ಹೋಡೀಬ್ಯಾಡ ಗಂಡಪ್ಪಾ
ದೇವರಿಗೊಂದ ದತ್ತಾದೇನಿ || ೧ ||
ಮೂಲ್ದಗೊಡೀ ಹೆಣ್ಣಾನೀ
ಮೂಗ್ತೀಯಾ ವಲ್ಗಿಟ್ಟೀನೀ || ೨ ||
ಕಳ್ದಗಿಳ್ದದ ಹೋದೀತಂತ್ಯಾ
ವಲೆ ಬೂದ್ಯಾಗಿಟ್ತಿದ್ದೇ || ೩ ||
ಹೌದನನ್ನಾ ಹೆಣ್ಣಾ
ಹೊಯ್ಮಾಲಿ ಹೆಣ್ಣಾ || ೪ ||
ಹೊಡಿಬ್ಯಾಡಾ ಗಂಡಪ್ಪಾ
ದ್ಯೆವರಿಗೊಂದ್ ದತ್ತಾದೀನೀ || ೫ ||
ತಾಳಗೇಡೀ ಹೆಣ್ಣಾ ನೀ
ತಾಳ್ಗೀ ಯಾವಲ್ಲಿಟ್ಟಿದ್ದೀ? || ೬ ||
ಕಳ್ದಗಿಳ್ದ ಹೋದೀತಂತಾ
ಕೋಣನಾ ಕಾಲಾಗಿಟ್ಟಿದೇ || ೭ ||
ಹೌದಲೆ ಹೆಣ್ಣಾ ಹೊಯ್ಮಲಿ ಹೆಣ್ಣಾ
ಹೋಡಿಬೇಡಾ ಗಂಡಪ್ಪಾ || ೮ ||
ದ್ಯೆವರಿಗೊಂದ್ ದತ್ತಾದೀನೀ
ಮೂಳಗೇಡಿ ಹೆಣ್ಣಾ ನೀ || ೯ ||
ಮೂಗ್ತಿ ಯಾವಲ್ಲಿಟ್ಟಿದ್ದೀ
ಕಳದ ಸುಳದ ಹೋದೀತಂತಾ | ವಲ್ಲಿ ಚೂಡ್ಯಾಗಿಟ್ಟಿದ್ದೇ || ೧೦ ||
ದಿವಳಿ ನೋಡೀ ಹೆಣ್ಣಾ ನೀ ದೀಪಾ ಯಾವಲ್ಲಿಟ್ಟಿದ್ದೀ
ಕಳ್ದ ಗಿಳ್ದ ಹೋದೀತಂತಾ ಮನೀ ಸೂರಾಗಿಟ್ಟಿದ್ದೆ || ೧೧ ||
ಹೊವದಲೆ ಹೆಣ್ಣಾ ನೀ ಹೊಮ್ಮಲಿ ಹೆಣ್ಣಾ
ತಳವಾರವ್ನ ಹೆಂಡ್ತೀ ಯೇವಗರತ್ಯಣಾ ಕೋಲೆನ್ನಾ ಕೋಲೇ || ೧೨ ||
ತಳವಿಲ್ದ ಕೊಡ ತಕೊಂಡ್ ನೀರೀಗೆ ಹೋದಳು ಕೋಲೆನ್ನಾ ಕೋಲೆ
ಜಲವಿಲದ ಬಾವ್ಯಾಗೆ ತರ ಬಿಟ್ಟಳೆ ಕೊಡವಾ || ೧೩ ||
ಶೀಲವಂತಾ ಶಿಂಬೀ ಕಳದು ಹೊತ್ತಾಳ ಕೊಡನಾ
ಕಲ್ಲಿಲ್ದ ನೆಲದಲ್ಲಿ ಎಡ್ಡಿ ವಗ್ದಾಳ ಕೊಡವಾ || ೧೪ ||
ಜಮನೇರ್‍ಲದ ಗಿಡವೊಂದ ಹುಟ್ಟಿತಣ್ಣಾ
ಜಮನೇರ್‍ಲದ ಗಿಡವೊಂದು ಹುಟ್ಟಿತಣ್ಣಾ || ೧೫ ||
ಹರಿ ಹರಿಗೆ ಗನಾ ದರಂಗಳಸ್ಯಾವು
ಕಾಲಿಲ್ದ ಜಣ ಬಂದು ಮರವೆರ್‍ದರಣ್ಣಾ ಕೋಲೆನ್ನ ಕೋಲೇ || ೧೬ ||
ಕೈಯಿಲ್ದ ಜಣ ಬಂದು ಮುಟ್ಟಿ ನೋಡ್ಯಾರ ಹಣ್ಣಾ
ರೊಕ್ಕಿಲ್ದಾ ಜಣ ಬಂದು ಲೆಕ್ಕಾ ಮಾಡ್ಯಾರ ಹಣ್ಣಾ || ೧೭ ||
ಆಗಾಗಲೆ ಜಣ ಬಂದು ನುಂಗಿ ನೋಡ್ದಾರ ಹಣ್ಣಾ
*****
ಹೇಳಿದವರು: ಸುಬ್ಬಾ ಗೌಡ
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.