ರಾಘವ

#ಕವಿತೆ

ಅಶೋಕ ಚಕ್ರ

0

ನೋಡದೊ ಸ್ವಾತಂತ್ರ್‍ಯಾಕಾಶದಲಿ ಹಾರುತ್ತಿದೆ ನವ ರಾಷ್ಟ್ರಧ್ವಜವು! ಹಾರಲಿ! ಏರಲಿ! ಈ ಹೊಸ ಬಾವುಟ! ಚಿರ ಬಾಳಲಿ ನವ ಭಾರತ ಕೂಟ! ಹಿಂದೂ ಮುಸ್ಲಿಮ ಸಿಕ್ಕರು ಒಂದು ಹಿಂದೆ ಇಂದು ಮುಂದೆಂದೆಂದೂ- ಇಂತು ಸಾರುತಿದೆ ಈ ಹೊಸ ಬಾವುಟ: ಗೆಲ್ಲಲಿ ಎಲ್ಲರು ಒಂದೆನುವೀ ದಿಟ! ಬಾರ ಬಾರ ಹರಿಕಾರ ಸಮೀರ ತಾರ ತಾರ ಬಾವುಟಕ್ಕೆ ವಿಹಾರ ತೋರ […]

#ಕವಿತೆ

ಭಾರತ ಭವಿಷ್ಯವನು ಬರೆವನಾರು?

0

ಅದೊ ನೋಡು! ಹೊಲದಲ್ಲಿ ನೇಗಿಲನು ಬಲ್ವಿಡಿದು ಮೈಬೆವರಿನಿಂದುತ್ತ ಮಣ್ ನೆನೆವರಂ ದುಡಿದು ಹೆರವರಿಗೆ ಹೊನ್ ಬೆಳೆಯ ತೆಗೆಯೆ ಜೀವವ ತೇದು ನೇಗಿಲಿನ ರೇಖೆಯಿಂ ದುಡಿವ ಬಾಳ್ ನೆತ್ತರಿಂ ಭಾರತ ಭವಿಷ್ಯವನು ಬರೆವನವನು ನೆಲತಾಯ ನಲ್ಗುವರ-ಬಡ ರೈತನು. ಮತ್ತದೋ ನೋಡಲ್ಲಿ! ಯಂತ್ರಶಾಲೆಗಳಲ್ಲಿ- ಯಂತ್ರಗಳ ನಡುವೆ ತಾನೊಂದು ಯಂತ್ರವೆ ಆಗಿ ಹೆರರ ಸೌಖ್ಯಕೆ ತನ್ನ ಬಾಳ ಸವಿಯನೆ ನೀಗಿ […]

#ಕವಿತೆ

ಅಮೃತ ಸ್ವಾತಂತ್ರ್‍ಯ

0

ಗಳಿಸಿಕೊಂಡಿಹೆವಿಂದು ಸ್ವಾತಂತ್ರ್‍ಯ ಭಾಗ್ಯವನು ಉಳಿಸಿಕೊಳ್ಳುವೆವೇನು ಅದನು ಮುಂದಿನ್ನು? ಜಾತಿ ಮತ ಪಂಥಗಳ ಭೇದಗಳನೆ ಹಿಡಿದು, ರೀತಿ ನೀತಿಯ ತೊರೆದು, ಗುಣಕೆ ಮನ್ನಣೆ ತಡೆದು, ಭೀತಿಯನ್ನೊಡ್ಡಿ ಜನತೆಯ ಹಕ್ಕುಗಳ ಕಡಿವ ಸರ್ವಾಧಿಕಾರ ಬರೆ ಸ್ವಾತಂತ್ರ್‍ಯವೆ? ಬಡವ ಬಲ್ಲಿದನೆಂಬ ಭೇದಗಳು ಇನ್ನುಳಿಯೆ ಅವರಿಬ್ಬರೊಳದ್ವೇಷದುರಿ ಹೊತ್ತಿ ಬಲ್‌ಬೆಳೆಯೆ ನಾಡೊಳು ಅಶಾಂತಿ ಅಂತಃಕಲಹಗಳು ಮೊಳೆಯೆ- ಕಾದಾಡುವಾ ಹಕ್ಕೆ ಸ್ವಾತಂತ್ರ್‍ಯವೆ? ಅರೆಹೊಟ್ಟೆ ತಿನ್ನುವುದೆ […]

#ಕವಿತೆ

ಮನೆಯು ಪಾಲಾಯ್ತು

0

“ಮನೆಯು ಪಾಲಾಯ್ತು ಒರ್‌ಬಾಳ್ವೆ ಹೋಳಾಯ್ತು ಕರುಳೆರಡು ಸೀಳಾಯ್ತು ಅಯ್ಯೊ! ಅಕಟಕಟಾ! ಎರಡಾಯ್ತು ಬಾವುಟ” ಎಂದು ಗೋಳಾಡದಿರು ಓ, ಗೆಳೆಯನೇ! ಕಲಹ ಪಾಲಿಗೆ ಮೊದಲು: ಹೊಗೆಯಿತಸಮಾಧಾನ, ಉರಿಯಿತು ದುರಭಿಮಾನ. ತಮ್ಮ, ಪಸುಗೆಯ ಬಯಸಿ ಕೈಮಾಡಿದನು, ಮುನಿದು; ಒಬ್ಬಣ್ಣ ಸುಮ್ಮನಿರೆ ಉಳಿದರಂತಿಹರೆ? ಹೊಡೆತಕ್ಕೆ ಮರುಹೊಡೆತ; ಮತದ ಮದ್ದಿನ ಸಿಡಿತ! ಮಾರಿಗಾಯ್ತೌತಣ; ನಾಡೆಲ್ಲ ರಣ ರಣ! ತಡವೆ ರೋಗನಿದಾನ! ಒಳಗೆಲ್ಲೊ […]

#ಕವಿತೆ

ಹರಸು, ಹೇ! ಭಾರತದ ಭಾಗ್ಯದೈವ

0

ಸ್ವಾತಂತ್ರ್‍ಯ ಸೌಧವನು ರಚಿಸತೊಡಗಿಹರದೋ ನಾಡ ನಾಯಕರೆಲ್ಲರೊಂದುಗೂಡಿ; ಸೌಧವನ್ನಾಗಿಸುತ ಅದಕೆ ಕಲಶವನಿಟ್ಟು ಹರಸು, ಹೇ! ಭಾರತದ ಭಾಗ್ಯದೈವ! ಮತದ ಮೈಲಿಗೆ ಕಳೆದು ಒಮ್ಮತದ ಮಡಿಯುಟ್ಟು ಸ್ವಾತಂತ್ರ್‍ಯ ಮಂದಿರದೊಳೆಲ್ಲ ನೆರೆದು ಭಾರತಾಂಬೆಯನೇಕನಿಷ್ಠೆಯಲಿ ಭಜಿಪಂತೆ ಹರಸು, ಹೇ! ಭಾರತದ ಭಾಗ್ಯದೈವ! ಮೇಲು ಕೀಳುಗಳೆಂಬ ಬಡವ ಬಲ್ಲಿದನೆಂಬ ಭೇದಭಾವನೆಯ ಮೋಡಗಳು ಚೆದರಿ ಸ್ವಾತಂತ್ರ್‍ಯ ಸೂರ್‍ಯನೆಲ್ಲೆಡೆಯು ಬೆಳಗುವ ತೆರದಿ ಹರಸು, ಹೇ! ಭಾರತದ […]

#ಕವಿತೆ

ಅಪೂರ್ವ ಸಂಧ್ಯಾಚಿತ್ರ

0

ನಾಗರಿಕ ಜೀವನದ ಗರ್ಭದೊಳಗಡೆ ಸಿಲುಕಿ ಕತ್ತಲೆಯೆ ಬೆಳಕೆನಿಸಿ, ಬೆಳಗು ಬೈಗುಗಳೆಂಬ ಭೇದ ಬರಿ ನೆನಪಾಗಿ, ಗಾಣದೆತ್ತಿನ ದುಡಿತ ಹವಣಿಸುವ ಬೇಸರದ ಜೊತೆಗೆ, ನಿತ್ಯವು ಹೊಟ್ಟೆ ಬಟ್ಟೆಗಳ ಹಂಚಿಕೆಯ ಹೊಂಚಿಕೆಯ ಹುಸಿ ಬಾಳ ಲಂಚ ಪ್ರಪಂಚದಲಿ ಸತ್ಯನಿಷ್ಠನ ಸಾವು- ಬದುಕಿನಾ ಧಗೆಯ ಬಿರು ಹೊಯ್ಲಿನಲಿ, ಭಾರತದ ಯಾವುದೋ ಮೂಲೆಯಲಿ ಹೊತ್ತಿ ಹಬ್ಬಿದ ಮತ- ದ್ವೇಷದನಿರೀಕ್ಷಿತದ ಕಾಳ್ಕಿಚ್ಚಿನಿಂದೊಗೆದ ಹೊಗೆಯ […]

#ಕವಿತೆ

ಮಹಾತ್ಮರ ಸೆರೆ

0

ಓ, ಮಹಾತ್ಮನೆ, ನಿನ್ನ ಬಂದಿಸಿಟ್ಟಿಹರೆಂದು ಹಲರು ತಿಳಿದಿಹರು, ದಿಟ; ಆದರದು ತಪ್ಪೆಣಿಕೆ: ಬಂಧನವ ಬಯಸಿ ಬರಮಾಡಿಕೊಂಡಿಹೆ; ಜನಕೆ ಬಂಧನವೆ ಬಿಡುಗಡೆಗೆ ಹೆದ್ದಾರಿಯೊಂದೆಂದು ತೋರಿಸಲು. ಜಗ ಜನಾಂಗಗಳೆಲ್ಲ ತಾವಿಂದು ತಮ್ಮ ನಾಯಕರಿತ್ತ ಕುರುಡಾಣತಿಯ ಪಿಡಿದು ತಾವಣ್ಣ ತಮ್ಮಂದಿರೊಬ್ಬರೊಬ್ಬರ ಕಡಿದು ನಿರಪರಾಧಿಗಳಾದ ತಾಯ್ ಮಕ್ಕಳನು ಕೊಂದು ಈ ಹೊಲ್ಲ ಯುದ್ಧ ನಡಸುತಿರೆ, ಪಾಪದ ಫಲಕೆ ನಮ್ಮನೂ ಭಾಗಿ ಮಾಡಲು […]

#ಕವಿತೆ

ಜನತೆಯೊಂದೆ

0

ಚರಿತೆಯ ಚಮತ್ಕಾರದಿಂದೊಡೆಯಿತೆಮ್ಮ ಜನ ಎರಡಾಗಿ: ಆದರೊಂದೇ, ನಿಜಕು ಜನತೆಯೊಂದೆ: ಹೊರಗಣಿನಿಸಿನ ಭೇದ ಭೇದವೇ? ಆ ತಂದೆ ಇಬ್ಬರಿಗು ದೈವವೆನೆ, ಒಪ್ಪದಿದೆ ಮೂಢ ಮನ. ಒಂದು ಮುಸ್ಲಿಮರೊಂದೆ: ಇದನರಿಯಬೇಕು ಜನ: ಮೆಲಿನಾ ಬಾನೊಂದೆ; ನಡೆವ ನೆಲ ತಾನೊಂದೆ; ಕುಡಿಯುವಾ ನೀರೊಂದೆ;-ಬಸಿರೊಂದೆ, ಉಸಿರೊಂದೆ: ಅರ್ತಿಯಿಂದಾರಯ್ಯೆ ಅರಿವುದೀ ಒಂದುತನ. ಇಂತಿರಲು, ಪುಟ್ಟ ಭೇದವ ಬೆಟ್ಟದನಿತೆಣಿಸಿ, ತಾವಣ್ಣ ತಮ್ಮದಿರು ಎಂಬ ನಂಟನು […]

#ಕವಿತೆ

ನಾಡ ಹಬ್ಬ

0

ಎಂದಿನಂತೆಯೆ ಬಂದಿತೇ ನಾಡ ಹಬ್ಬ? ನಮ್ಮ ನಾಯಕರೆಮ್ಮನಾಳುವುದೆ ಹಬ್ಬ! ಅದು ಹೊರತು, ಹಸಿದವನ ಕೈಗಿತ್ತು ಕಬ್ಬ, ‘ಓದಿ ತಣಿ’ ಎಂದಂತೆ ನಾಡಹಬ್ಬ! ಬಣಜಿಗನ ಬೊಕ್ಕಸವು ತುಂಬಿತಿದೆ ಗಿಡಿದು; ಕಾರ್ಮಿಕರು ಕೆರಳಿಹರು ತಮ್ಮ ಕನಸೊಡೆದು; ಕ್ಷಾಮಮಾರಿಯ ಮುಂದೆ ಬಡಜನರು ಮಡಿದು ಬಲಿಯಾಗುತಿಹರಿದುವೆ ನಾಡಹಬ್ಬ! ಒಬ್ಬ ತಾಯಿಯ ಮಕ್ಕಳೆಂಬರಿವ ತೊರೆದು ಸೇಡು ಮರುಸೇಡಿನಲಿ ಮತದ ಬಾಳ್ ಹಿರಿದು ಹೇಟಿತನದಲಿ […]

#ಕವಿತೆ

ಕೊಲ್ಲದ ಕಾಳೆಗ

0

ಬನ್ನಿರಿ ಬಾಲರೆ ನಡೆಯಿರಿ ಗೆಳೆಯರೆ ನಾಡಿನ ಬಿಡುಗಡೆ ಕಾಳೆಗಕೆ ತನ್ನಿರಿ ನಿಮ್ಮ ಕಪ್ಪ ಕಾಣಿಕೆಯ ಭಾರತ ಮಾತೆಯ ಓಲಗಕೆ! ಸತ್ಯದ ಕುದುರೆಯನೆಲ್ಲರು ಹತ್ತಿ ಹಿಡಿದು ಝಳಪಿಸಿರಿ ಅಹಿಂಸೆ ಕತ್ತಿ ತಿರುಗಿಸಿ ಗಿರ್‍ರನೆ ನೂಲುವ ಚರಕ ಹುಟ್ಟಡಗಲಿ ದಾರಿದ್ರ್‍ಯದ ನರಕ. ಹಿಂದೂ ಮುಸ್ಲಿಮ ಸಿಕ್ಕ ಪಾರಸಿಕ ಜೈನ ಬೌದ್ಧ ಈಸಾಯಿ ಯೆಹೂದ್ಯ ಉಚ್ಚ ನೀಚ ಕುಲ ಸ್ಪೃಶ್ಯಾಸ್ಪೃಶ್ಯ […]