ಬೆಕ್ಕಿಗೊಂದು ಕವಿತೆ
ನಾಯಿಗೆರಡು ಕವಿತೆ
ಓಡುವ ಮೊಲಕ್ಕೆ ಮೂರು ಕವಿತೆ

ಎತ್ತಿನ ಬಂಡಿಗೆ ನಾಲಕ್ಕು ಕವಿತೆ
ಆನೆಯ ಸೊಂಡಿಲಿಗೆ ಐದು ಕವಿತೆ
ಕುರಿಗಳ ಹಿಂಡಿಗೆ ಆರು ಕವಿತೆ

ಕುದುರೆ ಜೀನಿಗೆ ಏಳು ಕವಿತೆ
ಒಂಟೆಯ ಬೆನ್ನಿಗೆ ಎಂಟು ಕವಿತೆ
ಅಟ್ಟದ ಏಣಿಗೆ ಒಂಭತ್ತು ಕವಿತೆ

ಏಣಿ ಹತ್ತಿದರೆ ಹತ್ತೂ ಕವಿತೆ
ಒಟ್ಟೆಷ್ಟಾಯಿತು ಕವಿತೆ
ಹೇಳೋ ಕನ್ನಡದ ಜಾಣ?
*****