ಖಟಿಪಿಟಿ

ಮನವೇ ಓಡದೆ ನಿ ನಿಲ್ಲು
ಒಂದು ಕ್ಷಣ ಮುಂದಡಿಬೇಡ
ನನ್ನನ್ನೆ ನಿ ಅನುಸರಿಸಬೇಕು
ಹೀಗೆ ದಾರಿ ತಪ್ಪಿ ಓಡಬೇಡ

ಹೌದು ನೀನೊಮ್ಮೆ ಆಲೋಚಿಸು
ಎಷ್ಟು ಜನ್ಮ ನನ್ನೊಂದಿಗೆ ಕಳೆದೆ
ಜನ್ಮ ಜನ್ಮದಲ್ಲೂ ನೀ ಮಾತ್ರ
ನಿನ್ನ ಪಟ್ಟು ಬಿಡದೆ ಸಾಧಿಸಿದೆ

ಎಷ್ಟೊತ್ತಿನ ವರೆಗೆ ನಿನ್ನ ಆಟ
ಇದೆಲ್ಲ ಸುಖಾನಂದ ಮರೀಚಿಕೆ
ನಿನ್ನವನ ನೀನು ಜತೆಗೂಡದೆ
ಮತ್ತೆ ಯಾವುದಕ್ಕೆ ಈ ಹವಣಿಕೆ

ಈಗೊಂದು ಕ್ಷಣ ನಿನ್ನದು
ನಿನಗಾಗಿ ಅರೆಸಿ ಕೊಂಡ ಬಂದಿದೆ
ಇನ್ನೂ ಈಗ ದಾರಿ ತಪ್ಪಿದೆ ಆದರೆ
ಮತ್ತೆ ಮತ್ತೆ ಜನುಮಗಳು ಮುಂದಿದೆ

ನೀನು ಶುದ್ಧವಾದ ಮನವಾಗು
ಬೇಡ ಅವಗುಣ ಛಟಾಪಟಿ
ಬದುಕು ಹೀನವಾಗುವ ಮುನ್ನ
ಮಾಣಿಕ್ಯ ವಿಠಲ ಪಡೆಯಲು ಖಟಿಪಿಟಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೪೩
Next post ಮಲ್ಲಿ – ೨೧

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…