ಅಕ್ಕಿಕಾಳಿನಷ್ಟು ಕಾರು ತಯಾರಿಸಿದ ಜಪಾನ್

ಅಕ್ಕಿಕಾಳಿನಷ್ಟು ಕಾರು ತಯಾರಿಸಿದ ಜಪಾನ್

ಜಪಾನ್ ದೇಶವು ಚಿಕ್ಕದಾದರೂ ವೈಜ್ಞಾನಿಕವಾಗಿ ಬಹಳ ಶ್ರೇಷ್ಠ ಮಟ್ಟದಲ್ಲಿದೆ. ಪ್ರತಿದಿನವೂ ಅಲ್ಲಿ ವೈಜ್ಞಾನಿಕವಾಗಿ ಏನಾದರೊಂದು ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಕಾರು ತಯಾರಿಕೆಯಲ್ಲಿ ಬಹಳ ಕಾಲದಿಂದಲೂ ಮೊದಲ ಸ್ಥಾನಗಳಲ್ಲಿ ಇದೆ. ಪುಟಾಣಿ ಗಾತ್ರದ ಯಂತ್ರಗಳ ಸೃಷ್ಟಿಯಲ್ಲಿಯೂ ಈ ದೇಶ ಎತ್ತಿದ ಕೈ. ಈಗ ಎಲ್ಲದಕ್ಕೂ ಮುಂದೆ ಹೋಗಿ ಅಕ್ಕಿಕಾಳಿನ ಗಾತ್ರದಲ್ಲಿ ಒಂದು ಚಲನ ಶೀಲ ಕಾರೊಂದನ್ನು ತಯಾರಿಸಿ ಬಿಟ್ಟಿದೆ. ಇದು ಮನರಂಜನೆ, ಅಥವಾ ಆಟಿಗೆ ವಸ್ತು ಅಲ್ಲವೇ ಅಲ್ಲ. ಕಾರಿನೊಳಗೆ ಇರಬೇಕಾದ ಎಲ್ಲ ಬಿಡಿಭಾಗಗಳು ಯಂತ್ರಗಳು, ಸೀಟುಗಳು, ಎಲ್ಲವೂ ಇವೆ. ಇದರಲ್ಲಿಯ ಬಿಡಿಭಾಗಗಳನ್ನು ದುರ್ಭೀನು ಹಾಕಿಯೇ ನೋಡಬೇಕು.

ಇಂಥಹ ಕಾರುಗಳನ್ನು ಜಪಾನಿನ “ನಿಪೊಂಡೆನ್ಸೊ” ಕಂಪನಿಯು ತಯಾರಿಸುತ್ತಿದ್ದು ಈ ಕಾರುಗಳ ವೇಗ ಒಂದು ಸೆಕೆಂಡಿಗೆ ೫ ಸೆಂಟಿಮೀಟರ್‌ಗಳಷ್ಟು ಚಲಿಸುತ್ತದೆ. ಈ ಕಾರಿನಲ್ಲಿ ೨೪ ಭಾಗಗಳಿದ್ದು ೫ ಭಾಗಗಳಿಂದ ರಚಿತವಾದ ಮೋಟಾರುಗಳನ್ನು ಒಳಗೊಂಡಿದೆ. ೧೦ ವರ್ಷಗಳ ಸಂಶೋಧನೆ ಈ ಕಾರಿನ ತಯಾರಿಕೆಯಲ್ಲಿ ಹಿಡಿದಿದೆ. ಈ ಸಂಶೋಧನೆಗೆ ತಗುಲಿದ ವೆಚ್ಚ ೨೫ ಕೋಟಿ ಡಾಲರ್‌ಗಳು, ಒಂದು ಘನಸೆಂಟಿ ಮೀಟರ್‌ಗ್ರಾತಕ್ಕಿಂತಲೂ ಚಿಕ್ಕಾದಾದರೂ ಈ ಕಾರು ಸಮರ್ಥವಾಗಿ ನಿರ್ವಹಿಸಬಲ್ಲ ಯಂತ್ರಗಳ ಅಭಿವೃದ್ಧಿಯೇ ಮುಖ್ಯಗುರಿ, ಎಂದು ಸಂಶೋಧಕರು ಹೇಳುತ್ತಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕತ್ತಲೆ ಬೇಕು
Next post ಎತ್ತು ಕಟ್ಟಿದೆ

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…