ಗೋವಿಂದ ರಾಯಾ ಲಂಬೋನೂ
ಹೊತ್ತರೇಳು ಮೊದಲೇ ಲೆಳುವಾನೋ
ಹೊತ್ತೇಳೂ ಮುನ್ನೇ ಲೆದ್ದೇನೋ
ಕಯ್ಯು ಕಾಲು ಮೋರೆ ತೊಳೆದೇಲೋ
ಬಣ್ಣದೊಂದು ಚದರದ ಮೇನೇಲೋ
ಹೊನ್ನಿನ ಒಂದು ರಾಚೀ ಹೊಯ್ದಾನೋ
ಹೊನ್ನಿಗೊಂದು ರಾಶೀ ಹೊಯ್ದೊಲೇ
ಚಿನ್ನದ ಕೊಳಗ ತರವಾನೋ
ಬೆಳ್ಳಿಯ ಶಿದ್ದೇ ತರವಾನೋ
ಬೆಳ್ಳಿಯ ಶೀದ್ದೇ ತಂದೇಲೇ
ಹೊನ್ನಿನ ರಾಶೀಲಳೆದೇಲೇ
ಹೊನ್ನಳದೇ ದಣಿವೇಲಾಗಿತೋ
ಹೊನ್ನಳದೇ ದಣಿವೇ ಆದವ್ಯಾನೇ
ಯೇಳೂಪ್ಪರಗಿ ಶದರದ ಮೇಲೇಲೋ
ಬಣ್ಣದೊಂದು ವಲ್ಲಿ ಬಿಡಿಶ್ಯಾಲೋ
ಬಣ್ಣಗೊಂದು ವಲ್ಲಿ ಹಾಶೀಲೇ
ಮುಚ್ಚೋರಗೇ ಮಲಗೂತೈದಾನೋ
ಮುಚ್ಚೋರಗೇ ಮಲಗೂ ಶಮ್ಯದಲ್ಲಿ
ಚಿನ್ನದೊಂದು ಕೊಳಗ ತಲೆದಿಂಬು
ಬೆಳ್ಳಿಯ ಶಿದ್ದೆ ಬಗಲಲ್ಲೋ
ಬೆಳ್ಳಿತೊಂದು ಶಿದ್ದೆ ಬಗಲಲ್ಲೋ
ಮುಚ್ಚಿ ಹೊಡೆದೆ ಮಲಗೂತೈದಾನಲೋ
ಮುಚ್ಚಿ ಹೊಡದೆ ಸಮವಾದಲ್ಲೋ
ತೆಂಕಲ ದಿಕ್ಕಿನ ಗಾಳೆ ಕರೆದೇಲೋ
ಶುಕದಲ್ಲೇ ನಿದರೇ ಮಾಡುವಾಗೋ
ಏಳು ಜನ ನಂದನ ಗೋಪ್ಯವರು
ಗೋವಿಂದನ ಪಾದಾ ತಿಕ್ಕವಾರೋ
ಗೋವಿಂದನ ಪಾದಾ ತಿಕವಾಗೇ
ಸೂರ್‍ಯ ಮೂಡಿ ಉದಯಗ ಬಂದಾವೋ
ಸೂರ್‍ಯ ಮೂಡಿ ಉದಯಗ ಬರುವಾಗೋ
ಸೂರ್‍ಯ ಮೂಡಿ ಯಾಳೇ ಬಿಸಿಲೇಲೋ
ಗೋವಿಂದನ ಕಣ್ಣಿಗೈದಾವೋ
ಗೋವಿಂದನ ಕಣ್ಣೀಗೆಸೆವಾಗೋ
ಗೋವಿಂದಗೆ ಎಚ್ಚರಾದವೋ
ಗೋವಿಂದಗೆ ಎಚ್ಚರಾಗವಾಗೇ
ಬಡ ಜನರಿಗೆ ದಾನ ಮಾಡಲಿಲವೋ
ಬಡ ಜನರಿಗೆ ದಾನ ಕೊಡಲಿಲವೋ
ಬಡ ಜನರಿಗೆ ಪಡಿಯ ಅಳೆಲಿಲವೋ
ಆರು ತಾಸು ಮಜ್ಜಾನ ಬಿಶಲಲ್ಲೋ
ಗೋವಿಂದಗೆ ಪೂಜೆ ಮಾಡುವಾರೋ
ಗೋವಿಂದಗೆ ಪೂಜೆ ಮಾಡುವಾಗೇ
ಆರು ತಾಸು ಮಜ್ಜಾನಾ ಬಿಶಲಲ್ಲೋ
ಬಂದವಲೂ ಮಂಗನ ಗೊಲೇಯೋ
ಹಿಡಿದವರು ಶಾರೂಗಂಟೇಯೋ
ನುಡಿದವಲು ಶಾರಾ ಗಂಟೇಯೋ
ಗೋವಿಂದಗೆ ಪೂಜೆ ಮಾಡುನಾರೋ
ಗೋವಿಂದಗೆ ಪೂಜೇ ಮಾಡುವಾಗೇ
ಗಳಗೊಂದೇ ರೂಪಾ ತೋರ್ ಯಾನೋ ||
*****
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.