ಪಬ್ಲಿಕ್ಕೇ ಇರಲಿ ಗಾರ್ಡನ್ನೇ ಇರಲಿ
ವಿ.ಐ.ಪಿ ಶಿಲಾಮೂರ್ತಿಗಳ ನೆತ್ತಿಯಮೇಲೆ
ತಮ್ಮ ಮಲಮೂತ್ರಗಳಿಂದ ಅಭಿಷೇಕ ಮಾಡಿ
ಇಂಪಾಗಿ ಚಿಲಿಪಿಲಿಸುತ್ತ
ಹುಲ್ಲು ಏರಿಸಿ
ಹುಳ ಹುಪ್ಪಡಿ ನೈವೆದ್ಯಮಾಡಿ
ನಿತ್ಯ ಸೇವೆಮಾಡಿ
ಕೃತಾರ್ಥರಾಗುತ್ತವೆ ಪಕ್ಷಿಗಳು.
*****