ನಗುನೀನು

ನಗುನೀನು, ನಗಿಸುತ್ತಿರು ನೀನು
ಜೀವನ ಜಂಜಾಟದಲಿ
ಸೋತು ಬೇಸತ್ತವರನು|
ನಗು ನೀನು, ನಗಿಸುತ್ತಿರು ನೀನು
ಬಾಳ ಗೋಳಿನಲಿ
ಬಳಲಿ ಬೆಂಡಾದವರನು||

ಹಸುಗೂಸ ಅಕ್ಕರೆಯ ಮಾತ
ಕೇಳಿಯೂ ನಗದವರನೊಮ್ಮೆ|
ಅರಳಿಸು ಮಂದಹಾಸವನು
ಮುಖಾರವಿಂದಗಳಲಿ|
ಮಿನುಗಿಸು ನಗೆ ಮಿಂಚ
ಹೊಲಿದ ತುಟಿಗಳಂಚಲಿ||

ಲಾಸ್ಯದ ತೋರಣ ರಚಿಸಿ
ನಗುವ ಸಿಹಿ‌ಉರಣ ಬಡಿಸಿ
ಹಾಸ್ಯದ ರಸದೌತಣ ಉಣಿಸಿ|
ಬಣ್ಣಬಣ್ಣದ ಚೆಲುವ
ನಗು ರಂಗೋಲಿಗಳ ಬಿಡಿಸಿ
ಬಗೆ ಬಗೆ ದಂತಪಂಕ್ತಿಗಳ
ಮುಷ್ಕರ ನಿಲ್ಲಿಸಿ ಒಮ್ಮೆ ನಗು ಅರಳಿಸೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಮಿಳ್ ಸೆಲ್ವಿ
Next post ಗಣೇಶ ಪರ್ವ

ಸಣ್ಣ ಕತೆ

 • ಉರಿವ ಮಹಡಿಯ ಒಳಗೆ

  ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

 • ದೇವರೇ ಪಾರುಮಾಡಿದಿ ಕಂಡಿಯಾ

  "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

 • ಮಲ್ಲೇಶಿಯ ನಲ್ಲೆಯರು

  ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

 • ಮೃಗಜಲ

  "People are trying to work towards a good quality of life for tomorrow instead of living for today, for many… Read more…

 • ಸಾವಿಗೊಂದು ಸ್ಮಾರಕ

  ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…