ಜಯವಾಗಲಿ ಇಳೆಗೆಲ್ಲ ಜಯ

ಸ್ವತಂತ್ರ ಭಾರತದರುಣೋದಯದ
ಮುಂಗಿರಣವದೋ ಮೂಡುತಿದೆ;
ಶತಮಾನದ ಮೇಲಿನ ಕಡು ದಾಸ್ಯದ
ಭಂಗಗೈದ ತಮವೋಡುತಿದೆ.

ಸ್ವಾತಂತ್ರ್‍ಯದ ಹರಿಕಾರರು ಮಲಗಿದ
ಜನರನೆಚ್ಚರಿಸ ಬಂದಿಹರು;
ಚಾತಕದೊಲು ಬಾಯ್ ಬಿಡುತಿಹ ಜನಕೆ
ಒಸಗೆ ಭರವಸೆಯ ತಂದಿಹರು.

ಇನ್ನೂ ಮಲಗಿರಲೇನು ಚೆಂದ? ಮೈ
ಜಡತೆಯ ಕೊಡಹುತ ಎದ್ದೇಳಿ;
ತನ್ನ ಪಾಲಿಗಿಹ ನಾಡಿನ ಸೇವೆಯ
ಭಾಗವ ಸಲಿಸುವ ಮನ ತಾಳಿ.

ಯಾರೋ ಬಿಡುಗಡೆ ನೀಡುವರೆಂದು
ಬೇಡುತಲಿರೆ ಎಂದಿಗೆ ಮುಕುತಿ?
ಸಾರಿಬರುವುದು ತಾನೇ ಬಿಡುಗಡೆ
ಹೂಡಲೆಮ್ಮ ಆತ್ಮದ ಶಕುತಿ.

ಇಂದಿನ ಜಯ ಹೊರಶಕ್ತಿಯ ಹುಸಿಜಯ
ಹಿಂಗಲಿಲ್ಲ ಲೋಕದೊಳು ಭಯ;
ಮುಂದೆ ಭಾರತವು ತೋರುವ ಆತ್ಮದ
ಜಯವಾಗಲಿ ಇಳೆಗೆಲ್ಲ ಜಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಟ್ಟೆಷ್ಟಾಯಿತು ಕವಿತೆ?
Next post ಬಾಲ್ಬಸ್ವವ್ರು

ಸಣ್ಣ ಕತೆ

  • ಸಂತಸದ ಚಿಲುಮೆ

    ಅಕ್ಬರ ಮಹಾರಾಜ ಒಮ್ಮೆ ಆಸ್ಥಾನದಲ್ಲಿ ‘ಸಂತಸದ ಚಿಲುಮೆ ಎಲ್ಲಿದೆ’ ಎಂದು ಅಲ್ಲಿದ್ದವರನ್ನೆಲ್ಲಾ ಕೇಳಿದ. ಆಸ್ಥಾನದ ಪಂಡಿತ ಮಹಾಶಯನೊಬ್ಬ ಎದ್ದುನಿಂತು - ಮಹಾರಾಜ ಸಂತಸದ ಚಿಲುಮೆ ನಿಜಕ್ಕೂ ಎಲ್ಲಿದೆ… Read more…