ಮುಖ್ಯಬೀದಿಯಲ್ಲಿ `ಮಹಿಳಾ ಹೆರಿಗೆ ಆಸ್ಪತ್ರೆ’ ಎಂಬ ಬೋರ್ಡನ್ನು ಮಲ್ಲು ಗಮನಿಸಿದ. ಅವನಿಗೆ ಚೋದ್ಯವೆನಿಸಿತು. ಡಾಕ್ಟರ್ ಆಸ್ಪತ್ರೆಯ ಬಾಗಿಲಲ್ಲೇನಿಂತಿದ್ದರು. “ಸಾರ್ , ಇಲ್ಲಿ `ಪುರುಷರ ಹೆರಿಗೆ ಆಸ್ಪತ್ರೆ’ ಎಲ್ಲಿದೆ ಕೊಂಚ ತಿಳಿಸುತ್ತೀರಾ?” ಕೇಳಿದ. “ಎಲ್ಲಾದರೂ ಉಂಟೇನಯ್ಯಾ ಪುರುಷರ ಹೆರಿಗೆ ಆಸ್ಪತ್ರೆ?” ಮತ್ತೆ `ಮಹಿಳೆಯರ ಹೆರಿಗೆ ಆಸ್ಪತ್ರೆ’ ಅಂತ ದೊಡ್ಡದಾಗಿ ಬರೆಸಿದ ಬೋರ್ಡು ಇದೆ?” ತಿರುಗುಬಾಣ ಬಿಟ್ಟ ಮಲ್ಲು!
***