ಮಂತ್ರವ ಗೊಣಗುತ
ಭಟ್ಟರು ಮೂಗಿಗೆ
ನಾಸೀಪುಡಿಯನು ಏರಿಸಲು
ಸೀನುಗಳಿಂದ
ಎದುರಿನ ನಂದಾ-
ದೀಪವನೊಮ್ಮೆಲೆ ಆರಿಸಲು
ಮೊದಲೇ ಬಿರು ಬಿರುಕಾಗಿದ್ದಾ ಹಳೆ
ಮುದಿ ಮಾರುತಿ ಮೂರುತಿಯಾ ಮೈ ಶಿಲೆ
ಆಯಿತು ಎರಡೂವರೆ ಹೋಳು
ಅದರೊಳಗಿಂದ
ಹಿರಿ ಕರಿ ತಂಡ
ತಂಡದಿ ಬಂದವು ಕರಿ ಚೇಳು!
*****

ಕನ್ನಡ ನಲ್ಬರಹ ತಾಣ
ಮಂತ್ರವ ಗೊಣಗುತ
ಭಟ್ಟರು ಮೂಗಿಗೆ
ನಾಸೀಪುಡಿಯನು ಏರಿಸಲು
ಸೀನುಗಳಿಂದ
ಎದುರಿನ ನಂದಾ-
ದೀಪವನೊಮ್ಮೆಲೆ ಆರಿಸಲು
ಮೊದಲೇ ಬಿರು ಬಿರುಕಾಗಿದ್ದಾ ಹಳೆ
ಮುದಿ ಮಾರುತಿ ಮೂರುತಿಯಾ ಮೈ ಶಿಲೆ
ಆಯಿತು ಎರಡೂವರೆ ಹೋಳು
ಅದರೊಳಗಿಂದ
ಹಿರಿ ಕರಿ ತಂಡ
ತಂಡದಿ ಬಂದವು ಕರಿ ಚೇಳು!
*****
ಕೀಲಿಕರಣ: ಎಂ ಎನ್ ಎಸ್ ರಾವ್