– ಸೂರ್ಯ ಸೃಷ್ಟಿಯಾಗುವುದಕ್ಕೂ ಮುಂಚೆ ಜಲಜನಕ, ಹಿಲಿಯಂ, ಮೋಡಗಳು, ಮತ್ತು ಧೂಳುಗಳಿದ್ವವು. ಗುರುತ್ವಾಕರ್ಷಣೆಯೆ ಫಲವಾಗಿ ಇವೆಲ್ಲ ಕುಗ್ಗಿಉಂಡೆಯಾಯಿತು. ಈ ಕ್ರಿಯೆ ನಡೆಡು ಕೇವಲ 5 ಸಾವಿರ ಬಿಲಿಯನ್ ವರ್ಷಗಳಾದವು !! ವಾಸ್ತವವಾಗಿ ಸೂರ್ಯನಲ್ಲಿ ಮೂರು ಭಾಗ, ಜಲಜನಕ, ಒಂದು ಭಾಗ ಹಿಲಿಯಂ ಇತರ ಅನಿಲ- ಗಳು ಕೂಡಿದ್ದು ಪ್ರಜ್ವಲಿಸುತ್ತವೆ. ಇದರ ಗರ್ಭದಲ್ಲಿ ಜಲಜನಕ ಪರಮಾಣುಗಳು ಜಜ್ಜಿ ಹಿಲಿಯಂ ಪರಮಾಣುಗಳಾಗು- ತ್ತವೆ. ಇದರ ಪರಿಣಾಮದಿಂದಾಗಿ ಅಗಾಧ ಪ್ರಮಾಣದ ಶಾಖ ಮತ್ತು ಬೆಳಕು ಬಿಡುಗಡೆಯಾಗುವುದು. ಈ ಪ್ರಮಾಣಪು 300 ಬಿಲಿಯನ್ ಟ್ರಿಲಿಯನ್ ಎಂದರೆ. 300,0000000000000000000000000 ವ್ಯಾಟ್ ಶಕ್ತಿಬಿಡುಗಡೆ- ಯಾಗುಪುದು (9,000 ಡಿಗ್ರಿಗಿಂತಲೂ ಹೆಚ್ಚು) ಈ ಶಕ್ತಿಯನ್ನು ಆನುಭವಿಸುವುದರಿಂದಲೇ ನಮ್ಮ ಜೈವಿಕಗೋಳ
ಉಳಿದಿದೆ. ಕ್ಷೀರ ಪಥದಲ್ಲಿ ಗುರುತಿಸಲ್ಪಡುವ ಸೂರ್ಯ 9 ಗ್ರಹಗಳ ಕುಟುಂಬವನ್ನು ಹೊಂದಿದೆ. ಅದರಲ್ಲಿ ನಾವು ನೆಲೆನಿಂತ ಭೂಮಿ (ಪೃಥ್ವಿ) ಸೂರ್ಯನಿಂದ 150 ಮಿಲಿಯನ್ ಕಿ.ಮಿ.ಗಳ ದೂರದಲ್ಲಿದೆ. (93,00,000 ಮೈಲು- ಗಳಷ್ಟು ದೂರ) ಸೂರ್ಯನ ಮೇಲ್ಮೈ ಮೇಲೆ 5,500 ಡಿಗ್ರಿC  ಮತ್ತು ಗರ್ಭದಲ್ಲಿ 1,50,00,000 ಡಿಗ್ರಿC ಗಳ ತಾಪವಿದೆ. ಇದರ ಗರ್ಭದಲ್ಲಿ ಜಲಜನಕ ಪರಮಾಣು ಜಜ್ಜಿ ಹಿಲಿಯಂ ಪರಮಾಣುಗಳಾಗುತ್ತವೆ. ಈ ಕ್ರಿಯೆಯಿಂದ ಆಗಾಧ ಪ್ರಮಾಣದ ಶಾಖ ಮತ್ತು ಬೆಳಕು ಬಿಡುಗಡೆಯಾಗುತ್ತದೆ. ಈ ರೀತಿ ಬಿಡುಗಡೆಯಾಗುವ ಶಕ್ತಿಯು ಬೆಳಕಿನ ರೇಡಿಯೋ, ಶಾಖದಿಂದ ಕೂಡಿದ ವಿದ್ಯುತ್ ಕಾಂತೀಯ ತರಂಗಗಳ ರೂಪದಲ್ಲಿಸೂರ್ಯನ ಮೇಲ್ಮೈ ಕಡೆಗೆ ಹರಿಯು- ತ್ತದೆ. ಆಗಾಗ ಆಗಾಧ ಶಕ್ತಿಯನ್ನು ಪ್ರಜ್ವಲಿಸುವ ಜಲಜನಕಪು ಬಿಡುಗಡೆಯಾಗಿ ಆದು ಆಕಾಶದಲ್ಲಿ 55,000 ಕಿ.ಮೀ. ಎತ್ತರದವರೆಗೆ ಪ್ರವಹಿಸುತ್ತದೆ. ಇಂತಹವುಗಳಿಗೆ “ಜ್ವಾಲೋನ್ನತಿ” ಗಳೆಂದು ಕರೆಯಲಾಗುತ್ತದೆ. ಸೂರ್ಯನಲ್ಲಿ ಬದಲಾವಣೆಯಾಗುವ ಕಾಂತೀಯ ಕ್ಷೇತ್ರವು ಅದರ ಮೇಲ್ಮೈ ಮೇಲೆ ಕಪ್ಪುಕಲೆಗಳಾಗಲು ಕಾರಣವಾಗಿದೆ. ಇವುಗಳಿಗೆ ‘ಸೌರಕಲೆ’ಗಳೆಂದು ಕರೆಯುತ್ತಾರೆ.

ಇಂತಹ ಸೂರ್ಯ ಒಂದು ಸೆಕೆಂಡು ಬಿಕ್ಕಳಿಸಿದರೆ ಆದರ ಪರಿಣಾಮ ವಿಶ್ವನಾಶದವರೆಗೆ ಹೋಗುತ್ತದೆ. 200 ಮಿಲಿಯನ್ ಪರಮಾಣು ಬಾಂಬುಗಳಂಥಹ ಜ್ವಾಲಾಶಕ್ತಿ ಸ್ಫೋಟಿಸುತ್ತಾ ವ್ಯಾಪಿಸುತ್ತದೆ. ಈ ಸ್ಫೋಟಗೊಂಡ ಜ್ವಾಲೆಗಳು ಸೌರಮಾರುತಗಳ ಮೂಲಕ ನಮ್ಮ ಪೃಥ್ವಿಯತ್ತ ಬಂದರೆ ಜಗತ್ತಿನಲ್ಲಿಯ ವಿದ್ಯುತ್ ಮತ್ತು ಕಾಂತಾಗೋಳ ತಲ್ಲಣಿನುತ್ತದೆ. ದೂರಕ್ಕೆ ಚಾಚುವ ಇದರ ಕೆನ್ನಾಲಿಗೆಗಳು ಭಯಭೀಕರ ಪರಿಣಾಮವನ್ನುಂಟು  ಈ ಬಿಕ್ಕಳಿಕೆಯೆ ಶಕ್ತಿ ಪ್ರಮಾಣ ಸೂರ್ಯನ ಶಕ್ತಿಯ ಶೇ. 2 ರಷ್ಟು ಮಾತ್ರ. ಇಂತಹ ಸಂವಹನ ಮಿಶ್ರಣ ಕ್ರಿಯೆ (Convention Mixing) ಅಪರೂಪವಾಗಿ ನಡೆಯುತ್ತದೆ. ಈ ಶೇ. 2 ರಷ್ಟರ ಪ್ರಮಾಣದ ಪರಿಣಾಮಗಳಿಂದಲೇ ನಮ್ಮ ಜೈವಿಕ ಪ್ರಪಂಚವು ಸಂಪೂರ್ಣ ನಾಶವಾಗುಪುದಲ್ಲದೇ ಭೂಗೋಳದ ದ್ರವಗಳು ವ್ಯತಿರಿಕ್ತಗೊಳ್ಳುತ್ತವೆ. ಸೌರಮಾರುತಗಳಿಂದ ಭೂಮಿಯ ಮೇಲೆ ರಕ್ಷಣೆ ಅಸಾಧ್ಯವಾಗುತ್ತದೆ.

ಹೊಳಯುವ ಸೂರ್ಯ : ಸೂರ್ಯ ಎಂದರೆ ಪ್ರತಿ ಸೆಕೆಂಡಿಗೆ ಸಾವಿರಾರು ಪರಮಾಣು ಬಾಂಬುಗಳ ಸಿಡಿತದಿಂದ ರೂಪಗೊಂಡ ಉಂಡೆ. ಪ್ರತಿ ಸೆಕೆಂಡಿನಲ್ಲಿಯೂ ಇದು ನಡೆಯುವ ಕ್ರಿಯಾಗಿರುತ್ತದೆ. ಈ ಸಂಘರ್ಷದ ಸಂದರ್ಭದಲ್ಲಿ ಉಂಟಾಗುವ ಬೆಳಕೇ ಪ್ರಕಾಶವಾಗಿ ಹೊರಹೊಮ್ಮಿ ಸೂರ್ಯ ಮತ್ತು ಇತರ ನಕ್ಷಶ್ರಗಳು ಹೊಳೆಯುವಂತೆ ಮಾಡಿದೆ. ಇದರೊಳಗಿನ ಪದಾರ್ಥಗಳು ಸದಾಕಾಲ ಶಕ್ತಿಗೆ ಪರಿವರ್ತಿಸಿದರೆ ಆ ಶಕ್ತಿಮಿಲಿಗಟ್ಟಲೆ ಕಲ್ಲುಕಬ್ಬಿಣಗಳನ್ನು ಸುಟ್ಟು ಬೂದಿಮಾಡಬಲ್ಲದು. ಆದಕ್ಕಾಗಿ ಸೂರ್ಯನೊಂಡು ಅತ್ಯದ್ಬುತ ಬೆಂಕಿಯ ಚಂಡು, ಶಾಖದ ಉಂಡೆ.
***************