ದೇಶದ ಪ್ರಮುಖ ಟ್ರಾಕ್ಟರ್ ತಯಾರಿಕಾ ಸಂಸ್ಥೆಯಾದ ಟಾಪೆ ಕಂಪನಿಯು ಟಾಪೆ ೪೪೧೦ ಸಾಮ್ರಾಟ್ ಎಂಬ ನೂತನ ಮಾದರಿಯ ಟ್ರಾಕ್ಟರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 44 H.P. ಸಾಮರ್ಥ್ಯದ ಇಂಜಿನ್ ಹೊಂದಿರುವ ಸಾಮ್ರಾಟ್ ಟ್ರಾಕ್ಟರ್ ಹೆಚ್ಚು ಇಂಧನ ಉಳಿತಾಯ ಮಾಡುವುದಲ್ಲದೇ, ನಿರ್ವಹಣಾ ವ್ಯಚ್ಚವನ್ನು ಸಹ ಕಡಿಮೆಯಾಗುತ್ತದೆ. ಕಾರಿನಂತೆ ಆರಾಮದಾಯಕವಾಗಿ ಚಾಲನೆ ಮಾಡಬಹುದಾದ ಟಾಪೆ ವಿಶೇಷವಾಗಿ ದಕ್ಷಿಣ ಭಾರತದ ಭತ್ತದ ಗದ್ದೆಗಳಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತದೆ. ಇತರೇ ಟ್ರಾಕ್ರ್‌ಗಳಿಗೆ ಹೋಲಿಸಿದರೆ. ಟಾಪೆ ಸಾಮ್ರಾಟ್ ಶೇ ೨೦ ರಷ್ಟು ಇಂಧನ ಉಳಿತಾಯ ಮಾಡಲಿದ್ದು ಚಲಿಸುವಾಗಲೂ, ಶ್ರಮವಿಲ್ಲದೇ ಗಿಯೆರ್, ಬದಲಾಯಿಸಲು ಸಾಧ್ಯವಾಗುವಂತೆ ಸೈಡ್ ಶಿಪ್ಟ್ ಕಾನ್‌ಸ್ಟಾಂಟ್ ಮೆಸ್ ಗಿಯರ್ ಬಾಕ್ಸ್ ಅಳವಡಿಸಲಾಗಿದೆ. ಭಾರದ ಸರಕು ಎಳೆಯುವಾಗಲೂ (೩.೮೦) ಉತ್ತಮ ಸ್ಥಿರತೆ ಹೊಂದಿದೆ. ನೂತನ ಟಾಪೆ ಸಾಮ್ರಾಟ್ ಬೆಲೆ ಬೆಂಗಳುರಿನಲ್ಲಿ ೩.೮೦ ಲಕ್ಷ. ರೂ.ಗಳು ೩ ವರ್ಷಗಳ ಖಾತರಿ ನೀಡಲಾಗುವುದೆಂದು ಸಂಶೋಧಕ ಉತ್ಪಾದಕರು ಹೇಳುತ್ತಾರೆ.
*****


















