Kids – ಚಿಲುಮೆ

Kids

ಮೋಡ

ಅಮ್ಮಾ ಅಮ್ಮಾ ಮೋಡವ ಮುಟ್ಟಿ ನೋಡಲು ಹೇಗಿರತೆ? ಬೆಣ್ಣೆಯ ಹಾಗೆ ಮಿದುವಾಗಿರತೇ-ನಿನ್ನ ಕೆನ್ನೆಯ ಹಾಗೆ ನುಣುಪಾಗಿರತೇ? ಹಾಸಿಗೆಯಂತೆ ಮೆತ್ತಗಿರತ್ತೇ–ಬಿದ್ದು ಹೊರಳಾಡಬಹುದೇ ಉರುಳಾಡಬಹುದೇ? ಇರುಳೆಲ್ಲಾ ನಾವದರಲಿ ಮಲಗಿರಬಹುದೇ ಚದ್ದರ […]

ಬೇಗಡೆ

ಬೇಗಡೆ ಬೇಗಡೆ! ಯಾವಾಗ ಬರುವಿ ನಮ್ ಕಡೆ? ರಾಮನ ಮಕುಟದ ಬೇಗಡೆ ಕೃಷ್ಣನ ಕಿರೀಟದ ಬೇಗಡೆ ಬೆಳ್ಳಂಬೆಳಗೇ ಬೆಳ್ಳಿಯ ಹಾಗೆ ಬೆಳಗುವ ಬಿಳಿಯ ಬೇಗಡೆ ಸೂರ್ಯೋದಯಕೆ ಚಿನ್ನದ […]

ತುಂತುರು ಮಳೆ

ಕುಂತರೂ ನಿಂತರೂ ಸಂತರೂ ಮಹಾಂತರೂ ಶಾಂತರೂ ದಿಗ್ಭ್ರಾಂತರೂ ಯಾರು ಏನೇ ಅಂತರೂ ತುಂತುರು ಮಳೆ ನಿಲ್ಲದು ಅಲ್ಲಿಯು ತುಂತುರು ಇಲ್ಲಿಯು ತುಂತುರು ಆಚೆ ತುಂತುರು ಈಚೆ ತುಂತುರು […]

ಪುಚ್ಚೆ

ಪುಚ್ಚೆ ಪುಚ್ಚೆ! ಏನಿದು ಹುಚ್ಚೆ! ತಿಂಡಿ ತಿಂದಿ ಹಾಲು ಕುಡಿದಿ ಆಮೇಲನ್ನುವಿ ಮಿಯಾಂ ಸಂಜೆವರೆಗೆ ನಿದ್ದೆ ಮಾಡಿದಿ ಕತ್ಲೆಗೆದ್ದು ವಾಕಿಂಗ್ ಹೋದಿ ಆಮೇಲನ್ನುವಿ ಮಿಯಾಂ ಪುಚ್ಚೆ ಪುಚ್ಚೆ! […]

ಚಿಂತೆ

ಒಬ್ಬೊಬ್ಬರಿಗೆ ಒಂದೊಂದ್ ಚಿಂತೆ ಗುಳ್ಳೆ ನರಿಗೆ ಬಾಲದ ಚಿಂತೆ ಕಂಠಪುಚ್ಚೆಗೆ ಮೀಸೆಯ ಚಿಂತೆ ಕಾಮನ ಬಿಲ್ಲಿಗೆ ಬಣ್ಣದ ಚಿಂತೆ ನವಿಲಿಗೆ ಸಾವಿರ ಕಣ್ಣಿನ ಚಿಂತೆ ನಿನಗೇತರ ಚಿಂತೆಯೊ […]

ಮೂನ್‌ಮೂನಣ್ಣ

ಕಾಸಿದ ಹಸುವಿನ ಹಾಲಿನ ಬಣ್ಣ ಜಿಂಕೆಯ ಎರಡೂ ಕೊಂಬಿನ ಕಣ್ಣ ಕಿಟಕಿಯ ಹತ್ತಿರ ಇಣುಕುತ ನಿಂತ ತಾಳೆಯ ಮರದಿಂದ ದೊಪ್ಪಂತ ಬಿದ್ದ ಎದ್ದೊರೆಸಿಕೊಂಡು ಎಲ್ಲೋದ್ನಣ್ಣ ನಮ್ಮಯ ಮುದ್ದಿನ […]

ಮಲ್ಲಿಗೆ

ಗುಂಡ್ರು ಮಲ್ಲಿಗೆ ದುಂಡು ಮಲ್ಲಿಗೆ ಬಳ್ಳಿ ತುಂಬ ಕುಂಡ್ರು ಮಲ್ಲಿಗೆ ಯಾರು ನಿನ್ನ ಕಂಡ್ರು ಮಲ್ಲಿಗೆ ಮುಗಿಬಿದ್ದು ತಗೊಂಡ್ರು ಮಲ್ಲಿಗೆ ಸಂತೆಯಲಿ ಸೇವಂತಿ ಮಲ್ಲಿಗೆ ಅರಮನೆಯಲಿ ಎರವಂತಿ […]

ಮೊಸಳೆ ಕಣ್ಣೀರು

ಮೊಸಳೆ ಮೊಸಳೆ ಯಾತಕೆ ಇಂತು ಕಣ್ಣೀರಿಡತೀಯಾ? ಅಯ್ಯೋ ಪುಟ್ಟಾ ನನಗೇನಿಲ್ಲ ನಿನಗೇ ಎಲ್ಲಾ ಕಷ್ಟ ಮುಂಜಾನೆದ್ದು ಶಾಲೆಗೆ ಹೋಗುತಿ ಸಂಜೆಗೆ ಬಂದು ಮತ್ತೂ ಓದುತಿ ಜೀವನವೆಲ್ಲಾ ನಷ್ಟಾಂತಪ್ಟ […]