ಏರುತಿವೆ ಏರುತ್ತಿವೆ
ಬೆಲೆಗಳು ಗಗನಕೆ ಏರುತ್ತಿವೆ
ಅಕ್ಕಿ, ಬೇಳೆ, ಎಣ್ಣೆ
ಆಕಾಶದ ನಕ್ಷತ್ರಗಳು ||ಏರುತ್ತಿವೆ||
ಏಳುತಿವೆ ಏರುತ್ತಿವೆ
ಬಂಗಲೆಗಳು ಗಗನಕೆ ಏರುತ್ತಿವೆ
ಗುಡಿಸಲು ನೆಲಕಚ್ಚಿ
ಬಡವರು ಬೀದಿಗೆ ಬಂದಿಹರು ||ಏರುತ್ತಿವೆ||
ಕಪ್ಪು ಕಣದ ಶ್ರೀಮಂತರು
ಸಬ್ಸಿಡಿಗೆ ಹಕ್ಕುದಾರರು
ಬಡ ರೈತನ ಗೊಬ್ಬರ, ಬೀಜಕೆ
ಕಡಿತವಾಗಿದೆ ಸಬ್ಸಿಡಿ ||ಏರುತ್ತಿವೆ||
ಬಡವರು ಸಾಲ ಮಾಡಿದರೆ
ನೋಟಿಸುಗಳು ಹೋಗುವವು
ಅಂಬಾನಿ ಮಲ್ಯರು ಮಾಡಿದರೆ
ಮನ್ನಾ ಮಾಡುವರು ||ಏರುತ್ತಿವೆ||
ಗ್ಯಾಸು, ತೈಲ, ನಕ್ಷತ್ರಗಳಾಗಿ
ಸರಕು ಕಳ್ಳ ದಾಸ್ತಾನುದಾರ
ಕೇಳುವವರಿಲ್ಲ ನೊಂದವರ ಗೋಳು
ಕಾಳಸಂತೆಗೆ ಕಡಿವಾಣವಿಲ್ಲ ||ಏರುತ್ತಿವೆ||
*****


















