ಬರೆದವರು: Thomas Hardy / Tess of the d’Urbervilles
ಕನ್ನಂಬಾಡಿಯು ಇನ್ನೂ ಕೃಷ್ಣರಾಜಸಾಗರವಾಗಿರಲಿಲ್ಲ. ಆದರೂ ಅಲ್ಲಿ ಆ ವೇಳಿಗೆ ಆದ ಕಟ್ಟೆಯ ಹರಹಿನ ಹಿಂದೆ ನಿಂತ ನೀರೇ ನೋಡು ವವರಿಗೆ ಆಶ್ಚರ್ಯವಾಗುವುದು. ಅಲ್ಲದೆ ಕಾವೇರಿಯ ತಿಳಿನೀರು ಅಷ್ಟು ಅಗಲ ಒದೆದುಕೊಂಡು ನಿಂತಿದ್ದರೆ, ಏನೋ ಗಾಂಭೀರ್ಯ. ಏನೋ ಸೌಂದರ್ಯ. ಮುಂದೆ ಮಹಾಲಕ್ಷ್ಮೀಯಾಗುವ ಮಡದಿಯನ್ನು ಮನೆ ತುಂಬಿಸಿಕೊಂಡವನ ಮನಸ್ಸಿನ ತುಂಬು.
ಒಂದು ಕಡೆ ಡೈನಮೆಂಟ್ಗಳು ಸಿಡಿದು ಇದ್ದ ಅಡ್ಡಿಗಳನ್ನು ನಿವಾರಿಸುತ್ತಿವೆ. ಇನ್ನೊಂದು ಕಣೆ ಗಾರೆಯಂತ್ರಗಳು ಕಿವಿಯು ಕಿವು ಡಾಗುವಂತೆ ಮೊರೆಯುತ್ತ ಸುತ್ತುತ್ತಿವೆ. ಸಣ್ಣ ಕಂಬಿಗಳ ಮೇಲೆ ಟ್ರಾಲಿಗಳಲ್ಲಿ ದಪ್ಪದಪ್ಪ ಕಲ್ಲುಗಳು ಭಾರಿಯ ಮನುಷ್ಯರಹಾಗೆ ಕುಳಿತು ಬರುತ್ತಿವೆ. ಎಲ್ಲಿ ನೋಡಿದರೂ ದುಡಿಮೆ. ಯಾರೂ ಸುಮ್ಮನೆ ಕುಳಿತಂತಿಲ್ಲ. ದಣಿದವನು ಅಡಕೆಲೆ ಹಾಕಿಕೊಳ್ಳಬೇಕಾದರೂ ಕೆಲಸ ಮಾಡುತ್ತ ಅಡಕೆಲೆ ಹಾಕಿಕೊಳ್ಳುತ್ತಾನೆ. ಬೀಡೀ ಸೇದುವನನೂ ಕೆಲಸಮಾಡದಿದ್ದರೆ ಕೆಲಸದ ವಿಚಾರವನ್ನು ಚಿಂತಿಸುತ್ತ ಬೀಡೀ ಸೇದುತ್ತಾನೆ. ಅಂತೂ ದುಡಿ, ದುಡಿ, ದುಡಿ, ಮಡಿಯುವವರೆಗೂ ದುಡಿ ಎಂದು ಆ ವಾತಾವರಣ ಎಲ್ಲರನ್ನೂ ಕತ್ತಿನಮೇಲೆ ಕೈ ಹಾಕಿ ದುಡಿಸುತ್ತಿದೆ ಎನ್ನುವಂತಿದೆ.
ಪಾರ್ಟಿಯು ಮೈಸೂರಿಗೆ ಹಿಂತಿರುಗಿಬರುವ ವೇಳೆಗೆ ಸುಮಾರು ಏಳುಗಂಟೆಯಾಗಿತ್ತು. ಎಲ್ಲರಿಗೂ ಏನೋ ಉತ್ಸಾಹವಿದೆ. ಏನೋ ಹೊಸತನ ಬಂದಂತಿದೆ. ಬೇಸಗೆಯಲ್ಲಿ ಒಮ್ಮೆ ಮಳೆ ಬಂದರೆ, ಮನೆಯಲ್ಲಿದ್ದು ಒಂದು ಹನಿ ಮಳೆಯೂ ಮೈಮೇಲೆ ಬೀಳದಿದ್ದರೂ ಏನೋ ಮೈತೊಳೆದುಕೊಂಡಂತೆ ಆಗುವುದಿಲ್ಲವೆ ? ಹಾಗೆ ಎಲ್ಲರಿಗೂ ಹೊಸತನ. ಎಲ್ಲರಿಗಿಂತ ಹೆಚ್ಚಾಗಿ ಇಬ್ಬರಿಗೆ ಆಶ್ಚರ್ಯ.
ನಾಯಕನು ಮಲ್ಲಿಯು ಅಷ್ಟುದೂರ ಕುದುರೆ ಸವಾರಿಮಾಡುವಳು ಎಂದುಕೊಂಡಿರಲಿಲ್ಲ. ಎಷ್ಟೇ ಆಗಲಿ ಸಣ್ಣವಯಸ್ಸು : ಆಯಾಸ ವಾದೀತು ಎಂದು ಕೊಂಡಿದ್ದನು. ತಾನು ಕಟ್ಟೆಯನ್ನು ಹೆತ್ತಿ ಇಳಿ ದಾಗಲೆಲ್ಲ ಜೊತೆಯಲ್ಲಿ ಹತ್ತಿ ಇಳಿದಿದ್ದುಳೆ. ಸುತ್ತಿದ ಕಡೆಯೆಲ್ಲ ಸುತ್ತ ದ್ದಾಳೆ. ಕುದುರೆಯ ಮೇಲೆ ಬಂದಿದ್ದಾಳೆ. ಆದರೂ ಮುಖದಲ್ಲಿ ಉತ್ಸಾಹವಿದೆ: ಸಂಭ್ರಮವಿದೆ. ಅವನಿಗೆ ಅದು ಆಶರ್ಯ!
ಹಾಗೆಯೇ ಆಶ್ಚರ್ಯಪಟ್ಟವರು ಇನ್ಲೂಬ್ಬರು ಎಂದರೆ ಆನಂದಮ್ಮ. ಅವರ ಮನಸ್ಸು ಮಲ್ಲಿಯನ್ನು ಆದೇದಿನ ನೋಡಿದ್ದು. ಆದರೂ ಅವ ರಿಗೆ ಆ ಮಗು ಎನ್ನಿಸುತ್ತದೆ: ಒಂದೇಸಲ ಮುಟ್ಟಿರುವುದು. ಆದರೂ ಹೊಟ್ಟೆಯ ತುಂಬ ಇದ್ದು ಈಚೆಗೆ ಬಂದು ಮಡಿಲುತುಂಬಾ ಆಗಿ, ಮನೆಯತುಂಬ, ಮನಸ್ಸಿನತುಂಬ ಆಗಿ ಬೆಳೆದ ಮಗಳನ್ನು ನೋಡಿ ದಂತಾಗಿದೆ. ಆಕೆಗೆ ಆದಿನ ಪುರಾಣ ಇಲ್ಲದ್ದು ಅದೃಷ್ಟ. ಇದ್ದಿದ್ದರೆ ಪುರಾಣವೆಲ್ಲ ಮಲ್ಲೀಪುರಾಣನೇ ಆಗಿ ಹೋಗುತ್ತಿತ್ತೋ ಏನೋ?
ಆನಂದಮ್ಮ ಓದಿದವಳು : ತನ್ನ ಮನಸ್ಸನ್ನು ಶಿಸ್ತಿನಲ್ಲಿಟ್ಟು ಕೊಂಡು ನಡೆಯುವವಳು. ಆದರೂ ಅವಳಿಗೆ ಏನೋ ಭಾವಾಂತರ ವಾದಂತಿದೆ. ಯಾವಾಗಲೂ ಕಳೆದುಕೊಂಡ ಪದಾರ್ಥ, ತನಗೆ ಬೇಡವೆಂದು ಎಸೆದ ವಸ್ತು ಎದುರಿಗೆ ಬಂದು ನಿಂತುಕೊಂಡು “ನಾನು ಬೇಡವೇ ನಿಜಹೇಳು. ಎದೆ ಮುಟ್ಟಿಕೊಂಡು ಹೇಳು. ಮನಸ್ಸಿನಲ್ಲಿ ಹುಡುಕಿ ನೋಡಿ ಹೇಳು.” ಎಂದು ಕೇಳಿದಂತಾಗಿದೆ. ಆಕೆ ಕನ್ನಂಬಾಡಿ ಯಲ್ಲಿ ನೋಡಿದ ಕಲ್ಲು ಮಣ್ಣು, ಮಂದಿ, ಎಲ್ಲದರಮೇಲೂ ಮಲ್ಲಿಯ ಚಿತ್ರ ಮುದ್ದಾಗಿ ಚಿತ್ರಿತವಾಗಿತ್ತು. ಏನೋ ಹಂಬಲ, ಆಕೆ ಅಸುಖಿ ಯಲ್ಲ. ಕೆಟ್ಟ ಅಡುಗೆಯನ್ನು ಅಟ್ಟು ಸೈ ಎನ್ನ್ಟಿಸಿಕೊಳ್ಳುವ ಜಾಣೆ. ಆದರೂ ಏನೋ ಸುಖಾಸುಖಸಂಮಿಶ್ರಣವೊಂದು ಹೆಣ್ಣಾಗಿ ಹುಳಿ ಯನ್ನು ಸೀ ಮಾಡಿಕೊಳ್ಳುತ್ತಿರುವ ದಾಳಿಂಬೆಯ ಬೀಜ ಬಾಯಿಗೆ ಬಿದ್ದಂತೆ ಆಗಿ, ಮನಸ್ಸನ್ನು ಹಂಬಲಕ್ಕೀಡುಮಾಡುತ್ತಿದೆ.
ಮನೋಹರವಾದ ಶಬ್ದಗಳನ್ನು ರಮ್ಯವಾದ ದೃಶ್ಯಗಳನ್ನು ಕಂಡಾಗ ಸುಖಿಯಾದ ಜಂತುವೂ ಏನೋ ಅಸುಖವನ್ನು ಅನುಭವಿಸಿ ಚಂಚಲತೆಗೆ ಎಡೆಗೊಡುವುದಾದರೆ, ಅದು ಜನ್ಮಾಂತರದ ಸಂಗತಿಗಳನ್ನು ಅರಿತ ಮನಸ್ಸು ಹೂಡುವ ಆಟ ಎನ್ನು ಎಂದನಂತೆ ಕವಿಸಾರ್ವಭೌಮ. ಈಗ ಹಾಗಾಗಿದೆ ಅವಳಿಗೆ.
ಮಲ್ಲಿಯು ನಾಯಕನೊಡನೆ ಒಳಕ್ಕೆಬಂದು ಸೋಫಾದಲ್ಲಿ ಕುಳಿ ತಳು. “ಏನು ಬುದ್ಧಿ, ಇವೊತ್ತು ನಾನು ಸವಾರಿಮಾಡಿದ್ದು ಸರಿಯಾ ಗಿತ್ತಾ?” ಎಂದಳು.
ನಾಯಕನು ಮೆಚ್ಚಿಕೊಂಡು, ತಬ್ಬಿಕೊಂಡು, ಮುತ್ತಿಟ್ಟು, “ಹತ್ತುವರುಷ ಕುದುರೆ ಬೆನ್ನುಮೇಲೆ ಇದ್ದವನಂಗೆ ಸವಾರಿ ಮಾಡಿದೆ? ಎಂದು ಮುಚ್ಚಟೆಮಾಡಿದನು.
ಮಲ್ಲಿಯು ಬಹು ಸಂತುಷ್ಠಳಾಗಿ ” ನಾನು ಮಾಡೋಕೆಲಸದ ಲ್ಲೆಲ್ಲಾ ಹಿಂಗೇ ತಮ್ಮ ಕೈಲಿ ಸೈ ಅನ್ನಿಸಿಕೊಂತೀನಿ ನೋಡಿ ಬುದ್ದಿ ? ಎಂದು ಪ್ರೌಢೆಯಂತೆ ನುಡಿದು ಮೇಲಕ್ಕೆದ್ದಳು. ಅಲ್ಲಿಂದ ಹೋಗಿ. ಸುಂದರಮ್ಮಣ್ಣಿಯನ್ನು ಕಂಡು “ಬುದ್ಧಿ, ಈದಿನ ನನ್ನಸವಾರಿ ಹೆಂಗಿತ್ತು ? ನೋಡಿದಿರಾ ?” ಎಂದು ಕೇಳಿದಳು.
ಅವಳು ಅವಳನ್ನು ಬರಸೆಳೆದು ತಬ್ಬಿಕೊಂಡು “ನೀವು ಬುದ್ದಿ ಅನ್ನಬಾರದು: ಅಕ್ಕಯ್ಯಾ ಅನ್ನಬೇಕು ಮಲ್ಲಮ್ಮಣ್ಣಿ ” ಎಂದಳು.
“ಉಂಟಾ ! ತಾವು ಬುದ್ಧಿಯೇ ನಾನು ಮಲ್ಲಿಯೇ ! ಅದಿರಲಿ ಬುದ್ದಿ ನಾನು ಕುಡುರೇಮೇಲೆ ಕುಂತಿದ್ದುದು ತಮಗೆ ಒಪ್ಪಿತಾ? ಚೆನ್ನಾಗಿತ್ತೆ ಅದು ಹೇಳಿ ಮೊದಲು.”
” ಏನು ಹೇಳಲವ್ವಾ ! ಬುದ್ಧಿಯೋರಿಗೆ ನಂಗಿಂತ ನೀನೇ ಸರಿ ಅನ್ನಿಸತಿತ್ತು. ಇಬ್ಬರೂ ಸಬಗಸ್ತುನಲ್ಲಿ ಬರುತಿರೋ ಅಂಗಿತ್ತು.”
ಮಲ್ಲೀಗೆ ಬಹು ಸಂತೋಷವಾಗಿ, ನಾಚಿಕೆಯಾಗಿ. ಪರವಶ ವಾದಂತಾಯಿತು. ಹಾಗೆಯೇ ಸುಂದರಮ್ಮಣ್ಣಿಯ ತೆಕ್ಕೆಯಲ್ಲಿ ಅವಳ ಎದೆಯ ಮೇಲೆ ಹಾಗೇ ಒಂದು ಗಳಿಗೆ ಒರಗಿದ್ದಳು.
“ಏಳಿ. ಬಟ್ಟೆ ಬಿಚ್ಚಿ, ಒಂದು ಸೀರೆ ಉಟ್ಟು ಕೊಂಡು ಹೆಣ್ಣಾಗಿ ಬನ್ನಿ. ಯಾರಾದರೂ ಬಂದು ಇದೇನು ಯಾವ ಗಂಡ್ನೋ ತಬ್ಬಿ ಕೊಂಡವ್ಳೆ ಅಂದುಕೊಂಡಾರು.?
ಕೆಂಪಿ ಬಾಗಿಲು ಕೊನೆ ಓರೆಮಾಡಿ ಬಗ್ಗಿ ನೋಡಿದಳು. “ಯಾರು? ಕೆಂಪಮ್ಮಣ್ಣೀನ? ಬನ್ನಿ ಒಳಗೆ. ನಿಮ್ಮ ಮಗಳು ಮಗ ನಾಗವ್ಳೆ. ನೋಡಿ ಈ ಬೈರೂಪಾನ.”
ಕೆಂಪಿ ಒಳಕ್ಕೆ ಬರುತ್ತಲೂ ಮಲ್ಲಿಯು ಓಡಿ ಹೋಗಿ ಅವಳನ್ನು ತಬ್ಬಿ ಕೊಂಡಳು: ” ಅವ್ವಾ! ನಾನು ಕುದುರೆ ಮೇಲೆ ಕುಂತಿದ್ದುದು ನೋಡಿಡೆಯಾ ? ಹೆಂಗಿತ್ತವ್ವಾ?” ಎಂದು ಬೆಸಗೊಂಡಳು.
ಕೆಂಪಿ ಕಣ್ಣಿನಲ್ಲಿ ಕಾವೇರಮ್ಮ ತುಂಬಿದ್ದಳು : ಮಗಳ ತಲೆ ಯನ್ನು ನೇವರಿಸುತ್ತಾ ನುಡಿದಳು: “ಅವ್ವಾ ! ಮಾದೇವಿ ವನವಾಸ ಓದಂಗೆ ಏನೋ ನಮ್ಮನೆಗೆ ಬಂದು ಎರಡು ದಿವಸ ಇದ್ದೆ. ಈಗ ತುರುಬಿ ನಲ್ಲಿರೋ ಹೂವಂಗಿದ್ದೀಯೆ. ನೀನು ಕುದುರೆಮೇಲೆ ಕುಂತಿದ್ದಕ್ಕೆ ನಿಮ್ಮ ಹಕೀಂಗಿಂತ ಚೆನ್ನಾಗಿತ್ತು : ಮುದ್ದಾಗಿತ್ತು : ಗಂಭೀರ ವಾಗಿತ್ತು. ” ಎಂದು ಏನೇನೋ ಹೇಳಿದಳು. ಮಗಳು ಸ್ವಸಂತೋಷ ದಿಂದ ತಾಯಿಯ ತಲೆಯನ್ನು ಹಿಡಿದು ತನ್ನ ಕಡೆಗೆ ಎಳೆದುಕೊಂಡು ಅವಳ ಎರಡು ಕೆನ್ನೆಗೂ ಮುತ್ತು ಕೊಟ್ಟು ನಿನ್ನ ಮಲ್ಲಿ ನಿನಗೆ ಚೆನ್ನಾಗಿಲ್ಲದ್ದು ಯಾವಾಗ ? ಎಂದು ಹೊರಟಳು.
ಕೆಂಪಿ ಅವಳನ್ನು ಕೈಹಿಡಿದು ನಿಲ್ಲಿಸಿಕೊಂಡು ರಾಣಿಯ ಕಡೆಗೆ ತಿರುಗಿ “ಬುದ್ಧಿ, ಆನಂದಮ್ಮನವರು ಕಾದವರೆ.” ಎಂದು ಏನೋ ಸಂಕೋಚದಿಂದ ಹೇಳಿದಳು. ರಾಣಿಯು “ಮಲ್ಲಮ್ಮಣ್ಣಿ ನೋಡಿ ದಿರಾ ನಾವು ಮಾಡಿದೆ ಕೆಲಸ ? ಅವರು ಕಾದವರಂತೆ? ಅಯ್ಯೊ ಪಾಪ! ಬನ್ನಿ ಹೋಗಿ ಕಳಸಿಬರೋವ ” ಎಂದು ಹೊರಟಳು. ಅವಳ ಅಪ್ಪಣೆಯಂತೆ ಕೆಂಪಿಯು ಫಲತಾಂಬೂಲ ತರಲು ಹೋದಳು.
ರಾಣಿಯೂ ಮಲ್ಲಿಯೂ ಈಚೆ ಬಂದರು. ಆನಂದಮ್ಮನ ಕಣ್ಣು ರಾಣಿಯನ್ನು ಕಂಡರೂ ಮಲ್ಲಿಯೆಮೇಲೆ ನಿಂತಿತು. ಏಕೋ ಅವ ಳನ್ನು ಕಂಡು ತಬ್ಬಿ ಕೊಳ್ಳ ಬೇಕು ಎನ್ನಿಸಿತು. ಆದಕ್ಕೆ ಹೇಗೆ? ಆ ಭಾವವನ್ನು ಸಂವರಣ ಮಾಡಿಕೊಂಡು, “ಇನ್ನು ನಮಗೆ ಅಪ್ಪಣೆ ಯಾಗಬಹುದ್ಲ? ತಾವು ಆಯಾಸ ಪಟ್ಟಿದ್ದೀರಿ” ಎಂದಳು.
ರಾಣಿಯು ಹೇಳಿದಳು: “ನಿಜ ತಾಯಿ, ನನಗೇನೋ ಹೋಗಿ ಬಂದುದು ಆಯಾಸ ಆಗಿತ್ತು. ಆದರೆ ನಮ್ಮ ಮಲ್ಲಮ್ಮಣ್ಣಿ ನೋಡಿ, ಗಂಡಿಗಿಂತ ಗಂಡಾಗಿರೋದಾ ? ಇವರನ್ನು ಕಂಡು ನಮ್ಮ ಆಯಾಸ ವೆಲ್ಲ ಮಾಯವಾಗಿ ಹೋಯಿತು. ನಮ್ಮ ಮಲ್ಲಮ್ಮಣ್ಣಿ ಸವಾರಿ ಹೆಂಗೆ ಮಾಡ್ತಾರೆ ನೋಡಿದಿರಾ?”
“ಮೊದಲಿಂದ ಅಭ್ಯಾಸವಾಗಿದೆಯೇನೋ ?”
“ಎಲ್ಲಿ ಬಂತು ತಾಯಿ. ಇನ್ನೂ ಅವರು ಕುದುರೆ ಹತ್ತಿ ಸರಿ ಯಾಗಿ ಒಂದು ವರ್ಷಕೂಡಾ ಇಲ್ಲ.”
ಮಲ್ಲಿಯು ಪ್ರತಿಭಟಿಸಿದಳು : “ಯಾಕೆ ಬುದ್ದಿ, ಆ ಸಣ್ಣ ಕುದುರೆ ಮೇಲೆ ಸವಾರಿ ಮಾಡುತ್ತಿರಲಿಲ್ಲವಾ ??
“ಅಂಯ್ ! ಅದುಬುಡಿ. ನೀವು ಕೂತುಕೊಂಡರೂ ಕಾಲು ನೆಲದಮೇಲೆ ಎಳೆಯೋದು. ಅದಕ್ಕೂ ನಮ್ಮ ರಾಣಿಗೂ ಎಲ್ಲಿಂದೆಲ್ಲಿಗೆ ? ಅದು ತುಂಬೇಗಿಡ ; ಇದು ತೆಂಗಿನಮರ. ಅದಿರಲಿ, ತಾಯಿ, ನಮ್ಮ ಮಲ್ಲಮ್ಮಣ್ಣಿ ವೀಣೆ ಬಾರಿಸುತ್ತಾರೆ, ನೀವು ಕೇಳಬೇಕು. ನಾಳೆ ನಾವು ಇದ್ದರೆ ಹೇಳಿಕಳಿಸುತೀನಿ. ತಪ್ಪದೆ ಬನ್ನಿ, ತಾಯಿ.”
ಆನಂದಮ್ಮನಿಗೆ ಮಲ್ಲಿಯನ್ನು ಮುಟ್ಟಬೇಕು ಎನ್ನುವಾಸೆ ತಡೆಯ ಲಾರದಷ್ಟು ಆಯಿತು : ಬಾಯಿಬಿಟ್ಟು ಕೇಳಿಯೂ ಕೇಳಿದಳು :
“ನಾನು ಇವರನ್ನು ಮುಟ್ಟಬಹೆದೆ ?” ರಾಣಿಯು ಬೇಡವೆಂದಿದ್ದರೆ ಆನಂದಮ್ಮನು ಏನಾಗಿ ಹೋಗು ತ್ರಿದ್ದಳೋ?
ರಾಣಿಯು * ಅದಕ್ಕೇನು ತಾಯಿ? ತಾನು ಮುಟ್ಟಬೇಕು. ತಲೆ ಸವರಬೇಕು : ಅರಶಿನ ಕುಂಕುಮ ಇಟ್ಟುಕೊಂಡು ಮುತ್ತೈದೆ ಯಾಗಿ ಬಾಳು ಅಂತ ಹರಸಬೇಕು.” ಎಂದಳು. ಮಾತು ಮನಸ್ಸು ತುಂಬಿ ಬಂದಂತೆ ಗಾಂಭೀರ್ಯ ಪೂರ್ಣವಾಗಿತ್ತು.
ಮಲ್ಲಿಯು ಹೋಗಿ ಆನಂದಮ್ಮನಬಳಿ ನಿಂತಳು. ಪಾದ ಮುಟ್ಟಬೇಕು ಎನ್ನಿಸಿತು. ಮುಟ್ಟಲಿಲ್ಲ. ತಲೆ ಬಗ್ಗಿ ವಿನಯವಾಗಿ ನಿಂತಳು.
ಆನಂದನ್ಮನು ಏನೋ ವಿಶೇಷ ಸಂಭ್ರಮದಿಂದ ಮುನ್ನುಗ್ಗುತ್ತ ಆಶೆಯನ್ನು ಹಾಗೆಯೇ ಹಿಡಿದುಕೊಂಡಂತೆ, ತಡೆದಂತೆ, ಮಾಡಿಕೊಂಡು, ಆ ಮಲ್ಲಿಯ ಎರಡು ಕೈಗಳನ್ನೂ ಹಿಡಿದುಕೊಂಡು, “ಸಾವಿರ ವರ್ಷ ಚೆನ್ನಾಗಿ ಬಾಳು ಮಗಳೇ! ಓದಿ ವಿದ್ಯಾವತಿಯಾಗಿ ವಿವೇಕವಾಗಿ, ಸುಖವಾಗಿ, ಮುತ್ತೈದೆಯಾಗಿ ಬಾಳು.” ಎಂದು ತಲೆಯಮೇಲೆ ಕೈಯಿಟ್ಟು ಬೆನ್ನು ಸವರಿ ಮಗ್ಗುಲಲ್ಲಿ ಕುಳ್ಳಿರಿಸಿಕೊಂಡಳು.
ಮಲ್ಲಿಗೂ ಆಕೆಯ ಮಗ್ಗಲು ತಾಯಿಮಡಿಲಂತೆ ಹಿತವಾಗಿತ್ತು. ಆನಂದಮ್ಮನ ಹರಕೆಯ ಮಾತು ಮೈಗೊಂಡು ಮಲ್ಲಿಯ ಮೈಮೇಲೆ ಆಡಿದಂತಾಗಿ ಅವಳಿಗೆ ಮೈ ಜುಮ್ಮೆಂದಿತು.
ಆನಂದಮ್ಮನಿಗಂತೂ ಅಮೃತಾಭಿಷೇಕವಾದ ಹಾಗೆ ಆಗಿ ಒಂದು ಗಳಿಗೆ ಮೈ ಪರಪಶವಾಗಿ ಹೋಗಿತ್ತು.
ಕೆಂಪಿಯು ಫಲತಾಂಬೂಲನನ್ನು ತಂದಳು. ರಾಣಿಯು ಆನಂದಮ್ಮನಿಗೆ ಕುಂಕುಮುವಿಟ್ಟು ತಾಂಬೂಲಕೊಟ್ಟು ಬೀಳ್ಕೊಟ್ಟಳು.
ಮಧ್ಯಾಹ್ನ ಮೂರುಗಂಟೆ. ಮಲ್ಲಣ್ಣ ನಾಯಕನ ಅಪ್ಪಣೆ ಯಂತೆ ಶಂಭುರಾಮಯ್ಯನನ್ನು ಕರೆತಂದನು. ನಾಯಕನು ಅವನ ಮೊಕದಮೇಲಿದ್ದ ಸಂತೋಷವನ್ನು ಕಂಡು ಸಂತುಷ್ಟನಾಗಿ ” ಅಯ್ಯ ನವರು ಏನೋ ಬಹಳ ಸಂತೋಷವಾಗಿರೋ ಹಂಗದೆ ” ಅಂದನು.
ಶಂಭುರಾಮಯ್ಯನು ಕೈಮುಗಿದು “ಹೌದು, ನಾಯಕರು ಹೇಳಿದ್ದು ಬಹಳ ಸರಿ. ಈದಿನ ಶುಭ ಸಮಾಚಾರ ಬಂದಿದೆ. ಬ್ರಿಟಿಷ್ ಸರ್ಕಾರದವರು ಬಾಲಗಂಗಾಧರ ತಿಲಕರನ್ನು ಸೆರೆಯಿಂದ ಬಿಟ್ಟಿದ್ದಾರೆ ” ಎಂದನು.
*****