ಅದೊ ನೋಡು ಮಧ್ಯಾಹ್ನ ಸರಿದು
ಸಂಜೆ ಗತ್ತಲು ಸಾಗಿ ಬರುತ್ತಿದೆ
ನಿನ್ನೂರಿಗೆ ಹೋಗುವ ಬದಲು
ಏನು ಜಾತ್ರೆ ನಿನ್ನೀ ಮನ ಮಾಡಿದೆ
ನೀನೋರ್‍ವನೆ ಅಲ್ಲಿ ಸಾಗಬೇಕು
ನಿನಗ್ಯಾರು ಅಲ್ಲಿ ಜೊತೆಗಿಲ್ಲ
ನಿನ್ನ ಕರ್‍ಮಗಳೇ ಸಂಗಾತಿ
ಮತ್ತೇನು ಹಿಂದೆ ಬರುವುದಿಲ್ಲ
ಎಚ್ಚರದ ಗಂಟೆಗೆ ಆಲಿಸು ಬೇಗ
ಸುಧಾರಿಸು ಸುಧಾರಿಸು ನೀನೀಗ
ಭೋಗಗಳೆಲ್ಲ ಆಚೆ ತಳ್ಳು
ಜಪ ತಪಗಳ ಬಯಸೀಗ
ಯುಗ ಯುಗಗಳು ಸರಿದವು
ನಿನ್ನ ತೃಷೆಗಳು ಹಿಂಗಲಿಲ್ಲ
ಮತ್ತೆ ಜನುಮಗಳು ಬಂದವು
ಮರಣಗಳು ನಿನ್ನ ಬಿಡಲಿಲ್ಲ
ಆಸೆ ಸ್ವಾರ್‍ಥ ಅಮಿಷೆಗಳೆಲ್ಲ
ಯೌವ್ವನದಲ್ಲೆ ಕರಗುವವು
ಅಂತಲೆ ತ್ಯಾಗಿಸಿ ನಡೆ ಮುಂದೆ
ತಾನೇ ನಾಶವಾಗುವವು ಅವು
ಗುರುಗಳ ಕೃಪಾಸಿಂಧು ಈಗಾಗಿದೆ
ನಿನ್ನಲ್ಲಿ ಜಾಗೃತಿ ಮೂಡಿ ನಿಂದಿದೆ
ಈ ಸುವರ್‍ಣಾವಕಾಶ ಕಳೆಯಬೇಡ
ಮಾಣಿಕ್ಯ ವಿಠಲನ ಧ್ಯಾನಿಸಬೇಕಿದೆ
*****