ಚಂಚಲ ಚಿತ್ತದ
ಚುಂ ಚುಂ ಅಳಿಲೇ
ಮುಂಜಾವದ ಮೈ ಜುಂ ಜುಂ ಅಳಿಲೆ
ಚುಮು ಚುಮು ಬೆಳಕಿಗೆ ಹೊರಟಿಹೆಯಲ್ಲೆ
ಆ ಕಡೆ ನೋಡುವಿ ಈ ಕಡೆ ನೋಡುವಿ
ಏನೋ ಮರೆತಂತೆಲ್ಲಿ ನೋಡುವಿ
ಕಿವಿ ನಿಮಿರಿಸಿ ಮೈ ನವಿರೇಳಿಸಿ
ಯಾವಾಗಲು ನೀ ಚುರುಕಾಗಿರುವಿ
ಹಿಂಗಾದರ ನೀ ಯಾವಾಗ ಮಾಡುವಿ ನಿದ್ದಿ
ಚಳಿಗೇನು ಹೊದ್ದಿ
ನಿನ್ನ ಬಾಲ ನಮ್ಮಲ್ಲಿ ದೊಡ್ಡ ಸುದ್ದಿ
ಹುಷಾರಾಗಿರು ನೀ ನೀರಲಿ ಬಿದ್ದೀ
ಮರ ಹತ್ತುವಿ ನೀ ಸರಸರ ಓಡುವಿ
ನಿಂಜತೆ ನಿಂತು ಮಾತಾಡಲಿ ಎಂತು
ನಿನ್ಮನೆಯೆಲ್ಲೋ ನಮ್ಮನೆಯೆಲ್ಲೋ
ನಮ್ಮನೆಗೇ ಬಂದು ಇರಬಹುದಲ್ಲೋ
ಏನೇನ್ ತಿಂಡಿ ಎಷ್ಟೆಷ್ಟು ಬೇಕೋ
ಎಲ್ಲಾ ತಗೊಳ್ಳೋ
ಬಾದಾಮಿ ಗೇರುಬೀಜಗಳೆ ಸಾಕೋ
ಶೇಂಗಾ ಜೋಳ ನಿನಗಿಷ್ಟವಾದರೆ
ಅದೂ ಉಂಟು ತಕ್ಕೋ
ದೂರವೆಲ್ಲೂ ಹೋಗೋದು ಬೇಡ
ಬೆಕ್ಕಿನ ಬಾಯ್ಗೆ ಸಿಗಹಾಕ್ಕೋಬೇಡ
ಇರು ನಮ್ಮ ಹತ್ರನೆ
ನಮ್ಮನೆ ಸುತ್ತನೆ
ಚಂಚಲ ಚಿತ್ತದ
ಚುಂ ಚುಂ ಅಳಿಲೇ
ಮುಂಜಾವದ ಮೈ ಜುಂ ಜುಂ ಅಳಿಲೆ
ಚುಮು ಚುಮು ಬೆಳಕಿಗೆ ಹೊರಟಿಹೆಯಲ್ಲೆ
*****