ಕಣ್ಣೀರ ಹನಿ ಹನಿಹನಿಸಿ ಬರೆಯುತ್ತಿತ್ತು ಗಲ್ಲದ ಪುಟದ ತುಂಬ ಕರುಳು ಕಲುಕುವ ಕಾವ್ಯ, ಕತೆ, ಕಾದಂಬರಿ. “ಇದನ್ನು ಓದಿಕೋ ಜಗತ್ತೇ?” ಎಂದು ಬೇಡಿಕೊಳ್ಳುತ್ತಿತ್ತು.
ಜಗತ್ತು ಮೌನದಲ್ಲಿ ಹೆಪ್ಪುಗಟ್ಟಿತ್ತು. ಕಣ್ಣೀರ ಹನಿ ದ್ರವಿಸಿ ಹರಿದಾಗ ಅದರಲ್ಲಿ ಯುಗಗಳು ತೇಲುತ್ತಿದ್ದವು.
*****