Home / ಲೇಖನ / ವಿಜ್ಞಾನ / ಪರಿಸರ ಮಾಲಿನ್ಯವಿಲ್ಲದ ಸೌರಶಕ್ತಿಕಾರು (ನೂತನ ಪ್ರಯೋಗ)

ಪರಿಸರ ಮಾಲಿನ್ಯವಿಲ್ಲದ ಸೌರಶಕ್ತಿಕಾರು (ನೂತನ ಪ್ರಯೋಗ)

ಬೆಂಗಳೂರಿನ ಅಜಾದ್ ನಗರದ ವಾಸಿ ಸೈಯ್ಯದ್ ಅಹಮ್ಮದ್ ಅವರಿಗೆ ಸೌರಶಕ್ತಿಯಲ್ಲಿ ಗಾಡಿ ಓಡಿಸುವ ಬಯಕೆಯ ತೀವ್ರತೆಯಿಂದಾಗಿ ಕಳೆದ ೩೦ ವರ್‍ಷಗಳ ಸತತ ಪ್ರಯತ್ನದ ಫಲವಾಗಿ ಸೌರಶಕ್ತಿಯಿಂದ ಕಾರು, ಮೂರುಚಕ್ರ, ದ್ವಿಚಕ್ರ ವಾಹನಗಳನ್ನು ಆರಾಮವಾಗಿ ಒಡಿಸಬಹುದೆಂದು ಸಾಬೀತು ಪಡಿಸಿದ್ದಾರೆ. (ಕಡಿಮೆ ವ್ಯಚ್ಚದಲ್ಲಿ) ವೃತ್ತಿಯಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಮಾರಾಟ ಮಾಡುತ್ತಿರುವ ಅಹಮ್ಮದ್ ಏನನ್ನಾದರೂ ಸಾಧಿಸಬೇಕೆಂಬ ಛಲವುಳ್ಳವರು. ತಮ್ಮ ಕೈಗೆ ಸಿಕ್ಕ ವಸ್ತುಗಳನ್ನು (ಉಪಕರಣ) ಬಳಸಿಕೊಂಡು, ಅದಕ್ಕೊಂದು ರೂಪನೀಡಿ ಸೂರ್ಯನ ಶಾಖಾವನ್ನು ಹಾಯಿಸಿ ಪರಿಸರ ಪ್ರೇಮಿ ಕಾರೊಂದನ್ನು ಕೊನೆಗೂ ಸಿದ್ಧಪಡಿಸಿದರು. ಈ ಕಾರಿಗೆ ಇವರು ಖರ್ಚು ಮಾಡಿರುವುದು ಕೇವಲ ೫೦ ಸಾವಿರ ರೂಪಾಯಿಗಳು ಮಾತ್ರ. ಸೌರಶಕ್ತಿ ಚಾಲಿತ ಈ ಕಾರು ೩೨೫ ಕೆ.ಜಿ. ತೂಗುತ್ತದೆ. ಮೋಡ ಸೂರ್ಯನನ್ನು ಮುಚ್ಚಿಕೊಂಡ ಸಂದರ್ಭದಲ್ಲಿಯೂ ಕಾರುಕೆಡದೆಂಬ ಆತಂಕ ಪಡಬೇಕಿಲ್ಲ ಈ ಕಾರಿಗೆ ವಿಶೇಷ ಬ್ಯಾಟರಿ ವ್ಯವಸ್ಥೆಯನ್ನು ಮಾಡಲಾಗಿದೆ. ಒಮ್ಮೆ ಬ್ಯಾಟ್ರಿ ಚಾರ್ಜ್ ಮಾಡಿದರೆ ನೂರು ಕಿ.ಮೀ. ಗಾಡಿ ಓಡಿಸಬಹುದು.

ಈ ಕಾರು ಇತರೆ ಕಾರುಗಳಂತೆ ಸದ್ದು ಮಾಡುವುದಿಲ್ಲ ಹೊಗೆಯನ್ನು ಉಗಳುವುದೇ ಇಲ್ಲ ಗೇರು ಬದಲಿಸುವ ಗೊಂದಲ ಇಲ್ಲ. ಗಾಡಿಹತ್ತಿ ಸೀದಾ ಸ್ಟೇರಿಂಗ್ ತಿರುಗಿಸುತ್ತ ಹೋಗುವುದಷ್ಟೇ ಕೆಲಸ. ಈಗಾಗಲೇ ಬೆಂಗಳೂರಿನ ಸುತ್ತಮುತ್ತ ಎಲ್ಲಿಯೂ ಕೈ ಕೊಡದ ಈ ಕಾರು ಯಶಸ್ವಿಯಾಗಿದೆ. ಬಡವರಿಗೆ ಕೈ ಗೆಟಕುವ ಬೆಲೆಯಲ್ಲಿ ಸಿಗುವ ಈ ಕಾರು ಶ್ರೀಮಂತರಿಗೆ ಮಾಲಿನ್ಯ ರಹಿತ ಈ ಕಾರನ್ನು ಓಡಿಸುವಾಗ ತೃಪ್ತಿಯನ್ನು ನೀಡುತ್ತದೆ. ಪರಿಸರ ಮಾಲಿನ್ಯವಿಲ್ಲದೇ ಕೇವಲ ಸೌರಶಕ್ತಿಯಿಂದಲೇ ನಡೆಯುವ ಈ ಕಾರು ಪರಿಸರವಾದಿಗಳಿಗೆಲ್ಲ ಅತ್ಯಂತ ಅಚ್ಚು ಮೆಚ್ಚಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...