ಚಂದ ಚಂದದ ಮಕ್ಕಳು
ಅಂಗಳಕೆ ಬಂದರು
ತಿಂಗಳ ಬೆಳಕ ನೋಡಿ ನಲಿದು
ನಾಳೆ ಬರುವೆವೆಂದರು

ಚಂದ ಚಂದದ ಮಕ್ಕಳು
ಹೂದೋಟಕೆ ಹೋದರು
ಒಂದೊಂದು ಹೂವಿಗೂ
ಪರಿಮಳವ ತಂದರು

ಚಂದ ಚಂದದ ಮಕ್ಕಳು
ಪಾಠಶಾಲೆಗೆ ತೆರಳಿದರು
ಪಾಠ ಕಲಿತು ಓಟಕಿತ್ತು
ಊಟಕೆ ಮನೆಗೆ ಬಂದರು

ಮಕ್ಕಳು ಬಂದಾರೆ
ಊಟ ಕೊಡಿ!
*****