toy-314375_960_720

ಛುಕ್ಕು ಛುಕ್ಕು ರೈಲು ಬಂತು
ಸೀಟಿ ಊದುತ,
ಸಿಗರೇಟ್ ಸೇದೋ ಹಾಗೆ ಕೊಳವೀಲ್
ಹೊಗೇ ಬಿಡುತ್ತ!

ಎದೇ ತುಂಬ ನಿಗೀ ನಿಗೀ
ಕೆಂಡ ಇಟ್ಕೊಂಡು
ಸಾವಿರಾರು ಜನಾನ್ ತನ್ನ
ಹೊಟ್ಟೇಗ್ಹಾಕ್ಕೊಂಡು!

ರೈಲು ಹೋಗ್ತಾ ಇದ್ರೆ ಊರಿಗ್
ಊರೇ ಸುತ್ತುತ್ತೆ
ಮರ ಗಿಡ ಬೆಟ್ಟ ಎಲ್ಲ
ಓಡೋಡ್ ಹೋಗತ್ವೆ

ಊರು ಬಂತೋ ರೈಲಿಗಿಷ್ಟೆ
ನಿಂತೇ ಬಿಡತ್ತೆ
ನೀರು ಕುಡಿಸಿ ಮತ್ತೆ ಅದನ್
ಕಳಸ್ಬೇಕಾಗುತ್ತೆ!

ಬನ್ನಿ ಬನ್ನಿ ಎಲ್ಲಾ ಹೋಗಿ
ರೈಲಲ್ ಕೂರೋಣ
ಊರು ಬಂದ ಕೂಡ್ಲೆ ಎಲ್ಲಾ
ಹೊರಕ್ ಜಿಗಿಯೋಣ.
*****