PCN ಎಂಬ ತಂತ್ರಜ್ಞಾನದ ಮೈಕ್ರೋ ಸೆಲ್ಯೂಲರ್ ಫೋನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದೆ. ಮೈಕ್ರೋಸೆಲ್ಯುಲರ್ ತಂತ್ರಜ್ಞಾನದಲ್ಲಿ ಇಡೀ ಭೂಮಿಯನ್ನು ಅತಿ ಸಣ್ಣಭಾಗಗಳಾಗಿ ಮಾಡಿ ಒಂದೊಂದು ಭಾಗವನ್ನು ಮೈಕ್ರೋಸೆಲ್ ಎಂದು ಕರೆಯುತ್ತಾರೆ. ಈ ಮೈಕ್ರೋಸೆಲ್‌ಗಳಲ್ಲಿ ಅತಿ ಸಣ್ಣ ಮೈಕ್ರೋಬೇಸ್ ಸ್ಟೇಶನ್‌ಗಳಿರುತ್ತವೆ. ಈ ಮೈಕ್ರೋಬೇಸ್ ಸ್ಟೇಶನ್‌ಗಳು ದೂರವಾಣಿ ಕರೆಗಳನ್ನು ಗ್ರಹಿಸುವ, ರವಾನಿಸುವ, ಕೆಲಸ ಮಾಡುತ್ತವೆ. ಇದು ಕಡಿಮೆ ವೆಚ್ಚವಾಗಿದ್ದು ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸಲು ಸಮರ್ಥ ಹೊಂದಿದೆ.

ಹ್ಯಾಂಡ್‌ಸೆಟ್‌ನಿಂದ ಹೊರಟ ದೂರವಾಣಿ ಕರೆಯ ತರಂಗಗಳು ಸ್ವಲ್ಪ ದೂರ ಪ್ರಯಾಣಿಸಿದರೂ ಯಾವುದಾದರೂ ಬೇಸ್ ಸ್ಟೇಶನ್ ಇದನ್ನು ಗ್ರಹಿಸಿ ಸಂಪರ್ಕ ಕಲ್ಪಿಸುತ್ತದೆ. ಹ್ಯಾಂಡ್‌ಸೆಟ್ ಚಿಕ್ಕದಾಗಿದ್ದು ಕಡಿಮೆ ಬೆಲೆಯದ್ದಾಗಿರುತ್ತದೆ. ಮುಖ್ಯವಾಗಿ ಮಾಮೂಲಿ ಸೆಲ್ಯೂಲರ್ ತರಂಗಗಳು ತಲುಪದ ಸ್ಥಳಕ್ಕೂ ಮೈಕ್ರೋಸೆಲ್ಯೂಲರ್ ತರಂಗಗಳು ತಲುಪಬಲ್ಲವು. ಒಂದು ತಂತ್ರಜ್ಞಾನದ ಹ್ಯಾಂಡ್‌ಸೆಟ್ ಇದ್ದರೆ ಮನೆಯಲಿದ್ದಾಗ ಸಾಧಾರಣ ಪೋನಿನಂತೆಯೇ ಕೆಲಸ ಮಾಡುತ್ತವೆ. ನೀವು ಮನೆಯಿಂದ ಹೊರಗೆ ಓಡಾಡುವಾಗ ಈ ಹ್ಯಾಂಡ್‌ ಸೆಟ್ ಅಲ್ಲಲ್ಲಿ ಇರುವ ಮೈಕ್ರೋ ಬೇಸ್ ಸ್ಟೇಶನ್‌ಗಳ ಸಹಾಯದಿಂದ ಸಂಪರ್ಕ ಪಡೆಯುತ್ತದೆ. ಮತ್ತು ನೀವು ಚಲಿಸಿದಂತೆಲ್ಲ ಬೇರೆ ಬೇರೆ ಸ್ಟೇಷನ್‌ಗಳು ಸಂಪರ್ಕದ ಜವಾಬ್ದಾರಿಯನ್ನು ಹೊರುತ್ತವೆ. ಇದರ ಹಿಂದಿರುವ ಗುಟ್ಟು ಇಷ್ಟೆ. ನೀವು ಓಡಾಡುವಾಗ ನಿಮ್ಮ ಪೋನ್ ತನ್ನ ಇರುವಿಕೆಯ ಸ್ಥಳದ ಮಾಹಿತಿಯನ್ನು ನಿರಂತರವಾಗಿ ಕಂಪ್ಯೂಟರ್‌ಗಳಿಗೆ ತಿಳಿಸುತ್ತಿರುತ್ತದೆ. ಈ ಮಾಹಿತಿ ಹೊಂದಿರುವ ಕಂಪ್ಯೂಟರ್ ನಿಮಗಾಗಿ ಬಂದ ಕರೆಗಳನ್ನು ನೀವು ಇರುವ ಜಾಗದ ಸಮೀಪದ ಮೈಕ್ರೋಬೇಸ್ ಸ್ಟೇಶನ್ನಿನ ಮೂಲಕ ತಲುಪಿಸುತ್ತದೆ. ಒಂದು ವೇಳೆ ಗಂಟೆಗೆ ೧೬೦ ಕಿ.ಮಿ. ಮೀರಿದ ವೇಗದಲ್ಲಿ ಪಯಣಿಸುತ್ತಿದ್ದರೆ. ಬೇಸ್ ಸ್ಟೇಶನ್‌ಗಳು ಸಂಪರ್ಕ ಬದಲಾಯಿಸಲಾರವು. ಈ ತೊಂದರೆಯನ್ನು ಪರಿಹರಿಸಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಮುಂದಿನ ಕೆಲವು ದಶಕಗಳಲ್ಲಿ ಪ್ರಪಂಚದ ಎಲ್ಲ ಫೋನುಗಳು ವೈರ್‌ಲೆಸ್ ಆಗುವ ಸಾಧ್ಯತೆ ಇದೆ. ಆಗ ಪ್ರಪಂಚದ ಯಾವುದೇ ಮೂಲೆಯಿಂದ ಯಾವುದೇ ಮೂಲೆಗಾದರೂ ಟೆಲಿಫೋನ್ ಕರೆಮಾಡಬಹುದು.
*****