ಭಾವನಾಪ್ರಣಯೋದಂತ ಕಥೆ

ಭಾವನಾಪ್ರಣಯೋದಂತ ಕಥೆ

ಚಿತ್ರ: ಎಂ ಜೆ ಜಿನ್
ಚಿತ್ರ: ಎಂ ಜೆ ಜಿನ್

ಅಂದಿನ ವೈಭವ, ಆಳ್ವಿಕೆಯನ್ನು ಹೃದಯದಲ್ಲಿ ಭದ್ರವಾಗಿಟ್ಟುಕೊಂಡು ಸಾಕ್ಷಿಯಾಗಿ ನಿಂತಿರುವ ತುಂಗಭದ್ರೆ ನಾಸ್ಟಾಲ್ಜಕ್ಕಾಗಿಗಿ ಇದ್ದಾಳೆ ಎನಿಸುತ್ತೆ. ಒಮ್ಮೆ…..ಒಂದುಸಲ.. ಶ್ರೀಕೃಷ್ಣದೇವರಾಯರನ್ನ ನೋಡಿದರೆ…..ತಾ ಧನ್ಯಳಾದಂತಹ ಭಾವ ನಿರೀಕ್ಷಿಸಿದಂತಿದ್ದಾಳೆ. ಕೃಷ್ಣದೇವರಾಯರ ಕಾಲದ ತುಂಗಭದ್ರೆ ಅವರ ಹಾಗೆ ಕಾಲದಿಂದ ನಿರ್ಗಮಿಸಿದರೂ ಆ ಪ್ರವಾಹದ ಜೊತೆ ಹೊಡುಕೊಂಡು ಹೋಗಿದ್ದು ನೀರು ಮಾತ್ರವೇ.  ನೆನಪುಗಳಲ್ಲ!

ನದಿತೀರದಲ್ಲಿ ಕುಳಿತಿದ್ದ ಜೋಡಿ…ನದಿ ವಹಿಸಿದ ಗಂಭೀರತೆಯ ತಾವೂ ಹಂಚಿಕೊಂಡಂತಿದೆ. ಆತ..ಹೆಸರು ಶ್ರೀಕೃಷ್ಣ. ಐ‌ಐಟಿ ಯಲ್ಲಿ ಸಿವಿಲ್ ಇಂಜನಿಯರಿಂಗ್, ಐ‌ಐ‌ಎಮ್ ನಲ್ಲಿ ಪಿಜಿ ಪೂರ್ತಿ ಮಾಡಿದ್ದಾನೆ. ದೊಡ್ಡದೊಡ್ಡ ಕಂಪೆನಿಗಳಲ್ಲಿ ಆಫರ್ ಬಂದಿದ್ದರೂ ಹೋಗಲಿಲ್ಲ. ಆತನ ಪ್ಲಾನ್ಸ್ ಬೇರೇ. ಒಂದು ಕಡೆ… ಇಕೋ ಫ್ರೆಂಡ್ಲೀ ಕನ್ಸ್ಟ್ರಕ್ಷನ್ಸ್ ಮೇಲೆ ರಿಸರ್ಚ್ ಮಾಡುತ್ತಿದ್ದಾನೆ. ಗ್ಲೋಬಲ್ ವಾರ್ಮಿಂಗ್ ಕಡಿಮೆ ಆಗಬೇಕೆಂದರೆ ಒಳ್ಳೆಯ ಮಾರ್ಗ ಇಂತಹ ಕಟ್ಟಡವೇ ಎನ್ನುತ್ತಾನೆ. ಇನ್ನೊಂದು ಕಡೆ ಇಂಟರ್ನ್ಯಾಷನಲ್ ಲಿಟರರೀ ಟ್ರಸ್ಟ್ ಅವರು ನಿರ್ವಹಿಸುವ ಸೆಮಿನಾರ್ ನಲ್ಲಿ ಭಾರತೀಯ ಸಾಹಿತ್ಯವನ್ನು ಪ್ರಪಂಚ ಸಾಹಿತ್ಯ ಲೋಕಕ್ಕೆ ಪರಿಚಯ ಮಾಡುವ ಆಲೋಚನೆಯಲ್ಲಿದ್ದಾನೆ. ಅದಕ್ಕೆ ಸಾಹಿತ್ಯವನ್ನು ಆಂಗ್ಲದಲ್ಲಿ ಅನುವದಿಸಿದರೆ ಮಾತ್ರ ಸಾಲದು. ಆಸಕ್ತಿ ಇದ್ದ ವಿದೇಶಿಯರು ನಮ್ಮ ಭಾಷೇನ ಕಲಿಯಬೇಕು. ಹಾಗಾದರೇನೇ ಅದು ಸಾಧ್ಯವಾಗುವುದು ಎನ್ನುವುದು ಆತನ ಉದ್ದೇಶ. ವಿದೇಶಗಳಲ್ಲಿ ಇರುವ ಭಾರತೀಯರ ಪ್ರೋತ್ಸಾಹದಿಂದ, ಮುಖ್ಯವಾಗಿ ಅಲ್ಲಿಯ ಪ್ರೊಫೆಸರ್ರ ಸಲಹೆಗಳಿಂದ ಅಲ್ಲೇ ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ಒಂದು ಭಾರತೀಯ ಭಾಷಾಪೀಠವನ್ನು ಏರ್ಪಾಟು ಮಾಡಬೇಕೆನ್ನುವದು ಆತನ ಸಂಕಲ್ಪ. ಇವೇ ಪ್ರಸ್ತುತಕ್ಕೆ ಆತನ ಪ್ರಾಜೆಕ್ಟ್ಸ್.

ಈಗ ಆತ ಇಕೋ ಫ್ರೆಂಡ್ಲೀ ಕನ್ಸ್ಟ್ರಕ್ಷನ್ಸ್  ಮೇಲೆ ಮಾಡುವ ಸಂಶೋಧನೆಯ ಅಂತರ್ಭಾಗವಾಗಿ ಹಂಪಿಯಲ್ಲಿದ್ದಾನೆ. ಲೋಟಸ್ ಮಹಲ್ ನಲ್ಲಿರುವ ನ್ಯಾಚುರಲ್ ಎಯಿರ್ ಕೂಲಿಂಗ್ ಸಿಸ್ಟಮ್, ಕಲ್ಲುಗುಂಡು, ಸುಣ್ಣದಕಲ್ಲು, ಮಣ್ಣು, ಸಿಮೆಂಟ್ ನಿಂದಕಟ್ಟಿಸಿದ ವಾತಾವರಣಾನುಕೂಲ ಕಟ್ಟಡ ಆತನ ಆಕರ್ಷಿಸಿದ ಅಂಶಗಳು. ಈ ಅಂಶಗಳ ಮೇಲೆ ಇನ್ನಿಷ್ಠು ಸಂಶೋಧನೆ ಮಾಡಬೇಕೆಂದು ತನ್ನ ಹೆಂಡತಿ ಜೊತೆ ಹಂಪಿಗೆ ಬಂದಿದ್ದಾನೆ.

ಆ ಶಿಥಿಲಗಳಲ್ಲಿ ಆತ ಎಲ್ಲಿ ನೋಡಿದರಲ್ಲಿ ದೊಡ್ಡ ಇಂಜನಿಯರಿಂಗ್ ಕಂಡ. ಅದಕ್ಕೂ ಮಿಗಿಲಾಗಿ ಎಲ್ಲಿನೋಡಿದರಲ್ಲಿ ವಿಜಯನಗರ ಸಾಮ್ರಾಜ್ಯದ ವೈಭವ ಮನವನ್ನು ಸ್ಪರ್ಶಿಸಿತು. ಆ ಕಾಲದ ಒಳಗೆ….ಹಿಂದಕ್ಕೆ ಹೋದ ಭಾವನೆ…!
*  *    *     *
ಮೌನವಾಗಿ ನದಿಯನ್ನೇ ನೋಡುವ ಆತನ್ನ ಕದಲಿಸುತ್ತಾ..” ಏನಾದರೂ ಮಾತಡು ಕೃಷ್ಣಾ!” ಅಂದಳು ಆಕೆ.

“ಅಂದಿನಿಂದಾ ನೀವೆಲ್ಲರು ಬರ್ತಿರ್ತೀರಿ…ಹೋಗ್ತಿರ್ತೀರಿ. ಆದರೆ ನಾ ಇಲ್ಲೇ ಇದ್ದೀನಿ. ಎಲ ನೋಡುತ್ತಾನೆ ಇದ್ದೀನಿ” ಎಂದು ತುಂಗಭದ್ರೆ ಕೇಳಿದಂತೆಶ್ರೀಕೃಷ್ಣ ಭಾವಿಸಿದ. ಆ ಮಾತು ಕೇಳಿಸದೇ ಕೇಳಿಸಿತು ರಾಣಿಗೆ.”ಏನು ಏನೋ ಹೇಳುತ್ತಿದ್ದೀರಿ?” ಎಂದು ಕೇಳಿದಳು. ಅದೇನೋ ಕೇಳಿಸಿಕೊಂಡೆ “ನಂಗ್ಯಾಕೋ ರಾಯರ ಮಾತು ಇಲ್ಲೇ ಈ ಗಾಳಿಯಲ್ಲೇ ಇದ್ದಂತೆ ಅನಿಸುತ್ತಿದೆ. ನಮಗೆ ಕೇಳಿಸಿಕೊಳ್ಳಬೇಕಷ್ಟೆ” ಎಂದ ಶ್ರೀಕೃಷ್ಣ.
“ರಿಯಲ್ಲೀ…ಅದು ಹೇಗೆ?” ಅಂದಳಾಕೆ.
“ಏನಿದೆ? ಮಾತು ಅನ್ನುವದೂ ಎನರ್ಜೀ ತಾನೆ! ಅಂತಹ ಎನರ್ಜೀ ಹಿಡಿದುಕೊಳ್ಳುವ ರಿಸೀವರ್ಸ್ ಕಂಡುಹಿಡಿದರೆ ಸಾಕು.” ಅಂದ.
“ಇಂಪಾಸಿಬಲ್ ”
“ರೇಡಿಯೋ ವೇವ್ಸ್ ರಿಸೀವ್ ಮಾಡಿಕೊಂಡಂತೆ!…ಇದು ಮಾತ್ರ ಯಾಕೆ ಸಾಧ್ಯವಾಗಲ್ಲ? ಸಾಧ್ಯ ಮಾಡಿಕೊಳ್ಳಲು ನಮ್ಮ ಕೈಲಾದರೆ ಸಾಕು” ಅಂದ.

“ಹೌದು. ನಂಗೂ ಹಾಗೇ ಅನಿಸುತ್ತಿದೆ. ಈಗ ನೋಡು. ರಾಯರ ಗೋಪುರದ ಮೇಲೆ ಗುಬ್ಬಿಗಳು ಮಾತಾಡಿದಂತೆ, ವಿಠಲಾಲಯದ ಜೇಗಂಟೆ ಬಾರಿಸಿದಂತೆ, ರಾಯರು ವಿರೂಪಾಕ್ಷಾಲಯವನ್ನು ದರ್ಶಿಸಿದಂತೆ….ಆದ ಮೇಲೆ ವಿಹಾರಕ್ಕಾಗಿ ಈ ತುಂಗಭದ್ರೆ ತೀರಕ್ಕೆ ಬಂದಂತೆ ಭಾವನೆ ಬರುತ್ತಿದೆ. ಅವರ ಸಭೆ ಕಣ್ಣಿಗೆ ಕಟ್ಟಿದಂತಾಗಿದೆ. ನಿಂಗೇನೂ ಅನಿಸಿಲ್ಲವೆ?” ಟ್ರಾನ್ಸ್ ನಲ್ಲಿದ್ದಂತೆ ಮಾತಾಡಿದ ಶ್ರೀಕೃಷ್ಣ
“ಆ ಆ…ನಂಗೂ ಅನಿಸುತ್ತಿದೆ ಆದರೆ ನಿನ್ನಂತೆ ಅಲ್ಲ. “ಮಹಾಮಾತ್ಮ ತಿಮ್ಮರಸ” ಸಿನಿಮಾ ಮಾತ್ರ ನೆನೆಪಾಗುತ್ತಿದೆ. ನಮ್ಮಮ್ಮ ಬಲವಂತದಿಂದ ಟೀವಿ ಮುಂದೆ ಕೂಡಿಸಿ ಆ ಸಿನಿಮಾ ನೋಡು ಅಂದಳು. ಅಫ್ಕೋರ್ಸ್ ಭಾಳಾ ಭೇಷಿತ್ತೇಳು ಆ ಸಿನಿಮಾ. ಅಷ್ಠೇ ಅಲ್ಲ. ನಮ್ಮ ಪೂರ್ವೀಕರ ಪ್ರತಿಭೆ ಹೈಲೈಟ್ ಮಾಡೋ ಅಂತಹಾ ಹಾಡುಗಳು ಕೇಳುಸುತ್ತಿವೆ.”

ಆಕೆಯನ್ನ ನೋಡಿ ಅದೇನೋ ಒಂದು ತರಹಾ ನಕ್ಕು ಶ್ರೀಕೃಷ್ಣ..”ಹೌದೂ…ತಿಮ್ಮಣ್ಣ ಹೇಳಿದ ಪಾರಿಜಾತಾಪಹರಣ ನೆನಪಿದೆಯಾ?” ಅಂದ.
“ತಿಮ್ಮಣ್ಣ? ಅವರು ಹೇಳುವುದೇನು? ನಮ್ಮ ಕನ್ನಡ ಮೇಸ್ಟ್ರು ಹೇಳಿಕೊಟ್ಟರೆ..?” ಅಂದಳು ರಾಣಿ.
ಮತ್ತದೇ ನಗು ಶ್ರೀಕೃಷ್ಣನ ತುಟಿಯ ಮೇಲೆ.
“ನಿಂಗೇನೂ ನೆನಪಾಗಿಲ್ಲವೇ?” ಸಣ್ಣು ಧ್ವನಿಯಿಂದ ಕೇಳಿದ.
“ಪಾಠವೂ ನೆನಪಿದೆ…ಹಾ, ಇನ್ನು ಸತ್ಯಭಾಮಳು ಒದೆಯುವುದು ಇನ್ನೂ ಭೇಷು ನೆನಪಿದೆ” ಕೆರಳಿಸುವ ಧ್ವನಿಯಲ್ಲಿ ಹೇಳಿದಳು ರಾಣಿ.
ಅದೇನೂ ಹಿಡಿಸದೆ… “ಐನ್ನೂರು ವರ್ಷ ಆಗಿರಬೇಕಲ್ಲಾ?” ಯಾವುದೋ ಲೋಕದಿಂದ ಕೇಳಿದಂತನ್ನಿಸುತ್ತಿತ್ತು.
“ಹೌದಲ್ಲಾ!” ಸಮಾಧಾನ ಹೇಳಿದಳು.
ನಿನಗೆ ಆ ದಿನ ನೆನಪಿದೆಯಾ?”
“ಯಾವ ದಿನ”
ಅದೇ….ಪಾರಿಜಾತಾಪಹರಣ ಕೇಳಿದಮೇಲೆ…ನಿನ್ನ ಮಂದಿರಕ್ಕೆ ಬಂದನಲ್ಲಾ… ಅವತ್ತು!” ಕಕ್ಕಾಬಿಕ್ಕಿ ಆದಳಾಕೆ.
“ಆ ದಿನ ನೆನಪಿಗೆ ಬಂತಾ?” ಮತ್ತು ಕೇಳಿದ.
“ಶ್ರೀ! ಸ್ಟಾಪ್. ಯು ಮ್ಯಾಡ್ ಮ್ಯಾನ್…” ಅಂತ ಗಟ್ಟಿಗೆ ಬೈದು ಆತನ ಭುಜದ ಮೇಲೆ ಅಪ್ಪಳಿಸಿದಳು.
ಆ ಹ್ಯಾಂಗೋವರ್ ನಿಂದ ..ತನ್ನ ಮರತ ಸ್ಟೇಟಸ್ ನಿಂದ ಆಗ ಹೊರಗೆ ಬಿದ್ದ. “ಏನು ಹೊಡಿತೀಯಾ?” ಅಂತ ಕೇಳಿದ ಮೇಲೆ.
“ನೀನೇ ಶ್ರೀಕೃಷದೇವರಾಯನಂತೆ ಮಾತಾಡುತ್ತಿದ್ದೀಯ. ಅದೂ ಅಲ್ಲದೆ ನಂದಿ ತಿಮ್ಮಣ್ಣ..ಪಾರಿಜಾತಾಪಹರಣ….ನಿನ್ನ ಮಂದಿರಕ್ಕೆ ಬಂದೆ ಅಂತ ಏನೇನೋ ಮಾತಾಡುತ್ತಿದ್ದೀ.” ಅಂದಳು ರಾಣಿ.
“ಹೌದಾ?  ಪಾರಿಜಾತಾಪಹರಣ ಅಂದರೆ ನೆನಪಾಯಿತು.. ನಿನ್ನೆ ನನಗೂ ಒಂದು ಭಾವನಾಪ್ರಣಯೋದಂತ ಕಥೆ ತೋಚಿತು” ಎಂದ ಉತ್ಸಾಹದಿಂದ.
“ಭಾವನಾ…? ಏನದು?
“ಭಾವನಾ ಪ್ರಣಯೊದಂತ= ಭಾವನೆ+ಪ್ರಣಯ+ಉದಂತ  ಕಥೆ
“ಓ..ಇಲ್ಲಿವರೆಗೂ ಹೇಳಿದ್ದು ಭಾವನೆಯಲ್ಲವೆ? ಹಂಪಿಗೆ ಹೊರಟಿದಾಗಿಂದಾ ಭಾವನಾ ಪ್ರಪಂಚದಲ್ಲೇ ಇದ್ದಂತೆ ಕಾಣುತ್ತೆ. ಸರಿ ಹೇಳು ಇದೂ ರಾಯರ ಬಗ್ಗೇ ಅಂದುಕೊಳ್ಳಲೇನು?” ಎಂದಳು.
“ಅಂದುಕೋ. ಆದರೆ ಇದೆಲ್ಲಾ ಕೇಳಿದ ಮೇಲೆ ನಿನ್ನ ಕೆನ್ನೆ ಸೇರುವ ಕೆಂಬಣ್ಣನ್ನ ನನ್ನ ತುಟಿಗಳಿಗೆ ಕೊಡಲೇ ಬೇಕು ಕಣೇ!” ಎಂದನಾತ.
“ಹೌದೇ? ಮತ್ತೆ ನನ್ನ ಕಣ್ಣಲ್ಲಿ ಆ ಬಣ್ಣ ಕಾಣಿಸಿದರೆ..” ನಾಚಿಕೊಂಡೂ ಅದನ್ನ ತೋರಿಸದೆ ಕೇಳಿದಳು.
“ಆಗ ..ನನ್ನ ಕೆನ್ನೆಗೆ ಕೊಡುವಿಯಂತೆ..” ಕೆನ್ನೆಗೆ ಕಯ್ಯಿಟ್ಟುಕೊಂಡು ಹೇಳಿದ. ಹಾಯಾಗಿ ನಕ್ಕುಬಿಟ್ಟಳು ರಾಣಿ. ಹತ್ತಿರಕ್ಕೆ ಬಂದು “ಹೇಳು ಮತ್ತೆ “ಅಂದಳು. ಆಕೆಯ ಕಯ್ಯನ್ನು ಹಿಡಿದು ಶ್ರೀಕೃಷ್ಣ ಹೇಳಲು ತೊಡಗಿದ.
*  *  *

ಶ್ರೀಕೃಷ್ಣದೇವರಾಯರು ಪಟ್ಟಾಭಿಷಿಕ್ತರಾದ ಮೇಲೆ ಕೈ ಹಿಡಿದ ಒಡತಿಯ..ಪಟ್ಟದ ರಾಣಿ ಮಾಡಿ ಕೆಲವು ವರ್ಷಗಳ ಮೇಲೆ..
*  *  *

ಎಷ್ಟು ಹೂವು! ಎಷ್ಟು ಹೂವು? ಇವೆಲ್ಲಾ ರಾಣಿ ಅವರಿಗೇನೇ? ಮಾಲೆಯ ಕಟ್ಟುವ ಮಾಲತಿಗೆ ಬೇಸರವಾಯಿತು.ಅಸೂಯೆ ಕೂಡಾ ಬಂದಿರಬಹದು. ಅಷ್ಟು ಪ್ರೀತಿ ಅಂದ ಮಾತ್ರಕ್ಕೆ…ಇಷ್ಟೊಂದು ಹೂವೇ?

ಇದೇನು ಉಲ್ಲಾಸವ ಕೆರಳಿಸುವದೋ, ಒಸಗೆಯ ನೀಡುವುದೋ?
ಏನಾದರೂ ರಾಯರಿಗೇ ಸರಿ… ಅವತ್ತು ರಾಣಿಯವರು ಹಾಸಿಗೆ ಮೇಲೆ ಗಜಿಬಿಜಿಯಾಗಿ ಮಲಗಿದ್ದನ್ನು ನೋಡಿ ಸಿಟ್ಟಿನಿಂದ ಅಂತಃಪುರವನ್ನು ಬಿಟ್ಟು ಹೋದವರು….ಮತ್ತು ಇವತ್ತೇ ಬರುತ್ತಿರುವುದು. ರಾಣಿ ಅವರ ತವರಿನ ಕವಿ ಲಿಖಿಸಿರುವ….”ಪಾರಿಜಾತಾಪಹರಣ ” ಎನ್ನುವ ಕಾವ್ಯ ಕೇಳಿದಮೇಲೆ ತಮ್ಮ ದೋಷವನ್ನು ಗುರ್ತಿಸಿ ತಾವು ಬರುತ್ತಿರುವುದಾಗಿ ರಾಣಿಯವರಿಗೆ ಸೂಚನೆ ಮಾಡಿದರು.

ಅವರು ಬರಬೇಕೆಂದರೆ ಸುಮ್ಮನೆ ಬರ್ತಾರೇನು? ಏನು? ಮುಂಚೆನೇ ತಮ್ಮ ಸ್ಥಿತಿಯನು ಗುರ್ತುಮಾಡಲು ಪ್ರಯತ್ನ ಮಾಡಲ್ವೇನು?
ಜಾಜಿ, ಮಲ್ಲಿಗೆ, ಸಂಪಿಗೆ, ಮೊಗಲಿ ಹೂವು, ಚಂಪ , ದೇವಗನ್ನೇರು, ಚಂಡು, ಸೇವಂತಿ ಗಳು!
ಒಬ್ಬಳಿಗೋಸ್ಕರ ವಸಂತವನ್ನೇ ಆಕೆಯ ಅಂಗಣದಲ್ಲಿ ತಂದಿಡುವದು.. ಪರವಶಪಡಿಸುವುದು..ಅಂತವರಿಗೆ ಮಾತ್ರ ಸಾಧ್ಯ.

ರಾಶಿ ಹಾಕಿದ ಹೂಗಳು..ಪರಸ್ಪರ ಮೌನದಲ್ಲೇ ಮಾತಾಡುತ್ತಿವೆ. ಇವತ್ತು ನಮಗೆ ರಾಯರ ರಸಜ್ಞತೆಯ ರಮ್ಯತೆ ನೋಡುವ ಭಾಗ್ಯ ಸಿಕ್ಕಿದಂತೆ ನಲಿಯುತ್ತಿವೆ. ರಾಣಿಯವರ ಅಂತಃಪುರವೆಲ್ಲಾ ಹೂಪರಿಮಳವೇ. ದ್ವಾರಬಂಧಕ್ಕೆ ಚೆಂಡು, ಸೇವಂತಿ ಗಳು! ಅಗಲದ ಗಂಗಾಳದಲ್ಲಿ ಚಂಪ, ದೇವಗನ್ನೇರು ಹೂಗಳು! ಚಪ್ಪರಗಾಲಿನ ಮಂಚಕ್ಕೆ ಜಾಜಿಮಾಲೆಯ ಅಲಂಕಾರ! ಪಟ್ಟುಹಾಸಿಗೆ ಮೇಲೆ ಮಲ್ಲಿಗೆ ಮೊಗ್ಗು! ರಾಣಿಯವರಿಗೆ ಮೊಗುಲು ಹೂವಿನ ಹರಳು! ರಾಯರಿಗಾಗಿ ಸಂಪಿಗೆಮಾಲೆ!
ಇಷ್ಟು ಹೂವನ್ನು ನೋಡಿದ ಮಾಲತಿ ಮನದಲ್ಲಿ ದವನದಂತಹಾ ಆಶೆ ಚಿಗುರಿತು. ಯಾರೂ ನೋಡದಂತೆ ಕೈಗಳಲ್ಲಿ ಹುವ್ವು ತುಂಬಿಕೊಂಡು ಸೆರೆಗು ಕಟ್ಟಿಕೊಂಡು ಸದ್ದು ಮಾಡದೆ ತೋಟದ ಹಾದಿ ಹಿಡಿದಳು.
ಅಲ್ಲಿ ಅವಳ ಗಂಡ ತೋಟದ ರಾಮ ಯಾರನ್ನೋ ಎದುರುನೋಡಿದಂತೆ ಒಬ್ಬನೇ ಕುಳಿತಿದ್ದ.
ಸೆರೆಗಲ್ಲಿರುವ ಹುವ್ವೆಲ್ಲಾ ಆತನ ಮೇಲೆ ಸುರಿವಿದಳು ಮಾಲತಿ. ಗಿರುಕ್ಕಂತ ಈ ಕಡೆ ತಿರುಗಿದ ರಾಮ. ಮಾಲತಿಯ ಹಿಡಿಯಲು ನೋಡಿದ. ತಪ್ಪಿಸಿಕೊಂಡು ಓಡಿದಳಾಕೆ. ಹೇಗಾದರೇನು ಆಕೆಯ ಹಿಡಿದು ಎರಡು ಕೈಗಳಲ್ಲಿ ಎತ್ತಿಕೊಂಡು ಗುಡಿಸಲು ಕಡೆ ಹೋದ. ಅಲ್ಲಿ ಕಟ್ಟೆ ಮೇಲೆ ಕೂಡಿಸಿ, ಮಾಲತಿ ತನ್ನಮೇಲೆ ಹಾಕಿದ ಹುವ್ವನ್ನ ಆರಿಸಿಕೊಂಡು ತಂದ. ಸಂಪಿಗೆಯನ್ನ ಆಕೆಯ ಕತ್ತಿಗೆ ನಾಜೊಕಾಗಿ ಹಚ್ಚಿಸಿ ವಾಸನೆಯ ನೋಡಿದ.
“ಇದೇನು ಮಾಲತೀ! ಸಂಪಿಗೆ ಜಾಜಿಯ ಗಂಧ ಬರ್ತಿದೆ?” ಎಂದು ಕೇಳಿದ. “ನಿಜವೇನು?” ಅಂತ ಮಾಲತಿ ನೋಡಿದಳು. ನಿಜವೇ! ಹಿಂದಲೇ ಜಾಜಿ ಹುವ್ವನ್ನ ತೊಗೊಂಡು ನೋಡಿದಳು. ಅದರ ವಾಸನೆ ಮೊಗುಲು ಹುವ್ವಂತೆ ತೋಚಿತು ಮಾಲತಿಗೆ. ಒಂದೇ ಹತ್ತಿರ ಎಲ್ಲವೂ ಇದ್ದ ಕಾರಣಕ್ಕಾಗಿ ಇರಬಹದು ಹುವ್ವೆಲ್ಲಾ ಒಂದರ ಸುಗಂಧವ ಇನ್ನೊಂದು ಹಚ್ಚಿಕೊಂಡಿದೆ. ಗಮ್ಮತ್ತಾದ ರೋಮಾಂಚನವಾಯಿತು ಇಬ್ಬರಿಗೆ.
ಆ ಹಿಡಿ ಹೂಗಳೇ ಸಾಕಷ್ಟು ಆಶೆಗಳನ್ನು ಪ್ರಚೋದನೆ ಮಾಡಿದ್ದವು. ಒಂದೇ ಮನವು, ಒಂದೇ ತನುವಾಗಿ ಕಲೆತು, ಕರಗಿದ ಆ ದಂಪತಿಯಗಳಿಗೆ… ತಮ್ಮ ಸೌರಭದ ಸುರಿಮಳೆಯಿಂದ ಬೆಳಗಾಗುವದ ತೆಳಿಯದಂತೆ ಮಾಡಿದವು. ಆದರೆ…ಅವರಿಬ್ಬರಿಗೆ ಗೊತ್ತಾಗದ ಇನ್ನೊಂದು ಸಂಗತಿ ..ವಿಶೇಷವೂ ಇದೆ.
ಅದೇನಂದರೆ… ಅವರಿಬ್ಬರನ್ನೂ ರಾಯರು ಆ ಸಾಯಂಕಾಲ ನೋಡಿದ್ದಾರೆ. ಭಾಳಾ ದಿನ ಕಳೆದಮೇಲೆ ರಾಣಿಯನ್ನು ನೋಡಲು ಹೋಗುವ ರಾಯರು ಮನದಲಿ ಮಧುರಭಾವನೆಯ ತುಂಬಿಸಿಕೊಳ್ಳಲು, ಏಕಾಂತವಾಗಿ ಆ ತೋಟದಲಿ ವಿಹಾರಕ್ಕೆ ಬಂದಿದ್ದರು. ಅದೇ ಸಮಯದಲ್ಲಿ ಇವರಿಬ್ಬರೂ ಅವರಿಗೆ ಕಾಣಿಸಿಕೊಂಡಿದ್ದಾರೆ. ನೋಡಬಾರದೆಂದೇ..ನೋಡಬಾರದ ಕೆಲುವೊಂದು ಸನ್ನಿವೇಶ ನೋಡಿಯೂ ಆಗಿದೆ.
ರಾಯರು ಹಿಂದಿರಿಗಿದರು.
ಆ ರಾತ್ರಿ ಮುಗಿತು. ಒಂದು ರಾತ್ರಿಗೇ…ಹೊವು ಬೇಸರಗೊಂಡಿತು. ಹುವ್ವಿನ ಮೈಕದಲ್ಲಿ ಮುಳುಗಿದ್ದು ಎರಡು ಜೋಡಿ… ಆದರೆ ಅವರನ್ನ ನೋಡಿ ಗಮ್ಮತ್ತಲ್ಲಿ ಮುಳುಗಿದವು ಹೂರಾಶಿಗಳು.
ಸಿಹಿ ರಾತ್ರಿಯ ನೆನಸಿಕೊಳ್ಳುವುದು ಜೋಡಿಗಳಾದರೆ…ಅವರನ್ನ ನೆನಸುವದು ಈ ಹುವ್ವುಗಳು.
ಅಂತಃಪುರದಲ್ಲಿ ಒಂದು ಜೋಡಿ! ಅಂಗಣದಲ್ಲಿ ತೋಟದೊಳಗೆ ಇನ್ನೊಂದು ಜೋಡಿ!
ಹುವ್ವೆಲ್ಲಾ ರಾಶಿಯಾಗಿ ತೋಟದ ಒಂದು ಮೂಲೆಯಲ್ಲಿರುವ ಹೂಭಾವಿಯಲ್ಲಿ ಬಿದ್ದಿವೆ. ಹೌದು ಮತ್ತೆ..ಮರುದಿನ ದಾಸಿಯರು ಆ ಹುವ್ವನ್ನೆಲ್ಲಾ ತೋಟದಲ್ಲಿ ಬಿಸಾಕಿದ್ದಾರೆ. ಮಾಲತಿ ಸಹ ಸದ್ದು ಇಲ್ಲದೇ ತನ್ನ ಹಿಂದೆ ತಂದ ಹುವ್ವನ್ನು ಅಲ್ಲೇ ಹಾಕಿದಳು.
ಆ ಹುವ್ವೆಲ್ಲಾ ನಿಸ್ತೇಜವಾಗಿದ್ದಾಗ ರಾಣಿ ಹತ್ತಿರ ಇದ್ದ ಮೊಗುಲು ಹುವ್ವೊಂದು ಮಾಲತಿ ತೊಗೊಂಡು ಹೋದ ಸಂಪಿಗೆ ಹುವ್ವನ್ನು ಕೇಳಿತು.
“ನಿನ್ನೆ ಸಾಯಂಕಾಲದಿಂದಾ ನೀನು ಕಾಣಿಸಲೇ ಇಲ್ವೇ?”
“ಮಾಲತಿ ನನ್ನ ತೊಗೊಂಡು ಹೋಗಿದ್ದಳಲ್ಲಾ!” ಸ್ವಲ್ಪ ಸಿಟ್ಟಿನಿಂದ ಹೇಳಿದಳು
ಮೊಗುಲು ಸಂಭ್ರಮಗೊಂಡಿತು.
“ಹೌದೇನು? ಹೇಳಲೇ ಇಲ್ಲ? ನೀನು ನಿಜವಾಗಲೂ ಅದೃಷ್ಟವಂತೆ” ಸ್ವಲ್ಪ ಅಸೂಯೆ ನಿಂದ ನೋಡಿದಳು.
“ಮತ್ತೇನು? ಅದೃಷ್ಟವೇ. ನಿನ್ನೆಲ್ಲಾ ನಾವೇನಂದುಕೊಂಡಿದ್ದಿವಿ? ರಾಯರ ರಸಜ್ಞತೆಯ ರಮ್ಯತೆವನ್ನು ನೋಡಲು ಬಯಸಿಲ್ಲವೇ? ಏನು ಮಾಡುವುದು? ಪ್ರಾಪ್ತಿ ಇಲ್ಲದೆ ಹೋಯಿತು.” ನಿಟ್ಟುಸಿರು ಬಿಟ್ಟಳು ಸಂಪಿಗೆ.
” ಹೌದೇಳು…ಆದರೆ ರಾಯರು ರಾಣಿಯವರಿಗೆ ತೋಟರಾಮನ ಸರಸತೆಯನ್ನೇ ಹೇಳುತ್ತಿದ್ದರು ನಿನ್ನೆ. ತೋಟದ ರಾಮನ ತುಂಬಾ ಮೆಚ್ಚಿಕೊಂಡರು.”
“ಯಾಕೆ”
“ಸಾಯಂಕಾಲ ವಿಹಾರಕ್ಕೆ ಬಂದಾಗ ರಾಯರು ನೋಡಿದರು ಈ ಜೋಡಿಯನು”
“ಮತ್ತೆ ಸಿಟ್ಟು ಮಾಡಿಕೊಳ್ಳದೆ ಮೆಚ್ಚಿದರೇ?” ಆಶ್ಛರ್ಯ ವಾಯಿತು ಸಂಪಿಗೆಗೆ.
“ಇರು..ನಿಂಗೆ ಯಾಕೆ ಆಶ್ಚರ್ಯ, ಸಿಟ್ಟು? ಹೆಮ್ಮೆ ಪಡಬೇಕು ನೀನು.”
“ಸಾಕು ನಿಲ್ಲಿಸು. ಮೊದಲು ವಿಷಯ ಹೇಳು.”
“ನಿನ್ನೆ ಸಾಯಂಕಾಲ ರಾಮ ಮಾಲತಿ ಹತ್ತಿರ ಕುಳಿತು ಏನು ಮಾಡಿದ?”
“ನೀನೇ ಹೇಳು. ನನ್ನಗಿಂತಾ ಇಲ್ಲಿಯ ವಿಷಯವೆಲ್ಲಾ ನಿನಗೇ ಚೆನ್ನಾಗಿ ಗೊತ್ತಿರಬೇಕಲ್ಲಾ” ವ್ಯಂಗ್ಯವಾಡಿದಳುಸಂಪಿಗೆ.
“ಮಾಲತಿ ಕಾಲಗಜ್ಜೆಯನ್ನ ತನ್ನ ಕೈಯಿಂದ ಸರಿಮಾಡಿದನಂತೆ.”
“ಹೌದು..”
“ಆಕೆಯ ಮೊಣಕಾಲು ಮೇಲೆ ತಲೆಯಿಟ್ಟು ಕಾಲಿಗೆ ಹಚ್ಚಿರುವ ಪಾರಾಣಿ ಹರ್ಷಣನ ಮೆಚ್ಚಿದನಂತೆ.”
“ಆದರೆ..”
“ಆ ಪಾರಾಣಿ ಸುತ್ತೊ ತನ ಬೆರಳಿಂದಾ ಬರದನಂತೆ.”
“ಆಹಾ..”
“ಕಾಲ ಬೆರಳನ್ನ ನಾಜೂಕಾಗಿ ಎಳದನಂತೆ.”
“ಅಕ್ಷರಶಃ”
“ಕೊನೆಗೆ..ಆಕೆಯ ಅಂಗಾಲಿಗೆ ಮುದ್ದಿಟ್ಟನಂತೆ.”
“ಹೌದು…ಆದರೆ?”
“ಅದೆಲ್ಲಾ ರಾಯರು ನೋಡಿಬಿಟ್ಟಾರೆ.”
“ಅದೇನಷ್ಟು ದೊಡ್ಡ ಸಮಾಚಾರ? ಮಹಾರಾಜರವರು! ಒಂದು ಸಾಮಾನ್ಯ ತೋಟಗಾರನ ಮೆಚ್ಚುವುದೇನಿದೆ ? ಭಾಳಾಭಾಳಾ ಸಣ್ಣ ವಿಷಯ.” ಅಂದಳು ಸಂಪಿಗೆ.
“ಆ ಸಣ್ಣ ಸಣ್ಣ ವಿಷಯಗಳೇ ರಾಯರ ಹೃದಯವನ್ನು ಗೆದ್ದಿವೆ ಗೊತ್ತೇನು?”
“ಭೇಷಿದೆ. ತೋಟಗಾರನು ರಾಯರಂತೆ ಇಷ್ಟು ಹೂವು ಹೆಂಡತಿಗೆ ಕಳಿಸಲು ಆಗುತ್ತಾ? ರಾಣಿಯವರಿಗೆ ಕೊಡುವಷ್ಟು ಆಭರಣಗಳನ್ನು ಮಾಲತಿಗೆ ಕೊಡಲು ಆಗುತ್ತದೆಯೇ? ಅಂಗರಂಗ ವೈಭೋಗದಿಂದ ನೋಡಿಕೊಳ್ಳಲು ಆಗುತ್ತದೆಯೇ? ಪಟ್ಟದರಾಣಿ ಮಾಡಲು ಆಗುತ್ತದೆಯೇ?” ಪರಿಹಾಸ ಮಾಡಿದಳು ಸಂಪಿಗೆ.
“ಆ..ಅಲ್ಲಿಗೇ ಬರ್ತೀನಿ. ಅಷ್ಟು ಅವಸರದ ಮಾತು ಬೇಡ. ಎಲ್ಲಾ ಕೇಳು.”
“ಊ..ಹೇಳು ಕಣೇ..”
“ಇದೇ ಮಾತುಗಳನ್ನು ರಾಯರು ಅಂದರು. ಆದರೆ ಇನ್ನೊಂದು ದೃಕ್ಕೋಣದಲ್ಲಿ. ಇವೆಲ್ಲಾ ಕೊಡದ ಸಂತೋಷವನ್ನು ಸಣ್ಣ ಸಣ್ಣ ವಿಷಯಗಳೇ ಕೊಡಲು ಸಾಧ್ಯವಂತೆ. ಇಂತಹಾ ಸಣ್ಣ ಸತ್ಯವನ್ನು ತಿಳಿದುಕೊಳ್ಳದೇ ಹೋದೆನೇ? ಈ ಪ್ರಣಯದ ಹಿಂದೆ ಇದ್ದ ಅನುಬಂಧವನ್ನು ಗುರ್ತಿಸಿಲ್ಲ . ರಾಜ್ಯದ ಹೊತ್ತಳ, ಪಾಲನಾ ತಂತ್ರಗಳಲ್ಲಿ ಮುಳುಗಿ ನಿಷ್ಕಲ್ಮಷವಾದ ಅನುರಾಗವನ್ನು ನಿನ್ನ ಬಳಿ ನಾನು ತೋರಿಸಲಾರದೆ ಹೋದೆ. ಮೇಲೆ ಸಿಟ್ಟಾಗಿ ಇಷ್ಟು ದಿನ ನಿನ್ನ ಹತ್ತಿರ ಬರದೆ..ನಿನ್ನ ಮನವನ್ನು ಎಷ್ಟು ಕಷ್ಟಗೊಳ್ಳಿಸಿದ್ದೀನಿ! ನನ್ನ ಮನ್ನಿಸಿಬಿಡು ಅಂದರು ರಾಯರು.”
“ಆ..!!” ವಿಸ್ಮಯಗೊಂಡಳು ಸಂಪಿಗೆ.
“ತಿಮ್ಮಣ್ಣನ ಪಾರಿಜಾತ ನನ್ನ ದೋಷವನ್ನ ನನಗೆ ತಿಳಿಸಿದರೆ, ತೋಟದ ರಾಮನ ಚೇಷ್ಟೆ ನನ್ನಲ್ಲಿರುವ ನಿಜಪ್ರೇಮಿಕನನ್ನು ಎಚ್ಚರಿಸಿದವು. ಅಂದರು ರಾಯರು.”
ಈಗ ತಿಳಿಯಿತು ಸಂಪಿಗೆ.
“ನಿಜಕ್ಕೂ ರಾಯರದು ಎಂಥಾ ದೊಡ್ಡ ಹೃದಯ! ರಾಜ್ಯವನ್ನೇ ಅಲ್ಲ.. ಜನಗಳ ಮನವನ್ನೇ ಗೆದ್ದಿದ್ದಾರೆ.” ಅಂದಳು.
*****

ತೆಲುಗು ಮೂಲ: ಸುವರ್ಚಲ ಚಿಂತಲಚೆರುವು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೭೯
Next post ಪ್ರಜಾರಾಜ

ಸಣ್ಣ ಕತೆ

 • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

  ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

 • ನಿಂಗನ ನಂಬಿಗೆ

  ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

 • ವಾಮನ ಮಾಸ್ತರರ ಏಳು ಬೀಳು

  "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

 • ಬಾಗಿಲು ತೆರೆದಿತ್ತು

  ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

 • ಎರಡು…. ದೃಷ್ಟಿ!

  ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…