ಸಮರ

ಸಿಂಬೆ ಸುತ್ತಿದ ಸಾವು ಹೆಡೆಯೆತ್ತಿ ಕಾಡುತಿದೆ
ಸುತ್ತ ಕುಣಿಯುತ್ತಿರುವ ಕನಸುಗಳ ಕೆಣಕಿ
ರಂಗುರಂಗಿನ ಬಟ್ಟೆ, ಮನದಲ್ಲಿ ಮಿಂಚು
ಗರಿಬಿಚ್ಚಿದಾಸೆಗಳ ನವಿಲ ಕಣ್ಣು.

ಮಣ್ಣ ಕಣಕಣದಲ್ಲು ಕನಸುಗಳು ಮೈನೆರೆದು
ಮೌನದಲಿ ಹರಿಯುತಿದೆ ಮುರಳಿ ನಾದ
ಹೊನಲಾಗಿ ಹೊಮ್ಮುವ ಅಲೆಯಲೆಯ ಕಚ್ಚಿ
ಹಾದರದ ಹಲ್ಲೆಗೆ ಸಮರ ಸನ್ನಾಹ

ವಾಸ್ತವದ ಉಸಿರಲ್ಲಿ ಊದಿಕೊಂಡಂಥ ಕನಸು-
ಬಿಟ್ಟಂಥ ಬೇರುಗಳ ನೆಲೆಯ ಹುಡುಕಿ
ವಿಷಗೊಡಲಿಯೇಟಿನಲಿ ತುಂಡುತುಂಡಾಗಿಸುವ
ಕಲ್ಲು ಬದುಕಿನ ಬೀದಿ ಕೊನೆಯದೆಲ್ಲಿ?

ಕೊಲೆಯಾಗಿ ಬಿದ್ದಿರುವ ಕನಸಿನಾ ಚೂರುಗಳು
ಸಾವೊಪ್ಪದೆ ಸೆಣಸುತಿವೆ, ಜೀವವೆಲ್ಲಿ?
ಕಣ್ಣ ಬೆಳಕಿಗೆ ಇಲ್ಲಿ ಕತ್ತಲೆಯ ಕಿಡಿ ಹತ್ತಿ
ಬೂದಿಯಾಗಿದೆ ನೋಟ, ಭಾವವೆಲ್ಲಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post Daniel Defoe ನೈತಿಕತೆಯ ದ್ವಂದ್ವ ವಿಚಾರಗಳು – Moll Flanders
Next post ತಮಿಳ್ ಸೆಲ್ವಿ

ಸಣ್ಣ ಕತೆ

 • ಅಜ್ಜಿಯ ಪ್ರೇಮ

  ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

 • ಕರಾಚಿ ಕಾರಣೋರು

  ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

 • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

  ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

 • ಬೂಬೂನ ಬಾಳು

  ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

 • ಕ್ಷಮೆ

  ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys