ರಾಷ್ಟ್ರೀಯ ಹಬ್ಬ ಬಂದಿತೆಂದರೆ
ಗಾಂಧಿ ವೇಷವ ತೊಡಿಸುವರು
ಬೋಳಿಸುವರು ನಮ್ಮ ತಲೆಯ
ಬಿಗಿವರು ಸೊಂಟಕೆ ಪಂಚೆಯನು

ಚಾಳೀಸೊಂದನು ತೊಡಿಸುವರು
ಕೈಯಲಿ ಕೋಲನು ಹಿಡಿಸುವರು
ಮೌನದಿ ಒಂದೆಡೆ ನಿಲಿಸುವರು
ಗಾಂಧಿ ಆದರ್ಶಕೆ ನೀರು ಬಿಡುವರು
*****