ವೀರ್ವನ್ತೆ ವನ್ಕೆ ದುರ್ಗುವ್ವ…..

ವೀರ್ವನ್ತೆ ವನ್ಕೆ ದುರ್ಗುವ್ವ…..

ಚಿತ್ರ: ಗ್ದಕಸ್ಕ
ಚಿತ್ರ: ಗ್ದಕಸ್ಕ

ದುರ್ಗುವ್ವನ ಮನ್ಮುಂದೆ….. ದ್ವಡ್ವರ್ಸುಣ್ವರು….ವುಡ್ಗುರ್ಪುಡೆಂಬ್ದುಂಗೆ ಸೇರ್ದ್ರು. ಮಾಳ್ಗ್ಮೆನ್ಗೆಳೇನು?…….ಯಿಡೀ ಪೂರ್ಕೇರಿಯೇ ಬಿಸ್ಬಿಸಿ…. ವಗೆಯೇಳ್ತೋಡ್ಗಿತು. ಪಡ್ಸಾಲೆಯಲಿ, ಬಲ್ಗಾಡ್ಪೆಡ್ಗೆ ಕಲ್ನಿ ವಳ್ಳಾಗೆ, ವಣ್ಕಾರ ಕುಟ್ಲು, ಗುದಿಮುರ್ಗೆ ಬಿದ್ದ ಗಮ್ಗಾತ್ತು ಮೂಗ್ನಿ ವಳ್ಗೆಳ್ನು ವೂರ್ಗಲ್ಮಾಡ್ತಿಲ್ದೆ ಬೆಳ್ಗಾಡ್ಡೆ, ವಣ್ಕಬ್ರಿ, ಗಸ್ಗಾಸೆ, ಕುಸ್ಮೆ, ಆಕ್ಸಿಣ್ಗೆ…… ಗಂಧಾರ್ದಿಂಗೇ ಅರಿತ್ತಿದ್ದ, ದುರ್ಗುವ್ವನ ದೆಬ್ಗೇ……ಜನ್ರು ಜೊಲ್ಸುರ್ಸಿ…..ಕಣ್ಣರ್ಳಿಸಿ, ಕಿವ್ನಿಗ್ರಿಸಿ….. ದೊಡ್ಡೆಲ್ಲೆಪ್ಪ…..ದುರ್ಗುವ್ವ…. ಪಡ್ಸಾಲೆಯಲ್ಲಿ, ಬಲು ಪೆಡ್ಸಾಗಿ, ಮಾತಾಡ್ವು ಆ ಕರ್ಣ ಕಠೋರವಾದ ಗತ್ತು ಗಮ್ಮತ್ತು….. ಆ ವನ್ಕೆ ಕುಟ್ಟೋ….. ಸಬ್ದುದಾಗೇ….. ಕಿವ್ಗಿಪ್ಳಿಸತೊಡ್ಗಿದ್ದವು.

’ದುರ್ಗುವ್ವ….ಯೇನವ್ವ…. ನೀ ಅಗ್ಲುರಾತ್ರಿ, ವಲ್ಮನೆ, ಮಕ್ಳುಮರೆಂತಾ… ಬಿದ್ದು, ಬಿದ್ದು ಸತ್ರೆ…. ಯಿಂಗ್ನೋಡ್ಮುತ್ತೆ! ಕಣ್ದಾಗಿಂದು…. ಕೈಗ್ಬಂದ್ತೂತ್ತು….ಹಾಳಾಗಿ, ನಿಸ್ಸಾಂತ್ರಾಗಿ ವೋಗಾದಿಂಗೇ…..! ಯೀಗ್ಗೇ ಐದಾರು ದಿನ್ದಿಂದಾ, ಮನಿಂದ್ಲು ಕಣ್ದಾಗಿನ ಕುಸ್ಮೇನಾ ನಿನ್ಪಾಲ್ನಿವು ಐದಾರು ಚೀಲ್ಗಳಷ್ಟು, ಹಂತ್ಕಿಟ್ಟಿ ತುಳ್ಸಿ, ತೂರಿ, ಕೇರಿ, ಯೀಗ ರಾಶಿ ಮಾಡ್ದಾನ, ನಾ ಕಣ್ಣಾರೆ…. ವರ್ಕುಡ್ಗೆ ವೋಗ್ದಿವ್ನು ನೋಡ್ಬಿಂದ್ಮೆ…..! ನೀ ಯೇನಾನ್ನಾ ಮಾಡುಂಬ್ಲು, ಅವ್ರಿಗೆ ಯೇಳಿದ್ದೆಂಗಲ್ಲಾ…..?!’ ಕೇರಿಯ ಯಜ್ಮಾನ್ಮನ್ಸು, ಸ್ವಾತಂತ್ರ್ಯ ವೋರ್ಟಾಗಾರ, ಗಾಂಧಿವಾದಿ, ಮಣೆಗಾರ, ಯದ್ರ್ಮನೆಯ ದೊಡ್ಡೆಲ್ಲೆಪ್ಪ, ದುರ್ಗುವ್ವನ್ಮನ್ಗೆ ಬಂದು, ದಂಧಕ್ಲಿಯಲ್ಲಿ ನಿಂತು….. ಯಿಷ್ಟು ಭೀತಿಯನ್ನು ಕಿವಿಯಲ್ಲಿ ಭಿತ್ತಿ… ತಾನೇ ಬೇವ್ರು ಬಸ್ದು, ಸುಸ್ತಾಗಿ…..ತಸ್ತಾಗಿ…… , ತಲ್ಮೇಲ್ನಿ ರುಮಾಲು ಕೊನಿಯಿಂದ ಮಕ, ಕುತ್ಗೆ, ಕಿಮ್ಗಿರ್ಮು…. ಹತ್ರೆವೆಲ್ಲ ವಂದೀ, ಜಟ್ಜಾಟ್ನೇ ಯಿಳಿಯುತ್ತಿದ್ನೆಲ್ಲ, ಸೀಟ್ಗಿಂಡು ಭುಸ್ಗುರಿತಾ…… ದುರ್ಗುವ್ವನ್ಮಾತ್ಗೆ, ಪಿಳ್ಪೀಳಿ ಕಣ್ಣು ಬಡಿತಾ….. ಕಿವ್ನಿಗ್ರಿಸ್ನಿಂತ!

ದುರ್ಗುವ್ವ ವೈನಾಗಿ ಕೇಳ್ಸಿಗೊಂಡ್ಲು, ಕೇಳ್ಸಿಂಗಂಬ್ತಾನ್ಕ ಕಾರ್ಕುಟ್ದಾನ ತ್ವಟ್ಗೊತ್ತು ನಿಲ್ಸಿ…….ವನ್ಕೆ ಬಂಡ್ನಿ ವಳ್ಗಾಳಿಂದಾ ವರ್ಗೆ ಯೆತ್ತಿಕ್ಕಿ…..ಅಂಗ್ಳುದಾಗಿನ ಜನ್ರುನಾ…. ಮತ್ತೆ, ದೊಡ್ಡೆಲ್ಲೆಪ್ಪನಾ…. ವಂದ್ಪಾ ರಾವ್ಗಾಣ್ಲೆ ನೋಡಿ, ಮತ್ತೀಗ ನಿರ್ಮುಳಾಗಿ….ತನ್ಗೂ ಯಿದ್ಕೂ ಯೇನ್ಸಾಂಬಂಧವಿಲ್ದವ್ಳಂತೆ….ಕಾರ್ಕುಟ್ತಿರ್ವೂ ಪರ್ಗೇ ದೊಡ್ಡೆಲ್ಲೆಪ್ಪನ್ನೇನು? ಅಲ್ಲಿದ್ಬದ್ದವ್ರಿಗೆಲ್ಲ ಸೋಜ್ಗಿವಾತು!

ಕಾರ್ದಾ ಘಾಟ್ಗಾಟು ವಾಸ್ನೇ, ದೊಡ್ಡೆಲ್ಲೆಪ್ಪನ ಕಣ್ಗಾ ನೀರ್ತಂತೋ? ಯಿಲ್ಲಾ ದುರ್ಗುವ್ವನ ಯೀ ’ಅವ್ತಾರ’ ಕಣ್ಣೀರ್ಬಸ್ತೋ? ತಲ್ಮೇಲ್ನಿ ರುಮಾಲ್ನಿ ಕೊಂಗ್ನಿಂದ ವರ್ಸಿಕೊಳ್ತಾ…..ವರ್ಸಿಕೊಳ್ತಾ…..  ವಂಟ್ಕಾಲಿಲಿ ಬಕ್ಪಾಕ್ಷಿಂಗೇ ವುದ್ದೂಕ, ಬೆಳ್ಗೆ, ಬಿಳಂಗಿ, ಪಂಚೆ, ರುಮಾಲ್ತೊಟ್ಟು, ಕಡ್ಡಿಯಂಗೆ, ಬಗ್ದಿ, ಭಂಗ್ಲಿ, ಸುಂಕೆ ವಂಟಿಯಂಗೆ, ನಿಂತೇಯಿದ್ದ!

’ಯೇನ್ದುರ್ಗುವ್ವ…..ನಾ ಯೇಳ್ದೇನು? ನೀ ಕುಟ್ದೇನು? ಬೆಕ್ಗೆ ಸಿನ್ನಾಟ, ಯಿಲ್ಗೆ ಪ್ರಾಣ್ಸಂಕ್ಟ! ನಾನೇನು ತಿಳ್ಕಂಬ್ಲಿ? ನಾ ಯೇಳ್ದೇನೇ….. ನಿನ್ಗೇ….. ಯರ್ಪುಕ್ಕನೇನು?’ ದೊಡ್ಡೆಲ್ಲೆಪ್ಪ, ಯಿಷ್ಟಂದು ಬಿಲ್ಲು ಬಾಗ್ದಿಂಗೆ ಬಾಗಿ, ಮತ್ತೂ ನೀರ್ಗೊಳಿಯಂಗೇ ನಿಂತ!

’ಯೀ ಲೋಕ, ಯೀ ಜನ್ರು…. ಯೀ ತಾಪತ್ರಯ್ಗಳೇ, ನನ್ಗೇ ವಸ್ದು ಮಾಮ! ಬಾಯಿಬಿಟ್ರೆ ಬಣ್ಗೀಡು. ಲೋಕಜ್ಞಾನವಿಲ್ದವ್ಳು. ಮಾತು ಬರ್ವುಲ್ವು. ಯಾರ್ಗೂ ನಾ ಯೇಳ್ಲಿಲ್ಲ. ವೋಗ್ಲಿ ನನ್ನತ್ರ ಬಂದು, ಕಣ್ಮಾಡಿಂಬ್ಲು ಯಾರ್ಕೇಳ್ಲಿಲ್ಲ! ಯೀಗ ವಂಟಿ ಯೆಣ್ಣೆಂಗ್ಸು ಯೇನ್ಮಾಡ್ಲಿ? ಯೇನ್ ಯೇಳ್ಲಿ ಮಾಮ?’ ಅಡ್ವಿಹಂದಿ, ಆನ್ಮುಂದೆ ಮಕ್ಮಾಡ್ಕಂಡಂಗೇ ಮಾಡ್ಕೊಂಡ್ಲು.

’ಯೀಗಾನ್ಮಾಡ್ದಿಲ್ಲ ದುರ್ಗುವ್ವ! ಯಲ್ಲಾದ್ಮಿರ್ತುಕೊಂಡ್ರೊಳ್ಳೆದು. ಅವ್ರು ಯೇಳಾಳ್ಗೇ ಘನ ಮಿಕ್ದೋರು. ಹಸ್ವುಲ್ದಾರು. ಕ್ವಲ್ಮೆಡಿ ಬಳ್ಳಾರಿ ಜೈಲ್ಗೋಗಿ ಬಂದಾರು. ಕಳ್ತಾನ, ಸುಳ್ತಾನ ಅವ್ರಾ ದೇವ್ರು…..! ಅತ್ಯಾಚಾರ, ಅನಾಚಾರ ಅವ್ರಾ ತಂದೆ ತಾಯ್ಗಿಳು! ವಡ್ದಾಟೆ, ಬಡ್ದಾಟ್ವೆಂದ್ರೆ ಅವ್ರಾ ಅಣ್ತಂಬಂದ್ರು. ಅಬ್ಬಬ್ಬಾ! ನಾವ್ಗೀ ಗುಡ್ಕ ಕಟ್ಟುಳ್ಳಿ ಹಾಸ್ದಿಂಗೆ. ಕ್ವಾಣ್ದ್ಮಂದೆ ಮೇಕ್ಮೆರ್ನಿತಂಗಾದ್ಬೇಡಾ. ದುಷ್ಟರು ಯೇನಾದ್ರು ಕೆಟ್ದೇ ಮಾಡ್ವುರು. ಅಲ್ಪರ್ಸಂಗ ಅಭಿಮಾನ ಭಂಗ….. ಯಂಡ್ಮೇಲೆ ಬಂಡ್ಯಾಕಿ ಸಿಡ್ಸಿಗಂಡಂಗೇ… ವೋದ್ರೆ ಐದಾರು ಚಿಲ್ಕುಸ್ಮೆ ವೋಗ್ತಾವೆ! ನೀ ಸುಂಕಾಗ್ಬಿಡು…..’ ಯಿಸ್ಟೇಳಾಕೇ…..ದೊಡ್ಡೆಲ್ಲೆಪ್ಪ, ಜಲ್ಜಾಲಾ …..ಬೆವ್ತೆತ್ಗಾಂತಾ….. ಅತ್ಲೊಕೊತ್ಲಾಗಿ ದುರ್ಗುವ್ವನ್ಮುಂದ ಕಣ್ಣಾಡ್ಸಿ ಯಿಂದ್ಮುಂದೆ ತಿರ್ತಿರ್ಗಿ ನೋಡ್ಕೊಂಡ.

’ಕುಸ್ಮೆವಾದ್ರೆ ನನೆಡ್ಗಾಲ್ನಿ ಧೂಳೋತ್ಮುಮ! ಗಂಡ್ಸೆತ್ತು ಮುಂಡೆ ಯೇನ್ಕಿಸ್ತಾಳಂತಾ ಅಡ್ಲಾಯಿ ತಗೊಂಡು, ಯಿನ್ಮುಂದ್ಕಾ ಮನ್ತೂರಿ…. ಭಂಡಾಭೀತಿ ಮಾಡೆಲ್ಲೇಂತಾ ಯೇನ್ಗ್ಯಾರಂಟೆ? ಯಿದ್ನಾನ್ಗೆ ಯಸ್ನು ಸಿಂತಾಗೈತೆ! ಮನ್ಯಾಗೆ ಸಣ್ಪುಟ್ಟ ಯೆಣ್ಮುಕ್ಳು….ಬೆಳ್ಳಿಬಂಗಾರ, ದನ್ಕರು, ಕುರ್ಮೇಕೆ, ಕೋಳ್ಗಿಳ ಗತಿಯೆಂಗೆ?!’ ದುರ್ಗುವ್ವ ಕುತ್ರಸ್ಗ್ಯಾಂತಾ….. ಯೀ ಮಾತ್ಗುಳ್ನ ವರ್ಗೆಡ್ವಿದ್ಲು.

’ಅಲ್ಲಿ….ಕಣ್ದಾಗಿರೋದು ನಮ್ಮನ್ಹೇಳಾ ಬಜ್ಜಿಯ, ಕರಿಯ, ಮರಿಯ, ಯಿಂದ್ರಸೇನ್ರೆಡ್ಡಿ, ದಾನ್ರೆಡ್ಡಿ! ಯಿವ್ರ್ನ ಪಂಚ್ಪಾಂಡ್ವರೆಂದೇ ಕರೇದು! ನಕ್ಷತ್ರಿಕ್ರು ಯಮ್ದೂತ್ರು, ಶನಿಪೀಡ್ಗೆಳು, ಕಟ್ಗುರು, ಕೊಲ್ಗೆಡ್ಕುರು! ಯಿವ್ರ್ನ ಕಂಡ್ರೆ ಗೌಡ್ರು, ಪಾಟೇಲ್ರು, ಬಿಟಿಯಸ್ ಕುಲ್ಕರ್ಣಿ, ಶಾನುಭಾಗ್ರೇ….. ಯೆದ್ರಿ ಬಾಯಾಕ್ಮಣ್ಣಾಕ್ಕೊಂಡಿರ್ವೂಗ…. ನೀನ್ಯಾಮರ್ದ ತಪ್ಲು ದುರ್ಗುವ್ವ? ಗಂಡ್ಸಾತ್ಳಾಗಿ ಯೆಣ್ಮಕ್ಳುತಾಯಾಗಿ ಯಲ್ಮೆರೆ ಕಾಯಾಗಿರು! ಅವ್ರು ವುಸ್ಬಾರಿ, ಕಾಕ, ವಕ್ರದೃಷ್ಠಿ ಕಟ್ಗೊಂಡು ನೀನ್ಯಾನ್ಮಾಡ್ತೀಯಿ? ಸುಂಕಿರವ್ವಾ…..! ದೊಡ್ಡೆಲ್ಲೆಪ್ಪ ವಸ್ತುಸ್ಥಿತ್ನಿ ವಿವ್ರಿಸಿ…. ವುಚಿತ ಸಲ್ಹೆ, ಸೂಚ್ನೇ ನೀಡ್ದಿ.

ಆ ಕ್ಷಣ….ದುರ್ಗುವ್ವ…. ಮಕ ಸಿಂಡ್ರಿಸಿಗೊಂಡು, ವುರ್ದೂವುರ್ದೂ….ಬಿದ್ಲು….!!

’ಥೂ….ಯಿದೆಂಥಾ ಭಂಡ್ಬಾಳೇವು ಮಾಮ?! ಆ ಬಜ್ಜಿಯ್ನನ್ಮುಗ್ಳುಗಂಡಾ…. ಕೇರ್ಮಿಣೆಗಾರರು, ಯಿನ್ನು ವೂರ್ಗಾಳ್ರು…. ಯಿವ್ರಿಗೆ ನಾ ಸಾಯೋತನ್ಕ …. ದಿನ್ಪಾರ್ತಿ… ಯದ್ರುಪುಕ್ಲಿಯಂಗೇ…..ಅಳ್ಪುರ್ಕೆ ಯಾಗಿ, ಯೀ ಮಕ್ಳುಮರ್ನಾ ನನ್ಕೊಳ್ಗೆ ಕಟ್ಗೊಂಡು ಯಣ್ಗಾದ್ಗಾಲ್ಲ!! ಯೀ ವೂರ್ಕೇರ್ದು ಅಡ್ಲಾಯ್ತಗೊಂಡು, ಮಾನ್ಹಾನಿ ತರ್ಲಾಂತೇನು ನಿಕ್ಕಿಯೇನು? ನಾಳ್ಗಾದು ಯಿಂದ್ಗಾಲಿ. ಯಿಂದ್ಗಾದು ಯಿಗಾಗ್ಲಿ…ಯೀ ಘಳ್ಗೆಗಾಗ್ಲಿ. ಯಿಲಿಯಂಗೆ ನೂರ್ವುರ್ಸು ಬದ್ಕುಕ್ಕಿಂತಾ…..ವುಲಿಯಂಗೇ ಮೂರ್ಕಾಲ ಘರ್ಜಿಸ್ದೆವೋದಲ್ಲಿ, ಪ್ರಾಣ್ದಲಿದ್ದು ಫಲ್ವೇನು??’ ದುರ್ಗುವ್ವ ಮಿಣ್ಮುಣೀ ಮಿಂಚ್ವು ವನ್ಕೆಬಂಡ್ನಿ ನೋಡ್ತಾ ಗುಡ್ಗಿದ್ಲು.

ತನ್ಗಂಡ ಹತ್ವುರ್ಸುದಿಂದೆ….ಯೇಳ್ಮಾಡ್ಸಿದ, ಕಬ್ಬಿದ ಕೊಡಾಣ್ಸುಗಳ್ನ ತಳ್ಬುಡ್ಕೆ ಹಾಕ್ಸಿ…. ಗಗ್ರಿ, ಗೆಜ್ಜೆಗಳ್ನ ಬೇಕಾಗಿ ಬಿಗ್ಸಿ, ಯರ್ಡು ವನ್ಕೆಗಳನ್ನು….. ವಂದು ಬಾಗ್ಲು ಸಂಧಿಗೆ ರಾತ್ರೆಕೆ ಯಿಡ್ಲು….. ಯಿನ್ನೊಂದು ಕುಟ್ಲು, ಅರಿಯ್ಲ…. ಕಳ್ಯಾಕ್ರು ಬಂದ್ರೇ… ಯಿಕ್ಲು ಅಂತಾ….ತಲ್ವಾಂದಂದಾಂತ ಮಾಡ್ಸಿದ್ದ ನೆನ್ದು…. ಯೀಗ ವರ್ಗೆಡ್ವಿದ್ಲು…. ಮಾಮ್ನ ಪ್ರತಿಕ್ರಿಯೆಗೆ ಕಾದ್ಲು…..

’ಅಯ್ಯೋ….. ನಿನ್ದೆಲ್ಲ ತಿರ್ಕುನ್ಕನ್ಸು, ಕೈಲ್ಗಾದ್ವರು ಕೈಲಾಸ ಕಾಣ್ದಂದ್ರೇನು? ಅವ್ರ್ನಾ ಯದ್ರುಸಾದೊಂದೇ ಯಮಧರ್ಮರಾಯ್ನ ಯೆದ್ರುಗೊಂಬಾದೊಂದೇ ಸಿಮ್ಮಾದ್ಗುಹೆಯೊಳಕ್ಕೆ ಕಾಲಿಟ್ಟಂತೇ. ಹಾವಿನಾ ಹುತ್ತಕೆ…. ಗಿಜ್ಗನ ಗೂಡ್ಗೇ ಕೈಯಿಕ್ಕಿದಂತೇ…. ಯೀಗ ಬೀಸಾ ದೊಣ್ಣೆಗೆ, ತಲ್ತೆಪ್ಸಿಗೊಂಡ್ರೆ…. ನೂರ್ವುರ್ಸು ಆಯುಸ್ಸು ಬಿಡ್ಮಾ….ಕಂಡ್ಕೂಣ್ದಾಂಗೇ ಸುಂಕಿರ್ಮಾ….’ ದೊಡ್ಡೆಲ್ಲೆಪ್ಪ ಸಹಜವಾಗಿ, ಗಾಂಧಿತತ್ವದ ಮಾತ್ಗುಳನ್ನು ಬೋಧಿಸ್ದಿ.

’ವುಟ್ದಿವ್ರು ವಂದಲ್ಲ, ವಂದ್ನಿ ಸಾಯ್ಬೇಕಲ್ಲ ಮಾಮ? ಯಿವತ್ತೇ ಸಾಯ್ಲು ರೆಡಿ! ನೀ ರೆಡೀನಾ? ಅವುದೂ ಸತ್ತವ್ರು ಅದೆಷ್ಟು ಸಲ ಸಾಯ್ವುರು? ಅದಿಮೂರು ಮಕ್ಳು ತಾಯಿ ನಾ ಹದಿಮೂರ್ಸುಲ ಸತ್ಸುತ್ತು ಬದ್ಕೀನಿ! ಕಡ್ಬುಡ್ತ್ನ, ಅಸ್ವು, ಅಪ್ಮಾನ, ಯಿಂಸೆ, ನಿಂದೆ, ಯೆದ್ರೆಕೆ, ಅಸಹ್ಯತನ, ವಟ್ಕಿಚ್ಚು…. ಯಿಂಗೇ ಅದೆಷ್ಸಾರಿ… ಸತ್ಸತ್ತು ವುಟ್ಟಿ… ಪುಟ್ಟಿ, ಬದ್ಕಿ ಬಂದಿಲ್ಲಾ… ಯೇಳ್ಮಾಮ? ಯೀ ಮೂರ್ತಿಂಗ್ಳು ಯಿಂದೆ, ನನ್ಗಂಡ…. ಅದೇ ನಿಮ್ತಾಮ್ಮ ಸತ್ತಾಗ ದಿಕ್ತೊಚ್ದೆ ’ಸತಿ’ ಆಗ್ಲು. ಚಿತೆ ಯೇರ್ದಾಗ್ಲೆ, ಸತ್ಸುತ್ತು ಯೀ ತನ್ಕ ಬಂದಿದ್ದೇ…. ಯೆಚ್ಚೆಚ್ಚಾಯ್ತು!! ಯಿವತ್ತು, ಅವ್ರಿರ್ಬೇಕು, ಯಿಲ್ಲಾ ನಾನಿರ್ಬೇಕು! ಯಿಗೋ ನಾ ವಂಟೆ, ಯೀ ಕಂಚ್ನಿ ಕಬ್ಬಿಣ್ದ ವನ್ಕೆ….ಹತ್ತು ಸೈನ್ಕಿರ್ಗೆ ಸಮ!’ ಯೆಂದು ದುರ್ಗುವ್ವ ತಲ್ಕೆಟ್ಟು ಕಟ್ಟಿ, ಗೋಸ್ಯಾಕಿ ಮೂರ್ಬಾರ್ನಿ ಕಾಲ್ಮರ್ಮೆಟ್ಟಿ…. ವನ್ಕೆನ ಕೈಲಿಡಿದು, ದಢಾದಢಾನೆ ದುರ್ಗಿ, ಕಾಳಿ, ದೇವಿ, ಚಂಡಿ, ಚಾಮುಂಡಿಯಾಗಿ…. ಕಣ್ದ ಕಡೆ ವಂಟ್ಳು.

ದೊಡ್ಡೆಲ್ಲೆಪ್ಪ ಗಡ್ಗಾಢಾ ನಡ್ಗಿ, ಬೆಮ್ತು ವೋದ. ’ತಲ್ಗೆಟ್ಗೈತಂತಾ….. ಬಂಡ್ಗೆ ವಡ್ಲಾರ್ಮಾ……! ಯಿರೊಂದೊಂದು ಜೀವೋದ್ರೆ ಯಾರ್ಕೊಡ್ಲ್ಮಾ…. ನೀನುಂಟು, ಅವ್ರುಂಟು! ಮಧ್ಯೆದಲಿ ನನ್ದೇನುಂಟು? ನಾನಿನ್ನು ಬರ್ತೇನ್ಮಾ……’ ಯೆಂದ್ ಹೇಳಿ…. ದೊಡ್ಡೆಲ್ಲೆಪ್ಪ, ಮೆಲ್ಗೆ ಪೆಂಟೆಕಿತ್ತ.

ದುರ್ಗುವ್ವ ವನ್ಕೆಯ ಯಿಡ್ದು… ಬಿರ್ಗೂಳಿಯಂಗೆ, ಚಂಡಿ, ಚಾಮುಂಡಿ, ದುರ್ಗಿ, ದೇವಿ, ಕಾಳಿ, ಮಾಕಾಳಿ, ಕನ್ನಿಕಾಪರ್ಮೇಶ್ವರಿ ಯಂಗೆ ಯಾರ್ಕೈಗೆ ಸಿಗ್ದಂಗೆ, ನೆಲ್ನೆಡ್ಗುವಂತೆ, ಕೆಂಧೂಳ ಕೈಲಾಸ್ಕಡ್ರುವಂತೆ ನಡೆದ್ಲು…….

ಜನ್ರು, ಬಿರ್ಗೂಳ್ಗೆ ಸಿಕ್ಕ, ತರ್ಗೆಲೆಯಂತಾದ್ರು…. ವುಚ್ಚೆದ್ದು ಕೇಕ್ ಹಾಕಿ, ಸಿಳ್ಳಿವಡ್ದೆ, ಕೂಗಿ ಅಬ್ರಿಸಿ ಬೊಬ್ಬಿಟ್ರು.

ಯಿತ್ತಾ….ಕಣ್ದಾಗಿನಿಂದ ಕರಿಯಣ್ಣ ಗಾಬ್ರಿಬಿದ್ದು, ಬೇಲ್ಮಿರೆಂದಾ….. ಹಣ್ಕಿಕ್ಕಿ ನೋಡ್ದಿ. ’ಲೇ…..ಲೇ…. ಯಿಲ್ಲಿ ನೋಡ್ರಾಲೇ….. ಜನ್ರು ನಡ್ಪೂರ್ಕ ಯೆದ್ದು ಕಾಣ್ವು ಆ ದೆವ್ವಾ, ಭೂತ, ಪಿಶಾಚಿ ಯಾರಂತಾ ನನ್ಗೇ, ಗೊತ್ತಾಗ್ತಿಲ್ಲ ಬರ್ರೆಲೇ… ಮರಿಯಾ… ರೆಡ್ಡಿ… ಯಿತ್ಲೇ ಆ ಗುಂಪು ಬರ್ತೀದೆ….! ಯೆಂದ್ ಹೇಳ್ತಾಲೇ ಕರಿಯಣ್ಣ, ಕುಂಡಿಸುಟ್ಗೊಂಡಾ ಬೆಕ್ಕ್ನಿಂಗೇ ಕಣ್ದು ತುಂಬಾ….. ತಾರ್ಡಾತೊಡ್ಗಿದ. ವುಳ್ದಿವ್ರ ಮಕ್ಗಳು ತೂತ್ಬುಟ್ವಾದ್ವು.

’ಥೂ! ಯೇಳ್ತಿಂಗ್ಳು ವೋತ್ನ್ಮಿರಿ ನೀ! ಯೆಣ್ಡಾಗ, ತೆಬ್ಬರ್ಕು, ಆಟ್ದಾನಲ್ಲ ಮದ್ಲ್ಯಾನಲ್ಲ. ಅಲ್ಲೇನು ಭೂತ್ಬಾರ್ತೆನ್ಲೇ? ಸಣ್ಣೆಲ್ಲೆಪ್ಪ ಮಾಮ್ನಲ್ವೇನ್ಲೇ ಬರ್ತೀರಾದು? ಛೇ! ಕಣ್ಣಿಲ್ಲ, ಮಣ್ಣಿಲ್ಲ, ಕುಲ್ಡು ಸೂಳ್ಮೇಗುನ್ದು ಸಾವ್ಸಾವಾತು….’ ಮರಿಯಣ್ಣ….. ಯರ್ಡು ಕಣ್ಗುಳು ಮೇಲೆ, ಅಂಗೈ ಅಡ್ಡಿಟ್ಟು, ಪಿಳ್ಪೀಳಿ ಕಣ್ಣರ್ಳಿಸಿ…ಯೆಂದ್ನಿಂತೇ… ವುಳ್ದಿವ್ರ್ಮೇಲೆ ’ಬೌವ್ವು…. ಬೌವ್ವು…. ’ ಮಾಡ್ದಿ.

’ಥೂ! ದಡ್ಮೊಂಡ್ಮೆಕ್ಳೆ…. ಸತ್ದನಾ ತಿಂದು ತಿಂದು ಬುದ್ದೊಂದೇ ಸತ್ತೋಗಿಲ್ಲ! ಕಣ್ಗುಳು ಕೂಡಾ ಯಿಂಗೊಗ್ವೇ…..! ಸಣ್ಣೆಲ್ಲೆಪ್ಪ ಸತ್ತು, ಯಾವ್ಕಾಲ್ವಾಯ್ತು ಯೇನ್ಕಾತೆಯೋ? ಯೀಗಾದೆಲ್ಲಿಂದೆದ್ಬಾರ್ತಾನೋ…..?! ಮಣೆಗಾರರ್ರು ಸಾವಾಸ ಮನ್ಮೆಂದಿ… ವುಪ್ಸಾ! ಅಲ್ಲಿ ಬರ್ತಾಯಿರಾದು ಅಮ್ಮ…. ವೂರಮ್ಮ…. ದೇವಿ…. ಚಂಡಿ…. ಚಾಮುಂಡಿ, ಕಾಳಿ…. ಮಾಕಾಳಿ, ದುರ್ಗಿಯಲ್ಲವೇನ್ರಲೇ? ವಂದ್ಕೈಲಿ ವನ್ಕೆ, ಮತ್ತೊಂದು ಕೈಲಿ ಕತ್ತಿ, ಕುಡ್ಗೊಲು, ಯಿನ್ನೊಂದ್ಕೈಲಿ ಯಿಳ್ಗೆಮಣೆ, ಮುದ್ದೆಕೋಲು… ಯಿಡ್ದಿಲ್ವೇನ್ರಲೇ? ಯಾವುದೋ ವುತ್ಸವ… ಯಿತ್ಕಡ್ಗೇ ಬರ್ತೀದೆ! ಸುಂಕ್ಸುಂಕೆ ಕಪ್ಲಕ್ಕುಗ್ಳು…. ಕಾಗೆಗ್ಳು…. ಕೂಗ್ದಿಂಗೆ, ಕೂಗ್ತೀರಾ ರಣಯೇಡ್ಗಿಳಾ…’ ಯಂದ್ರಸೇನ್ರೆಡ್ಡಿ… ಅವ್ರಿಬ್ರ್ನಾ ಯಿಗ್ಗಾಮುಗ್ಗಾ ಭೀತಿ ಬಿಡ್ಸಿದ.

’ಕುಡ್ಕುರು, ಹಡ್ಕುರು, ವೂರ್ತೆಬ್ಬರ್ಕುರು… ನೀವು! ಅಲ್ಲಿ ಬರ್ತೀರ್ದಾ ನಮ್ಮತ್ತೆ, ಕತ್ತೆ, ಜಲ್ಲೆ ದುರ್ಗುವ್ವನಲ್ವೇ? ನಿಮ್ಗೆಲ್ಲ ಅಗ್ಲೊತ್ತೇ ಕಣ್ಕಾಣ್ಸಿದಂಗಾಗ್ವೇ! ಯೇನ್ಪಾ ಧಣೀ…. ನೀನನ್ನಾ ನೋಡ್ಪಾರಾಪ್ಪಾಶ್…. ಬಜ್ಜಿಯ, ಟೇಬಲ್ ಬೀಡಿ ಯೆಳಿತಾ… ಕಂಡ್ದಿಕೆ, ಕನ್ಡಿ ಯಿಡ್ದು….. ಭೀಗ್ತಾ ದಾನ್ರೆಡ್ಡಿನ ಕೆಣ್ಕೆದ.

’ನೀ….ವೋಸು ಕುಸ್ಮೆ ವಡೇಕೆ ನಮ್ಗೆಲ್ಲ ಬೇಕಾಗಿ ಯೆಚ್ಚೆಚ್ಗಾಂಗೇ…ಯೆಂಡ, ಸಾರಾಯಿ ಕುಡ್ಸಿ… ಕಾಲ್ಗಾಟ್ಟೆ ಸಳ್ಳೆ, ಹಂದಿಸೂಪು, ಕತ್ತೆ ತಲ್ಮೆಮ್ಸಾ, ಕುದ್ರೆ ಲಲ್ಡಿ, ಯೀರಿ, ಕೈಮಾ, ಸಾಕ್ಣ ತಿನ್ಸಿ…. ವಳ್ಗಿಂದೊಳ್ಗೇ ನಿಮ್ಮತ್ತೆ ಕತ್ತೇನಾ ಕರ್ಸಿಯೇನ್ಲೇ…. ಮಿತ್ರದ್ರೋಹಿ…. ತಾಯ್ಗಿಂಡ….. ಮೋಸ್ಗಾರ… ಕಂತ್ರಿ… ಬಜ್ಜಿಯ?! ಆಯ್ತು…. ವಳ್ಳೆದೇ ಮಾಡ್ದೆ ಬಿಡು… ಜ್ಯೋತಿಲಕ್ಷ್ಮಿ…. ಸಿಲ್ಕಾಸ್ಮಿತಾ…. ಜಯಲಲಿತಾ… ಮೇನ್ಕೆನೇ…. ಕರ್ಸಿಗೀ…. ಬರ್ಲೀ… ಯಲ್ರು ಜೊತೆ ಜೊತ್ಗೇ ಸಿವಾ…..ಸಿವಾ…. ಅನ್ಸಿಬಿಡಾನ್ರೀ……’ ದಾನ್ರೆಡ್ಡಿ ಆಗ್ಲೇ, ಮನ್ಸಿನಲ್ಲೇ ಮಂಡ್ಗೆ ತಿನ್ತೊಡ್ಗಿದ.

’ಯೇ….ನೀ…… ತಡಾಯ್ಮಿದ್ಲು ಯಿಂಗೇ ನೋಡು? ಯೇನೀ ಯಿಂಥಾ ಗುದ್ಗೆ ವರ್ಸುತ್ತಿಯಾ? ಪರ್ಮೇಶರಪ್ಪನಾಣೆ, ಜಟಂಗಿರಾಮೇಶ್ವರ ಸತ್ಯಾವಾಗ್ಲು, ನನ್ಗೊತ್ತಿಲ್ಲಪ್ಪಾ ರೆಡ್ಡಿ ನಾ ಯಿಂತ್ವನೇನಪ್ಪಾ? ಛೇ….ಛೇ…..’ ಬಜ್ಜಿಯ, ದೇವ್ರ್ನ ಬಡಿದು, ವಪ್ಸಿಲೋದ.

’ಆಹಾ….ಯಾರ್ಗುಂಟು ಯಾರ್ಗಿಲ್ಲ? ವಳ್ಳೆ ಟೈಮಿನಾಗೆ, ಯೆಳ್ಕಿಳ್ಸಿದಂಗೆ ರಂಬೆ, ವೂರ್ವಶಿ, ಯೇಮಮಾಲ್ನಿಯಂಗೆ, ದುರ್ಗುವ್ವ ಬರ್ತಿದ್ದಾಳೆ! ಬರ್ರೋ….. ಯೀ ಕಣ್ದಾಗೆ, ವುಳ್ಳುಳ್ಳಾಡ್ಸಿ ಮೆತ್ಗೆ ಮಾಡಾನ್ರಿ….! ಮೊನ್ನೆ ರಾಂಪುರ್ದ, ರಾಮಕ್ಕನ ಮಾಡ್ದಿವಲ್ಲಾ…. ಅಂಗೇ, ಮೆತ್ಗೆ ಮಾಡಿ, ಬಾಯಾಕೆ ವಲ್ಲಿ ಬಟ್ಟೆ ತುರ್ಕಿ, ಸಿಟ್ ಹೇರ್ಹಳ್ದ ಸಾಲು ತೋರ್ಸಿದ್ರಾತು!’ ಕರಿಯಣ್ಣ, ಜ್ವಲ್ಲು ಸುರ್ಸಿ…. ಕಾಳಾಸ್ತ್ರಿ ಬೀಡಿಗೆ, ಕಡ್ಡಿ ಕೊರ್ದೆ…. ’ಭುಸು….ಭುಸು…..’ ವಗೆ ಬಿಟ್ಗಾಂತ, ಬಂಡೆಯಂಗ್ನಿಂತ.

’…..ಥೂ! ನಿಮ್ನ! ಕುಡು ತಸ್ತಾಗಿ, ಸುಸ್ತಾಗಿ, ನೂಕ್ದಿರೆ ಮೂರ್ಳುಕೆ ಬೀಳಂಗಿದ್ದೀರಾ…. ಯೇನ್ಕಿಸ್ತಿರೋ ವಳ್ಳೆ ಬೆದ್ರುಗ್ವಂಬೆಯಾಗಿರಾ…. ನಮ್ಮತ್ತೆ ಮಸ್ತ್ಮುಕ್ಳು ತಾಯಿ! ಗಂಡ್ಸತ್ಮುಂಡೆನಾ ತಗೊಂಡು ಯೇನ್ ಮಾಡ್ತಿರೋ? ನನ್ಗಂತೂ ಕುಸ್ಮೆ ಬೇಕ್ರಪ್ಪಾ… ನೀವೆನ್ನಾ ಜಲ್ಸಾ ಮಾಡ್ಕೊಳ್ರೀ…. ’ ಬಜ್ಜಿಯ, ವುಳ್ದಿವ್ರಿಗೆ ಅತ್ತೆನಾ ದಾನ್ಮಾಡಿ, ಬಡ್ಬಡಾ… ಕುಸ್ಮೆ ತುಂಬಾಕೆ, ಮೂರ್ಬಾರ್ನಿ ಗೋಣಿ ಚೀಲ್ಗಳ್ನ ತಗೊಂಡು, ರಾಶಿಯತ್ತಾ…. ಬಿರ್ರಾ ಬಿರ್ರಾನೇ ವೋಡ್ದಿ.

’ಥೂ! ಯೆಣ್ಡಾಗ, ಚನ್ಪಾಟ್ಣೆ, ಸವ್ದತ್ತಿ ನರ್ಸಾತ್ತಾನು! ವಳ್ಳೆ ಧಾರ್ವಾಡ್ದ ಕರಿಯಮ್ಮೆಗೊಡ್ಡಂಗೆ ದುಂಡ್ದೂಂಡ್ಕೆ, ಮೋಟ್ಮೊಟ್ಕೆ, ಮಿಣೆ ಮಿಣಿ ಮಿಂಚಂಗೆ….. ವೋಲ್ಡ್ ಯೀಜ್ ಗೋಲ್ಡಯೆಂಬಂತೆ…. ಅಗ್ಲುವಾದ್ಮಕ, ಅಳ್ಳಿಮೂಗು, ತ್ವಂಡಿತುಟ್ಗಿಳೂ…. ಪರಂಗಿ ಕೆನ್ಗೆಳೂ….. ಬೆಲ್ದಂತಾ ಗಲ್ಲಾ….ಕಪ್ಪೆವಾಸ್ನಿ ಅಲ್ಲುಗ್ಳು, ಆನ್ಕೆಣ್ಗುಳೂ….. ಕಿವಿಗ್ಳು….. ಕಾಲ್ಗುಳು…. ಆಹಾಯಿಂಭಾರ, ಮುಂಭಾರ…. ಅಬ್ಬಬ್ಬಾ! ಮಸ್ತು ಮಸ್ತು….ಮೆತ್ಗೆ ತಡ್ತಿಡಿಯಿದ್ದಂಗೇ…. ಅಲ್ಲಿ ಪುಷ್ಪಾವತಿ! ಯಿಲ್ಲೀ ಯೀ ಕಣ್ದಲ್ಲಿ, ಯೇಕಾಂತದಲ್ಲಿ, ಯೀ ವುಲ್ಲಿನ ಬಣವಿಯಲ್ಲಿ…. ಫಲ್ವತಿಯಾಗ್ಲಿ…. ಬರ್ಲೀ ಅವ್ಳು ಅದೆಷ್ಟು ಕುದ್ರ್ಮೇಲೆ, ಬರ್ತಾಳೋ…. ಬರ್ಲೀ!! ವಳ್ಳೆ ಸಿಲ್ಕಸ್ಮಿತಾಳಂಗೇ ವೈಯಾರದಲಿ…. ರಾವ್ಲಿ ಕಾವ್ಲಿ… ಬೆದ್ಗೆ ಬಂದ, ದ್ಯಾವ್ರು ಕ್ವಾಣ್ನಂಗೇ ’ಚಣ…ಚಣ….; ಯೆಗ್ರಿಕ್ಯಾಂತಾಶ್….ಬರ್ತಿದ್ದಾಳೆ! ಪೂರಾ ಕಣ್ದೊಳ್ಕೆ, ಬಿಟ್ಕಾಳ್ರಾಲೇ….’ ಯಿಂದ್ರಸೇನ್ರೆಡ್ಡಿ, ಯಲ್ರಿಗೆ ತಕ್ನಾಗಿ, ಚಕ್ನಾಗಿ… ಅಪ್ಣೆ ಕೊಡ್ಸಿದ. ಯಲ್ರು ಕೋಲೇ ಬಸ್ವನ ತರಾನೇ, ತಲೆಯಾಡ್ಸಿ, ಪೆಂಜ್ರೆಯಂಗೆ, ಭುಸ್ಗುಟ್ತಾ ಕಾದ್ನಿತ್ರು…..

ಕಣ್ದಬಾಗ್ಲನ, ದುರ್ಗುವ್ವ ತನ್ನ ಯಡ್ಗಾಲ್ನಿಂದ, ಜಾಡ್ಸಿ ವದ್ಲು…. ವಳ್ಕೆ ಬಲ್ಗಾಲಿಟ್ಟು, ಬಾಗ್ಲಿಗೆ ಬೇಲಿಯೆಟ್ಟನ ಯೆತ್ರವಾಗಿ ವಟ್ಟಿ, ವನ್ಕೆ ಬಂಡ್ನಿ ಯೆಗ್ಲ್ಮೇಲಿಟ್ಟು ರುದ್ರಾವತಾರ್ದಲಿ….’ ನನ್ಗಂಡ….ಕೇರ್ಮೆಣೆಗಾರ್ಸಣ್ಣೆಲ್ಲೆಪ್ಪನ ಬುಡ್ಕುಟ್ದಿವ್ನಾರ್ಲೋ…..ಲಂಗ್ಡಿಯಾರೇ….ಲಭಾಡ್ಕಾರ್ರೇ….ಯಾರ್ಹೆಂಡ್ರೆಲಂತಾ ಯಿಲ್ಲಿ ಕೂಡ್ಯಾಕ್ಕೊಂಡ್ಕುಪ್ಯಾಕ್ಕೊಂದು ಜಲ್ಸಾ….ಮಾಡ್ತಿರೋಲೋ….. ನಾಚ್ಕೆ ಯೆಸ್ಗೆಯಿಲ್ದ, ಅಪ್ಪಣ್ಣಗಳಿರಾ….ಪತ್ರಾಳಿಯರೊಲೋ…. ಬನ್ರೋಲೋ…. ಬಲು ಆತ್ರೂ ಪಡ್ವೂ ಯೆಂಗ್ಸು, ಬಾಳಾ ಆಸೆ ಪಡ್ವೂ ಗಂಡ್ಸು ಸುಖಪಟ್ಟ ಉದಾಹರಣೆ ನಮ್ಮ ಚರಿತ್ರೆಲೇ ಯಿಲ್ಲ! ಯೀವತ್ತು ನೀವಿರ್ಬೇಕು! ಯಿಲ್ಲಾ ನಾನಿರ್ಬೇಕು!! ಯಿವತ್ಗೆ ನಿಮ್ಮಾಪ್ದ ಕೊಡ್ತೊಂಬ್ತೋರೋ…..ಯೀ ವೂರ್ಕೇರಿಯ, ವಾಸ್ತು ಸರ್ಮಿಡಾಕೇ ವುಲಿಯನೇರಿ ದುರ್ಗಿ, ಮಾರಿ, ಚಂಡಿ ಚಾಮುಂಡಿಯಾಗಿ ಬಂದೀನಿ….! ಯೀಗ ಬನ್ರೋ….ಅದೇನ್ಕಿಸ್ತೀರೋ….ಕಿತ್ತುಕಿತ್ತು ವರ್ಕೆಟ್ರೋ…..ಗಂಡ್ಸುರೆಂಬ್ವುರಿದ್ರೆ… ನನ್ಮುಟ್ಟಿ ನೋಡ್ಬಾನ್ರೀ….’ ದುರ್ಗುವ್ವ, ಬಯ್ಲಾಟ್ದಾಗಿನ ಮಾತ್ಗುಳಂಗೆ, ಪಟ್ಟಾಟಾ… ಹರ್ಳುರ್ದಿಂಗೇ, ಕಿಡ್ಕಿಡೀ ಕಾರ್ದುಲು….

’ಆಹಾಶ್…ಬೊಗ್ಳೋ ಯೆಣ್ಣೇ….ಗಜ್ನಿಂಬೆ ಅಣ್ಣೇ…ಮಾಗ್ದಿ ಮಲ್ಗೋಬಾ ಘಮ್ಗಾಮಾಶ್….ಅತ್ತೆಣ್ಣೆ, ಮುತ್ನಿ ಹರ್ಳೆ ಮಲ್ಗೆ ಮಗ್ಳೆ….. ಕರ್ದೆಲೇ ಬಂದ್ವಳೇ…. ಬಾಗಿಲಲಿ ನಿಂತ್ವಳೇ…. ಮೆತ್ನೇ ಮೈಯ್ವಳೇ…..ಬಾ….ಬಾರೇ…. ಭಾಮಾಮಣಿ….. ಪಂಚ್ರಂಗಿ ಅರ್ಗಿಣೀ….ಪಟ್ಟ್ಮಂಚಂ ಯೇರ್ಮಾ….. ಪಂಚ್ವಲ್ಬೇ…. ಪಂಚೆಲೋಲೇ….ಯಿಲ್ಲೇ ಐದ್ವುನ್ಕೆಗಳಿರ್ವೂಗ…. ಆ ವಂದ್ವುನ್ಕೆ ಯಾಕೆ ತರ್ಲುವೋದೆ ದುರುಗಾಶ್……ಮುರ್ಗಾಶ್…’ಕರಿಯಣ್ಣ ದೊಡ್ಬಾದ್ಮಾತ್ಗುಳಂತೆ, ನಾತಕೀಯವಾಗಿ ಆಡಿ ತೋರ್ಸಿದ್ದಲ್ದೆ….ಸ್ಲೋ ಮೊಸ್ನಿಲಿ, ಬಂದು ದುರ್ಗುವ್ವನ ಸೀರ್ಗೇ, ಕೈಹಾಕಿ ಕಿತ್ತ!

ದುರ್ಗುವ್ವ ಮೈಮರ್ದೆ, ಕರಿಯಣ್ಣ್ಮೇಲೆ ’ಹರಾಹರಾ ಮಾದೇವಾಶ್ ಸೆಂಭೋ ಸಿವ್ಸಾಂಭೋಶ್ ಸಿವ್ಸಾವಾ….. ಸಂಕ್ರಾ….ಆಹಾ…ರುದ್ರಾ…. ಯೀರ್ಬಾದ್ರಾ’ ಯೆಂದು, ವನ್ಕೆಯ ಬೀರ್ದಿಲು, ಕರ್ಕುಂಬ್ಳಕಾಯಿ, ನೆಲ್ಕೆ ’ಧೊಪ್ಪೆಂದು’ ಬಿದ್ದಂಗೆ, ಬಿದ್ದ! ಕರಿಯಣ್ಣನ ತಲ್ಬೊಪ್ಪಾರ್ತು. ಕಟ್ಸೊರ್ತು. ’ಅಯ್ಯೋ….ಅಮ್ಮಾ…. ಅಪ್ಪಾ… ತಲೆ ನನ್ತೆಲೆದಿಂಬ್ದಿರ್ಗಿತು. ಯೀ ನೆಲ್ಮುಗ್ಲೀನು? ಮೂಲೋಕ ಕಪ್ಳೆತಿರ್ಗಿತು! ಯೇ…..ಯೆಲ್ಸತ್ರೇಲೇ…. ಬರ್ರೆಲ್ರೇ…. ಯಿವ್ಳುನ ಯಿಡ್ಕುಳ್ರೀ….’ ಕರಿಯಣ್ಣ, ಅನಿಯಂತಾ ಮನುಸ್ಸಾ….. ಯಿಷ್ಟರ್ಚೀ ನೇಲ್ಕೆ, ಬಕ್ಬೂರ್ಲು ಅಮ್ನಕ್ವಾಣ್ದಂಗೆ, ರೆಪ್ಪಾಂತಾ ಬಿದ್ದ!!

ಆ ಕ್ಷಣ….. ಸದ್ದಡ್ಗಿತು. ಯಲ್ರೆದೆ ಝಲ್ಲೆಂದಿತು. ವುಳ್ದಿವ್ರು ಬಣ್ವೆಯೇರಿ, ಮರ್ಯಾಲೆ, ಕುಸ್ಮೆ ವಟ್ನ್ಮಿರ್ಲೀ…. ತತ್ರಿಸ್ಯಾಂತಾ…. ವುಗ್ಳು ನುಂಗಿಕ್ಯಾಂತಾ… ಬಾಯಿ ಬಾಯಿ ತಡ್ಪಿಕ್ಯಾಂತಾ ಮಂಗ್ಯಾನಂಗೇ ಮರೆಯಲ್ಲಣ್ಗಿದ್ರು……

’ಬನ್ರೋಲೋ….ಅಪ್ಪಮ್ಗೆ ವುಟ್ದೋರಿದ್ರೆ….. ಮುಂದ್ಕ ಬರ್ರೋ…. ಯೆಣ್ಣೆಂದ್ರೆ ಕಾಲ್ಗಾಳು ಕಸ್ವಲ್ಲ. ಕಳ್ಸ, ಗೋಪುರ, ಭೂಮಿ, ಆಕಾಶ, ಸೂರ್ಯ, ಚಂದ್ರ, ಅಗ್ನಿ, ಪ್ರಳಾಯಗ್ನಿ, ಜ್ವಾಲಾಮುಖಿ, ಶಕ್ತಿ, ದೇವ್ರು…..ಕಣ್ರೋ! ಮುಕ್ಕಣ್ಣನ್ಗೇ….ಮೂರೇಕಣ್ಣು. ಯೆಣ್ಗೆ ಆರ್ಕುಣ್ಣು. ಸಿಕ್ಸಿಸೆನ್ಸ್ ಯಿರಾದೇ ಯೆಣ್ಗೇ. ಸಿವ್ನ ತಲ್ಮೇಲೆ. ವಿಷ್ಣುವ್ನಿ ಯದೆಯಲ್ಲಿ ಯೆಣ್ಣಿದ್ದಾಳೆ! ಭಾರೀ ನಿಗ್ರಾರು, ಮದ್ಲು ನನ್ದ್ರೆಗೆ ಬರ್ರೊ…. ಅದೇನ್ಕಡ್ದಿ ಕಟ್ಬಾಕ್ತಿರೋ… ನಾನೂ ನೋಡ್ಬಿಡ್ತೀನಿ ಬರ್ರೋ….’ ದುರ್ಗುವ್ವ ವಂದಾವಾಜಾಕಿ, ಬಣ್ವಿಮರ್ಲಿದ್ದ ಮರಿಯಣ್ಣನ್ಮೇಲೆ ವನ್ಕೆಯ ’ರಫ಼್’ ಅಂತಾ ಬೀರಿದ್ಲು.

’ಅಮ್ಮಾ…. ಅಪ್ಪಾ….. ನಾಸತ್ತೆ! ನನ್ಬಿಟ್ಬಿಡು ತಲ್ಲೀ! ಯಿನ್ಮೇಲೆ ನಿನ್ತಾಂಟ್ಗೆ ಬರ್ಲ್ಮಾ…. ತಪ್ಪಾತು! ಯಿಷ್ಟಕ್ಕೆ ಬಿಟ್ಬಿಡು…..’ ಮರಿಯಣ್ಣ ವುದ್ದೂಕಾಡ್ಬಿದ್ದ. ವನ್ಕೆಲಿ ಬೆನ್ಗೆ, ಕಾಲ್ಗೆ, ಕುಂಡ್ಗೇ…..’ಕೆಡ್ಬಾಡಾ….’ ಚಟ್ನಿಕುಟ್ದಿಂಗೆ ಕುಟ್ಟಿ….ಕುಟ್ಟಿ…. ಯಿಟ್ಲು.

ಯಿತ್ತಾ…. ಮೂರ್ಬಾರ್ನಿ ಗೋಣಿ ಚೀಲ್ಗಳ್ಗೆ, ಕುಸ್ಮೆ ರಾಶ್ನಿ ತುಂಬ್ದಾನ ಕೈ ಬಿಟ್ಟು, ಚಳಿ, ಜ್ವರ ಬಂದ್ವನು ಪತ್ರುಗುಟ್ದಿಂಗೇ ’ಗದ್ಗಾದಾ….’ ನಡ್ಗುಕ್ಯಾಂತಾ…. ಕಣ್ದ ಬಾಗ್ಲಿನ ಅವುಸ್ರಾ ಅವ್ರಾಸ್ಮಾಡಿ ತೆಗೆಯ್ಲು ಬಲ್ತಿಪ್ಲು ಬೀಳ್ತಿದ್ದ ಬಜ್ಜಿಯ್ನ್ಮೇಲೆ ವನ್ಕೆನಾ ರೊಯ್ಯಯೆಂದು ಬೀರಿದ್ಲು. ಅದು ನಡ್ವಿಗೇ ಬಿತ್ತು! ಅಲ್ಲೇ ಕುಸ್ದಿ ವೋಡೋಡಿ ವೋಗಿ ಯೆದ್ಮೇಲೆ ಕುಂತ್ಲು. ವನ್ಕೆ ಯಿಂದ ಯಡ್ಗೈ ಬಲ್ಗೈಗಳನ್ನು ಭೇಷ್….ಅಪ್ಪಚ್ಚಿ ಮಾಡಿಟ್ಲು.

’ಅಮ್ಮೋ ನಾ ನಿನ್ನಳಿಯ್ಮ….ಬಜ್ಜಿಯ!! ಮಗ್ಳುಗಂಡಾ ಬಜ್ಜಿಯಾ!! ಬಿಟ್ಟುಬಿಡ್ತಾಯಿ. ಯಂಗೋ ನೀನ್ಹೆಸ್ರುರ್ಹೇಳಿ ಬದ್ಕ್ಯುಂಬ್ತೀನಿ. ಯಿನ್ನೊಂದ್ಬಾ ನಿನ್ಜೊಲ್ಗೆ ಬರಾಲ್ಲ್ಮಾ…. ಕೈಮುಗ್ತೀನಿ! ಯೇ ಬರ್ರೋ…. ಯೆಲ್ಲಿ ಸತ್ರೋ….. ದರಿದ್ರಾಸೂಳೇಮಕ್ಳಾ….ಬಿಡ್ಸಿಯಾ ಬರ್ರೇಲ್ರೇ….; ಬಜ್ಜಿಯ, ಕಂಡ್ಬಾಟ್ಟೆ ಯದ್ವೆಡ್ಕುಂಡು ಕೂಗ್ದಿ.

ದುರ್ಗುವ್ವ ಯಿಡಂಭಿಯಂಗೆದ್ದು ನಿಂತ್ಲು. ಕುಸ್ಮೆ ತೂರಾಕಿಟ್ಟಿದ್ದ ಮೇಟ್ನಿ ಬಣ್ವಿತಾಗಿಟ್ಟು….. ಅದ್ರ್ಮಾಲೆತ್ತಿ ವನ್ಕೆನ ಭರ್ರಾನೇ ಬೀಸೀ ಬೀಸೀ ….ವಗ್ದೆಲು. ಯಿಂದ್ರಸೇನ್ರೆಡ್ಡಿ, ಕುಕ್ರುಗಾಲಿಲಿ ಕುಂತಿದ್ದವನು….ತೊಂಡಿಕ್ಯಾತ, ಬೇಲ್ಮೇಲಿಂದ ನೆಲ್ಕೆ ’ತೆಪ್ಪಾಂತಾ’ ಬೀಳಂಗೆ, ಅಂಗಾತ್ನೇ ನಗ್ದು ಬಿದ್ದ! ಅವ್ನ್ಮೇಲೆ ಯಣ್ಕುಲ್ಡಿ, ಯರ್ಗಿದಂಗೆ ಯರ್ಗಿ, ಧರ್ಮದೇಟು ಬಿಗಿದ್ಲು.

’ಅಮ್ಮಾ….ಅಪ್ಪಾಶ್….ಬರ್ರೋ…ಕಾಪಾಡ್ರಾಪ್ಪೋ….ಸೊಂಟಾ…ಕೈಗ್ಳು ಮುರ್ದುವು. ಬರ್ರೇಲೇ….ಯಿಗ್ಲೂ ಯಲ್ರು ಸೇರಿ, ತೆಕ್ಬೆಡ್ದು ಯಿಡ್ಕಾ ಬನ್ರೇಲೇ…. ಸತ್ತು ದನಾ ತಿಂದೂ ತಿಂದೂ, ವಳ್ಳೆ ಹಂದಿ, ದನ್ಗ್ಯಾಳೇ….ಮೈಟ್ಗಾವಲ್ಲುಲು….ಅಯ್ಯಯ್ಯೋ….. ಸತ್ನೇಪ್ಟೋ ಬರ್ರೋ ಬಿಡ್ಸಿಗೊಳ್ರೀ…. ’ ಯಿಂದ್ರಸೇನ್ರೆಡ್ಡಿ, ಕಜ್ಜಿನಾಯಂಗೆ ಕುರ್ರೋ ಮರ್ರೋ….. ವಂದ್ಸೆಮ್ನೇ ಬೊಬ್ಬಿಟ್ಟ.

ದಾನ್ರೆಡ್ಡಿ, ಕುಸ್ಮೆ ವಟ್ಟ್ನಿ ಮರ್ಲಿದ್ದವ್ನು, ಗೆಳೆಯ್ನ ನೆರ್ವಿಗೆ, ವೋಡೋಡಿ ಬರ್ದಾನ. ದುರ್ಗುವ್ವ ಕೆಂಗೆಣ್ಣಿನಿಂದ್ಲೇ, ನೋಡಿದ್ಲು. ದಿಢಿಗ್ನೆದ್ದು ವನ್ಕೆಯಿಂದ ಫ಼ಟಾರ್ರ್ನೆ ದಾನ್ರೆಡ್ಡಿಗಿಟ್ಲು. ಅಲ್ಲೇ ’ಅಮ್ಮಾ…’ಅಂತಾ. ನೆಲ್ಕೆ ಬಿದ್ದು, ಪ್ರಜ್ಞೆ ತಪ್ಪಿದ್ದನ, ವನ್ಕೆ ಯಿಂದ ಗಗ್ಗಿನ ಬಡ್ದಿಂಗೇ ’ವ್ಞು….’ಅಂತಾ ಬಡಿದ್ಳು.

ಕಣ್ದ ಬಾಗ್ಲುನ, ದುರ್ಗುವ್ವ ’ಜರ್ಜಾರಾ…’ ಯಳ್ದು ತೆಗೆದ್ಲು. ಆಗ ಕುಂದ್ಲ್ಮಿರ್ಗಿಳಂಗೇ….ದೊಡ್ಡೆಲ್ಲೆಪ್ಪ, ಸೋಮಣ್ಣ, ಕರಿಯಮ್ಮ, ಕಲ್ಲವ್ವ, ಅನ್ಮುಕ್ಕ, ಪಾಲಮ್ಮ….ಬುದ್ಬೂದೂ….ವಳ್ಕೆ ಬಂದ್ರು. ಕಣಂಬ್ಕಾಣ್ವೆಲ್ಲ ರಾಮಾರಂಪಾ ರಕ್ತ…..! ರಕ್ತ…..! ರಕ್ತಸಿಕ್ತಾದ ವನ್ಕೆ ನೆಲ್ದ್ಮೇಲೆ ಫಳ್ಫಳಾ ವಳ್ಡಾತಾ…ಬಿದ್ದಿತ್ತು! ಐವ್ರ್ನ ಹಂದಿ, ನಾಯಿ, ಕತ್ತೆಗಳ್ನ ಯಳ್ದೆ ತಂದಂಗೆ ಧರ್ಧಾರ್ನೇ…. ಯಳ್ದೆ ತಂದ್ವುಂದಾತ….. ಕೂಡ್ಯಾಕಿ, ಅವ್ರ , ಪಂಚೆ, ವಲ್ಲಿ, ಅಂಗಿ, ಮೈಯಂಗಿಗಳನ್ನು ಪರ್ಪಾರಾನೇ…ಹರ್ದು, ಅವ್ರನ್ನೆಲ್ಲ ಯಡೆಮುರ್ಗೆ ಸಾಲ್ಗೆ  ಕಟ್ಟಿ ….ಕಟ್ಟಿ ನಿಲ್ಸಿದ್ಲು. ಯಾರಲ್ಲೂ ನಿಲ್ಲಲೂ ಸಕ್ತಿ, ತ್ರಾಣ ಯಿರ್ಲಿಲ್ಲ. ’ಅಯ್ಯೋ…..ಅಮ್ಮ….; ಅಂತಾ….ಕುಸಿದ್ರು…! ಅಲ್ಲಿದ್ದವ್ರಿಗೆ ಕರ್ಳುಕಿತ್ಬುಂತು.

’ವಟ್ಗೆ ಯೇನ್ತಿಂಬ್ತಿಲೇ ದುರ್ಗೀ ಮುರ್ಗೀ…? ಯಿಂಗೆ ವುಣ್ಸೆಣ್ಣು ಬಡ್ದಿಂಗೆ, ವುಣ್ಸಿಕಾಯಿ ಚಟ್ನಿ ಕುಟ್ದಿಂಗೆ ಯಿವ್ರ್ನ ಕುಟ್ಟಿಯಲ್ಲೇ ಪಾಪಿ, ಕಟುಗಿ, ಅದ್ರಿದಪ್ತಿ, ಆನಂದಾಗೂಟ್ವಾರ್ಳೆ….ಅಬ್ಬಾ! ಯಿವ್ರಿಗೇನು ಯೇಳಾರ್ಕೇಳಾರು, ಯಿಂದ್ಲಾರು ಮುಂದ್ಲಾರು, ಯೆಂಡ್ರು, ಮಕ್ಳು, ಅಣ್ಣತಮ್ಮಂದಿರಿಲ್ಲೇನೇ? ಅವ್ರೆಲ್ಲ ಬರ್ತಾರೇ…. ನಿನ್ನಾ ಕೈಮಾ ಮಾಡ್ತಾರಾಲೇ? ನಿನ್ಗೆ ಯಿನ್ನು ನೆಮ್ಮದಿಯಿಲ್ಲ. ಬಿಡ್ಗುಡೆಯಿಲ್ಲ! ಥೂ! ನಿನ್ಕೈ ಕತ್ರಿಸಾ….ಸತ್ತಲ್ಲಿ ಕತ್ತೆವಳ್ಳಾ….ಯಂಗ್ಬೆಡ್ಡಿಯಲ್ಲೇ ಅವ್ವಾವ್ವಾ…..! ಯಂಗೆನ್ನೆಲ್ಲ ಕೈ ಯೆದ್ವೇ…. ರಾಕ್ಷಿಸೀ…ಗಂಡುಭೀರಿ….ಚಿನಾಲಿ, ಗಂಡ್ಜೊಗಜ್ಜಿ……’ ಯೆಂದು, ದುರ್ಗುವ್ವನ ಸಿಡ್ಸಾಪ್ಸಿ, ಲಟ್ಗೆ ಮುರ್ದು…ಮಣ್ತೂರಿ… ಕರಿಯಮ್ಮ, ಆಲಮ್ಮ, ಅನ್ಮುಕ್ಕ ಅರ್ಸಿಣ ಪುಡಿ, ದಾಸಿಣ್ಕೆ, ಕಾಫ಼ಿಪುಡ್ನಿ, ಮನೆಯಿಂದ ತಂದು ತಂದು… ಆ ಐವ್ರಿಗೆ ಹಾಕಿ…. ಹಾಕಿ… ಕಟ್ಗುಳ ಕಟ್ತೊಡ್ಗಿದ್ರು.

’ಆಹಾ….ವುರಿ…ವುರಿ…. ಅಯ್ಯೋ ಮೇಲ್ಗೇ ತಾಯಾರೇ…. ನೋವು ಮಾಡ್ವಿ… ನಮ್ಗೇ ನೋವು ಗೊತ್ತಿರ್ಲಿಲ್ಲಾ… ಬಡ್ದೀವಿ. ಆದ್ರೆ ಬಡ್ಸಿಗಂಡಿರ್ಲಿಲ್ಲಾ… ಅಮ್ಮಾ ರವ್ವಾಸು ’ತುವ್ವಾ’ ಕುಡ್ಸಿ ನೀವನಾ ಪುಣ್ಯ ಕಟ್ಕೊಳ್ರವ್ವಾ… ಭಾರೀ ನೀರ್ಡಿಕೆ ಆಗೈತಿ. ಕಣ್ಗೆ ಮಬ್ಬು ಬಂದಂಗಾತೈತಿ. ಯಮಯಾತ್ನೆ…. ಮುಗ್ಳಿ ಹರ್ರಂಗೆ ಕುಡ್ದು, ಪುಟ್ತುಂಬಾ ತಿಂದಿದ್ದು ಯಲ್ಲೋಗೋಯ್ತು?’ ಯಿಂದ್ರಸೇನ್ರೆಡ್ಡಿ, ವುಟ್ದಿಲ್ಲ ನೆನ್ಸಿಗೆಂತಾ, ಮೆಲ್ಗೆ ಯಿಷ್ಟು ವುಸ್ರಿದೆ.

ಕೊಡ್ಬಾನ್ಗುಳ ತುಂಬಾ ನೀರು, ಚಂಬ್ಗುಳ ವತ್ತು ಪಾಲಮ್ಮ, ಕರಿಯಮ್ಮ, ಸಿತ್ರುಗತ್ಲಿ ತಂದ್ರು…. ಅವ್ರೆದೆಲ್ಲ ನೀರ್ಡೆಗೆ ಕಳ್ದು….ತಲ್ಗೆ, ಕೈ, ಕಾಲ್ಗುಳ್ಗೆ ಕುಂಬಾರಣ್ಣ ತಟ್ದಿಂಗೇ ನೀರ್ನಿಂದ ಭೇಷ್ ತಟ್ಟಿ… ತಟ್ಟಿ… ರಾಮ್ನಕೊಳೆ ತೊಳಿದ್ರು. ಕಣ್ಕಣ್ವಿಲ್ಲಾ… ರಕ್ತಾ…! ರಕ್ತಾ! ರಕ್ತದೊಕ್ಳಿ ಹರಿತು.

ಕರಿಯಮ್ಮ, ಹಾಲಮ್ಮ, ಅನ್ಮುಕ್ಗನ್ಗೆ ವಟ್ಟೆ ಸಂಕ್ಟಾ ತಡಿಯಾಕಾಗ್ಲಿಲ್ಲ. ಸಿಟ್ಟು ನೆತ್ಗೇರಿತು. ದುಕ್ಕ ಕಟ್ಟೆಯಾಗಿ ವಡೀತು. ;ನೀನೇನು ಮನುಸ್ಯಾರು ಜಾತಿಗುಟ್ಟಿಯಾ? ಯಿಲ್ಲಾ ರಾಕ್ಷಸರ ಬೀಜ್ಕುಟ್ಟಿಯಾ? ವಬ್ಳೇ ಯೀ ಐದುಜನ್ರ್ನಾ ಕ್ವಾತ್ನಿ ಮಾಡಿ ಕುಣ್ಸಿಯಲ್ಲೇ? ವಟ್ಗೇನು ಯೇಲು ತಿನ್ತೀಯೇನೇ? ವಳ್ಳೆ ಮಾತ್ಲೀ ಯೀ ವೂರ್ಬಿಟ್ಟು, ಯಾರ್ಕಣ್ಗೆ ಬೀಳ್ದಂಗೆ ವೋಡಿವೋದ್ರೆ ಸರಿ…ಯಿಲ್ಲಾ! ನಮ್ಗಳ ಕೈಯಾಗೆ ನೀ ಯೆಣವಾಗ್ತೀಯಾ! ಲೌಡೀ…ಭೋಸುಡಿಶ್…. ಕರಿಯಮ್ಮ, ತನ್ಗಂಡ ಕರಿಯಣ್ಣನ, ಪರ್ವಾಗಿ ಕತ್ತಿ ಮಸ್ದೆಲು.

’ನಿನ್ಗಂಡ್ಸಾತ್ತಾಗ್ಲೇ ನೀ ವರ್ಗಿದ್ರೆ…. ಯೀ ವೂರ್ಕೇರಿಯನ್ನಾ ತಣ್ಗಿಯಿರ್ತಿತ್ತಾಲ್ಲೇ? ಯೀಗ ಕೊಳ್ಳಿ ಯಿಟ್ಟೆಲ್ಲೇ ಮಳ್ಳಿ! ನೀನೇನು ಯಂಗ್ಸೋ… ಯಿಲ್ಲಾ ಗಂಡ್ಸೋ….?? ವಳ್ಳೆ ಮುಸ್ವಿಯಿದ್ದಂಗೆ, ಯೇನ್ ಅರ್ಲಾರ್ದಾ, ಮೆದ್ಯಾಗ್ಳು, ಚೇಳ್ದಿಂಗೇ ಯಿದ್ದೇ… ಸುಪ್ಪಾಣೆ, ಭಿತ್ರೀ…. ಚಿನಾಲಿ, ವೈಯಾರಿ…ಯಿಷ್ಟು ಗುಂಡ್ಗೆ ಯೆಲ್ಲಿಂದಾ ಬಂತೇ? ನನ್ಗಂಡ್ನ ಬಡ್ಯಾಳು ನೀನ್ಯಾರೇ? ವೂರಿದೆ, ವುದ್ಮಾನ್ದಿ. ನ್ಯಾಯ ಪಂಚಾಯ್ತಿದೆ! ಯಿಗಾ ಕ್ಷಣ ನನ್ನೆದ್ರಿಗೆ ನಿಂತಿಯಾ ನೋಡು? ಯೀ ವನ್ಕೆ ಸಮೇತವಾಗಿ ನಮ್ಕೆರೆಗೋ, ಬಾವಿಗೋ…..ಬಿದ್ದು ಸಾಯ್ಬೇಕು! ಯಿಲ್ಲಾ ನಿನ್ನಾ ಯೇನ್ ಮಾಡ್ತೀವಿ ನೋಡೇ ದುರ್ಗೀ…. ವೂರ್ಗೂಯ್ಯಾಳಿ…’ ಪಾಲಮ್ಮ ತನ್ಗಂಡ, ಮರಿಯಣ್ಣನ ಪರ್ವಾಗಿ, ಗೋಸಿ ಹಾಕಿ, ಕುಸ್ತಿ ವಗೆದು, ಬಟ್ಟೆ ಹಾವ್ಬಿಟ್ಟು, ನೋಡ್ತಾ ನಿಂತ್ಲು.

ದುರ್ಗುವ್ವನ ಪರ, ವಿರೋಧ, ವೂರ್ಗಾಳಾರು, ಕೇರ್ಯಾಗ್ಳರು, ಯೆಣ್ಣು-ಗಂಡು….ಭೇದಭಾವ ಗುಸ್ಗೂಸು… ಪಿಸ್ಪಾಸಾ.. ಮಾತ್ಗುಳೂ ಸುರುವಾದ್ವು….

ದುರ್ಗುವ್ವ ನೋಡ್ತಾನ್ಕ ನೋಡಿದ್ಲು. ಕೇಳ್ತಾನ್ಕ ಕೇಳಿದ್ಳು… ತಲ್ಕೆಟ್ಟು ಗೊಬ್ರಾದ್ಗುಂಡಿಯಾಯ್ತು…’ಯೇನ್ರೇಲೆ… ನಿಮ್ತಿಂಡಿ? ಯೇಳ್ಮೆ ಸಗ್ಣೆ ತಂದು, ಜಾರಿ ನಿಮ್ಮೊಳ್ಳಾಗಾಕಿ ಜಾರಿ ಜಾರಿ, ಯೀ ವನ್ಕೇಲಿ, ತುಳಿದು ತುಳಿದು, ಹಾರ್ಹಾಕ್ಯಾನ್ಲೇ…. ನಿಮ್ಗಂಡಂದ್ರ್ನಾ ಹದ್ಬಸ್ತ್ಯಾಗಿಡ್ದ ಸವ್ತಿಯಾರೆ, ವೂರ್ಬಾಸ್ವಿಯಾರೇ…. ಕಳ್ರ್ನಾ, ಸುಳ್ರ್ನಾ… ತಾರಾತಿಗ್ಡಿರ್ನಾ…. ಮನೆಮುರ್ಕುರ್ನಾ… ಆಗಾಕೆ ಬಿಟ್ಟು … ಯೀಗಾ ಬಾರಾಯಿದ್ದೇವ್ಮಾಡ್ತಿರೇನ್ರಾಲೆ ಬೋಸ್ಡೆರೇ… ಗಂಡ್ರ್ನಾ ಕ್ವಶ್ಚನ್ ಮಾಡ್ಲಿಲ್ಲಾಂದ್ರೆ…. ಅವ್ರಾ ಗತಿ ಅಧೋಗತಿ ಯಿಂಗೇ…. ಬಾಯಿಬಿಟ್ರೆ…. ಯೀ ವನ್ಕೇಲಿ, ನಿಮ್ಗೇ ಕಟ್ಸೊರಂಗಿಟ್ಟು, ಜೈಲಿಗೋಗ್ಲು ಸಿದ್ಧ! ನೇಣ್ಗಂಬಾ ಯೇರ್ಲು ಬದ್ಧ! ವುಷಾರ್…’ ದುರ್ಗುವ್ವ ಯೇಕ್ರಮ್ಮೆಲೇ ಹಸ್ದಿಯೆಣ್ಣು ವುಲಿಯಂಗೆ, ಅವ್ರಿಬ್ರಾಳ್ಮೇಲೆ ವನ್ಕೆ ಯಿಡ್ದಿ, ಯೇರಿ ಯೇರಿ, ವೋದ್ವಳ್ನ …. ಯಿಡ್ದು… ಯಿಡ್ದು…. ಸಮಾಧಾನ್ಮಾಡ್ಲು, ಜನ್ರು ಯೇಳು ಹನ್ನೊಂದಾದ್ರು, ಕಣ್ದ ಸುತ್ತಾಮುತ್ತಾ… ವಾತಾವರಣ ಬಿಸಿಬಿಸಿಯಾಗಿ, ಗುಡ್ಗು, ಸಿಡ್ಲಿಲು, ಮಿಂಚು…. ಕಾಣ್ಸಿತೊಡ್ಗಿತು.

ದುರ್ಗುವ್ವ ಕಾಳಿಕಾ ದೇವಿ ಯಂಗೆ…. ವಮ್ಮೆಮ್ಮೆ ಮಾರೀ…ಯೆಮ್ಮಾರಿ…. ಚಂಡಿ ಚಾಮುಂಡಿ, ದೇವಿಯಂಗೇ ಬುಸ್ಗೂರಿತಾ….. ನಿಂತಿದ್ವಳ್ಗೆ ನೀರ್ಕುಡ್ಸಿ… ತಲೆ, ಮೈಮೇಲೆಲ್ಲಾ…. ಕೊಡ್ಗಳಿಂದ ನೀರ್ತಾಂದು ಹಾಕಿ ಹಾಕಿ….ಮೆಣ್ಸನಕಾಯಿ, ವುಪ್ಪು, ಬೆಳ್ಳಾಗಡ್ಡಿ, ಬದ್ನೇಕಾಯಿ, ವೋಕ್ಳಿನೀರು, ವಸಾಭೋಕಿ, ವುಳ್ಳಾಗಡ್ಡಿ, ನಿಂಬೆಣ್ಣು, ಮುಟ್ಗಿಬಾನ, ಮುದ್ದೆ….ಯಲ್ಡಿಕೆ….ದುರ್ಗುವ್ವನ ವುದ್ದೂಕ ನಿವ್ವಾಳ್ಸಿ, ದಾಟು ತೆಗೆದು ’ಥೂ’ ’ಥೂ’ ’ಥೂ’ ಅಂತಾ… ಮೂರ್ಸಾರಿ ವುಗ್ಳಿ, ಜನ್ರು ಅಡ್ಡಾಡ್ವು, ಮೂರ್ದಾರಿ ಸೇರ್ವು, ಕಡ್ಗೆ ಯಿದ್ನೆಲ್ಲ ತಗುದ್ ಹಾಕಿ, ದೊಡ್ಡೆಲ್ಲೆಪ್ಪ ’ಶಾಂತಿ’ ಮಾಡ್ದಿ.

’ಥೂ! ಹಡ್ಬಿಟ್ಟೇರು! ಪಲ್ಲಿಕ್ಕಿದ್ಕಡ್ಗೆ ಪದ್ವೇಳಾರು! ದುಷ್ಟರ್ಗೆ ಕಿಮ್ಮತ್ತು, ಕುಮ್ಮಕ್ಕು, ಮಸ್ಲತ್ತು ಕೊಡ್ತೀರೇನ್ರಾಲೇ? ತ್ಯಾವ್ದಿಲಾರೆ! ಯೆಷ್ಟು ಜನ್ರ್ಮುನ್ಗೆಳ ದೀಪ್ತಾಗ್ದಾರೆ ಗೊತ್ತಲ್ಲಾ!? ತಾಳಿ ಹರ್ಸಾರೆ ಮರ್ತಿರೇನ್ರೇ?! ಯಿವ್ರಾ ಯೆಂಡ್ರು ಮಕ್ಳು ನೀವು ಸುಖಪಟ್ರಾ? ಯೇನ್ ಮೃತ್ಯುಂಜಯರೆಂಗೇ ಮೆರ್ತಿದ್ರು! ಯೀ ಕಳ್ಬಡ್ವುರು…..! ಯೀಗ ನರ್ಸತ್ತ ನಾಮರ್ಧರು! ಪುತ್ರಕುಮಾರರು! ಯೇನ್ ಪಂಚಪಾಂಡ್ವರೆಂದು ಭೀಗುತಿದ್ರು…… ಛೇ…..ಛೇ…..ರಂಡ್ಮುಂಡೆಕೈಲಿ ಯರ್ಪುಕ್ಕಾದ್ರಾ….ಯೇಳಳ್ಳಿ ಶನಿ, ವಾಸ್ತು, ಗ್ರಹಚಾರ, ಪೀಡೆ, ಗ್ರಹಣ….ಯೀವತ್ಗೆ ತೊಲ್ಗಿತು!’ ವೂರ್ಗಾಳ ಕಲ್ಲವ್ವ, ಜಿಲ್ಲಾಪರ್ಸಿತ್ತು ಅಧ್ಯೆಕ್ಷೆ, ಯೆಲ್ಲೆದ್ರುಗೆ ಕಲ್ಕಾಲಾಶ್…..ಬಾಯಿ ಮಾಡಿದ್ದೇ ತಡ, ದುರ್ಗುವ್ವನ್ಮೇಲೇರಿ ವೋಗಾರು ಯಿಂದ್ಸೆರಿದ್ರು.

ಯೀ ಜನ್ರೇ ಯಿಂಗೇ….ಗಾಳಿಯಂಗೆ ಬೀಸ್ತೋ ಅಂಗೇ ಗೆದ್ದಿತ್ತ್ನಿ ಬಾಲವಿಡಿಯೋರು! ಕುರಿ ಬಿದ್ದ ಜಾಡಿದ್ದಂಗೇ…..

’ನೀ ಜೀವ್ದಂಗು ತೊರ್ದು, ಯಿವ್ರೊಂದ್ಗೆ ವೋರಾಡಿ, ಕೀರ್ತಿಗಳ್ಸಿದೆ….ದುರ್ಗುವ್ವ‍! ಜನ್ರಿನ್ನೂ ನಿರ್ಮುಳಾದ್ರು, ನರಿಯಂತವ್ರು ಕೂಗಿದ್ರೆ….ಬೇಸ್ರಾವೇನು? ಆನೆ ವೋಗುತ್ತೆ….ನಾಯ್ಗಿಳು ಬೊಗ್ಳುತ್ತವೆ! ಯೆಂಗ್ಸರ ಗರ್ವ, ಕೀರ್ತಿ, ಬಲ, ಶಕ್ತಿನ ಯೆಚ್ಸಿ, ಸಾಂಸ್ಕೃತಿಕ ವನ್ತೆ, ವನ್ಕೆ ದುರ್ಗುವ್ವಳಾದೆ. ಕೋಟಿಗೊಬ್ಳು. ಯಿವ್ರು, ರಾಹು, ಕೇತು, ರಾವಣ,ದುಶ್ಯಾಸನ, ದುರ್ಯೋಧನ, ಮಾರೀಚ, ಕಂಸ, ಕೀಚ್ಕರಂಗಿದ್ರು! ಯಿವ್ರ್ನ ಸದೆಬಡ್ದು ಪುಣ್ಯುಕಟ್ಕೊಂಡೆ. ಜೈಹೋ ದುರ್ಗುವ್ವಾ…. ಜೈ!ಜೈ!….’ ದೊಡ್ಡೆಲ್ಲೆಪ್ಪ ಯಲ್ರುದ್ರುಗೆ, ಜೈಕಾರ ಹಾಕಿ, ಖುಷಿನ ಹಂಚ್ಕೊಂಡು, ದುರ್ಗುವ್ವನ ವಿರುದ್ಧ ಸೊಲ್ಲೆತ್ತದಂಗೆ, ಮಾಡ್ವುಲ್ಲಿ ಸಫಲನಾಗಿ ಭೀಗ್ದಿ.

’ಯಿವ್ರ್ನಾ ಯಿಷ್ಟಕೇ, ಕೈಬಿಡುಬಾರ್ದು ಕಲ್ಲವ್ವ! ಕತ್ತ್ಮೇಲೆ ಕುಂದ್ರಿಸಿ…. ಯೀ ವೂರ್ಕೇರಿ…. ತುಂಬಾ, ಮೆರ್ವಣ್ಗಿ ಮಾಡಿ, ಕ್ಯಾತೆ ಬುಡ್ರು…..ಲೆವ್ಡಿಜಿಲ್ಬಿಲ್ಮಾಡಿ ಕೈಬಿಡ್ಬೇಕು, ಯಿವ್ರು ಮೃತ್ಯುಂಜಯರಲ್ಲ, ತಾಯ್ಗಿಂಡ್ರೆಂದು ಸಾಬೀತ್ಮಾಡ್ಬೇಕು….ಯಿದೆಕ್ಕೆಲ್ಲ ಯೇರ್ಪಾಡ್ಗಾಬೇಕು.
ಯಿವ್ರು ಮಹಿಷಾಸುರರು…..ರಕ್ತಾಬೀಜಾಸುರರು….ವೂಸ್ರಾವಳ್ಳಿ….ಗುಳ್ಳೆನರ್ಗಿಳು….ಯರ್ಡು ತಲೆಹಾವ್ನಿಂತ್ವರು…..’ ದುರ್ಗುವ್ವ ಹಲ್ಲಾಲ್ಲು ಕಡಿಯುತ್ತಾ, ಹೆಬ್ಬಾವಿನಂತೆ ಭುಸ್ಗುರಿಯುತ್ತಾ…. ಭಾಳಾಭಾಳಾ ಯೇಳ್ದಿಳು….
’ನೀ ನರರೂಪ ರಕ್ಕಸರ್ನ, ಸಿಕ್ಕಂಗೆ ಜಜ್ಜಿ  ಜಜ್ಜಿ…. ಯಿಕ್ಕಿರ್ವೂಗಾ. ಯೆಣ್ಣಾಗಿ ನಾ ನಿನ್ನಾ ಅರ್ಥ ಮಾಡಿಕೊಂಡಿರುವೆ! ಯೆಣ್ಗೆ ಯೆಣ್ಣೇ ಕಣ್ಣು! ಯಣ್ಣಲ್ದೆ, ಯಾರು ಬೆಂಬ್ಲಿಸಲು ಸಾಧ್ಯ!? ಯೆಣ್ಣು ಮೂಲೋಕ್ದ ಕಣ್ಣು ಯೀಗ ನೋಡ್ತೀರಿ…. ನಾವು ಸತ್ತಾವ್ನು, ಯಂಗೆ ಬಡ್ತೀವಿ ನೋಡ್ತೀರಿ…. ನಾವು ರವ್ವಾಟೋತ್ಗೆ ಬರ್ತೀವಿ’ ಯೆಂದು ಬಸವಲಿಂಗಸ್ವಾಮಿ, ಶಿವಮೂರ್ತಿಸ್ವಾಮಿ, ಕಪ್ಪೂರು ಸೋಮಣ್ಣ…..ಕಲ್ಲವ್ವ… ದೊಡ್ಡೆಲ್ಲೆಪ್ಪ ಯಲ್ರು ಸೇರಿ, ಭರ್ರೆಂದೂವರ್ಟ್ರು….ದುರ್ಗುವ್ವಳ್ಗೆ ಜನ್ರಿಗೇ ಕುತೂಹಲ ಕೆರ್ಳಿಸಿದ್ರು……
*             *               *
ರವ್ವಟ್ ಹೋತಾಯ್ತು! ಕೆಲ್ಸಾರು ಸೀನಣ್ಣ, ಹಡ್ಬದ್ಪೆಟ್ಗೆ ಕೊಂಕ್ಳಾಕೆ, ಸಿಗ್ಯಾಕ್ಕೊಂಡು ಅಲ್ಲಾಡ್ಸಿಗ್ಯಾಂತಾ….. ದುರ್ಗುವ್ವನತ್ರಾ ಬಂದ! ಬಾಳ ವೂಪ್ಲೀ ’ನಿನ್ಗೆ ಕೈಮುಗ್ಬೇಕು, ದುರ್ಗುವ್ವ….! ನೀ ನಮ್ಮೂರ್ಗೇನು…. ಸುತ್ತೇಳೂ ಹಳ್ಳಿಗಳ್ಗೇ ವುಪ್ಕಾರ ಮಾಡ್ದೇ ಬಿಡು! ಯೀವ್ರು ನನ್ಕೋಳ್ನಿ ಸುಟ್ಗೊಂಡು ತಿಂದು, ಯಾರ್ಮುಂದೆನ್ನಾ…. ಬಾಯ್ಬಿಟ್ರೆ ನೋಡೂ….. ತೆಪ್ಗಿರೆಂದೂ ಬೆದ್ರಿಸಿದ್ರು!! ಯಿವತ್ತು… ಬಾಯ್ಬಿಟ್ನೋಡಮ್ಮ…..! ಮೀಸ್ವೆತ್ತ, ಧೀರ…. ಧೀರಾ…. ಮಗಧೀರರೇ ಮಾಡ್ದಿರ್ವು ಕೆಲ್ಸನ್ಮಾಡಿ, ಯೀ ನೆಲ, ಜನ್ರ, ವೃಣ್ವತೀರ್ಸಿದೆ. ನಾನೂ ತೀರ್ಸಿವೆ! ಯಿಗ್ಗೇ ಯಿವ್ರ ಅರ್ಧ ತಲೆ, ಮೀಸ್ಗೆಳ್ನೆ ಬೋಳ್ಸಿ…. ಕೋಳಿ ವೃಣಾ ತೀರ್ಸಿಕೊಳ್ವಿ’ ಯೆಂದು, ಆ ಐವ್ರ ಕಷ್ಟ ಮಾಡ್ಲು, ಕಷ್ಟಪಡತೊಡ್ಗಿದ.

ತೇರು, ಪರೀಷೆಯಂಗೇ ಜನ್ರು, ಮೆಲ್ಗೆ ಕಣ್ದ ಬಯ್ಲು ತುಂಬ್ದಿರು. ಅಷ್ಟ್ರಾಗೆ….. ಅಗ್ಸುರು ಯೀರಣ್ಣ, ಐದ್ಕುತ್ತೆಗಳೊಂದ್ಗೆ…. ದುರ್ಗುವ್ವನತ್ರಾ ಬಂದು…. ’ದುರ್ಗುವ್ವ….. ನಿನ್ಪಾದ್ಗಳೆಲ್ಲ್ಮೆ….?! ಗಂಡ್ಸಾತ್ತಾಗ ಯೆಷ್ಟು ಅಳ್ಪುರ್ಕಿಯಿದ್ದೆಮ್ಮಾ?! ಯಿವತ್ತು ಯಿವ್ರ ವುಪಟ್ಳಕ್ಕೆ ಅಂತ್ಯ ಹಾಡಿದ್ದು….ದೇಸ್ಕೆ ಸ್ವಾತಂತ್ರ್ಯ ಸಿಕ್ಕಾಗ ಖುಷಿಯಾದಷ್ಟು, ನನ್ಗೀಗಾ ಬಲು ಖುಷಿಯಾಗೈತಿ! ನಿನ್ಕೈಚಳ್ಕ, ದೃಢನಿರ್ಧಾರ, ಯದ್ಗೆರ್ಕೆ, ಯಿಟ್ ಹೆಜ್ಜೆ, ಕೈಗೊಂಡ ನಿರ್ಣಯ…. ಬಲು ಸರೈತಿ! ಯೀ ವೂರು ನಿನ್ನಾ ವೃಣ್ದಲಿದೆ. ಯಿವ್ರು ನನ್ನ ಮೂರು ತಿಂಗ್ಳು ಯೆಣ್ಕತ್ತೇನ ಸೂಪು ಮಾಡಿ, ವುಪ್ಪು ಕಾರ, ವುಳಿಯಾಕಿ…. ಬರೀ ಯೆಣ್ಯಾಗೇ ಗೋಳ್ಸಿ, ಗೋಳ್ಸಿ…ಯರ್ಡು ದಿನ, ತಿಂದುಂಡ್ಮೇಲೆ ನನ್ಗೆ ಯೇಳಿ ಯೆದ್ರಿಸಿದ್ರು! ಯೀವತ್ತು ಬಾಯ್ಬಿಟ್ನಿ ತಾಯಿ! ಯೀ ದುಷ್ಟರ್ನ ಮಟ್ಟ ಹಾಕಿದ್ದು ನಮ್ಮೂರ ಗ್ರಹಗತಿ ಸರಿಯಾದಂಗಾತು! ಯಿವ್ರಾ ವೃಣ ತೀರ್ಸಿಲು ನಾನೂ , ನನ್ಕತ್ತೆಗ್ಳು ಮೆರ್ವಣ್ಗೆಗೇ  ರೆಡಿ ದುರ್ಗುವ್ವ….’ ಯೆಂದು, ವೃದಯ ಬಿಚ್ಚಿ ಮಾತಾಡಿ, ಅಲ್ಲಿದ್ದವ್ರಾ ಗಮ್ನ ಸೆಳ್ದೆ.

ಕೇರ್ಮಿಣೆಗಾರ ಕ್ರಿಷ್ಣಪ್ಪ, ಶೇಖರಪ್ಪ, ಯೆಗ್ಲಿಗೆ ಯರ್ಡು ತಪ್ಡೆಗಳ ಹಾಕ್ಕೊಂಡು ಬಂದ್ರು, ವುರ್ಮೆಯವ್ರು, ಶಂಖ, ಜಾಗ್ಟೆ, ಕೊಂಬು, ಕಾಳೆ…. ವೂದೋರೊಟ್ಗೇ ದೊಡ್ಡೆಲ್ಲೆಪ್ಪ….ಶಿವಮೂರ್ತಿಸ್ವಾಮಿ, ಬಸವಲಿಂಗಸ್ವಾಮಿ, ಕನ್ನಡ ರಕ್ಷಣಾ ವೇದಿಕೆ ಯವರೊಂದ್ಗೇ…..ಕಲ್ಲವ್ವ ಸ್ತ್ರೀ ಕೇಂದ್ರದ ಸದಸ್ಯೆರೊಟ್ಗೇ… ಯಿಂಡು ಯಿಂಡಾಗಿ …. ಹಿಗ್ಗಿ ….ಹಿಗ್ಗಿ…ನುಗ್ಗಿ….ನುಗ್ಗಿ ಬಂದ್ರು….

ಮೆರ್ವುಣ್ಗಿ ಸಿದ್ಧವಾಯಿತು. ತಪ್ಡೆಗಳ….. ವುರ್ಮೆಗಳ…ಝುಣಾ….ಝಣಾ… ಕಾಸಿದ್ರು, ಆ ಐವ್ರ್ನ ಕತ್ತೆಗಳ್ಮೇಲೆ ಹಳ್ಸೀರೆ ವುಡ್ಸಿ, ಕೆಂಪು, ಹಸ್ರು ಬಳ್ಗೆಳ ತೊಡ್ಸಿ…. ಕೊಳ್ಗೆ ಹಳೆ ಕಾಲ್ಮರ್ಗಿಳ, ತಂಗ್ಡಿವೂವ್ನಿ ಹಾರ ಹಾಕಿ, ತಲ್ಗೆ, ಹಣ್ಗೆ, ಮೈಮೇಲೆಲ್ಲಾ… ಬಿಳಿ, ಕರಿ, ಕೆಂಪ್ನೇ ಬಣ್ಣದ ಮೂರ್ನಾಮ್ಗಳ ಬಳಿದು, ಕಿವ್ಗೆ ದಾಸ್ವಾಳ್ದ ವೂವು ಸಿಗ್ಸಿ… ಕತ್ತೆ ಬಾಲ್ಗಳ್ಗೆ  ಹಳೆ ಸೀಮೆಣ್ಣೆ ಡಬ್ಬಿ, ಪುಟ್ಟಿ, ತಟ್ಟಿ, ಮೊರ, ಮುತ್ಲಿಗಳ್ನ ಕಟ್ಟಿ, ಜನ್ರು ಕೇಕೆ ವಡಿದ್ರು… ದುಷ್ಟಸಂಹಾರಕ್ಕೆ… ಜಯವಾಗ್ಲಿ….

’ವೀರ್ವನ್ತೆ ವನ್ಕೆ ದುರ್ಗುವ್ವಳ್ಗೆ… ಜಯವಾಗ್ಲಿ…
ಕಳ್ರಗೆ ಸುಳ್ರೆಗೆ ಅತ್ಯಾಚಾರಿಗಳಿಗೆ… ಧಿಕ್ಕಾರ….
ತಾಯ್ಗಿಂಡ್ರಿಗೆ ಕುಡ್ಕುರ್ಗೆ….   ಧಿಕ್ಕಾರ…

ಸ್ತ್ರೀ ಶಕ್ತಿಗೇ ….ಜಯವಾಗ್ಲಿ…’ ಮೂಲೋಕ ಸೆಲೆವೋಗಂಗೇ ಕಲ್ಲವ್ವ, ಸೋಮಣ್ಣ….ದೊಡ್ಡೆಲ್ಲೆಪ್ಪ ಜಂಟಿಯಾಗಿ, ವಕ್ಕೋರ್ರಿನಿಂದ ಕೂಗಿದ್ರು, ಜನ್ರ ಕಡೆಯಿಂದ ಕೂಗ್ಸಿದ್ರು… ತಪ್ಡೆಗ್ಳು… ವುರ್ಮೆಗ್ಳು, ಕೊಂಬು, ಕಾಳೆ, ಶಂಖ, ಜಾಗ್ಟೆಗಳೂ ಅಬ್ರಿಸಿ ಬೊಬ್ಬಿಯಿಟ್ಟು, ಮೆರ್ವುಣ್ಗೆ ಕೇಳ್ಗಳಕೇರಿಯಿಂದ ಮೊದಲಾಗಿ…. ಮೇಗ್ಳಕೇರಿ, ವುಪ್ಪಾರೊಣಿ, ಕ್ವರುಚ್ರು ವೋಣಿ….ತುರುಕ್ರುಗೇರಿ… ಅಷ್ಟರಲ್ಲಿ ಮೆರ್ವುಣ್ಗೆ ನಿಂತಿತು! ಜನ್ರು ಆತಂಕಗೊಂಡ್ರು… ರಾಂಪುರ್ದ ಜನ್ರು… ಖಾನ್ಗೆಳಟ್ಲೆ ಯೆಂಡಾ… ತತ್ರಾಣ್ಗೆಟ್ಲೆ ಭಟ್ಟಿ ಸಾರಾಯ್ನಿ ತಂದ್ರು. ಕತ್ಗೆಳ್ಗೇ, ಜನ್ರಿಗೆ ಕುಡ್ಸಿದ್ರು! ’ಯಿದು ಕಲ್ಲವ್ವ ಮಾತಾಯಿಯ ಸೇವಾರ್ಥ….’ ಯೆಂದು ಜನ್ರು ಕುಣಿದ್ರು…..

ಮೆರ್ವುಣ್ಗೆಗೇ ವಸ್ಸಾಕ್ತಿ, ವುರ್ಪು, ವುತ್ಸಾಹ, ಕೆತ್ತು ಕುಡ್ದಿದ್ದರಿಂದ್ಲೆ…..ಕಳ್ಬೆಂತು! ಮೆರ್ವುಣ್ಗಿ ಆಮ್ಗೆತಿಯಲ್ಲಿ ಕುಣಿತಾ… ಕುಡಿತಾ.. ಕೂಗ್ತಾ… ಗಾಣ್ಗಿರಬಾವಿಕಡ್ಗೆ… ವೂರ್ಗಾಳ್ರ ಬಾವಿ, ಗಾವೇ ಮರ, ಮನೆಯಿಂದ್ಲಾರ್ಮುನೆ, ವಡ್ಕಮ್ಮಾರು ಮನೆ…. ಬೆಳ್ವಿನ್ಮರ, ವೋಣಿಯಿಂದಾರು ಮನ್ಪೆಳ್ಸಿ… ವೂರು ಬಾಗ್ಲುತನ್ಕ, ಬಂದು ನಿಂತಿತು! ಕಲ್ಲವ್ವ ಮಾತಾಯಿ, ಮಾರುತಿ ಜರ್ರಾನಪ್ಪ, ರಾಜಪ್ಪ, ಬಾಬು… ಯಿವ್ರೆಲ್ಲ… .ಯೀ ಮೆರ್ವುಣ್ಗೆಯ ಸಂಪೂರ್ಣ, ಮೇಲುಸ್ತುವಾರಿ ಕೈಗೆ ತಗಂಡಿದ್ದರಿಂದ… ಗೆರೆಗೀಸ್ದಿಂಗೇ ಸಿಸ್ತುಬದ್ಧವಾಗಿ, ಅಚ್ಕುಟ್ಟಾಗಿ… ಸಾಗಿ… ನಿಲ್ಲುವಲ್ಲಿ … ನಿಂತಿತು!

’ಮಾಜನ್ರೇ ಯಿಲ್ಗೆ ಮೆರ್ವುಣ್ಗೆ ಮುಕ್ತಾಯವಾಯಿತು! ಯೀಗ ವೂರು ಗೌಡ್ರು ಪ್ರಹ್ಲಾದ್ರೆಡ್ಡಿ… ಬಿಟಿಯಸ್ ಕುಲ್ಕರ್ಣಿ, ಶಾನುಭೋಗ್ರು ಕಪ್ಪೂರು ಬಿ. ಸೋಮಶೇಖರಯ್ಯ,  ಮರ್ಳುಸಿದ್ಧಯ್ಯ … ಮಠದ ಸ್ವಾಮ್ಗಿಳಾದ ಬಸವಲಿಂಗಸ್ವಾಮಿ…. ಬಿ.ಶಿವಮೂರ್ತಿಸ್ವಾಮಿಗಳೂ…ನ್ಯಾಯ ತೀರ್ಮಾನ್ಸಿಲು ಆಗ್ಮಿಸ್ವಂತೆ ಯೀಗಾಗ್ಲೇ ನಾ ಯೇರ್ಪಾಟು ಮಾಡಿದ್ದೇನೆ. ಆಗೋ… ಅವ್ರೆಲ್ಲ ಮಾಡ್ಮಿನೆಯಿಂದ ವಟ್ಗೇ ಬಂದೇ ಬಿಟ್ರು ಸುಂಕಿರೀ….’ ಯೆಂದು ಕಲ್ಲವ್ವ, ಯಲ್ರುನೂ ವಿಜ್ಞಾಪ್ಸಿದ್ಲು.

ಕಲ್ತೆ ಜನ್ರು… ತಲ್ತೆಲ್ಗೊಬ್ರು ಮಾತಾಡತೊಡ್ಗಿದ್ರು….

’ಮಾಜನ್ರೇ… ನೀವ್ನಿವೇ ನ್ಯಾಯಾವಾದ್ಗಿಳೂ, ನ್ಯಾಯಮೂರ್ತಿಗಳೂ…. ತೀರ್ಪುಗಾರರೂ… ಆಗ್ಬೇಡ್ರೀ….! ನಮ್ಮತ್ರ ನೀವೆಲ್ಲ ಬಂದ್ರಿಂದ್ಮೇಲೆ ದ್ಯಾಸಂದ್ರದ ಸಂತೆಯಲ್ಲ. ಯಲ್ಲರು ತೆಪ್ಗಿರ್ರೀ….. ತಲ್ತಾಲಾಂತ್ರ, ವಂಶ ಪರಂಪರಾನುಗತವಾಗಿ, ನಮ್ಗೇ ಆ ದೇವ್ರು ಗ್ರಹಿಸ್ವು ಶಕ್ತಿ, ಯುಕ್ತಿ ನೀಡಿದ್ದಾನೆ. ಕಿರ್ದಿರಲ್ಲಿ ಯಿರ್ದಿನ್ನು ಯೇಳ್ವು ಕಲೆ ಬಳ್ವುಳಿಯಾಗಿ ಬಂದೈತೆ! ಯೀವತ್ತು ವಿಶೇಷವಾಗಿ ಬಿ. ಬಸವಲಿಂಗಸ್ವಾಮಿಗಳು ಆಗಮ್ಸಿವರಿದ್ರು. ಅವ್ರು ಪ್ರವಾಸದಲ್ಲಿರ್ವುದರಿಂದ….ಮರಿಸ್ವಾಮ್ಗಿಳಾದ ಬಿ. ಶಿವಮೂರ್ತಿಸ್ವಾಮ್ಗಿಳು ಸಾನಿಧ್ಯ ವಹಿಸಿರ್ವುರು. ಯೀಗಾಗ್ಲೇ ನಮ್ತಾಳ್ವಾರ ಮೃತ್ಯುಂಜಯ, ಅಡ್ಡಾಡಿ ಪ್ರಥಮ ಮಾಹಿತಿ ತಂದು, ನಮ್ಗೊಪ್ಸಿದ್ದಾನೆ. ಅವ್ನನ್ನೇ ನಂಬಿ, ನಚ್ಚಿ ಕೈಕಟ್ಟಿ ಕುಳ್ತಿಲ್ಲ! ನಮ್ದೇ ರಹಸ್ಯ ಪದ್ಧತಿ ಪರಿಪಾಲ್ನೆ ಯಿದೆ. ಅದ್ರಂತೆ… ಶತಶತಮಾನ್ಗಳಿಂದ ತುಳ್ತಿಕ್ಕೊಳ್ಗಾಗಿ, ಅವಮಾನಿತರಾದ ಜನ ಬರೀ ಬಾಯಿಬಿಡುತ್ತಿಲ್ಲ. ಮಾಡುತ್ತಿಲ್ಲ….ಕೈಗೆ ವನ್ಕೆಯೇನು? ಯಿನ್ನೂ ಯೇನೇನೋ… ಕೈಗೆತ್ತಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ಬೇಸ್ರದ ಸಂಗತಿಯೆಂದ್ರೆ…ಅಂದು-ಬ್ರಿಟಿಷರ ವಿರುದ್ಧ! ಯಿಂದು-ನಮ್ಮ ನಮ್ಮ ಜನ್ರವಿರುದ್ಧ! ಯೀ ನಮ್ಮ ದುರ್ಗುವ್ವ ಯಾವ ಗಂಡ್ಮುಕ್ಳು ಮಾಡ್ದೆಯಿರ್ವು ಘನಕಾರ್ಯವನ್ನೇ ಮಾಡಿರ್ವುಳಲ್ದೆ, ಗಂಡ್ಸತ್ತ್ಮೇಲೆ ಯೆಂಡ್ತಿ ಬುದ್ಧಿವಂತೆ ಯೆಂಬಂತೆ… ತನ್ಪಾಲ್ನಿ ವಲ, ಗೆದ್ದೆ, ತ್ವಾಟ, ಗುಂಡೇರ್ಹಳ್ದ ಬೀಳ್ಬಿದ್ದ ಅತ್ಕರೆ ರಿಜ್ಲು ಜಾಲಿ ಬೆಳ್ದೆ ಯರ್ವಿಲ್ನ ಬಂಗಾರ್ಮಾಡ್ದಿಂಗೇ ಮಾಡಿ… ವುತ್ತಿ, ಭಿತ್ತಿ, ವುತ್ತ್ಮ, ಬೆಳೆ ತೆಗ್ದು, ಆದರ್ಶ ಮಾದ್ರಿ ರೈತ ಮಹಿಳೆಯೆಂಬ, ರಾಜ್ಯ ಕೃಷಿ ಪ್ರಶಸ್ತಿಗೆ, ಯೀ ಸಾರಿ ಆಯ್ಕೆಯಾಗಿ… ವಂದ್ಸಾನ, ಮಾನ…. ಕೀರ್ತಿ… ಪಡೆದಿರ್ವು ಯೇಕೈಕಾ ಯೆಣ್ಮುಗ್ಳು! ಯಿವತ್ತು ನಿಮ್ಮೆಲ್ರ ಪರ್ವಾಗಿ, ಅಭಿನಂದ್ಸಿತ್ತೇನೆ, ಗೌರ್ವಿಸುತ್ತೇನೆ. ಯೀಗ ದುರ್ಗುವ್ವ ತನ್ನ ದೂರು ಮಂಡ್ಸಿಲಿ…’ ಯೆಂದು, ವೂರುಗೌಡ್ರು ಪ್ರಹ್ಲಾದ್ರೆಡ್ಡಿ, ಪದ್ಧತಿಯಂಗೆ ಮಾತ್ನಿ ಕೀಲುಗುದ್ರೆ ತಿರ್ವಿಕುಂತ್ರು.

ದುರ್ಗುವ್ವ ಯೆದ್ದು ನಿಂತ್ಲು… ಸಿಂಹನಾದದಲಿ….’ಮಾಜನ್ರೇ….. ವೇದ್ಕ್ಮೇಲೆ ಪವಡ್ಸಿರ್ವು ಗಣ್ಯಮಾನ್ಯರೇ…ಸಭೆಗೆ ವಂದ್ಸಿ ನನ್ಮಾತನ್ನು ಮುಂದ್ವುರ್ಸಿತ್ತೇನೆ….. ನಮ್ಮ ಕೇರಿಯ ಮಣೆಗಾರರಾದ ಕರಿಯಣ್ಣ, ಮರಿಯಣ್ಣ, ನನ್ನಳಿಯ ಬಜ್ಜಿಯ, ವೂರ್ಗಾಳ್ರಾದ… ಯಿಂದ್ರಸೇನ್ರೆಡ್ಡಿ, ದಾನ್ರೆಡ್ಡಿ.. ಸೇರ್ಕೊಂಡು, ನಮ್ಮ ಕಣ್ದಾಕೆ ಅತಿಕ್ರಮಣ, ಅಕ್ರಮ ಪ್ರವೇಶ ಮಾಡಿ, ಕಳ್ತನದಲಿ, ಕುಸ್ಮೆಬಣ್ವೆನ ತುಳ್ಸಿ, ಕೇರಿ, ತೂರಿ, ಐದಾರು ಚೀಲ್ಗಳ್ಗಟ್ಲೆ, ರಾಶಿ ಮಾಡ್ದಿನ ತಪ್ಪು ಅಂತಾ, ಕೇಳಾಲೋದ, ನನ್ಮೇಲೆ ದುಂಡಾವರ್ತನೆ, ಬಲತ್ಕಾರ, ಮಾನಭಂಗ, ಕೊಲ್ಗೆ ಪ್ರಯತ್ನಿಸಿ…. ವಡಿ, ಬಡಿ, ತಡಿ, ಕಡಿಗೆ ಯತ್ನಿಸಿ….ಸೀರೆ, ಕುಬ್ಸಾ ಹರಿದು, ಅಂಡ್ವಾರ್ನ ಪುಂಡಿಪಲ್ಗೇ… ಕಾರಣರಾಗಿರ್ವುರು! ನನ್ನ ಪುಣ್ಯ ನೆಟ್ಗಿದೆ. ಅದೃಷ್ಟ ಗಟ್ಗಿದೆ. ಆಕಸ್ಮಿಕವಾಗಿ ಬದುಕುಳಿದಿದ್ದೇನೆ! ಬೇವ್ರು ಸುರ್ಸಿ ಗಳ್ಸಿದ್ದು ಕೊನೆತನ್ಕಾ ಕಳ್ತಾನಾ, ಸುಳ್ತಾನಾದಿಂದ ಗಳ್ಸಿದ್ದು ಮನೆತನ್ಕಾ…ಯೀ… ನನ್ನ ಮಾನ, ಪ್ರಾಣ, ಆಸ್ತಿ…. ವುಳ್ಸಿಕೊಳ್ವು ವೋರಾಟ್ಟಿಲಿ….. ಯಿವ್ರ್ನು ಯೀ ಸ್ಥಿತ್ಗೆ ತಂದೀನಿ! ಯಿಲ್ಲಾ…..ಯಿವ್ರ್ನು ನನ್ನ ಜೀವತಿಂತಿದ್ರು…. ಯಿವ್ರ ರಾಕ್ಷಸೀ ಕೃತ್ಯಕ್ಕೆ ಯೇನು ಶಿಕ್ಷ ಕೊಡ್ಮಾಡ್ವಿರೋ….ಅದ್ನಾ….ದೈವ್ದವ್ರಿಗೆ ಕೈಬಿಟ್ಟು, ನನ್ನ ಮಾತ್ಗೆ ವಿದಾಯ ಯೇಳ್ತೇನೆ…. ಜೈಹೋಯಿಂಡಿಯಾ…’ ಯೆಂದು ಕೂಗಿ, ಕುಳಿತ್ಲು.

ಕಲ್ಲವ್ವ ಮಾತಾಯಿ, ಗಲ್ಗಾಲಾ ಗೊಂಬೆ, ಬಾಯಿ ಬೊಂಬಾಯಿ, ಛಂಗ್ನೇ ಜಿಂಕ್ಮೆರಿಯಂಗೆ ಯೆದ್ನಿಂತ್ಲು! ’ಮಾಜನ್ರೇ….ವೇದ್ಕ್ಮೇಲೆ ಆಸೀನ್ರಾಗಿರ್ವು ಸರಪಂಚ್ರೇ…. ಯೀವತ್ತು ನಾವೆಲ್ಲ ಗರ್ವದಿಂದ, ಬಾಳ ಯೆಮ್ಮೆಯಿಂದ, ಭೀಗ್ವು ದಿನವಾಗಿದೆ. ಯೆಣ್ಣು ಯಾವುದ್ರಲ್ಲಿ ಕಮ್ಮಿಲ್ಲ, ದುರ್ಗುವ್ವ ಮತ್ತೊಮ್ಮೆ ನಿರೂಪ್ಸಿ…ಕಟ್ಟಕಡೆಯ್ವಳು ಮೊತ್ತ ಮೊದ್ಲೆನೆಯ್ವಳಾಗಿದ್ದಾಳೆ. ಯೀಗ ವೂರ ಗೌಡ್ರು ಪೌರಸನ್ಮಾನವಾಗಿ ’ ವೀರ್ವನ್ತೆ ವನ್ಕೆ ದುರ್ಗುವ್ವ….’ ಯೆಂಬ ಗೌರ್ವ ಪ್ರಶಸ್ತಿ ನೀಡ್ಲು… ಅದನ್ನು ದುರ್ಗುವ್ವ ಸ್ವೀಕರ್ಸಿಲು ಕೋರುವೆ’ ಯೆಂದು… ಸಭೆಗೆ ವಂದ್ಸಿ. ಮಾತು ಮುಗ್ಸಿದ್ಲು.

ದೊಡ್ಡೆಲ್ಲೆಪ್ಪನ್ಗೆ ಸುಮ್ನೇನ್ರಿಕಾಗ್ಲಿಲ್ಲ. ವುದ್ದೂಕ ಸಭೆಯ ಮುಂದೆ ಯೆದ್ನಿಂತ!

’ಮಾನ್ಯರೆ, ವೇದ್ಕ್ಮೇಲಿರ್ವು ಗಣ್ಯ ಮಾನ್ಯರೇ…. ಯೀವತ್ತು ದುರ್ಗುವ್ವಳನ್ನು ಗೌರ್ವಿಸಿ, ಸನ್ಮಾನ್ಸಿದ್ದು…..ಹಡ್ದೆವ್ವಳನ್ನು, ಭಾರತಮಾತೆಯನ್ನೇ ಸತ್ಕರ್ಸಿದಂಗಾಗಿದೆ! ಯಿಷ್ಟು ಮಾಡಿ, ಸುಂಕಾದ್ರೆ, ಯೆಣ್ಣುಕುಲಕ್ಕೆ ಅವಮಾನ ಮಾಡ್ದಿಂತೇ… ಮದ್ಲು ಯೀ ಐವರ್ನ ಪೊಲೀಸ್ಸಿಗೆ ವಪ್ಸಿ… ಯಿಲ್ಲಾ ಪುಂಡ್ಗುಂದಾಯ ವಿಧಿಸಿ, ಗಡಿಪಾರ್ನಿ ಶಿಕ್ಷಿ ವಿಧಿಸ್ರೀ, ದುರ್ಗುವ್ವನ್ಗೆ ಸಂಪೂರ್ಣ ರಕ್ಷಣೆ ನೀಡ್ಲು…. ಸಭೆಗೆ ವಿಜ್ಞಾಪ್ಸಿಕೊಳ್ತೇನೆ’ ಯೆಂದು, ತನ್ಮಾತನ್ನು ಮುಗ್ಸಿ ಕುಂತ.

ಜನ್ರು ವಕ್ಕೊರ್ಲಿಂದ ’ಅವ್ದು ಅವ್ದು….’ ನಮ್ಮ ದೊಡ್ಡೆಲ್ಲೆಪ್ಪ ಯೇಳ್ದಿಂತೇ ತೀರ್ಪು ನೀಡ್ರೀ….’ ಕೂಗಿ, ಸಿಳ್ಳಿ, ಕೇಕೆ ಹಾಕಿ, ಸ್ವಾಗತ್ಸಿತು…. ಸರಪಂಚ್ರ ಮಕ ಕಪ್ಪಿಟ್ಟಿತು. ಕುಂತಲ್ಲೆ ಪ್ರಸ್ವವೇದ್ನೇ ಅನುಭವ್ಸಿದ್ರು….

ಗಟ್ಟಿ ಧೈರ್ಯ ಮಾಡಿ, ವೂರು ಗೌಡ್ರು ಪ್ರಹ್ಲಾದರೆಡ್ಡಿ, ಯೆದ್ದು ನಿಂತು, ’ಮಾಜನ್ರೇ ನಮ್ಮನ್ನು ನೀವೆಲ್ಲರು ಅರ್ಥಮಾಡ್ಕೊಂಡ್ರಿ ಅಂತಾ ತಿಳ್ದಿದ್ದೇವೆ. ನಿಮ್ಮನ್ನು ಬಿಟ್ಟು, ನಾವಿಲ್ಲ. ತಪ್ಪು ತಿಳ್ಬೇಡ್ರೀ… ಬಡ್ದಿವ್ರ್ನ, ತುಳ್ದಿವ್ರ್ನ ಯಿನ್ನೆಲ್ಲಿಯತನ್ಕ ಹಿಂಸಿಸುವ್ರಿ? ಕುರಿ ಮೇದಲ್ಲಿ ವುಲ್ಲಿಲ್ಲ. ದುರ್ಗುವ್ವ ಶಿಕ್ಷಿಸಿದಲ್ಲಿ ಯೇನಿಲ್ಲ! ನಮ್ಮೂರ್ಗೆ ಯೀ ತನ್ಕ ಪೊಲೀಸ್ ನವ್ರು ಕಾಲಿಟ್ಟಿಲ್ಲ. ಯಿಡೋದೂ ಬೇಡಾ. ದುರ್ಗುವ್ವ ಯೆಣ್ಣಲ್ಲ. ಯೀ ವೂರ್ಕೇರ್ಗೆ ಕಣ್ಣು. ಶಕ್ತಿ, ಭೋಗ ಮರ್ತು, ತ್ಯಾಗಿಯಾಗಿ, ಆದರ್ಶ ಮಹಿಳೆಯಾಗಿ, ದಿಟ್ಟೆ ವೋರಾಟಗಾರ್ತಿಯಾಗಿ, ಯಾವ ರವ್ರಾವಾ ನರ್ಕ ಕೂಪ್ದಲ್ಲಿ, ಕೊಡ್ಲಾರ್ದಾಂಥಾ ಗುರುತರವಾದ ಶಿಕ್ಷೆ ನೀಡಿರುವುದರಿಂದ, ಯಿವ್ರಾ ಪರ್ವಹಿಸಿ, ಯೀ ತನ್ಕ ಯಾರೊಬ್ರು ಮುಂದ್ಬೆಂದಿಲ್ಲಾವೆಂದ್ರೆ…. ಅಂಗವಿಕಲರಾಗಿ, ಜೀವಂತ ಶವವಾಗಿ, ಭಿಕ್ಕಿ ಬೇಡಿ, ಪಂಚಾಯ್ತಿ ಕೃಪಾಪೋಷಿತರಾಗಿ, ವಟ್ಟೆ, ಬಟ್ಟೆ ವರ್ಲಿ, ತ್ರಿಶಂಕು ಸ್ವರ್ಗ ಅನುಭವ್ಸಿಲಿ. ವುರ್ದಿವ್ರಿಗೆ ಅರ್ಧ ವೊಳ್ಗೆಯೆಂಬುದು ಕಟ್ಟಿಟ್ಟ ಬುತ್ತಿ! ಮಾಡ್ದಿಣ್ಣುವ್ರು…. ಯೀ ಪ್ರಕೃತಿಗೆ ಕ್ಷಮಾಗುಣವಿದೆಯಾದ್ದರಿಂದ, ಸಭೀಕರೂ…. ಅದ್ರಾಲ್ಲಿಯೂ ವೀರ್ವನ್ತೆ, ನಮ್ಮ ವನ್ಕೆ ದುರ್ಗುವ್ವ, ಕ್ಷಮಾ ಮಾಡಿರ್ವುಳೆಂದೇ ಭಾವ್ಸಿ….. ಯೀ ಪ್ರಕರಣವನ್ನು ಯಿಲ್ಲಿಗೆ, ಮುಕ್ತಾಯಗೊಳ್ಸಿದ್ದೇವೆ! ಜೈ! ಹೋ…..ದುರ್ಗುವ್ವ! ಜೈಹೋ ಯಿಂಡಿಯಾ…’ ಯೆಂದು. ಮೂರ್ಸಾರಿ ಕೂಗಿ… ಸಭೆಯನ್ನು ಮುಕ್ತಾಯಗೊಳ್ಸಿದ್ರು….

ಯಿತ್ತಾ….. ಜನ್ರು, ಜಯಘೋಷ ಮಾಡ್ತಾ……ದುರ್ಗುವ್ವನ ಬಳಿ ಬರ್ವು ದೃಶ್ಯ, ಬಯ್ಲು ತುಂಬಿತು…..
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಕ್ಷಿ ಪುರೋಹಿತರು
Next post ಮಿಂಚುಳ್ಳಿ ಬೆಳಕಿಂಡಿ – ೨೯

ಸಣ್ಣ ಕತೆ

 • ದೇವರು

  ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

 • ಪಾಠ

  ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

 • ಒಂಟಿ ತೆಪ್ಪ

  ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

 • ರಾಮಿ

  ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

 • ಅಮ್ಮ

  ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

cheap jordans|wholesale air max|wholesale jordans|wholesale jewelry|wholesale jerseys