ಜಿಂಕೆ
ಜಿಂಕೆ ಜಿಂಕೆ ಜಿಂಕೆ ಹುಲಿ ಬಂತು ನೋಡು ಹೆಜ್ಜೆ ಹೆಜ್ಜೆ ಹಾಕಿ ಮೆಲ್ಲನೆ! ಛಂಗನೆ ಜಿಗಿದು ಓಡು *****
ಕೊಕ್ಕೊ ಕೋಳಿ ಬೆಳಗಾಯಿತು ಏಳಿ ಕಾಕಾ ಕಾಗೆ ಹಾರಿ ಎಲ್ಲಿಗೆ ಹೋಗುವೆ ಕು ಹೂ ಕು ಹೂ ಕೋಗಿಲೆ ವಸಂತ ಬಂದನು ಹಾಡಲೆ *****
ಗಿಳಿ ಗಿಳಿ ಗಿಳಿ ರಾಮ ನಿನ್ನ ಬಣ್ಣ ಹಸಿರು ನೀನು ಬರಲು ನನ್ನ ಮನೆಯ ಹೂ ತೋಟವೆಲ್ಲಾ ಹಸಿರು ನೀನು ನನ್ನ ಉಸಿರು *****
ಸಾಕು ಸಾಕು ಸಾಕಮ್ಮ ಎಲ್ಲಿಗೆ ಹೋಗ್ತಿಯಾ ನಿಲ್ಲಮ್ಮಾ ಸ್ಲೇಟು ಬಳಪ ಕೊಡುವೆ ಬಾರಮ್ಮ ಅ ಆ ಇ ಈ ಕಲಿಯಮ್ಮಾ ನಾನು ಮೇಷ್ಟ್ರು ನೋಡಮ್ಮ *****
ಕಿವಿ ಹಿಡಿದು ಗಣಪ ಅನ್ನು ಸ್ಲೇಟು ಹಿಡಿದು ಅ ಆ ಇ ಈ ಅನ್ನು ಪುಸ್ತಕ ಹಿಡಿದು ಅರಸ ಆಟ ಅನ್ನು ಚೆಂಡಿನಾಟ ಆಡಿ ಅಂ ಆಃ […]