ಮರಿ ಇಲಿ ಸಾಹಸ

ಒಂದೂರಲ್ಲಿ ಇದ್ದರು ರಾಯರು
ಅವರ ಮನೆಯಲಿ ಇಲಿಗಳು ನೂರು
ಎಲ್ಲೆಂದರಲ್ಲಿ ಅವುಗಳ ವಾಸ
ಬೇಡ ರಾಯರಿಗಿದು ತರಲೆ ಸಹವಾಸ

ಮಗಳ ಬೂಟು ರಾಯರ ಹ್ಯಾಟು
ಹೆಂಡತಿ ಸೀರೆ ಮಗನ ಸೂಟು
ಸೋಪು ಬ್ರೆಷ್ ಕಿಟಕಿಯ ಕರ್ಟನ್
ಎಲ್ಲವು ಆದವು ರೂಪದಿ ಮಾಡ್ರನ್

ಇಲಿಗಳ ಓಡಿಸೆ ಅವರ ಪ್ರಯತ್ನ
ಆದವು ಎಲ್ಲಾ ವಿಫಲಯತ್ನ
ರೋಸಿದ ರಾಯರು ತಂದರು ಬೆಕ್ಕು
ಅಡಗಿಸಲೋಸುಗ ಇಲಿಗಳ ಸೊಕ್ಕು

ಬೆಕ್ಕನು ಕಂಡು ಇಲಿಗಳು ನೊಂದು
ಕರೆದವು ಕೂಡಲೆ ಸಭೆಯನ್ನೊಂದು
ಬೆಕ್ಕಿನ ಕಾಟವು ಸಾಕೇಸಾಕು
ತಪ್ಪಿಸಿಕೊಳ್ಳಲು ಪರಿಹಾರವು ಬೇಕು

ಕೂಡಲೆ ಒಂದು ಹಿರಿ ಇಲಿಬಂದು
ಗಣಗಣ ಗಂಟೆಯ ತಂದಿತು ಒಂದು
ಕಟ್ಟಿರಿ ಶತ್ರುಗೆ ಕೊರಳಿಗೆ ಎಂದು
ಆಡಲೆ ಇಲ್ಲ ಮಾತನು ಒಂದೂ

ಶತಶತಮಾನದ ಈ ಸಮಸ್ಯೆ
ಪರಿಹಾರಕ್ಕೆ ಮಾಡಿದ್ದವು ತಪಸ್ಸೇ
ಆದರು ಸಾಧ್ಯವು ಆಗದು ಎಂದು
ಗೋಣನು ಕೆಳಗೆ ಹಾಕಿದವಂದು

ಕೈಚೆಲ್ಲಿ ಕುಳಿತ ಇಲಿಗಳ ಗುಂಪು
ಬೆಕ್ಕಿಗೆ ಸಿಕ್ಕವು ಭೋಜನ ಸೊಂಪು
ಮರಿ ಇಲಿಯೊಂದು ಹಾಕಿತು ಲೆಕ್ಕ
ಹುಡುಕಲೆ ಬೇಕು ಉಪಾಯವು ಪಕ್ಕ

ಮರಿಇಲಿ ರಾಯರ ಕೋಣೆಯಲಿ
ಶತಪಥ ಹೆಜ್ಜೆಯ ಹಾಕುತಲಿ
ನೆನೆಯಿತು ಗಣಪನ ಮನದಲ್ಲಿ
ಹೊಳೆಯಿತು ಸಂಚು ತಲೆಯಲ್ಲಿ

ರಾಯರು ನಿತ್ಯ ಗುಳಿಗೆಯ ನುಂಗಿ
ನಿದ್ರಿಸುವರು ನೆಮ್ಮದಿಯಲಿ ಮಲಗಿ
ಮರಿಇಲಿ ತಂದು ನಿದ್ರೆಯ ಗುಳಿಗೆ
ಹಾಕಿತು ಬೆಕ್ಕಿನ ತಟ್ಟೆಯ ಒಳಗೆ

ಒಡತಿಯು ತಂದಳು ಹಾಲನ್ನು
ಮುದದಲಿ ಕರೆದಳು ಬೆಕ್ಕನ್ನು
ಕಣ್ಮುಚ್ಚಿ ಕುಡಿಯಿತು ಹಾಲನ್ನು
ನಿದ್ರೆಗೆ ಅಪ್ಪಿತು ಧರೆಯನ್ನು

ಮರಿಇಲಿ ಆಗಲೆ ಗಂಟೆಯನು
ಬಿಗಿಯಿತು ಬೆಕ್ಕಿನ ಕೊರಳನ್ನು
ಮರಿಇಲಿ ಸಾಹಸ ಕೊಂಡಾಡಿದವು
ಸಂತಸದೀ ಕುಣಿಕುಣಿದಾಡಿದವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧರ್ಮದ ಮುಸುಕಿನೊಳಗಿಂದ
Next post ಚಂದಿರ

ಸಣ್ಣ ಕತೆ

 • ಮಿಂಚಿನ ದೀಪ

  ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

 • ವಿಷಚಕ್ರ

  "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

 • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

  ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

 • ವಿರೇಚನೆ

  ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

 • ಅಮ್ಮ

  ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

cheap jordans|wholesale air max|wholesale jordans|wholesale jewelry|wholesale jerseys