ಐದು ತಿಂಗಳ ಪುಟ್ಟ ಮಗು ಒಂದನ್ನು ಎತ್ತಿ ಕೊಂಡು ಒಬ್ಬ ತಂದೆ ಹೋಟಲಿಗೆ ಹೋಗಿ ಮಗುವಿಗೆ ಇಡ್ಲಿ ತಿನಿಸಿ ಹೊರಗೆ ಬಂದು, ತಾನು ಅಗಿಯುತಿದ್ದ ತಂಬಾಕಿನ ಎಂಜಲ ಚೂರೊಂದನ್ನು ಇನ್ನು ಎರಡೇ ಹಲ್ಲು ಬಂದ ಮಗುವಿನ ಬಾಯಿಗೆ ಇಟ್ಟ ಮಗು ಮುಖ ಸಿಂಡರಿಸಿ ಕೊಂಡು ತಂದೆ ಕೊಟ್ಟ ಎಂಜಲು ಪ್ರಸಾದವನ್ನು ನುಂಗಲಾರದೆ ನುಂಗಿತು. ಮಗು ತಿಂದದ್ದು ನೋಡಿ ತಂದೆ ಏಕೆ ಹಸನ್ಮುಖನಾದನೋ ಅವನಿಗೂ ಗೊತ್ತಿಲ್ಲ, ದೇವರಿಗೂ ಗೊತ್ತಿಲ್ಲ.
*****