ಗುಂಡ್ರು ಮಲ್ಲಿಗೆ ದುಂಡು ಮಲ್ಲಿಗೆ
ಬಳ್ಳಿ ತುಂಬ ಕುಂಡ್ರು ಮಲ್ಲಿಗೆ
ಯಾರು ನಿನ್ನ ಕಂಡ್ರು ಮಲ್ಲಿಗೆ

ಮುಗಿಬಿದ್ದು ತಗೊಂಡ್ರು ಮಲ್ಲಿಗೆ
ಸಂತೆಯಲಿ ಸೇವಂತಿ ಮಲ್ಲಿಗೆ
ಅರಮನೆಯಲಿ ಎರವಂತಿ ಮಲ್ಲಿಗೆ
ಮುಗುಳು ಮಲ್ಲಿಗೆ ಹೊಗಳು ಮಲ್ಲಿಗೆ
ನಾಳೆ ನೀನು ಅರಳು ಮಲ್ಲಿಗೆ
ಜಡೆ ಜಡೆಯಲಿ ಹೊರಳು ಮಲ್ಲಿಗೆ
*****