(ಒಂದು ಅಣಕ) ೧ ಬಾ, ಬಾರ ಸಾಂತಿ, ಈ ಊರ ಸಂತಿ ಯಾ- ವಾರವೇನೊ….ಆಂತಿ ! ಯಾ ವಾರವೇನು ? ಮುಳ್ಳಾಗ ಜೇನು ತಲಿ- ಯಾಗ ಹೇನು ಚಿಂತಿ ! ಬಡಿದೀತು ಭ್ರಾಂತಿ, ತಡಿದೀತು ತಂತಿ ಈ ಪೊಡವಿ ಗುಂತಗುಂತಿ ! ಆಡುವದು ಸಾಕ, ಹಾಡೊಂದ ಬೇಕ, ಮಿಡಿ- ಮಿಡಿಯ ಕರ...

ಬರಗಾಲ ಬಂದೈತೆ ಭೂ ತಾಯಿ ಒಡಲು ಸುಡುತೈತೆ|| ರೈತನ ಭವಣೆಗೆ ಕೊನೆಯಿಲ್ಲಾ ಜನ ಜಾನುವಾರುಗಳಿಗೆ ನೀರು ನೆರಳಿಲ್ಲ| ಉಣಲು ಬಣವಿಯಲಿ ಹುಲ್ಲಿಲ್ಲ ಮನೆಯಲಿ ಬೇಳೆ ಕಾಳುಗಳಿಲ್ಲ|| ಹಸುಗೂಸಿಗೆ ಅನ್ನ ಹಾಲದಿಲ್ಲ ಬೆಟ್ಟ ಗುಡ್ಡಗಳಿಗೆ ಹಸಿರು ಚಾದರವಿಲ್ಲ| ಮರ...

ಯೋಳಾದ್ ಏನ್ರ ಯೋಳಾದ್ ಇದ್ರೆ, ಝಟ್ ಪಟ್ನ್ ಏಳ್ ಮುಗೀಸು. ಯಾವ್ದಕ್ ಇಕ್ಬೇಕ್ ಗೊತ್ತ್ ಮಾಡ್ಕೊಂಡಿ ಆಮೇಕ್ ದೊಣ್ಣೆ ಬೀಸು. ೧ ಸುತ್ಕೊಂಡ್ ಸುತ್ಕೊಂಡ್ ಮಾತಾಡ್ತಿದ್ರೆ ಕ್ಯೋಳಾಕ್ ಬಲ್ ಪಜೀತಿ. ಬೈರ್‍ಗೆ ಕೊರದಂಗ್ ಕೊರಿತಾನಿದ್ರೆ ಯಾವ್ ದೇವರ್‍ಗೆ ಪ್...

ಕಾಗದದಿಂದ ತಯಾರಿಸಿದ ಅಮಿತ ಶಾಸನ ಬದ್ಧತೆಯ ಕರೆನ್ಸಿ ಹಣಕ್ಕೆ ಕಾಗದದ ಪ್ರಮಿತಿ ಎಂದು ಹೆಸರು. ಕಾಗದದ ಹಣವು ಸಾಂಕೇತಿಕ ಹಣವಾಗಿದ್ದು ಅದರ ಬಾಹ್ಯ ಮೌಲ್ಯವು ಅಂತರಿಕ ಮೌಲ್ಯಕ್ಕಿಂತ ಅಧಿಕವಾಗಿರುತ್ತದೆ. ಚಿನ್ನ, ಬೆಳ್ಳಿ ಅಥವಾ ಲೋಹದ ಗಟ್ಟಿಗಳಿಗೆ ಪರಿ...

ರಾಷ್ಟ್ರೀಯ ಹಬ್ಬ ಬಂದಿತೆಂದರೆ ಗಾಂಧಿ ವೇಷವ ತೊಡಿಸುವರು ಬೋಳಿಸುವರು ನಮ್ಮ ತಲೆಯ ಬಿಗಿವರು ಸೊಂಟಕೆ ಪಂಚೆಯನು ಚಾಳೀಸೊಂದನು ತೊಡಿಸುವರು ಕೈಯಲಿ ಕೋಲನು ಹಿಡಿಸುವರು ಮೌನದಿ ಒಂದೆಡೆ ನಿಲಿಸುವರು ಗಾಂಧಿ ಆದರ್ಶಕೆ ನೀರು ಬಿಡುವರು *****...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....