ಪುಚ್ಚೆ ಪುಚ್ಚೆ! ಏನಿದು ಹುಚ್ಚೆ!
ತಿಂಡಿ ತಿಂದಿ ಹಾಲು ಕುಡಿದಿ
ಆಮೇಲನ್ನುವಿ ಮಿಯಾಂ

ಸಂಜೆವರೆಗೆ ನಿದ್ದೆ ಮಾಡಿದಿ
ಕತ್ಲೆಗೆದ್ದು ವಾಕಿಂಗ್ ಹೋದಿ
ಆಮೇಲನ್ನುವಿ ಮಿಯಾಂ

ಪುಚ್ಚೆ ಪುಚ್ಚೆ! ಏನಿದು ಮಚ್ಚೆ!
ಜಾಗ್ರತೆ ಸ್ವಲ್ಪ! ಗುಂಡಿಲಿ ಬಿದ್ದೀ!
ಆಮೇಲನ್ನುವಿ ಮಿಯಾಂ
*****