ಮಲ್ಲಿ – ೨೭

ಮಲ್ಲಿ – ೨೭

ಬರೆದವರು: Thomas Hardy / Tess of the d’Urbervilles

ಈಚೆಗೆ ನಾಯಕನ ಜೊತಿಗೆ ಮಲ್ಲಿಯೂ ಸವಾರಿ ಹೊರಡುವುದು ವಾಡಿಕೆಯಾಗಿತ್ತು. ಅವಳು ಕುದುರೆಯ ಮೇಲೆ ಗಂಡಸಿನಂತೆ ಎರಡು ರಿಕಾಪುಗಳಲ್ಲೂ ಕಾಲು ಹಾಕಿಕೊಂಡು ಕುಳಿತುಕೊಳ್ಳುವಳು. ಅವಳಿಗೆ ಸವಾರಿ ಮೀನಿಗೆ ಈಜು ಬರುವಂತೆ ಸುಖವಾಗಿ ಸುಲಭವಾಗಿ ಬಂದಿತ್ತು. ಅವಳು ಬಂದ ಮೇಲೆ, ನಾಯಕನು ಎರಡು ಮೂರು ದಿನಕ್ಕೊಮ್ಮೆ ಹೊಳೆಗೆ ಹೋಗುವನು. ಅಲ್ಲಿ ಮಲ್ಲಿಗೆ ಈಜು ಕಲಿಸಿಯೂ ಆಯಿತು. ಇಬ್ಬರೂ ಆನಂದವಾಗಿ ಈಜುವರು

ಮಲ್ಲಿಗೆ ಯೌವನವು ಬರುತ್ತಿದೆ: ಅಂಗಾಂಗಗಳು ಸ್ಫುಟವಾಗು ತ್ತಿವೆ. ಅವಳು ಸಮವಸ್ತ್ರಗಳನ್ನು ಧರಿಸಿ ನೀರಿಗಿಳಿದರೆ ಕಂಚಿನ ಪ್ರತಿಮೆ ಯೊಂದು ನೀರಿಗಿಳದಂತಾಗಿ ನೋಡುವನರ ಕಣ್ಣು ಕೋರೈಸುತ್ತಿದೆ. ಎಳೆಯ ಮೊಗ್ಗು ಹೆಣ್ಣು ಮೊಗ್ಗಾಗುವಾಗ, ಎಳೆಯ ಕಾಯಿಯು ರಸ ಪೂರ್ಣವಾಗಿ ಹಣ್ಣಾಗುತ್ತಿರುವಾಗ ಆಗುವ ಬದಲಾವಣೆಗಳೆಲ್ಲ ಆಗು ತ್ತಿವೆ. ನಾಯಕನಂತೂ ಪೈಲ್ವಾನನ ಹಾಗೆ ಉಬ್ಬಿ ಬರುತ್ತಿರುವ ಎದೆ ಗಳನ್ನೂ ಎರಕ ಹೊಯ್ದಿಟ್ಟಂತೆ ಆಗುತ್ತಿರುವ ನಿತಂಬಗಳನ್ನೂ ತೊಡೆ ಗಳನ್ನೂ ನೋಡಲಾರ, ಆಗಾಗ ಆವೇಶನನ್ನು ತಡೆಯಲಾರದೆ ಒದ್ದೆಯ ಮೈಯಲ್ಲೇ ಅವಳನ್ನು ತಬ್ಬಿಕೊಳ್ಳುವನು. ಅವಳೂ ತಾನು ಇನ್ನೂ ಹುಡುಗಿಯಾದರೂ ಅವನ ಪ್ರೌಢ ಗಾಢಾಲಿಂಗನನನ್ನು, ಹಳೆಯ ಸವಾರನ ಆಘಾತವನ್ನು ಸಹಿಸುವ ಹೊಸ ಕುದುರೆಯಂತೆ, ಸಹಿಸು ವಳು. ಆ ದೃಢಾಲಿಂಗನದಿಂದ ಅವಳ ಮೈಯು ನೋಯುತ್ತಿರಲಿಲ್ಲ. ಸಣ್ಣ ಚೇಷ್ಟೆಗಳನ್ನು ಮಾಡಿ, ಅಲ್ಪ ತೃಪ್ತಿ ಪಟ್ಟುಕೊಂಡು, ಹೆಪ್ಪು ಒಡೆಯುವುದಕ್ಕೆ ಇಷ್ಟವಿಲ್ಲದೆ ಮಡಕೆಯನ್ನು ಮುಚ್ಚಿ ಇಡುವ ಗೃಹಿಣಿ ಯಂತೆ, ಅವನು ಸುಮ್ಮನಾಗುವನು. ಅವಳೂ ಅದಷ್ಟನ್ನೂ ಒಪ್ಪಿ ಕೊಂಡು, ಇನ್ನಷ್ಟನ್ನೂ ಸಹಿಸಬಲ್ಲವಳಂತೆ ತನ್ನಾಸೆಯನ್ನು ತೋರಿ ಸಿಯೂ ಸುಮ್ಮನಾಗುವಳು. ಕಾಮಚೇಷ್ಟೆಗಳಲ್ಲಿ, ಅಥವಾ ಆ ಶಾಸ್ತ್ರದವರ ಮಾತಿನಲ್ಲಿ ಬಾಹ್ಯರತಿಯಿಂದ ಮನಸ್ಸು ಸುಖಪಡುವುದು ನಿಜ ಎಂದು ಬಲ್ಲ ರಸಿಕರು, ನಾಯಕನ ಈ ಒಂದು ವರ್ಷದ ಸೌಖ್ಯ ವನ್ನು ಅಳತೆ ಮಾಡಿ, ‘ ಹೌದು ಅವನು, ಸೂಳೇಮಗ, ಅದೃಷ್ಟ ಶಾಲಿ’ ಎಂದು ಒಪ್ಪಿಕೊಳ್ಳುವರು : ಅದು ತಮಗಿಲ್ಲವೆಂದು ಅಸೂಯೆ ತಾನಾಗಿ ಬಂದು, ಅವರ ಎದೆಯಲ್ಲಿ ಇದ್ದ ಉಸಿರನ್ನು, ಸರಳು ಹಾಕಿ ಹುತ್ತದಲ್ಲಿದ್ದ ಹಾವನ್ನು ಈಚೆಗೆ ಎಳೆಯುವಂತೆ ಎಳೆಯುವರು.

ನೀವು ಯಾವಾಗಲಾದರೂ ಮಾವಿನ ತೋಟಕ್ಕೆ ಹೋಗಿದ್ದೀ ರೇನು? ಸಂಜೆಯ ಬಿಸಿಲು ಎಲ್ಲೆಲ್ಲೂ ತನ್ನ ಹೊಂಬಣ್ಣವನ್ನು ಬೊಳೆದು ಕಣ್ಣಿಗೆ ಕಂಡುದೆಲ್ಲವೂ ರಮ್ಯವಾಗುವಂತೆ ಮಾಡಿರುವಾಗ, ಅಂಬರದಲ್ಲಿ ತೂಗುವ ಚಿನ್ನದ ಚೊಂಬಿನಂತೆ ಇರುವ ಮಾವಿನಕಾಯನ್ನು ಹಿಡಿದು ಕೊಂಡು, ಅದನ್ನು ಕೊಂಚ ಬಲವಾಗಿ ಎಳೆದರೆ ಕಿತ್ತು ಹೋಗುವುದೆಂದು ಗೊತ್ತಾಗಿರುವುದರಿಂದ, ಅದನ್ನು ಹಗುರವಾಗಿ, ಹಿಡಿದುಕೊಳ್ಳದೆ ಹಿಡಿಯದ ಕೈಯಲ್ಲಿ ಅದನ್ನು ತೂಗುವವರಂತೆ ಇಟ್ಟುಕೊಂಡು ಆಟ ವಾಡಿದ್ದೀರೇನು? ಆ ಬಣ್ಣ ಕಣ್ಣನ್ನು ಸೆಳೆಯುತ್ತದೆ : ಅದರ ಮಾಗಿದ ಹುಳಿಯವಾಸನೆ ಗಮ್ಮೆಂದು ಬಂದು ಮೂಗನ್ನು ಹಿಡಿದು ಜೊತೆಗೆ ಮನಸ್ಸಿನಲ್ಲಿ ಮನೆಮಾಡಿರುವ ಜನ್ಮಾಂತರಗಳಿಂದ ಬಲಿತು ಬಂದ ಚಾಪಲ್ಯವನ್ನೆಲ್ಲ, ತಿದಿಹಾಕಿ ಬೆಂಕಿಯನ್ನು ರೇಗಿಸುವ ಕಮ್ಮಾರನಂತೆ ರೇಗಿಸಿ, ‘ ತಕೊಂಡರೆ ತಪ್ಪಿಲ್ಲ: ಬಿಟ್ಟರೆ ತಪ್ಪು ನನ್ನದಲ್ಲ’ ಎನ್ನುವಾಗ, ಇರಲಿ ಇನ್ನೆರಡು ದಿನ ಇರುವೆಡೆ ಇದ್ದು ತಾನಾಗಿ ಮಾಗಲಿ, ಎಂದು ಬಿಟ್ಟು ಬಂದಿದ್ದಿರೇನು ? ನಾಯಕನು: ಮಲ್ಲಿಯ ವಿಚಾರದಲ್ಲಿ ಹಾಗಿದ್ದ.

ಮಾವಿನೆ ಹಣ್ಣಿನ ಗಡಂಗಿಗೆ ಹೋಗಿ, ಕಣ್ಣಿಗೆ ತಣಿಯುವಷ್ಟು ಜಾತಿಯ ಹಣ್ಣುಗಳನ್ನು ನೋಡಿ, ಭ್ರಮೆಬಿದ್ದು ಒಂದೋ ಎರಡೋ ತಿಂದು, ಒಂದು ಬುಟ್ಟಿ ಹಣ್ಣುತರುವ ಮನೋಭಾವ ಬೇರೆ?

” ಹಣ್ಣು ಚೆನ್ನಾಗಿದೆ : ಇನ್ನೊಂದು ಸಲ ಬರುತ್ತೇನೆ” ಎಂದು ನಾನಾ ಕಾರಣಗಳಿಂದ ಮನಸ್ಸಿನ ಚಾಪಲ್ಯವನ್ನು ಚಪ್ಪರಿಸುತ್ತಾ ಹಿಂದಿರುಗುವ ಮನೋಭಾವ ಬೇರೆ. “ಮಾವಿನ ಹಣ್ಣು ಬಹಳ ಬೆಲೆ; ಜನ ಸಾಮಾನ್ಯಕ್ಕೆ ಇದನ್ನು ತಿನ್ನುವ ಯೋಗ್ಯತೆಯಿಲ್ಲವಾದ್ದ ರಿಂದ ನನಗೂ ಬೇಡ? ಎಂದು ಕೆಲಸಕ್ಕೆ ಬರದ ಶುಷ್ಕ ವೇದಾಂತವನ್ನು ಹೇಳಿಕೊಂಡು ಹೊರಟು ಬರುನ ಮನೋಭಾವ ಬೇರೆ “ಹಣ್ಣು ಗಳಲ್ಲಿ ಮಾವಿನಹಣ್ಣು ರಾಜ.” ಎಂಬ ಭಾವನೆಯೇ ಇಲ್ಲದೆ, ಏನೋ ಅದೂ ಒಂದು ತಿನ್ನುವ ಪದಾರ್ಥ ಎಂದು ತಿನ್ನುವ ಭಾವನೆಯೇ ಬೇರೆ. “ಹಸಿದು ಹಲಸು : ಉಂಡು ಮಾವು” ಎಂಬ ವಿಚಕ್ಷಣರ ಅನುಭವದ ಮೂಟೆಯ ಮನೋಭಾವನೆ ಬೇರೆ.

ನಾಯಕನಿಗೆ ಮೊದಲನೆಯ ಮನೋಭಾವದ ಜೀವನ ತುಂಬು ಜೀವನ ಎಂಬ ಭ್ರಾಂತಿ ಬಹಳ ದಿನ ಹಿಡಿದಿತ್ತು. ಸುಮಾರು ತನ್ನ ಹದಿನಾರನೆಯ ವರ್ಷದಿಂದ ಕಾಲು ಶತಮಾನ, ‘ಇಪ್ಪತ್ತೈದು ವರ್ಷಗಳು ಅದೇ ಭಾವನೆಯಲ್ಲಿದ್ದ. ಆ ಭಾವನೆಯು ಪಕ್ವವಾಗಿ ಪದಾರ್ಥಜ್ಞಾನ ವಿವೇಕಗಳು ಪಕ್ವವಾಗಿ, ವಿಚಕ್ಷಣವಾಗಿ, ಗಾದೆಯ ಮನೋಭಾವನೆಗೆ ಬಂದು, “ಉಂಡು ಮಾವು” ಎಂಬ ಘಟ್ಟಕ್ಕೆ ಬಂದಿತ್ತು.

ಕಾಳಿದಾಸನ ದುಷ್ಯಂತ “ಬಹುವಲ್ಲಭ”ನಾಗಿದ್ದರೂ, “ಪಿಂಡ ಖರ್ಜೂರವನ್ನು ಮೆದ್ದು ಮೆದ್ದು ಕಾಡು ಹುಣಿಸೆಯ ಹಣ್ಣು ಬೇಕೆಂದವ ನಂತೆ” ಆಗಿ, ಊರಿನ ಚೆಲುವೆಯರನ್ನು, ಅಂತಃಪುರದ ಅಸೂರ್ಯಂ ಪಶ್ಯೆಯರನ್ನು ಮಧುಲೋಲುಪನಾದ ದುಂಬಿಯು ಪದ್ಮಾದಿ ಪುಷ್ಪ ಗಳನ್ನು ಸೇವಿಸುವ ವೈಖರಿಯಿಂದ, ಬೇಕೆಂದುದು ಇಲ್ಲವೆಂಬ ಕಾರ್ಪಣ್ಯ ವಿಲ್ಲದೆ ಭೋಗಿಸಿ ಭೋಗಿಸಿ, ಭೋಗ ಸ್ವರೂಪವನ್ನು ನಖಶಿ ಖಾಂತವಾಗಿ ಬಲ್ಲವನು, ಶಕುಂತಳೆಯನ್ನು ಕಂಡು ಒಲಿದು ತನ್ನ ನಮ್ರಸಚಿವನೊಡನೆ ” ಮಿತ್ರ, ಅದು ‘ಅನಾಘ್ರಾಂತಂಪುಷ್ಪಂ, ಕಿಸ ಲಯ ಮಲೂನಂ ಕರರುಹೈಃ, ಯಾರೂ ಮೂಸದ ಹುವ್ವು, ಉಗುರು ಸೋಕದ ಚಿಗುರು” ಎಂದು ಏನೇನೋ ವರ್ಣಿಸಿದ ಅಂಥವನೂ ನಾಯಕನ ಸೌಭಾಗ್ಯವನ್ನು ನೋಡಿದ್ದರೆ, ಭಲೆ ಬಡ್ಡೀಮಗನೆ ಎನ್ನುತ್ತಿದ್ದನೇನೋ? ಫುಲ್ಲಾರನಿಂದಗಳು ಮಧುಸ್ರಾವಿಗಳಾಗಿ ಉದ್ಯಾನದಲ್ಲಿ ತುಂಬಿತ್ತು. ದುಂಬಿ ಅವುಗಳನ್ನು ನಿರಾಕರಿಸಲಿಲ್ಲ. ಆದರೂ ರಸಿಕ ರಾಜನ ಚಾತುರ್ಯವನ್ನು ಮೆರೆದು, ಹಣ್ಣು ಮೊಗ್ಗೆಯನ್ನು ಹುಡುಕಿ ಕೊಂಡು ಹೋಗಿ ಚುಂಬಿಸಿ, “ನಾಳೆ ಬರುತ್ತೇನೆ.” ಎಂದು ಸೂರ್ಯಾಂ ಶುಭಿರ್ಭಿನ್ನಮಿವಾರನಿಂದಂ, ಎಂಬಂತಿರುವ. ಏರಿಬರುತ್ತಿರುವ ಚೆಲು ವಿನ ಖನಿಯನ್ನು ಬಿಟ್ಟ ಬಂದಂತೆ ಇದ್ದ ನಾಯಕನ ಸೌಭಾಗ್ಯವನ್ನು ಅವನು ಮೆಚ್ಚದೇ ಇರುತ್ತಿದ್ದನೇ ?

ಕುಮಾರ ಸಂಭವದ ಚೆಲುವುಗಾತಿ ಉಮಾದೇವಿ ಆನಾಸ ವಾಖ್ಯಂ ಕರಣಂ ಮದಸ್ಯ ಆಗುತ್ತಿರುವುದನ್ನು ನೋಡುವವರಿಲ್ಲದೆ, ಇದು ನನ್ನದು: ನನ್ನ ಉಪಭೋಗಕ್ಕೆ ಆದುದು ಎಂಬ ಆಸೆಯಿಂದ ನೋಡುವವರಿಲ್ಲದೆ, ನನ್ನ ಕೊಂಬೆಯಲ್ಲಿ ಬೆಳೆಯುತ್ತಿರುವ ಚಿಗುರು ಎಂಬ ಅಭಿಮಾನದಿಂದ ನೋಡಿಕೊಳ್ಳುವ ವತ್ಸಲೆಯರಾದ ಮಾತಾ ಪಿತೃಗಳ ಅಂಕೆಯಲ್ಲಿ ಬೆಳೆದಳು. ಮುಲ್ಲಿಯು ತದ್ವಿರುದ್ಧವಾಗಿ ರಾಣಿಯ ಪೋಷಣೆಯಲ್ಲಿ ಬೆಳೆದಳು. ರಾಣಿಯು ಪಲನಿಯ ಸುಬ್ರಹ್ಮಣ್ಯನ ಸನ್ನಿ ಧಾನಕ್ಕೆ ಒಪ್ಪಿಸುವ ಕಾವಡಿಯನ್ನು ಗೌರವದಿಂದ ಮೀಸಲಾಗಿಟ್ಟು ಕಾಪಾಡುವ ಭಕ್ತನಂತೆ ಮಲ್ಲಿಯನ್ನು, ಮಲ್ಲಮ್ಮಣ್ಣಿಯನ್ನು ಕಾಪಾಡಿ ದಳು. ಆವಳಿಗೆ ತಾನೇ ಜಡೆ ಹೆಣೆಯುವಳು : ತಾನೇ ನೀರೆರೆಯು ವಳು. ಮಣ್ಣಿನಲ್ಲಿ ಬೊಂಬೆಯನ್ನು ಮಾಡುವ ಶಿಲ್ಪಿಯು ಮಣ್ಣು ಒಣಗದಂತೆ ತಂಪಿನಲ್ಲಿಟ್ಟಿದ್ದು, ಹೆಚ್ಚು ಕಡಿಮೆಗಳನ್ನು ತಿದ್ದಿ, ತನ್ನ ಮನ ಸ್ಸಿನಲ್ಲಿರುವ ಸೌಂದರ್ಯವನ್ನು ವಾಷ್ಟು ಅಷ್ಟಾಗಿ ಹೊಯ್ದು, ಮೆತ್ತಿ, ಕೆತ್ತಿ, ದಿವ್ಯ ಸುಂದರವಾದ ವಿಗ್ರಹನನ್ನು ಮಾಡುವ, ಶಿಲ್ಪಿಯು ಆಗಾಗ, ಅಭಿಮಾನದಿಂದ ತನ್ನ ಕೃತಿರತ್ನವನ್ನು ನೋಡುವಂತೆ, ಮಲ್ಲಿಗೆ ಅಲಂಕಾರಮಾಡಿ ನೋಡುವಳು. ನಿರಾಲಂಕಾರದಲ್ಲಿ ನೋಡು ವಳು. ವಸ್ತ್ರವನ್ನುಡಿಸಿ ನೋಡುವಳು. ವಸ್ತ್ರವಿಲ್ಲದಾಗ ನೋಡು ವಳು. ತಾನೇ ನಾಯಕನಾಗಿ ಅನುಭವಿಸುವುದಾದರೆ ಎಷ್ಟು ಸಕಾಮ ವಾಗಿ ನೋಡಬೇಕೋ ಹಾಗೆ ನೋಡುವಳು. ಮೀಸಲಿಟ್ಟು ಪದಾರ್ಥ ವನ್ನು ಮೂಸಿದರೆ ಕೆಟ್ಟೀತು ಎಂಬ ಕಟ್ಟುನಿಟ್ಟಿನ ವೈರಾಗ್ಯದ ಭಕ್ತನ ಮನೋಭಾವದಿಂದ ಅವಳನ್ನು ನೋಡಿ ನಲಿಯುವಳು. ರಾಣಿಯು ಪೋಷಿಸಿ, ವರ್ಧಿಸುತ್ತಿದ್ದುದು ಬರಿಯ ಮಾತಿನ ಪಂಜರದ ಲೀಲಾ ಶುಕವನ್ನಲ್ಲ : ಕಾಮದೇವನ ಶೃಂಗಾರ ರಥವನ್ನು ಎಳೆಯುವುದಕ್ಕೆ ಬೇಕಾದ ಲೀಲಾವಾಹನವಾದ ಶುಕ ತುರಂಗಮವನ್ನು.

ಮಲ್ಲಿಯು ಹೆಜ್ಜೆ ಹೆಜ್ಜೆಗಲ್ಲ: ಗಂಟೆ ಗಂಟೆಗಲ್ಲ ಕ್ಷಣ ಕ್ಷಣಕ್ಕೂ ಬೆಳೆಯುವ ಲತೆಯಂತೆ ಬೆಳೆದಳು. ಅವಳ ಮನಸ್ಸು ತಾನು ನಾಯಕನ ಸ್ವತ್ತು ಎಂಬುದನ್ನು ಕ್ಷಣ ಕ್ಷಣವೂ ಅನುಭವಿಸುತ್ತಿತ್ತು. ವೇದಾಂತ ದಲ್ಲಿ ಖಂಜಕೀಟ ನ್ಯಾಯವನ್ನು ಹೇಳುತ್ತಾರೆ. ಅಲ್ಲಿ “ಕೀಟವು ನೋವಿ ನಿಂದ ಖಂಜವನ್ನು ಧ್ಯಾನಿಸಿ ಧ್ಯಾನಿಸಿ ” ಆದರಂತೆ ಅಗುವುದಂತೆ. ಇಲ್ಲಿ ಮಲ್ಲಿಯು ತದ್ವಿರುದ್ಧಳಾಗಿ ಬೆಳೆದಳು. ಆನಂದಕ್ಕೆ, ಸುಖಕ್ಕೆ, ಸಂತೋಷಕ್ಕೆ ಮನಸ್ಸನ್ನು ಬೆಳೆಸಿ ಪಕ್ವ ಮಾಡುವ ಶಕ್ತಿಯಿರುವುದು ನಿಜವಾದರೆ, ನಾವು ಆ ಮಾರ್ಗದವರು ಅದು ಮಲ್ಲಿಯ ಮನಸ್ಸನ್ನು ಬೆಳೆಸುವುದರ ಜೊತೆಯಲ್ಲಿಯೇ ಆದರ ಗಮ್ಯಸ್ಥಾನವನ್ನೂ ಅದಕ್ಕೆ ತೋರಿಸಿತ್ತು. ನೆರಳಲ್ಲಿ ಬೆಳೆಯುವ ಲತೆಯು ಎಷ್ಟು ಹೊರವಾಗಿ ಬೆಳೆದರೂ ಕೊನೆಯಲ್ಲಿ ಮೊಗ್ಗೆಯನ್ನು ಇಟ್ಟುಕೊಂಡು ಹೊರಡುವಂತೆ, ಮಲ್ಲಿಯ ಮನಸ್ಸು ತಾನು ನಾಯಕನ ಸ್ವತ್ತು ಎಂದು ಅಂಗೀಕರಿಸಿ ಬೆಳೆಯಿತು. ಅಜ್ಞಾತವಾಗಿ ಅವಳ ಮನಸ್ಸು ಮರವನ್ನು ಆಶ್ರಯಿಸಿದ ಲತೆಯಂತೆ, ನಾಯಕನನ್ನು ಪೂರ್ಣವಾಗಿ ಅವಲಂಬಿಸಿತ್ತು.

ರಾಣಿಯು ಮನಃಪೂರ್ವಕವಾಗಿ ಆ ಭಾವವನ್ನು ಬೆಳೆಯಿಸಿ ದಳು. ನಾಯಕನಿಗೆ ಮಧ್ಯಾಹ್ನದ ತಿಂಡಿಗೆ ಸಾಮಾನು ಮಾಡುವಾಗ ಮಲ್ಲಿಯನ್ನು ಜೊತೆಯಲ್ಲಿಕೊಂಡು, ಓರಗೆಯವಳನ್ನು ಹಿರಿಯ ಳನ್ನು ಕೇಳುವಂತೆ, ಇದಕ್ಕಿಷ್ಟು ಉಪ್ಪು ಸಾಕಾ? ಅದಕ್ಕಷ್ಟು ಸಕ್ಕರೆ ಸಾಕಾ? ಎಂದು ಕೇಳುವಳು. ರಾಮನ ಶಬರಿಯಂತೆ “ಇದಷ್ಟು ತಿಂದು ನೋಡಿ. ರುಚಿಯಾಗಿದೆಯಾ ?” ಎಂದು ರುಚಿಯನ್ನು ಕಲಿಸು ವಳು. ಆದರೆ ಅಲ್ಲಿ ರಾಮಾಯಣದಲ್ಲಿ ಶಬರಿ ತಾನು ಶುಚಿಯೆಂದು ಕೊಂಡುದನ್ನು ರಾಮನಿಗೆ ಕೊಟ್ಟಳು. ರಾಣಿಯು ಈ ಶಬರಿಗೆ ನಿನ್ನ ರಾಮನಿಗೆ ಬೇಕಾದುದು ಈ ರುಚಿ, ಅದು ಇದರಲ್ಲಿ ಇದೆಯೇ ಇಲ್ಲವೇ ನೋಡು ಎಂದು ನಾಯಕನ ರುಚಿಯನ್ನು ಮಲ್ಲಿಯ ನಾಲಿಗೆಗೆ ಕಲಿಸಿ ಕೊಟ್ಟಳು.

” ಹಾಸುಗೆಯನ್ನು ಹಾಸಿ ಬರುವಿರಾ ?” ಎಂದು ಮಲ್ಲಿಯನ್ನು ಕಳುಹಿಸಿ, ಹಿಂದೆಯೇ ತಾನೂ ಬಂದ್ಕು ಹಾಸುಗೆಯನ್ನು ಸಿದ್ಧ ಮಾಡುವ ಕೌಶಲ್ಯವನ್ನು ಕಲಿಸುವಳು. ಅಲ್ಲಿರುವ ಪಟಗಳಿಗೆ ಹೂವ್ವು ಮುಡಿಸು ವಾಗ ದಪ್ಪ ಹೂವು ಎಲ್ಲಿರಬೇಕು? ಸಣ್ಣ ಹೂವು ಎಲ್ಲಿರಬೇಕು? ಎಂಬುದನ್ನು ತೋರಿಸುವಳು. ಪುಷ್ಪಗಳನ್ನು ಗಂಧಾನುಗುಣವಾಗಿ, ಏಕವಾಗಿ ಅನೇಕವಾಗಿ, ದೂರದಲ್ಲಿ ಸಮೀಪದಲ್ಲಿ ಜೋಡಿಸುವ ವಿಧಾನ ವನ್ನು ವಿವರಿಸುವಳು. ಹಾಸುಗೆಯ ಮೇಲೆ ಹರಿದು ಹಾಕುವ ಹೂವು ಯಾವುದು? ಚೆಲ್ಲುವ ಹೂವು ಯಾವುದು? ದಿಂಬಿನ ಮೇಲೆ ಇಡುವ ಹೂವು ಯಾವುದು ? ದಿಂಬಿನ ಕೆಳಗೆ ಇಡುವ ಹೂವು ಯಾವುದು ಎಂದು ಇಟ್ಟಿಟ್ಟು ಪ್ರದರ್ಶಿಸುವಳು. ಹಾಗೆಯೇ ದೀಪಗಳನ್ನು ಇಡುವ, ದುಪ್ಪಟಿ ಕಂಬಳಿಗಳನ್ನು ಜೋಡಿಸುವ, ದಿಂಬುಗಳನ್ನು ಸುಖವಾಗು ವಂತೆ ವಿನಿಯೋಗಿಸುವ, ಕುಶಲ ವಿದ್ಯೆಯನ್ನು ಕಲಿಸಿದಳು.

ವೀಣಾವಾದನವನ್ನು ಕಲಿಸುವಾಗಲೂ ರಾಣಿಯು ಕಲಿಸಿದುದು ಸಂಗೀತ ಎನ್ನುವುದಕ್ಕಿ೦ತ ನಾಯಕನ ಮನಸ್ಸನ್ನು ಗ್ರಹಿಸುವು ದಕ್ಕೆ ಬೇಕಾದ ಸಾಧನವನ್ನು ಎನ್ನುವುದೇ ಸರಿ. “ಮೋಹನದಲ್ಲಿ ನೋಡಿ, ನಮ್ಮ ಬುದ್ಧಿಯನರಿಗೆ ಈ ಮೂರ್ಚನೆ ಬಹಳ ಹಿತ” ಎಂದು ಹೇಳಿ, ಬೇರೆ ಮೂರ್ಚಿಗಳಿಗೂ ಅದಕ್ಕೂ ಇರುವ ವ್ಯತ್ಯಾಸವನ್ನು ತೋರಿಸಿ, ಅದನ್ನು ಹಿಡಿಯುವ ಸೊಗಸನ್ನು ವಿಶದಪಡಿಸಿ ಕಲಿಸುವಳು. ತಾಳಗಳನ್ನು ಉಗ್ಗಡಿಸುವಾಗ, ನೃತ್ಯವನ್ನು ಬೋಧಿಸುವಾಗ ಸವ್ಯಾಪ ಸವ್ಯ ಮಾರ್ಗಗಳಿಂದಲೂ ಏಕಗತಿಯನ್ನೇ ಆರಾಧಿಸುವಾಗ, ಬಾಯಲ್ಲಿ ಹೇಳದೆ, ವಾಚ ವಿಸ್ತರಿಸದೆ, ಕ್ರಿಯಾದಿಗಳಿಂದಲೇ “ಸ್ವಂತದಲ್ಲಿ ನಿದ್ದೆ ಗೈವ ಕಂತುವನುದ್ಬೋಧಿಸುವಳು.”

ವಸ್ತ್ರಗಳನ್ನು ಉಡುವುದರಲ್ಲಿಯೂ ರಾಣಿಯು ಮಲ್ಲಿಯನ್ನು ಕಲಾವತಿಯನ್ನು ಮಾಡಿದಳು. ಒಮ್ಮೊಮ್ಮೆ ಸೆರಗು ಹೊದೆದು ಕೊಂಡುದು ಸರಿಯಾಗಿಲ್ಲವೆಂದು ಅವಳಿಗೆ ತೋರಿದಾಗ, ಎದ್ದುಬಂದು ಅವಳನ್ನು ಕೈ ಹಿಡಿದುಕೊಂಡು ಕರೆದುಕೊಂಡು ಹೆಣಗಿ ನಿಲುಗನ್ನಡಿಯ ಮುಂದೆ ನಿಲ್ಲಿಸಿ “ಕೊರಚರ ಹಾಗೆ ಸೀರೆ ಉದೋದಾ? ನೋಡಿ. ನಾಳೆ ಇಲ್ಲಿ ಇಷ್ಟು ಇಷ್ಟುಗಾತ್ರ ಬಂದಾಗ ಸೆರಗು ಬೀಸಾಗಿರಬೇಕು ಇಲ್ಲದಿದ್ದರೆ ಮುಚ್ಚೋಲ್ಲ ಅಂತ ಇವೊತ್ತೇ ಹೀಗುಟ್ಟರೆ ಆದೀತಾ ?” ಎನ್ನುವಳು.

ಇಂದು ವಿವರಿಸೋಣ? ಬ್ರಹ್ಮನು ಕಾಮದೇವನನ್ನು ಅವನಿಗೆಂದು ಸೃಷ್ಟಿಸಿದ ಮೊದಲನೆಯ ಮೂರ್ತಿಯ ಕಿಂಚನ್ನ್ಯೂನ ವಾಗಿರಲು, ಇನ್ನೊಂದನ್ನು ಸೃಷ್ಟಿಸಿ “ಇದನ್ನು ನಿನ್ನ ನಾಯಕನಿಗೆ ತಕ್ಕಂತೆ ತಿದ್ದಿಕೊ” ಎಂದು ಅದನ್ನು ಮೊದಲನೆಯವಳಿಗೆ ಒಪ್ಪಿಸಿದ್ದಂತೆ. ರಾಣಿಯು ಮಲ್ಲಿಯನ್ನು ತನ್ನ ನಾಯಕನಿಗಾಗಿ ತಿದ್ದಿದ್ದಳು. ತಿದ್ದಿಸಿ ಕೊಂಡವಳಿಗೆ ತಾನು ತಿದ್ದಿಸಿಕೊಂಡುದೂ ತಿಳಿಯದೆ ವೀಣ ಕಲಿತಂತೆ ಹಿತವಾಗಿತ್ತು. ಕೈಯ ಬೆರಳು ಕತ್ತರಿಸಿ ಹೋಗಿದ್ದರೂ ಆತುಪ್ರ ಸವರಿ ಕೊಂಡು ಬೆರಳು ಜಡ್ಡು ಕಟ್ಟಲಿ ಎಂದು ಬಾರಿಸುವಾಗ ಇರುವ ಸುಖ ಪೂರ್ಣವಾದರೂ ತನ್ನ ಜಾತಿಯನ್ನು ಬಿಡದ ಬೆರಳುಗಳ ನೋವಿನಂತೆ, ಅವಳಿಗೆ ಕಲಿಕೆಯು ನಡೆಯಿತು. ಗಿಡವು ಬೆಳೆಯುತ್ತಾ ಹಳೆಯ ಎಲೆ ಗಳನ್ನು ಉದುರಿಸಿ ಹೊಸ ಎಲೆಗಳನ್ನು ಬಿಟ್ಟು ಶೋಭಾಸ್ಪದವಾಗುವಂತೆ ದರಿದ್ರರ ಮನೆಯಲ್ಲಿ ಬೆಳೆದು ಕಲಿತಿದ್ದ ದರಿದ್ರ ಚೇಷ್ಟೆಗಳನ್ನು ಬಿಟ್ಟು ಶ್ರೀಮಂತಿಕೆಯ ಎಂಜಲು ಸೌಭಾಗ್ಯ ಚಿನ್ಹೆಗಳನ್ನು ಕಲಿತಳು. ಅಷ್ಟೇನು? ಯಾವುದೋ ಓಟೆಯಲ್ಲಿ ಹುಟ್ಟಿದ ಮಾವಿನಗಿಡಕ್ಕೆ ಸಿಹಿ ಮಾವಿನಕೊಂಬೆ ಕಟ್ಟಿ ಸಸಿಮಾಡಿದರೆ ಬೆಳೆಯುವ ಗಿಡವು ಸಹಿಮಾವೇ ಆಗುವಂತೆ, ಎಲ್ಲಿಯೋ ಹುಟ್ಟಿ, ಎಲ್ಲಿಯೋ ಬೆಳೆದ ಮಲ್ಲಿಯು ರಾಣಿಯ ಕೈಗೆ ಸಿಕ್ಕಿ, ರಾಣಿಯನ್ನು ಮೀರಿಸಬಲ್ಲ ರಾಣಿಯಾದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಜೆ ಗತ್ತಲು
Next post ಗೋವಿಂದ ರಾಯಾ ಲಂಬೋನೂ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…