ಪ್ರೀತಿಯಿಂದ ಕಟ್ಟಿದ
ಅವಳ ನಾಗರೀಕತೆಗಳ ಮೇಲೆ
ಕಾಣುತ್ತಿದೆ ನಿಮ್ಮದೇ ಕ್ರೂರ ಮುದ್ರೆ
ಅವಳೇ ಕಟ್ಟಿದ ಸಂಸ್ಕೃತಿಗಳ ಮೇಲೆ
ಇರಲಿ ಬಿಡಿ ಅವಳದೇ ಮುದ್ರೆ,
ನಿಲ್ಲಿಸಲಿ ಬಿಡಿ ಅವಳದೇ ಸೌಧ
ತೋರಿಸಲಿ ಬಿಡಿ
ಲೋಕಕ್ಕೆ ಹೊಸ ಸೂರ್‍ಯೋದಯ
ಕೇಳಲಿ ಬಿಡಿ ಹೊಸ ಸುಪ್ರಭಾತ
ರಚಿಸಲಿ ಬಿಡಿ ಅವಳದೇ ಇತಿಹಾಸ
ಅವನ ಚರಿತ್ರೆಯಲಿ ಅವಳು
ಮೂಡಿ ಬಂದಿದ್ದು ಸಾಕು
ಬೇಕಲ್ಲವೇ ಅವಳದೇ ಇತಿಹಾಸ?
ಯುಗಯುಗಗಳಿಂದ ಅವಳು ಸಂಗಾತಿ
ನಡೆದೇ ಬಂದಳು ನೋಡಿ
ನಿಮ್ಮ ಜೊತೆಗಾತಿ
ಅವಳಿಲ್ಲದ ನಿಮ್ಮ ಚರಿತ್ರೆ
ಪೂರ್ಣವಾಗುವುದಾದರೂ ಎಂತು?
ಅದಕ್ಕೆ……….
ನಿಮ್ಮ ಚರಿತ್ರೆಯಲ್ಲಿ
ಅವಳು ಮೂಡಿದ್ದು ಸಾಕು
ಹೊಸ ಚರಿತೆ ರಚಿಸುವ ಕೈ,
ಬುದ್ಧಿ ಭಾವಗಳೆಲ್ಲವೂ
ಅವಳವೇ ಆಗಿರಲಿ ಸಾಕು.
*****



















