ಹರಸು, ಹೇ! ಭಾರತದ ಭಾಗ್ಯದೈವ

ಸ್ವಾತಂತ್ರ್‍ಯ ಸೌಧವನು ರಚಿಸತೊಡಗಿಹರದೋ
ನಾಡ ನಾಯಕರೆಲ್ಲರೊಂದುಗೂಡಿ;
ಸೌಧವನ್ನಾಗಿಸುತ ಅದಕೆ ಕಲಶವನಿಟ್ಟು
ಹರಸು, ಹೇ! ಭಾರತದ ಭಾಗ್ಯದೈವ!

ಮತದ ಮೈಲಿಗೆ ಕಳೆದು ಒಮ್ಮತದ ಮಡಿಯುಟ್ಟು
ಸ್ವಾತಂತ್ರ್‍ಯ ಮಂದಿರದೊಳೆಲ್ಲ ನೆರೆದು
ಭಾರತಾಂಬೆಯನೇಕನಿಷ್ಠೆಯಲಿ ಭಜಿಪಂತೆ
ಹರಸು, ಹೇ! ಭಾರತದ ಭಾಗ್ಯದೈವ!

ಮೇಲು ಕೀಳುಗಳೆಂಬ ಬಡವ ಬಲ್ಲಿದನೆಂಬ
ಭೇದಭಾವನೆಯ ಮೋಡಗಳು ಚೆದರಿ
ಸ್ವಾತಂತ್ರ್‍ಯ ಸೂರ್‍ಯನೆಲ್ಲೆಡೆಯು ಬೆಳಗುವ ತೆರದಿ
ಹರಸು, ಹೇ! ಭಾರತದ ಭಾಗ್ಯದೈವ!

ಮನೆಯೊಳಗೆ ಇರವೆ ಹಲವಾರು ವಾಸದ ಕೋಣೆ?
ಭಾರತದ ಹೊಸಮನೆಯೊಳಿರಲಿ ನೂರು.
ಮನೆಯೊಂದೆ, ಮನೆದೇವರೊಂದೆ ತಾನಪ್ಪಂತೆ
ಹರಸು, ಹೇ! ಭಾರತದ ಭಾಗ್ಯದೈವ!

ಸತ್ಯ ಸರ್ವಪ್ರೇಮ ಸಮಭಾವನೆ ಅಹಿಂಸೆ
ಇವೆ ನವ್ಯ ಭಾರತದ ಮನೆ ದೇವರು;
ಮನೆ ದೇವರನ್ನೊಲಿದು ಎಲ್ಲರರ್ಚಿಸುವಂತೆ
ಹರಸು, ಹೇ! ಭಾರತದ ಭಾಗ್ಯದೈವ!

ಸ್ವಾತಂತ್ರ್‍ಯದರಮನೆಯ ಸಮ್ರಾಜ್ಞಿ ತಾನೆನಿಸಿ
ಮಾತೆ ಮಕ್ಕಳ ಏಳ್ಗೆ ಕಂಡು ನಲಿದು,
ಅವಳ ಮನೆ ಮಂಗಳದ ಮನೆಯಾಗಿ ಮೆರೆವಂತೆ
ಹರಸು, ಹೇ! ಭಾರತದ ಭಾಗ್ಯದೈವ!
*****

ಕೀಲಿಕರಣ : ಕಿಶೋರ್‍ ಚಂದ್ರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಂದ ಚಂದದ ಮಕ್ಕಳು
Next post ಇಳಾ – ೧೨

ಸಣ್ಣ ಕತೆ

 • ತಿಥಿ

  "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

 • ನಿಂಗನ ನಂಬಿಗೆ

  ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

 • ವಾಮನ ಮಾಸ್ತರರ ಏಳು ಬೀಳು

  "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

 • ತಿಮ್ಮರಯಪ್ಪನ ಕಥೆ

  ರಂಗಣ್ಣ ಎರಡು ತಿಂಗಳು ಕಾಲ ರಜ ತೆಗೆದು ಕೊಂಡು ಬೆಂಗಳೂರಿಗೆ ಬಂದು ವಾಸಮಾಡುತ್ತಿದ್ದನು. ಶಿವಮೊಗ್ಗದಲ್ಲಿ ಪಿತ್ತವೇರಿಸುವ ತುಂಗಾಪಾನವನ್ನು ನಿತ್ಯವೂ ಮಾಡಿ, ಕಿವಿ ಮೂಗು ಬಾಯಿಗಳಿಗೆಲ್ಲ ಮುಸುರುವ ಸೊಳ್ಳೆಗಳ… Read more…

 • ಒಲವೆ ನಮ್ಮ ಬದುಕು

  "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…