ಚಿತ್ರ: ಮೊಲರ್‍ ಇಂಟರ್‍ ನ್ಯಾಷನಲ್

ಸಾವಿರಾರು ಕಿ.ಮೀ. ದೂರವನ್ನು ರಸ್ತೆಯ ಮೇಲೆ ಚಲಿಸಲು ಇಂದಿನ ಎಂತಹ ವಾಹನಗಳಲ್ಲಿಯಾದರೂ ವಾರಗಟ್ಟಲೇ ಬೇಕಾಗುತ್ತದೆ. ಅದರಲ್ಲೂ ಇಂದಿನ ಟ್ರಾಫಿಕ್‍ನಿಂದಾಗುವ ತಡೆ, ರಸ್ತೆ ಗುಂಡಿ ಬಿದ್ದಾಗಿನ ವಿಳಂಬ ಅಂಕುಡೊಂಕಾದ ರಸ್ತೆಯನ್ನು ಹಾಯ್ದು ಹೋಗಲು ಬಹಳ ಸಮಯ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ನೇರವಾದ, ಸುರಕ್ಷಿತ ರಸ್ತೆಯಲ್ಲಿ ನೆಲದ ಮೇಲೆ ಚಲಿಸಿ, ಸಮಸ್ಯಾತ್ಮಕ ರಸ್ತೆ ಅಂಕುಡೊಂಕು ರಸ್ತೆ ಇದ್ದಾಗ ನೇರವಾಗಿ ಮೇಲಕ್ಕೆ ಹಾರಿ ಗಂಟೆಗೆ ೫೦೦ ಕಿ.ಮೀಟರ್ ವೇಗದಲ್ಲಿ ಹೋಗುವ ಕಾರನ್ನು ವಿಜ್ಞಾನಿಗಳು ಸಿದ್ದಪಡಿಸಿದ್ದಾರೆ.

ಅಮೇರಿಕಾದ ಮೊಲ್ಲೆರ್ ಇಂಟರ್ನ್ಯಾಷನಲ್ ಅವರು ಈಗಾಗಲೇ ಹೊತ್ತು ಕೊಂಡೊಯ್ಯುವ ವಿಮಾನಕಾರನ್ನು ಸಿದ್ದಗೊಳಿಸಿದ್ದಾರೆ. ೧೯೬೧ ರಲ್ಲಿ ಡಾ|| ಪಾಲ್‌ಮೊಲ್ಲೆರ್ ಅವರು ಹಾರಬಲ್ಲ ಕಾರಿನ ಕಲ್ಪನೆಗೆ ಕಾರಣರಾದರೆ ೧೯೮೩ ರಲ್ಲಿಮೊಲ್ಲೆರ ಇಂಟರ್ ನ್ಯಾಷನಲ್ ಅಸ್ತಿತ್ವಕ್ಕೆ ಬಂದು ಇಂತಹ ಕಾರನ್ನು ತಯಾರಿಸುವ ಸಿದ್ಧತೆ ನಡೆಸಿದರು.

“M-400” ಅಥವಾ “SKYCAR” ಎಂಬ ಹೆಸರಿನ ಈ ಕಾರಿನಲ್ಲಿ ೪ ಆಸನಗಳಿದ್ದು ಗಂಟೆಗೆ ೫೦೦ ಕಿ.ಮೀ. ವೇಗದಲ್ಲಿ ಹಾರುವ ಈ ಕಾರು ಯಾವುದೇ ಬಯಲು ಸ್ಥಳದಲ್ಲಿ ಇಳಿದು ಮತ್ತೆ ಪ್ರಯಣವಮ್ನ ಮುಂದವರಿಸಬಹುದು. ಈ ಕಾರಣವಾಗಿ ಜಗತ್ತಿನ ಒಂದು ಮೂಲೆಯಿಂದ ಇನ್ನೂಂದು ಮೂಲೆಯ ಅಂತರವು ಕಡಿಮೆಯಾಗಿದೆ. ಇದರಲ್ಲಿ ಅಗತ್ಯವಿರುವ ರೋಟರಿ ಇಂಜನ್ ತಂತ್ರಜ್ಞಾನ (Wankel Type) ವನ್ನು ಅಳವಡಿಸಿಕೊಂಡು ವಾತಾನುಕೂಲದ, ಉನ್ನತ ಕಾರ್ಯ ಸಾಮರ್ಥ್ಯದ Roto Power ಇಂಜಿನನ್ನು ಅಭಿವೃದ್ಧಿ ಪಡಿಸಿದೆ. ೨೦ ಕೆ.ಜಿ. ಭಾರವಾದ ೬೫ BHPಯ ೧೪,೦೦೦ ಸಿ.ಸಿ. ವಾಲ್ಯೂಮಿನ ಇಂಜಿನ್ ರೂಪಗೊಳಿಸಿದೆ. ಈ ಇಂಜಿನ್‌ಗೆ ಅನುಕೂಲವಾಗುವ ಹಾಗೆ ವಿದ್ಯುನ್ಮಾನ ಸ್ಥಿರತಾ ವ್ಯವಸ್ಥೆಯ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸುವ ಫ್ಯಾನ್‌ಗಳನ್ನು ಈ ಕಾರಿಗೆ ಅಳವಡಿಸಲಾಗಿದೆ. ೪ ಇಂಜಿನ್‌ಗಳನ್ನು ಸುರಕ್ಷತೆಗಾಗಿ ಜೋಡಿಸಲಾಗಿದ್ದು (Roto Power), ಎರಡು ಪ್ಯಾರಾಚೂಟ್‌ಗಳೂ ಸಹ ಇರುತ್ತವೆ. ತುರ್ತುಪರಿಸ್ಥಿತಿಯಲ್ಲಿ ಉಪಯೋಗಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಯೋಜಿಸಲಾಗಿದೆ. ಇಂಧನವನ್ನು ಪರೀಕ್ಷಿಸಲು ಮತ್ತು ತುಂಬಿಸಿಕೊಳ್ಳಲು ಪ್ರತ್ಯೇಕ ವ್ಯವಸ್ಥೆಗಳನ್ನೂ ಮಾಡಲಾಗುತ್ತದೆ.

ಹೊಸ ವಿಮಾನವನ್ನು ವಿನ್ಯಾಸಗೊಳಿಸಲು ಮೊಲ್ಲೇರ್ ಅವರು ೧೯೯೨ ರಲ್ಲಿ ಪೇಟೆಂಟ್‌ನ್ನು ಪಡೆದಿದ್ದರು. M400 SKYCARಗಾಗಿ Power Lift Normal ವರ್ಗೀಕರಣದಲ್ಲಿ ಮತ್ತೆ ಹೊಸದಾಗಿ ಪೇಟೆಂಟ್ ಪಡೆದಿದ್ದಾರೆ. ಕಾರನ್ನು ನೆಲದ ಮೇಲೆ ಅಥವಾ ಆಕಾಶದಲ್ಲಿ ಹಾರಿಸಿ ಇಳಿಯಲು ವಿಮಾನ ನಿಲ್ದಾಣದ ಅಗತ್ಯವಿಲ್ಲ. ಸ್ವಲ್ಪ ಸಮತಟ್ಟಾದ ಸ್ಥಳವಿದ್ದರೆ ಸಾಕು. ಇಂತಹ ಕಾರುಗಳನ್ನು ವೈಮಾನಿಕ ವ್ಯವಸ್ಥೆಗೆ ಒಳಪಡಿಸಲಾಗುತ್ತದೆ. ವಿಮಾನದ ಸುಳಿವನ್ನು ಪತ್ತೆ ಹಚ್ಚುವ ಹಾಗೆ ‘ರಾಡಾರ್’ ವ್ಯವಸ್ಥೆಯು ಹಾರುವ ಕಾರುಗಳನ್ನು ಪತ್ತೆ ಹಚ್ಚುವುದು. ಪೂರ್ಣ ಕಂಪ್ಯೂಟರೀಕರಣಗೊಂಡಿರುವುದರಿಂದ ತರಬೇತಿಯೂ ಬೇಕಾಗಿರುವುದಿಲ್ಲ ಮುಂದೆ ಹಾರುವ ಕಾರುಗಳು ಹಾರುವ ವಿಮಾನಗಳಂತೆ ಸಾಮಾನ್ಯವಾದಾಗ ಲೈಸನ್ಸ್ ಮತ್ತು ಪೈಲಟ್‌ಗಳ ತರಬೇತಿ ಅಗತ್ಯವಾಗಬಹುದು. ಆಗ ಅಮೇರಿಕದ ವೈಮಾನಿಕೆ ಸಂಸ್ಥೆ Federal Aviation Authority of United States ಯಿಂದ ಲೈಸನ್ಸ್ ಪಡೆದ ಪೈಲೆಟ್‌ಗಳು ಮಾತ್ರ ಹಾರುವ ಕಾರುಗಳನ್ನು ಹಾರಿಸಲು ಅರ್ಹರಾಗಿರುತ್ತಾರೆ.
*****