(ಸರ್ವಜ್ಞ ಮೂರ್ತಿಯ ಸ್ವರೂಪದರ್ಶನಕಾರನನ್ನು ಕುರಿತು) ಯಾರ ಅಭಿಶಾಪವೋ ಸರ್ವಜ್ಞ ಮೂರುತಿಗೆ ! ಅಮರನಲ್ಲವೆ- ಪುಷ್ಪದತ್ತ ಗಂಧರ್ವನವ? ಕರದಿ ಕಪ್ಪರ ಹಿಡಿದು ಹಿರಿದಾದ ನಾಡಿನಲಿ ತಿರಿದು ತಿನ್ನುತ, ತನ್ನ ಕಿರಿದುನಾಳ್ನುಡಿಗಳಲಿ ಹಿರಿಯ ಹುರುಳನು ತುಂಬ...

ಬನ್ನಿ ಯಾತ್ರಿಕರೇ ನೀವೆಲ್ಲಾ ಕೈ ಮುಗಿದು ಕರುನಾಡ ಮಣ್ಣಲೆಜ್ಜೆಯಿಡುವಾಗ | ಇದು ಶಾಂತಿಯ ತವರಿದು ಸ್ನೇಹ ಕರುಣೆಯ ಬೀಡಿದು || ಸರ್‍ವಧರ್‍ಮ ಸಂಗಮದ ನಾಡಿದು ಸಕಲ ಕುಲ ಮನುಜರ ಕಾಶಿಯಿದು ಕೋಟೆ ಕೊತ್ತಲ ಗಿರಿಶಿಖರಗಳ ರಾಜಧೀರಾಜರು ಕಟ್ಟಿದ ನಾಡಿದು ||...

ರಸ್ತೆ ಮಧ್ಯದಲಿ ರಾಶಿ ಹೆಣಗಳು ರಕ್ತ ರಾಜ್ಯದಲಿ ಸತ್ತ ಜನಗಳು ಅಳುತ್ತ ಕೂತಿದೆ ಮಗುವೊಂದು ಸಂಕಟಶಾಲೆಯ ಸುಳಿಯೊಂದು. ಮತ ಯಾಚಿಸುವ ಮತಧರ್‍ಮಗಳು ಲೆಕ್ಕಾಚಾರದ ಬೆತ್ತಲೆರೂಪ ಬರೆಯುವ ಚೆಕ್ಕುಗಳು ಅಳುತ್ತ ಕೂತಿದೆ ಬೆಳಕಿನ ರೂಪ ನೆತ್ತರ ಬಳ್ಳಿಯ ನಡುವಿ...

ಯಾವುದೇ ಸಾಂಸ್ಕೃತಿಕ ಘಟಕ ಯಾವುದೇ ಸಂಸ್ಕೃತಿಯ ಸಂದರ್ಭದಲ್ಲಿ ಸರ್ವರೀತಿಯ ಸ್ವತಂತ್ರ ಘಟಕವಾಗಿರಲು ಸಾಧ್ಯವಿಲ್ಲ. ಅದು ಸಂಸ್ಕೃತಿಯ ಇತರೆ ಘಟಕಗಳೊಂದಿಗೆ ನಿಯತವಾದ ಸಂಬಂಧವನ್ನು ಇರಿಸಿಕೊಂಡೇ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ಸಾಧ್ಯ. ಈ ಮ...

ಗುಂಡನ ಮನೆಯ ಮುಂದೊಂದು ಇತ್ತು ಮಾವಿನ ಮರವೊಂದು ರೆಂಬೆ ಕೊಂಬೆಗಳ ಹರಡಿಬಿಟ್ಟು ಬಿಸಿಲಿಗೆ ಹಸಿರನು ಹೊದಿಸಿತ್ತು ಮುದ್ದಾಗಿ ಬೆಳೆದ ಮರವನು ನೋಡಿ ತೋರಣಕಾಗಿ ಜನ ಮುಗಿಬಿದ್ದು ಗುದ್ದಾಡಿ ಹಿಂಸೆಯ ಕೊಡುತ್ತಿದ್ದರು ಆ ಮರಕೆ ಮರೆತಂತೆ ಮನುಷತ್ವ ಕರುಣೆ ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....