ಮನೆಕೆಲಸಕ್ಕೆ ಬರುತಿದ್ದ ಇಪ್ಪತ್ತು ವರ್ಷದ ಸೆಲ್ವಿಗೆ ಆಂಗ್ಲ ಭಾಷೆಯ ಮೋಹ.
“ಆಂಟೀ ಓಪನ್ ದ ಡೋರ್” ಎಂದು ಒಳಗೆ ಬರುತ್ತಿದ್ದ ಅವಳು ಆಂಟಿಯ ಎಲ್ಲಾ ಪ್ರಶ್ನೆಗೆ
“ಎಸ್ ಆಂಟಿ, ನೋಆಂಟಿ, ಐ ನೋ ಆಂಟಿ” ಎಂದು ಹೇಳುತ್ತಾ ಮಧ್ಯೆ ಮಧ್ಯೆ “ಥ್ಯಾಂಕ್ಸ್, ಫ್ಲೀಸ್” ಗಳನ್ನು ಸೇರಿಸುತ್ತಿದ್ದಳು.
ಕನ್ನಡ ಸಾಧಾರಣವಾಗಿ ಕಲಿತಿದ್ದ ತಮಿಳ್ ಸೆಲ್ವಿ ಆಂಗ್ಲ ಭಾಷೆಯನ್ನು ಕಲಿಯುತ್ತಿರುವುದಾದರೂ ಹೇಗೆ? ಎಂದು ನಾನು ಕುತೂಹಲದಿಂದ ಕೇಳಿದೆ. “ಆಂಟೀ, ಐ ವಾಚ್ ಲೇಟ್ ನೈಟ್ ಇಂಗ್ಲಿಷ್ ಮೂವೀಸ್ ಅಂಡ್ ಲರ್ನ್ ಎ ಲಾಟ್” ಎಂದಳು.
ಆಂಟಿ “ಓ, ಎ ಲಾಟ್” ಎಂದು ಮುಗಳು ನಕ್ಕು ಅದರ ಅಂತರಾರ್ಥ ಊಹಿಸಿದರು.
*****