ಒಬ್ಬೊಬ್ಬರಿಗೆ ಒಂದೊಂದ್ ಚಿಂತೆ
ಗುಳ್ಳೆ ನರಿಗೆ ಬಾಲದ ಚಿಂತೆ
ಕಂಠಪುಚ್ಚೆಗೆ ಮೀಸೆಯ ಚಿಂತೆ

ಕಾಮನ ಬಿಲ್ಲಿಗೆ ಬಣ್ಣದ ಚಿಂತೆ
ನವಿಲಿಗೆ ಸಾವಿರ ಕಣ್ಣಿನ ಚಿಂತೆ
ನಿನಗೇತರ ಚಿಂತೆಯೊ ಪುಟ್ಟಾ ಎಂದರೆ
ಸಂತೆಯ ಚಿಂತೆ ಅಂತಾನೆ ತುಂಟ!
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)