ಬೀದಿ ಬದಿಯಲ್ಲಿ ಬಿದ್ದ ಹೆಣ ನಾನು ಶತಶತಮಾನದ ಕತೆಗಾರ ಕತ್ತಲು ಬೆಳಕಿನ ಕಾಳಗ ನಡೆದು ಸಾವಿರ ಸಾವಿನ ಸರದಾರ. ರಾಜರ ನಡುವೆ ನಡೆಯಿತು ಯುದ್ಧ ಸಿಂಹಾಸನದ ಸಲುವಾಗಿ ಕುದುರೆಯ ಗೊರಸು ಕತ್ತಿಯ ಬಿರುಸು ಬಿದ್ದೆನು...
ಕೋಟೆ ಕೊತ್ತಲದಲ್ಲಿ ಕತ್ತಿ ಗೊರಸಿನ ಸದ್ದು ಒಳಗೆ ಅಂತಃಪುರದಲ್ಲಿ ರಾಣಿ ಒಂಟಿ. ಹೆಪ್ಪುಗಟ್ಟಿದ ನೆತ್ತರಲ್ಲಿ ಸೇಡು ಸೆಣಸಿನ ಹೆಜ್ಜೆ ಒಳಗೆ ಮಿಡಿಯುವ ನಾಡಿ ವಿವೇಕ ಒಂಟಿ. ಕೋಟೆ ಕಲ್ಲುಗಳಿಂದ ಕಾದ ನಿಟ್ಟುಸಿರು ಕತೆ ಬರೆಯುತ್ತಿದೆ...
ಮರಗಳು ಮಾತಾಡುತ್ತವೆ ಮನುಷ್ಯರಲ್ಲ ಎಲೆಗಳು ಅಲೆದಾಡುತ್ತವೆ ನೆಮ್ಮದಿಯಿಲ್ಲ. ನಾಲಗೆ ನಂಬದ ನೆಲದಲ್ಲಿ ತೆನೆಗಳು ತುಂಬಿದ ತಲೆಯಲ್ಲಿ ಹೂಗಳು ಅರಳದ ಎದೆಯಲ್ಲಿ ಸತ್ತವು ಮಾತು ಮನುಷ್ಯರಲ್ಲಿ. ಮರುಕ ಹುಟ್ಟಿತು ಮರಗಳಿಗೆ ಕೊಂಬೆ ಚಾಚಿದವು ನಂಬಿ ನಕ್ಕವು...
ತುಂಬಿಹುದು ತಾಯಿ ನನಗೆ ಒಂಬತ್ತು ತಿಂಗಳು ಹೇಗೆ ಹುಟ್ಟಲಿ ನಾನು ಈ ಮಣ್ಣಿನಲ್ಲಿ? ಮೇರೆ ಮೀರಿವೆ ಇಲ್ಲಿ ಜಾತಿ ಮತ ಧರ್ಮಗಳು ಹೇಗೆ ಹುಟ್ಟಲಿ ನಾನು ಈ ಹುಣ್ಣಿನಲ್ಲಿ? ತಾಯಿ ತಿನ್ನುವ ನೋವು ನನ್ನ...
ಅಕ್ಷರವೆಂದರೆ ಅಕ್ಷರವಲ್ಲ ಅರಿವಿನ ಗೂಡು ಚಿಲಿಪಿಲಿ ಎನ್ನುತ ಮೇಲಕೆ ಹಾರುವ ಹಕ್ಕಿನ ಹಾಡು ಎದೆಯಲಿ ಅರಳುವ ಸಮತೆಯ ಸಂಕಟ ಆವರಿಸಿತು ಅರಿವು ಬಾಳಲಿ ಕೆರಳುವ ಮಣ್ಣಿನ ಮಾತು ಕಟ್ಟೊಡೆಯಿತು ನೋವು ಅಕ್ಷರ ಕಲಿಯುತ ಮುರಿಯಲಿ...
ಬಿಳಿಯ ರಾತ್ರಿಗಳಲ್ಲಿ ಕರಿಯ ಮಿಂಚಾದವನು ಹಗಲು ಹರಿದಾಡುತ್ತ ಕೆಂಪು ಹೆಗಲಾದವನು ಬಿಳಿ ಕಸದ ಬಂಡಿಯನು ಹೊರಗೆಳೆಯುತ್ತ ಹೋಗಿ ಜಾರ ಜೇಲಿನ ಒಳಗೆ ಒಂಟಿ ಬಯಲಾದವನು. ಶ್ವೇತ ಸೆರೆಯಲ್ಲಿ ಸೂರ್ಯ ಕುರುಡಲ್ಲಿ ಬಿಳಿಯ ಬತ್ತಿಯ ಹೊಸೆದ...