಗುತ್ತದೆ. ಮನುಷ್ಯರ ಕಿವಿ ಅತ್ಯಂತ ಸಂವೇದನಾಶೀಲ ಇಂದ್ರಯ. ಕಿವಿಗೆ ಅರಿವಾಗುವ ಸದ್ದಿನ ತೀವ್ರತೆ 0 ಡೆಸಿಬಲ್ ಮತ್ತು ಕಿವಿಗೆ ನೋವು ನೀಡುವ ಸದ್ದಿನ ತೀವ್ರತೆ 140 ಡೆಸಿಬಲ್. ಗಮನಿಸಿ : ಕಿವಿಯಲ್ಲಿ ನೋವುಂಟುಮಾಡುವ ಸದ್ದಿನ ತೀವ್ರತೆಯು ಕಿವಿಗೆ ಕೇಳುವ ಅತ್ಯಂತ ಸೂಕ್ಷ್ಮ ಸದ್ದಿನ ತೀವ್ರತೆಗಿಂತ 10 ಮಿಲಿಯನ್ ಪಟ್ಟು ಅಧಿಕ!

ಸದ್ದಿನ ದುಷ್ಪರಿಣಾಮಗಳು
ಅಧಿಕ ತೀವ್ರತೆಯ ಸದ್ದು (ಅಂದರೆ 85 ಡೆಸಿಬಲ್ ಗಿಂತ ಜಾಸ್ತಿ ತೀವ್ರತೆಯ) ಕಿವಿಗೆ ಶಾಶ್ವತ ಹಾನಿ ಮಾಡುತ್ತದೆ. ನಿಧಾನವಾಗಿ ಜಾಸ್ತಿಯಾಗುವ ಈ ಶ್ರವಣ ಶಕ್ತಿಯ ಹಾನಿ ಅರಿವಿಗೆ ಬರುವಾಗ ತೀರಾ ತಡವಾಗಿರುತ್ತದೆ. ಇದರಿಂದಾಗಿ ಶ್ರವಣ ಹಾನಿಯಾದ ವ್ಯಕ್ತಿಗೆ ಕಿರಿಕಿರಿಯಾಗುತ್ತದೆ. ಸಹೋದ್ಯೋಗಿಗಳೊಂದಿಗೆ, ಕುಟುಂಬದ ಸದಸ್ಯರೊಂದಿಗೆ ಹಾಗೂ ಇತರರೊಂದಿಗೆ ಮಾತುಕತೆ, ವ್ಯವಹಾರ ನಡೆಸಲು ಕಷ್ಟವಾಗುತ್ತದೆ. ಸದ್ಧಿನಿಂದಾಗಿ ರಕ್ತದೊತ್ತಡ ಮತ್ತು ಹೃದಯ ಬಡಿತ ಅಧಿಕವಾಗಿ ಅಡ್ರಿನಾಲಿನ್ ಸ್ರಾವ ಹೆಚ್ಚಬಹುದು. ಇದರಿಂದಾಗಿ ವ್ಯಕ್ತಿಯನ್ನು ಬಾಧಿಸುತ್ತಿರುವ ರೋಗಗಳು ಉಲ್ಪಣಿಸಬಹುದು. ಸದ್ದು ಮನುಷ್ಯರಲ್ಲಿ ಮಾನಸಿಕ ಒತ್ತಡ ಉಂಟುಮಾಡುತ್ತದೆ. ಗರ್ಭದಲ್ಲಿರುವ ಶಿಶುವಿನ ಬೆಳವಣಿಗೆಯನ್ನೂ ಸದ್ದು ಬಾಧಿಸಬಹುದು. ಇದರಿಂದಾಗಿ ಮಗುವಿನ ಜನ್ಮತೂಕ ಕಡಿಮೆಯಾದೀತು. ಯಾವುದೇ ಕೆಲಸ ಮಾಡುವಾಗ ಸದ್ದಿನಿಂದ ಕಿರಿಕಿರಿ ಆಗುತ್ತಿದ್ದರೆ ದಕ್ಷತೆ ಕಡಿಮೆಯಾಗುತ್ತದೆ.

ನಿದ್ದೆಯ ಅವಧಿ ಮತ್ತು ಗಾಢತೆಯನ್ನು ಸದ್ದು ಬಾಧಿಸುತ್ತದೆ. ವಯಸ್ಸಾದವರು ಮತ್ತು ರೋಗಿಗಳು ಸದ್ಧಿನಿಂದ ಹೆಚ್ಚು ಸಂಕಟಪಡುತ್ತಾರೆ. ನಿದ್ದೆಗೆ ತೊಂದರೆಯಾದರೆ ವ್ಯಕ್ತಿಯ ಆರೋಗ್ಕ ಹದಗೆಡುತ್ತದೆ. ಸಿಟ್ಟು, ಅಸಹಾಯಕತೆ ಇಂತಹ ತೀದ್ರ ಭಾವನೆ ಮತ್ತು ವರ್ತನೆಗಳಿಗೆ ಸದ್ದು ಕಾರಣವಾಗುತ್ತದೆ.

ಸದ್ದಿನಿಂದಾಗಿ ಅಪಾಯದ ಸೂಚನೆಗಳು ಗಮನಕ್ಕೆ ಬಾರದೆ ಅಪಘಾತಗಳು ಸಂಭವಿಸ ಬಹುದು. ಪ್ರಾಣ ರಕ್ಷಣೆಗಾಗಿ ಬೊಬ್ಬಿಡುವವರ ಬೊಬ್ಬೆಯೂ ಇತರರ ಗಮನಕ್ಕೆ ಬಾರದಿರಬಹುದು. ಜೋರಾಗಿ ಸದ್ದು ಮಾಡುವ ಟಿವಿಯ ಎದುರು ಕುಳಿತವರಿಗೆ ಪಕ್ಕದ ಕೋಣೆಯಲ್ಲಿ ನಡೆಯುವ ಅನಾಹುತವೂ ತಿಳಿಯದೆ ಹೋದೀತು.

ಕಲಿಕೆಗೆ ತೊಂದರೆ : ಮಕ್ಕಳ ಕಲಿಯುವ ಸಾಮರ್ಥ್ಯವನ್ನೂ ಸದ್ದು ಬಾಧಿಸುತ್ತದೆ. ಏಕಾಗ್ರತೆ ಮತ್ತು ಮನಸ್ಸಿನ ಜಾಗೃತ ಭಾವವನ್ನು ಸದ್ದು ಕಡಿಮೆ ಮಾಡುತ್ತದೆ. ಮಕ್ಕಳು ಭಾಷಾ ಕೌಶಲ್ಯ ಬೆಳೆಸಿಕೊಳ್ಳಲಿಕ್ಕೂ ಸದ್ದು ಅಡ್ಡಿ ಮಾಡುತ್ತದೆ.

ನಿವಾರಣಾ ಕ್ರಮಗಳು
ಸದ್ದಿನಿಂದಾಗಿ ಇಷ್ಟೆಲ್ಲ ದುಷ್ಟರಿಣಾಮಗಳಿದ್ದರೂ ಮದುವೆ, ಗೃಹಪ್ರವೇಶ ಇತ್ಯಾದಿ ಸಮಾರಂಭಗಳಲ್ಲಿ ಕಿವಿಗಡಚಿಕ್ಕುವ ಸಿನಿಮಾ ಹಾಡು, ಪಾಪ್ ಸಂಗೀತವನ್ನು ಧ್ವನಿವರ್ಧಕಗಳ ಮೂಲಕ ನುಡಿಸಿ ಗದ್ದಲ ಎಬ್ಬಿಸುವವರಿದ್ದಾರೆ . ಒಂದು ದಿನವಲ್ಲ, ಎರಡು ದಿನಗಳು ತಮ್ಮ ವರಾರವನ್ನು ಸದ್ದಿನ ಗದ್ದಲದಲ್ಲಿ ಮುಳುಗಿಸುತ್ತಾರೆ.
ಜಾತ್ರೆ, ಉತ್ಸವ, ವಾರ್ಷಿಕೋತ್ಸವಗಳ ಹೆಸರಿನಲ್ಲಿ ಸದ್ದುಗಳ ಮಹಾಪೂರವನ್ನೇ ಎಬ್ಬಿಸುತ್ತಾರೆ. ಪ್ರಯಾಣಿಕರು ಬೇಡವೆಂದರೂ ಬಸ್ಸುಗಳಲ್ಲಿ ಜೋರಾಗಿ ಕ್ಕಾಸೆಟ್ ನುಡಿಸುತ್ತಾರೆ. ಇಂಥವರು ತಮ್ಮ ಕಿವಿಗಳಿಗೇ ಹಾನಿ ಮಾಡಿಕೊಳ್ಳುತ್ತಾರೆ! ಒಳಕಿವಿಯ ಸೂಕ್ಷ್ಮಕೋಶಗಳು ತೀವ್ರ ಸದ್ದಿನ ಘಾತಕ್ಕೆ ಬಲಿಯಾಗಿ, ಅವರ ಶ್ರವಣ ಶಕ್ತಿಯೇ ಕುಂದುತ್ತದೆ. ತಮ್ಮ ಕಿವಿ ತಮ್ಮಟೆಯನ್ನೇ ತೂತು ಮಾಡಿಕೊಳ್ಳುವ ಇಂಥವರಿಗೆ ಇತರರ ಕಿವಿ ತಮ್ಮಟೆಗೆ ಹಾನಿ ಮಾಡುವ ಅಧಿಕಾರ ಇಲ್ಲವೇ ಇಲ್ಲ. ಅಂಥವರ ಶಬ್ದ ಪೀಡನೆಯಿಂದ ಪಾರಾಗಲು ಬಳಕೆದಾರರು ಏನು ಮಾಡಬಹುದು?

ನಿಮ್ಮ ಪರಿಸರದಲ್ಲಿ ಧ್ವನಿವರ್ಧಕದ ಮೂಲಕ ಹಾಡು ಇತ್ಯಾದಿ ಬಿತ್ತರಿಸಿ ಶಬ್ದ ಮಾಲಿನ್ಯ ಮಾಡುವವರ ವಿರುದ್ದ ನೀವಿನ್ನು ಪೋಲೀಸ್ ರಾಣೆಗಳಿಗೆ ಧೈರ್ಯದಿಂದ ದೂರು ನೀಡಬಹುದು. ಯಾಕೆಂದರೆ, ಶಬ್ಲಮಾಲಿನ್ಯ ನಿಯಂತ್ರಣದ ಬಗ್ಗೆ ಹೈಕೋರ್ಟಿನ ನಿರ್ದೇಶನಗಳನ್ನು ಕಾರ್ಯಗತಗೊಳಿಸದಿದ್ದರೆ, ಪೊಲೀಸರ ವಿರುದ್ದ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಹ್ನೆಕೋರ್ಟಿನ ಜಸ್ಸಿಸ್ ಎಂ.ಎಫ್. ಸಲ್ದಾನಾ ಅವರು ಜುಲೈ 30,  2002ರಂದು ಎಚ್ಚರಿಕೆ ನೀಡಿದ್ದಾರೆ. ದೂರು ಕೊಟ್ಟವರು ದೂರಿನಲ್ಲಿ ಸಹಿ ಮಾಡದಿದ್ದರೂ ಶಬ್ದ ಮಾಲಿನ್ಯದ ಬಗ್ಗೆ ಸಾರ್ವಜನಿಕರ ದೂರುಗಳನ್ನು ಕಡ್ಡಾಯವಾಗಿ ದಾಖಲಿಸಬೇಕೆಂದು ಕರ್ನಾಟಕ ಹೈಕೋರ್ಟ್ ಜೂನ್ 2002ರಲ್ಲಿ ಪೊಲೀಸ್ ರಾಣೆಗಳಿಗೆ ನಿರ್ದೇಶನ ನೀಡಿದೆ. ಬೆಂಗಳೂರು ನಗರದ ‘ಮೌನವಲಯ’ಗಳಾದ ಶಾಲಾಕಾಲೇಜುಗಳು, ಪೂಜಾಸ್ಥಳಗಳು ಮತ್ತು ಆಸ್ಪತ್ರೆಗಳ ಸುತ್ತಮುತ್ತಲಿನ ಪ್ರದೇಶಗಳಿಗೆ ಶಬ್ದಮಾಲಿನ್ಯ ನಿಯಂತ್ರಣ ನಿಯಮಗಳು ಅನ್ವಯವಾಗುತ್ತವೆ. ‘ಶಬ್ದ ಮಾಲಿನ್ಯದ ದೂರುಗಳನ್ನು ದಾಖಲಿಸಲು ಪೋಲೀಸ್ ಠಾಣೆಗಳು ಪ್ರತ್ಯೇಕ ರಿಜಿಸ್ಟರನ್ನೇ ಇರಿಸಬೇಕು ಮತ್ತು ಆ ದೂರುಗಳ ಬಗ್ಗೆ ತತ್ ಕ್ಷಣವೇ ಕ್ರಮ ಕೈಗೊಳ್ಳಬೇಕು. ರಾಜ್ಯಾಡಳಿತವೇ ಕ್ರಮ ಕ್ಕೆಗೊಳ್ಳಬೇಕಾಗಿರುವುದರಿಂದ ದೂರುದಾರರ ವಿಳಾಸವೂ ಅಪ್ರಸ್ತುತ’ ಎಂದು ಜಸ್ಟಿಸ್ ಸಲ್ದಾನಾ ಈ ಬಗ್ಗೆ ಸ್ಪಷ್ಟ ಆದೇಶ ನೀಡಿದ್ದಾರೆ.

ಹ್ನೆಸ್ಕೂಲ್ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಪರಿಸರದ ಮಾನವ ನಿರ್ಮಿತ ಸದ್ದುಗಳಿಂದ ತಮ್ಮ ಅಧ್ಯಯನಕ್ಕೆ ತೊಂದರೆ ಆಗುತ್ತದೆಂದು ಪರೀಕ್ಷಾ ಸುಮಯದಲ್ಲಿ ದೂರಿಕೊಳ್ಳುತ್ತಾರೆ. ಅದರ ಬದಲಾಗಿ ಶೈಕ್ಷಣಿಕ ವರುಷದ ಆರಂಭದಲ್ಲೇ ತಮ್ಮ ಊರಿನ ಸದ್ಧಿನ ಮೂಲಗಳು, ಸದ್ದುಗಳ ತೀವ್ರತೆ ಮತ್ತು ದುಷ್ಟರಿಣಾಮಗಳ ಬಗ್ಗೆ ವಿದ್ಯಾರ್ಥಿ ಸುಂಘಟನೆಗಳ ಮೂಲಕ ಸರ್ವೆ ನಡೆಸಿ, ಅದರ ಸತ್ಯಾಂಶಗಳ ಆಧಾರದಿಂದ ಪೊಲೀಸ್ ರಾಣೆಗಳಿಗೆ ಶಬ್ದಮಾಲಿನ್ಯ ನಿಯಂತ್ರಣಕ್ಕಾಗಿ ದೂರು ನೀಡಬಹುದು.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಲಿ ವಿವಿಧ ಕ್ಕೆಗಾರಿಕ ಪ್ರದೇಶಗಳು, ವಾಸದ ಪ್ರದೇಶಗಳು ಮತ್ತು ಆಫೀಸ್ ಪ್ರದೇಶಗಳಲ್ಲಿನ ಸದ್ದಿನ ತೀಪ್ರತೆಯ ಗರಿಷ್ಠ ಮಿತಿಗಳನ್ನು ನಿಗದಿಪಡಿಸಿದೆ. (ಉದಾ: ವಾಸದ ಮನೆಗಳ ಪ್ರದೇಶಗಳಲ್ಲಿ ಸದ್ದಿನ ಗರಿಷ್ತ ಮಿತಿ ಹಗಲು 55 ಡೆಸಿಬಲ್ ಮತ್ತು ರಾತ್ರಿ 45 ಡೆಸಿಬಲ್).ಈ ಗರಿಷ್ಠ ಮಿತಿಗಳನ್ನು ತಮ್ಮ ತಮ್ಮ ಪ್ರದೇಶಗಳಲ್ಲಿ ಜಾರಿ ಮಾಡಲಿಕ್ಕಾಗಿ ಸ್ಥಳೀಯ ಆಡಳಿತವನ್ನು ಪೌರ ಸಮಿತಿಗಳು ಸಾರ್ವಜನಿಕ ಹಿತಾಸಕ್ತಿ ಸಂಘಟನೆಗಳೂ ಆಗ್ರಹಿಸಬಹುದು.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಲಿ ನೇಮಿಸಿರುವ ಶಬ್ದ ಮಾಲಿನ್ತ ಹತೋಟಿಯ ರಾಷ್ಟೀಯ ಸಮಿತಿಯು ಎಲ್ಲ ಉಪಕರಣ ಮತ್ತು ಯಂತ್ರಗಳ ಲೇಬಲಿನಲ್ಲಿ ಅವುಗಳ ಸದ್ಧಿನ ತೀವ್ರತೆ ಸೂಚಿಸುವುದನ್ನು ಕಡ್ಡಾಯ ಮಾಡಬೇಕೆಂದು 1999ರಲ್ಲೇ ನಿರ್ಧರಿಸಿದೆ. ಇದನ್ನು ಬೇಗನೇ ಜಾರಿ ಮಾಡುವಂತೆ ನಿಯಂತ್ರಣ ಮಂಡಳಿಯನ್ನು ಬಳಕೆದಾರರ ಸಂಘಟನೆಗಳು ಒತ್ತಾಯಿಸುಬಹುದು.

ರಸ್ತೆ ಪಕ್ಕದಮನೆಗಳಲ್ಲಿ ವಾಸಿಸುವವರು ರಸ್ತೆಯ ದಿಕ್ಕಿನಲ್ಲಿ ಗಿಡಮರಗಳನ್ನುದಟ್ಟವಾಗಿ ಬೆಳೆಸಿದರೆ, ಅವುಗಳ ಎಲೆಗಳಿಂದಾಗಿ ಸದ್ದು ಚದರಿ ಹೋಗಿ, ಮನೆಯೊಳಗೆ ಸದ್ದಿನ ತೀವ್ರತೆ ಕಡಿಮೆಯಾಗುತ್ತದೆ.

ಸದ್ಧಿನಿಂದ ಕಿವುಡಾಗದಿರಲು…
ನಿಮ್ಮ ಸುತ್ತಮುತ್ತಲಿನ ಸದ್ದುಗಳ ತೀವ್ರತೆ ತಿಳಿದು ಕೊಳ್ಳಿರಿ. (ಬಾಕ್ಟ್ ಓದಿರಿ) 45 ಡೆಸಿಬಲ್ ಗಿಂತ ಅಧಿಕ ತೀವ್ರತೆಯ ಸದ್ದುಗಳ ದುಷ್ಟರಿಣಾಮಗಳಿಂದ ಪಾರಾಗಲು ಕ್ರಮ ಕೈಗೊಳ್ಳಿರಿ. ಟಿವಿ, ರೇಡಿಯೋ , ಸಂಗೀತ ಸಿಸ್ಪಂ,  ವನಿವರ್ಧಕಗಳ ಶಬ್ದ ಮಟ್ಟ (ವ್ಯಾಲ್ಯೂಂ) ತಗ್ಗಿಸಿ, ಕಿವಿಗಳಿಗೆ ಸದ್ದು ಹಿತವಾಗಿ ಮಾಡಿರಿ. ಸದ್ದಿನ ಸ್ಥಳದಲ್ಲಿ ಇರಲೇಬೇಕಾದ ಪರಿಸ್ಥಿತಿ ಬಂದರೆ, ಆದಷ್ಟು ಬೇಗನೇ ಅಲ್ಲಿಂದ ದೂರ ಹೋಗಿರಿ.

ನಿಮ್ಮ ಉದ್ಯೋಗದ ಸ್ಥಳದಲ್ಲಿ ತೀವ್ರ ಸದ್ದು ಇದ್ದರೆ, ಶ್ರವಣ ರಕ್ಷಣಾ ಸಾಧನವನ್ನು ಕಿವಿಗೆ ಹಾಕಿಕೊಳ್ಳಿರಿ. ಮತ್ತು ಆರು ತಿಂಗಳಿಗೊಮ್ಮೆ ನಿಮ್ಮ ಶ್ರವಣ ಸಾಮರ್ಥ್ಯವನ್ನು ಶ್ರವಣ ತಜ್ಞರಿಂದ ಪರೀಕ್ಷೆ ಮಾಡಿಸಿಕೊಳ್ಳಿರಿ. ನಿಮ್ಮ ಘಟಕದ ಸದ್ದು ಹಾನಿಕರ ಮಟ್ಟದಲ್ಲಿದ್ದರೆ, ನಿಮ್ಮ ಶ್ರವಣ ಶಕ್ತಿ ರಕ್ಷಣೆಗಾಗಿ ನಿರ್ಧಿಷ್ಟ ಸುರಕ್ಷತಾ ವ್ಯವಸ್ಥೆಗ್ಟಳನ್ನು ಆಡಳಿತ ವರ್ಗದಿಂದ ಪಡೆಯಿರಿ. ಸದ್ದು ಮಾಡುವ ಆಟಿಕೆಗಳು, ಉಪಕರಣಗಳು ಮತ್ತು ಯಂತ್ರಗಳನ್ನು ಖರೀದಿಸಬೇಡಿರಿ. ದೂಮಪಾನ, ಕಾಫೀ, ಟೀ ಇತ್ಯಾದಿ ಕೆಫೀನ್ ಇರುವ ಪಾನೀಯ ಅಥವಾ ಮದ್ಯದ ಸೇವನೆಯು ಸದ್ದಿನ ತೀಪ್ರತೆಯ ನಿಮ್ಮ  ಅಂದಾಜನ್ನು ಬುಡಮೇಲು ಮಾಡುತ್ತದೆ. ಇಂಥ ಚಟ ಇರುವವರು ವರುಷಕ್ಕೆ ಒಮ್ಮೆಯಾದರೂ ತಮ್ಮ ಶ್ರವಣ ಸಾಮರ್ಥ್ಯವನ್ನು ಶ್ರವಣ ತಜ್ಞರಿಂದ ಪರೀಕ್ಷೆ ಮಾಡಿಸಿಕೊಳೃರಿ. ದೀಪಾವಳಿಯನ್ನು ದೀಪಗಳು ಹಾಗೂ ಗೂಡುದೀಪಗಳನ್ನು ಬೆಳಗಿಸಿ ಆಚರಿಸಿದರೆ ಕಿವಿಗಳು ಸುರಕ್ಷಿತ. ಪಟಾಕಿಗಳನ್ನು ಸಿಡಿಸಿದರೆ ವಾಯುಮಾಲಿನ್ಯ, ಶಬ್ದ ಮಾಲಿನ್ಯ ಮತ್ತು ಕಿವಿಗಳಿಗೆ ಹಾನಿ ಖಂಡಿತ.

*******************************************************************
ಸದ್ದುಗಳ ತೀಪ್ರತೆಯ ಸೂಚಕ ಪಟ್ಟಿ
ಸದ್ದಿನ ಮೂಲ                                                                                                                    ಡೆಸಿಬಲ್ಗಳು
ಕಿವಿಗೆ ಶಬ್ದದ ಅರಿವಾಗುವ ಮಟ್ಟ                                                                                               0
ಪಿಸುಗುಟ್ಟುವಿಕೆ                                                                                                                       10
ಕ್ಷೀಣ ಸದ್ದುಗಳಿರುವ ಕೋಣೆಯಲ್ಲಿ                                                                                            20
ಹೆಚ್ಚು – ಕಡಿಮೆ ನಿಶ್ಶಬ್ದ ಕೋಣೆ, ವಾಚಿನ ಟಿಕ್ಟಿಕ್  ಪುಟ ತಿರುವುವ ಸದ್ದು, ಎಲೆಗಳ ಮರ್ಮರ   30
ಮನೆಯ ಹಾಗೂ ಆಫೀಸಿನ ಕೋಣೆಯಲ್ಲಿ                                                                                40
ಮಾತುಕತೆ ಮತ್ತು ಮುಚ್ಚಿದ ಕಿಟಕಿಗಳಿಂದ ಕೇಳಿಬರುವ ಪೇಟೆಯ ರಸ್ತೆಯ ಸದ್ದು                      50
ತೆರೆದ ಕಿಟಕಿಗಳಿಂದ ಕೇಳಿ ಬರುವ ಪೇಟೆಯ ರಸ್ತೆಯ ಸದ್ದು                                                      60
ಸಾಲು ಸಾಲು ವಾಹನ ಸಾಗುವ ರಸ್ತೆಯ ಪಕ್ಕದಲ್ಲಿ                                                                  70
‘ಬಿಜಿ’ ಅಡ್ಡರಸ್ತೆಗಳು / ಗದ್ದಲದ ರಸ್ತೆಗಳಲ್ಲಿ ಸದ್ದು                                                                     80
ಲಾರಿ, ಬಸ್, ಮೋಟಾರ್ ಬೈಕಿನ ವೇಗೋತ್ಕರ್ಷದ ಸದ್ದು                                                        90
ಫೌಂಡ್ರಿ, ನ್ಯುಮಾಟಿಕ್ ಡ್ರಿಲ್, ವಿಮಾನ ನಿಲ್ದಾಣ ಹತ್ತಿರ ಗರಿಷ್ಠ ಸದ್ದು                                     100
ಪಾಪ್ ಸಂಗೀತ                                                                                                                    110
ನೆಲ ಬಿಟ್ಟು ಏಳುವ ವಿಮಾನದ ಜೆಟ್ ಎಂಜಿನಿನ ಸದ್ದು                                                          130
ಕಿವಿಗೆ ನೋವು ನೀಡುವ ಸದ್ದು                                                                                               140
******************************************************************

ಅದ್ಭುತ ಇಂದ್ರಿಯ – ಕಿವಿ
ಕಿವಿಗಳು ನಮ್ಮ ಜೀವಮಾನವಿಡೀ ದಕ್ಷತೆಯಿಂದ ಕೆಲಸ ಮಾಡಲಿಕ್ಕಾಗಿ ಸೃಷ್ಟಿಯಾಗಿವೆ. ನಮ್ಮ ಶ್ರವಣ ಶಕ್ತಿ ಕುಂಠಿತವಾದರೆ ಅದಕ್ಕೆ ವಯಸ್ಸಾದದ್ದೇ ಕಾರಣ ಅಂತ ನಿರ್ಲಕ್ಷಿಸುತ್ತೇವೆ. ಆದರೆ ಅದಕ್ಕೆ ನಾವು ಕೇಳಿದ ತೀವ್ರ ಸದ್ದಿನಿಂದಾಗಿ ಕಿವಿಯೊಳಗಿನ ಸೂಕ್ಷ್ಮಕೋಶಗಳಿಗೆ ಆದ ಹಾನಿಯೇ ಕಾರಣವಾಗಿರಬಹುದು. ಇದಕ್ಕೊಂದು ಸಮರ್ಥನೆ ಆಫ್ರಿಕದ ದುಬಾನ್ ಬುಡಕಟ್ಟನ ಜನರ ಬಗ್ಗೆ ನಡೆಸಿದ ಅಧ್ಯಯನದಿಂದ ಲಭಿಸಿದೆ. ಸದ್ದುಗಳ ಗದ್ದಲವಿಲ್ಲದ ಪರಿಸರದಲ್ಲಿ ಜೀವಿಸಿದ ಆ ಬುಡಕಟ್ಟನ ವೃದ್ದರ ಶ್ರವಣಶಕ್ತಿ ಕಿರಿಯರ ಶ್ರವಣ ಶಕ್ತಿಗೆ ಸರಿಸಮಾನವಾಗಿತ್ತು!

ಕೋಣೆಯೊಳಗೆ ಕಿಟಕಿ, ಬಾಗಿಲು ಮುಚ್ಚಿ ಕುಳಿತಾಗ, ಹೊರಗಿನ ಚಟುವಟಿಕೆಗಳು ಕಾಣಿಸದಿದ್ದರೂ ನಿಮಗೆ ಅವುಗಳ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ . ಕೇವಲ ಸದ್ದುಗಳ ಮೂಲಕ. ಉದಾಹರಣೆಗೆ ಪಕ್ಕದ ರಸ್ತೆಯಲ್ಲಿ ಹಾದು ಹೋದ ವಾಹನ ಯಾವುದೆಂದು (ಬನ್ನು, ಲಾರಿ, ಕಾರು, ರಿಕ್ಷಾ, ಸ್ಕೂಟರ್ ಅಥವಾ ಟ್ರಕ್) ಸುಲಭವಾಗಿ ತಿಳಿಯುತ್ತದೆ. ಭರ‍್ರನೆ ಸಾಗಿದ ಮೋಟಾರ್ ಬೈಕ್ ಯಾವುದೆಂದೂ (ಬುಲೆಟ್, ಯಜ್ಡಿ, ಹೀರೋಹೊಂಡ್ಣ, ಕವಾಸಕಿ, ಟಿ.ವಿ.ಎಸ್. ಅಥವಾ ಯಮಹಾ) ಗುರುತಿಸಲು ಸಾಧ್ಯ. ವ್ಯಕ್ತಿಗಳನ್ನಂತೂ ಬಹುದೂರದಿಂದ ಅವರ ಧ್ವನಿಯಿಂದಲೇ ಗುರುತಿಸುತ್ತೀರಿ.
ಇದೆಲ್ಲ ಹೇಗೆ ಸಾಧ್ಯ? ನಿಮ್ಮ ಕಿವಿಗಳ ಸೂಕ್ಷ್ಯ ಸಂವೇದನೆಯಿಂದ.

ಇಲೆಕ್ಟ್ರಾನಿಕ್ ಸಾಧನಗಳ ಮೂಲಕ ಸದ್ದಿನ ಮೂಲಗಳನ್ನು ಅಷ್ಟು ಕರಾರುವಕ್ಕಾಗಿ ಗುರುತಿಸಬೇಕಾದರೆ, ಒಂದು ಕೋಣೆ ತುಂಬ ಸಾಧನಗಳನ್ನು ಜೋಡಿಸಿಡಬೇಕಾಗುತ್ತದೆ. ಆದರೂ ಚಲಿಸುವ ವಸ್ತುಗಳು ಅಥವಾ ವ್ಯಕ್ತಿಗಳನ್ನು ಖಚಿತವಾಗಿ ಗುರುತಿಸಲು ಅವುಗಳಿಗೆ ಸಾದ್ಕವಿಲ್ಲ. ಆದರೆ ನಮ್ಮ ಪುಟ್ಟ ಕಿವಿಗಳು ಇವನ್ನೆಲ್ಲಾ ಲೀಲಾಜಾಲವಾಗಿ ಗುರುತಿಸುತ್ತವೆ. ಎಂಥ ಅದ್ದುತ ಇಂದ್ರಿಯ ನಿಮ್ಮ ಪುಟ್ಟ ಕಿವಿ! ಲಕ್ಷಗಟ್ಟಲೆ ರೂಪಾಯಿಗಳಿಗೂ ಖರೀದಿಗೆ ಸಿಕ್ಕದ, ಆದರೆ ನಿಮಗೆ ಪುಕ್ಕಟೆ ಸಿಕ್ಕಿದ ಕಿವಿಗಳನ್ನು ನೀವು ರಕ್ಷಿಸಬೇಡವೇ?

*****